ಮಾರ್ಗಶಿರ ಅಮಾವಾಸ್ಯೆ ದಿನ ಯಾವ ರಾಶಿಯವರು ಏನು ದಾನ ಮಾಡಿದರೆ ಹೆಚ್ಚು ಲಾಭವಿದೆ -Margashira Amvasya
ಮಾರ್ಗಶಿರ ಅಮಾವಾಸ್ಯೆ 2024: ಮಾರ್ಗಶಿರ್ಷ ಅಮಾವಾಸ್ಯೆಯ ದಿನವನ್ನು ಸ್ನಾನ ಮತ್ತು ಪಿತೃ ದೋಷ ನಿವಾರಣೆಗೆ ಶುಭವೆಂದು ಪರಿಗಣಿಸಲಾಗುತ್ತದೆ. ಈ ದಿನ, ಪೂರ್ವಜರನ್ನು ಮೆಚ್ಚಿಸಲು ರಾಶಿಚಕ್ರದ ಪ್ರಕಾರ ನೀವು ಕೆಲವು ವಿಶೇಷ ಕ್ರಮಗಳನ್ನು ತೆಗೆದುಕೊಳ್ಳಬಹುದು. ಯಾವ ರಾಶಿಯವರು ಏನು ದಾನ ಮಾಡಿದರೆ ಹೆಚ್ಚು ಶುಭ ಫಲಗಳಿವೆ ಎಂಬುದನ್ನು ತಿಳಿಯಿರಿ.
ಮಾರ್ಗಶಿರ ಅಮಾವಾಸ್ಯೆ 2024: ಪೂರ್ವಜರ ಆಶೀರ್ವಾದ ಪಡೆಯಲು ಮಾರ್ಗಶಿರ್ಷ ಮಾಸದ ಅಮಾವಾಸ್ಯೆಯ ದಿನಾಂಕವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನ ಸ್ನಾನ ಮಾಡುವ ಕ್ರಿಯೆಯು ತುಂಬಾ ಮಂಗಳಕರವಾಗಿದೆ. ಅಮಾವಾಸ್ಯೆಯ ದಿನದಂದು ಬ್ರಹ್ಮ ಮುಹೂರ್ತದ ಸಮಯದಲ್ಲಿ ಪವಿತ್ರ ನದಿಯಲ್ಲಿ ಸ್ನಾನ ಮಾಡುವುದು ಶುಭವೆಂದು ಪರಿಗಣಿಸಲಾಗಿದೆ. ಈ ವಿಶೇಷ ಸಂದರ್ಭದಲ್ಲಿ, ಪೂರ್ವಜರಿಗೆ ಶಾಂತಿ ಮತ್ತು ಮೋಕ್ಷವನ್ನು ತರಲು ಶ್ರಾದ್ಧ, ತರ್ಪಣ ಹಾಗೂ ಪಿಂಡ ದಾನವನ್ನು ಸಹ ನಡೆಸಲಾಗುತ್ತದೆ. ಪೂರ್ವಜರ ದೋಷವನ್ನು ತೊಡೆದುಹಾಕಲು ವಿಶೇಷ ಕ್ರಮಗಳನ್ನು ಸಹ ತೆಗೆದುಕೊಳ್ಳಲಾಗುತ್ತದೆ. ಇದು ಜೀವನದಲ್ಲಿ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತದೆ ಎಂದು ಹೇಳಲಾಗುತ್ತದೆ.
ಈ ವರ್ಷ ಮಾರ್ಗಶಿರ ಅಮಾವಾಸ್ಯೆಯನ್ನು 2024ರ ನವೆಂಬರ್ 30 ಮತ್ತು ಡಿಸೆಂಬರ್ 1 ರಂದು ಆಚರಿಸಲಾಗುತ್ತಿದೆ. ಅಮಾವಾಸ್ಯೆಯ ದಿನವನ್ನು ದಾನ ಕಾರ್ಯಗಳಿಗೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಮಾರ್ಗಶಿರ ಅಮಾವಾಸ್ಯೆಯ ದಿನದಂದು ವಿಷ್ಣು ಮತ್ತು ಶಿವನನ್ನು ಪೂಜಿಸಲಾಗುತ್ತದೆ. ಈ ದಿನ ಪೂರ್ವಜರನ್ನು ಮೆಚ್ಚಿಸಲು ರಾಶಿಚಕ್ರದ ಪ್ರಕಾರ ನೀವು ಕೆಲವು ವಸ್ತುಗಳನ್ನು ದಾನ ಮಾಡಬಹುದು. ಯಾವ ರಾಶಿಯವರು ಏನು ದಾನ ಮಾಡಬೇಕೆಂಬುದನ್ನು ಇಲ್ಲಿ ವಿವರಿಸಲಾಗಿದೆ.
ಮೇಷ ರಾಶಿ: ಈ ರಾಶಿಯವರು ಮಾರ್ಗಶಿರ ಅಮಾವಾಸ್ಯೆಯ ದಿನ ಕಡಲೆಕಾಯಿ, ಬೀನ್ಸ್, ರಾಗಿ ಹಿಟ್ಟು ಮತ್ತು ಬೆಲ್ಲವನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ಶುಭಫಲಗಳು ಸಿಗುತ್ತವೆ.
ವೃಷಭ ರಾಶಿ: ವೃಷಭ ರಾಶಿಯವರು ಹಾಲು ಅಥವಾ ಹಾಲಿನ ಉತ್ಪನ್ನಗಳಾದ ಹಾಲು-ಮೊಸರು, ಬೆಣ್ಣೆ ಇತ್ಯಾದಿಗಳನ್ನು ದಾನ ಮಾಡಬಹುದು. ಇದರಿಂದ ಒಳ್ಳೆಯಾಗುತ್ತೆ.
ಮಿಥುನ ರಾಶಿ: ಮಿಥುನ ರಾಶಿಯವರು ಹಸಿರು ತರಕಾರಿಗಳು, ಹೆಸರು ಬೇಳೆ ಅಥವಾ ಹಸಿರು ಹಣ್ಣುಗಳಂತಹ ಹಸಿರು ವಸ್ತುಗಳನ್ನು ದಾನ ಮಾಡಬಹುದು. ಇದು ನಿಮ್ಮ ಜೀವನದಲ್ಲಿ ಸಕಾರಾತ್ಮಕ ಫಲಿತಾಂಶಗಳನ್ನು ತರುತ್ತದೆ.
ಕಟಕ ರಾಶಿ: ಈ ರಾಶಿಚಕ್ರದವರು ಮಾರ್ಗಶಿರ ಅಮಾವಾಸ್ಯೆಯ ದಿನದಂದು ಗೋಧಿ ಹಿಟ್ಟು, ಉಪ್ಪು, ಸಕ್ಕರೆ, ಅಕ್ಕಿ ಅಥವಾ ಹಿಟ್ಟನ್ನು ದಾನ ಮಾಡಬಹುದು. ಹೀಗೆ ಮಾಡುವುದರಿಂದ ಒಳ್ಳೆಯ ಫಲಿತಾಂಶಗಳನ್ನು ಪಡೆಯುತ್ತೀರಿ.
ಸಿಂಹ ರಾಶಿ: ಈ ರಾಶಿಚಕ್ರ ಚಿಹ್ನೆಯವರು ಬೇಳೆಕಾಳುಗಳು, ರಾಗಿ ಹಿಟ್ಟು, ಒಣ ಮೆಣಸಿನಕಾಯಿ ಮತ್ತು ಗೋಧಿ ಹಿಟ್ಟನ್ನು ದಾನ ಮಾಡಬಹುದು. ನೀವು ಉನ್ನತ ಮಟ್ಟಕ್ಕೇರಲು ಈ ದಾನಗಳು ನೆರವಾಗುತ್ತವೆ.
ಕನ್ಯಾರಾಶಿ: ಕನ್ಯಾ ರಾಶಿಯವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹಣವನ್ನು ದಾನ ಮಾಡಬಹುದು ಅಥವಾ ಹೆಸರು ಬೇಳೆ ದಾನ ಮಾಡಬಹುದು. ಹೀಗೆ ಮಾಡುವುದರಿಂದ ನಿಮ್ಮ ಜೀವನದಲ್ಲಿ ದೊಡ್ಡ ಬದಲಾಣೆಗಳನ್ನು ಕಾಣುತ್ತೀರಿ.
ತುಲಾ ರಾಶಿ: ಮಾರ್ಗಶಿರ ಅಮಾವಾಸ್ಯೆಯ ದಿನದಂದು ತುಲಾ ರಾಶಿಚಕ್ರದ ಜನರು ಉಪ್ಪು, ಗೋಧಿ ಹಿಟ್ಟು, ಹಿಟ್ಟು ಮುಂತಾದ ವಸ್ತುಗಳನ್ನು ದಾನ ಮಾಡಬಹುದು. ನೀವು ಹೆಚ್ಚಿನ ಲಾಭಗಳನ್ನು ಪಡೆಯಲು ಈ ದಾನಗಳು ನೆರವಾಗುತ್ತವೆ.
ವೃಶ್ಚಿಕ ರಾಶಿ: ಈ ದಿನ ವೃಶ್ಚಿಕ ರಾಶಿಯವರು ರಾಗಿ, ಬೇಳೆ ಅಥವಾ ಗೆಣಸು ದಾನ ಮಾಡಬೇಕು. ಇದು ನಿಮ್ಮ ಜೀವನದಲ್ಲಿನ ದೊಡ್ಡ ಫಲಿತಾಂಶಗಳನ್ನು ತರುತ್ತದೆ.
ಧನು ರಾಶಿ: ಮಾರ್ಗಶಿರ ಅಮಾವಾಸ್ಯೆಯ ದಿನದಂದು ಧನು ರಾಶಿಚಕ್ರದ ಜನರು ಹಸಿ ಬಾಳೆಹಣ್ಣು, ಪಪ್ಪಾಯಿ, ಕಡಲೆ ಹಿಟ್ಟು ಮತ್ತು ಹಳದಿ ಬಟ್ಟೆಗಳನ್ನು ದಾನ ಮಾಡಬಹುದು. ಇದು ನಿಮ್ಮ ಪ್ರಗತಿಗೆ ನೆರವಾಗುತ್ತದೆ.
ಮಕರ ರಾಶಿ: ಕಪ್ಪು ಎಳ್ಳು, ಕಪ್ಪು ಸಾಸಿವೆ ಅಥವಾ ಎಣ್ಣೆಕಾಳುಗಳಂತಹ ಕಪ್ಪು ಬಣ್ಣದ ವಸ್ತುಗಳನ್ನು ಮಕರ ರಾಶಿಯವರು ದಾನ ಮಾಡಬೇಕು.
ಕುಂಭ ರಾಶಿ: ಕುಂಭ ರಾಶಿಯ ಜನರು ಚರ್ಮದಿಂದ ಮಾಡಿದ ವಸ್ತುಗಳು, ಕಪ್ಪು ಬಟ್ಟೆ ಅಥವಾ ಕಪ್ಪು ಬಣ್ಣದ ಬೂಟುಗಳು ಮತ್ತು ಚಪ್ಪಲಿಗಳನ್ನು ದಾನ ಮಾಡುವುದು ಶುಭಕರವಾಗಿರುತ್ತದೆ.
ಮೀನ: ಮೀನ ರಾಶಿಯ ಜನರು ಕಡಲೆ, ಬಾಳೆ ಹಣ್ಣು ದಾನ ಮಾಡಬಹುದು. ಇದು ನಿಮ್ಮ ಜೀವನದಲ್ಲಿ ದೊಡ್ಡ ಪ್ರಗತಿಗೆ ಸಹಾಯಕ ಮಾಡುತ್ತದೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.