ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು; ನೀವು ಯಾವ ರಾಶಿಗೆ ಸೇರಿದವರು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು; ನೀವು ಯಾವ ರಾಶಿಗೆ ಸೇರಿದವರು?

ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು; ನೀವು ಯಾವ ರಾಶಿಗೆ ಸೇರಿದವರು?

ಜ್ಯೋತಿಷ್ಯಶಾಸ್ತ್ರದ ಪ್ರಕಾರ ಒಬ್ಬೊಬ್ಬರು ಒಂದೊಂದು ರೀತಿಯ ಸ್ವಭಾವವನ್ನು ಹೊಂದಿರುತ್ತಾರೆ. ಹಾಗೇ ಒಂದೊಂದು ರಾಶಿಗೆ ಸೇರಿದವರು ವಿಭಿನ್ನ ಗುಣಗಳನ್ನು ಹೊಂದಿರುತ್ತಾರೆ. ಜ್ಯೋತಿಷ್ಯದ ಪ್ರಕಾರ ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು. ಆ ರಾಶಿಗಳು ಯಾವುವು ನೋಡೋಣ.

ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು; ನೀವು ಯಾವ ರಾಶಿಗೆ ಸೇರಿದವರು?
ಈ ರಾಶಿಯವರು ಬಹಳ ಹಟಮಾರಿಗಳು, ಯಾರ ಮಾತನ್ನೂ ಕೇಳದೆ ಮೊಂಡುತನ ತೋರುವವರು; ನೀವು ಯಾವ ರಾಶಿಗೆ ಸೇರಿದವರು? (PC: Freepik)

ವೈದಿಕ ಜ್ಯೋತಿಷ್ಯದ ಪ್ರಕಾರ, ವ್ಯಕ್ತಿಯ ಅಭ್ಯಾಸಗಳು, ಸ್ವಭಾವ, ವ್ಯಕ್ತಿತ್ವ ಮತ್ತು ಭವಿಷ್ಯವನ್ನು ಅವರವರ ರಾಶಿಗಳ ಮೇಲೆ ನಿರ್ಧರಿಸಲಾಗುತ್ತದೆ. ಪ್ರತಿಯೊಂದು ರಾಶಿಚಕ್ರ ಚಿಹ್ನೆಯನ್ನು ಒಂದೊಂದು ಗ್ರಹಗಳು ಆಳುತ್ತಿವೆ. ಈ ಕಾರಣದಿಂದಾಗಿ, ಪ್ರತಿಯೊಬ್ಬ ವ್ಯಕ್ತಿಯಲ್ಲೂ ವಿಭಿನ್ನ ಲಕ್ಷಣಗಳು ಕಂಡುಬರುತ್ತವೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಕೆಲವು ರಾಶಿಚಕ್ರದವರು ಬಹಳ ಬುದ್ಧಿವಂತರಾಗಿರುತ್ತಾರೆ. ಅಲ್ಲದೆ ಅವರು ಯಾವುದೇ ಕೆಲಸವನ್ನು ತಮ್ಮ ಇಚ್ಛೆಯಂತೆ ಮಾತ್ರ ಮಾಡಲು ಇಷ್ಟಪಡುತ್ತಾರೆ. ಕೆಲವರು ಸ್ವತಂತ್ರ್ಯವಾಗಿರಲು ಬಯಸುತ್ತಾರೆ. ಇನ್ನೂ ಕೆಲವರು ಬಹಳ ಹಟಮಾರಿಗಳಾಗಿರುತ್ತಾರೆ. ಕೆಲವೊಮ್ಮೆ ಇವರ ವರ್ತನೆಯನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಎಷ್ಟೋ ಸಂದರ್ಭಗಳಲ್ಲಿ ಇವರ ಮೊಂಡುತನವು ಮತ್ತೊಬ್ಬರಿಗೆ ಕಿರಿಕಿರಿ ಉಂಟು ಮಾಡಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಮೂರು ರಾಶಿಯವರು ಬಹಳ ಮೊಂಡು ಸ್ವಭಾವದವರು. ಆ ರಾಶಿಗಳು ಯಾವುವು ನೋಡೋಣ.

ಮೇಷ ರಾಶಿ

ಮೇಷ ರಾಶಿಯವರು ಸ್ವತಂತ್ರ ಮನಸ್ಸಿನವರು. ಪ್ರತಿ ಕೆಲಸದಲ್ಲೂ ಕಠಿಣ ಪರಿಶ್ರಮ ಮತ್ತು ಸಮರ್ಪಣಾ ಮನೋಭಾವದಿಂದ ಕೆಲಸ ಮಾಡುತ್ತಾರೆ. ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಇವರು ಸವಾಲುಗಳಿಗೆ ಹೆದರುವುದಿಲ್ಲ. ಉತ್ತಮ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಕಷ್ಟಕಾಲದಲ್ಲೂ ಒಂದು ಹೆಜ್ಜೆ ಹಿಂದೆ ಇಡುವುದಿಲ್ಲ. ಅವರು ತಮ್ಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ಎಂದಿಗೂ ಇಷ್ಟಪಡುವುದಿಲ್ಲ. ಈ ರಾಶಿಯವರು ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಬಯಸುತ್ತಾರೆ. ಸ್ವಭಾವತಃ ಸ್ವಲ್ಪ ಹಟಮಾರಿ. ಇದು ಹಲವು ಸಮಸ್ಯೆಗಳಿಗೂ ಕಾರಣವಾಗುತ್ತದೆ. ಇತರರು ನಿಮ್ಮ ಅಭಿಪ್ರಾಯಗಳನ್ನು ಗೌರವಿಸಲು ಬಯಸುತ್ತಾರೆ. ಆದರೆ ಈ ರಾಶಿಯವರು ತಮ್ಮ ಆಲೋಚನೆಗಳನ್ನು ಇತರರ ಮೇಲೆ ಹೇರಲು ಪ್ರಯತ್ನಿಸುತ್ತಾರೆ. ಕೆಲವೊಮ್ಮೆ ಈ ನಡವಳಿಕೆಯು ಇತರರನ್ನು ಕಾಡುತ್ತದೆ. ನಿಮ್ಮ ಸುತ್ತಲಿರುವವರನ್ನು ಗೌರವಿಸಿ ಮತ್ತು ಅವರೊಂದಿಗೆ ಮುಂದುವರಿಯಲು ಪ್ರಯತ್ನಿಸಿ. ಆಗ ಮಾತ್ರ ನಿಮಗೆ ಎದುರಾಗುವ ಅಡೆತಡೆಗಳು ನಿವಾರಣೆಯಾಗುತ್ತವೆ.

ಸಿಂಹ ರಾಶಿ

ಸಿಂಹ ರಾಶಿಯವರು ಉತ್ತಮ ನಾಯಕತ್ವ ಗುಣಗಳನ್ನು ಹೊಂದಿರುತ್ತಾರೆ. ಇವರಲ್ಲಿ ಆತ್ಮವಿಶ್ವಾಸ ತುಂಬಿರುತ್ತದೆ. ಇವರು ತಮ್ಮ ಆಕರ್ಷಕ ವ್ಯಕ್ತಿತ್ವದಿಂದ ಎಲ್ಲರನ್ನೂ ಆಕರ್ಷಿಸುತ್ತಾರೆ. ಆದರೆ ಇತರರ ಪ್ರಕಾರ ಏನನ್ನೂ ಮಾಡಲು ಬಯಸುವುದಿಲ್ಲ. ಸಾಮಾನ್ಯವಾಗಿ ಇದು ಪ್ರಬಲ ಸ್ವಭಾವವನ್ನು ತೋರಿಸುತ್ತದೆ. ಅದು ಅವರನ್ನು ತೊಂದರೆಗೆ ಸಿಲುಕಿಸುತ್ತದೆ. ಕೆಲವೊಮ್ಮೆ ಇವರು ಅಹಂಕಾರದಿಂದ ವರ್ತಿಸುತ್ತಾರೆ. ಆದರೆ ನೀವು ಇತರರನ್ನು ಗೌರವಿಸಿ. ಅವರ ಕಾರ್ಯಗಳನ್ನು ಶ್ಲಾಘಿಸಬೇಕು. ಆಗ ಮಾತ್ರ ನೀವು ನಿಜವಾದ ಮೆಚ್ಚುಗೆಯನ್ನು ಪಡೆಯಲಿದ್ದೀರಿ.

ಧನು ರಾಶಿ

ಧನು ರಾಶಿಯ ಜನರು ಮುಕ್ತ ಮನಸ್ಸಿನವರು. ಸದಾ ಉತ್ಸಾಹದಿಂದ, ಚಟುವಿಕೆಯಿಂದ ಕೆಲಸ ಮಾಡುತ್ತಾರೆ. ಇವರೂ ಕೆಲವೊಮ್ಮೆ ಬಹಳ ಮೊಂಡುತನ ತೋರುತ್ತಾರೆ. ತಮ್ಮ ಜೀವನವನ್ನು ಮತ್ತೊಬ್ಬರು ನಿರ್ಧರಿಸಲು ಇವರು ಬಿಡುವುದಿಲ್ಲ. ಏನೇ ನಿರ್ಧಾರವಾಗಲೀ ತಾವೇ ಯೋಚಿಸಿ ಅಂತಿಮ ಮಾಡುತ್ತಾರೆ. ತಮ್ಮ ಭಾವನೆಗಳನ್ನು ಮತ್ತು ರಹಸ್ಯಗಳನ್ನು ಸುಲಭವಾಗಿ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ. ಒಂದು ವೇಳೆ ಹಂಚಿಕೊಂಡರೂ ಎದುರಿಗಿದ್ದವರು ನಂಬಿಕಸ್ಥರು ಎಂದು ತಿಳಿದಾಗ ಮಾತ್ರ. ಇತರರೊಂದಿಗಿನ ಸಂಬಂಧದಲ್ಲಿ ಅವರು ಪ್ರಾಬಲ್ಯದ ಸ್ವಭಾವವನ್ನು ಹೊಂದಿರುತ್ತಾರೆ. ಇದರಿಂದಾಗಿ ಪ್ರೇಮ ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ , ಕೋಪವನ್ನು ನಿಯಂತ್ರಿಸಬೇಕಾಗುತ್ತದೆ. ಅರ್ಥಹೀನ ಚರ್ಚೆಗಳನ್ನು ತಪ್ಪಿಸಿ. ಆಗ ಮಾತ್ರ ನಿಮ್ಮ ಸಮಸ್ಯೆಗಳು ಬಗೆಹರಿಯುತ್ತವೆ. ಜೀವನ ಸುಗಮವಾಗಿ ಸಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.