ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ಯಾ ಸೇರಿದಂತೆ ಸರಳವಾಗಿ ಬದುಕಲು ಇಷ್ಟಪಡುವ ರಾಶಿಗಳಿವು; ನಿಮ್ಮ ಲೈಫ್‌ಸ್ಟೈಲ್‌ ಹೇಗೆ?

ಕನ್ಯಾ ಸೇರಿದಂತೆ ಸರಳವಾಗಿ ಬದುಕಲು ಇಷ್ಟಪಡುವ ರಾಶಿಗಳಿವು; ನಿಮ್ಮ ಲೈಫ್‌ಸ್ಟೈಲ್‌ ಹೇಗೆ?

ನಮ್ಮಲ್ಲಿ ಹಲವರು ಸಿಂಪಲ್ಲಾಗಿ ಯೋಚಿಸುತ್ತಾರೆ ಅದರಂತೆಯೇ ಜೀವಿಸುತ್ತಾರೆ. ಕೆಲವು ರಾಶಿಗೆ ಸೇರಿದ ಜನರಲ್ಲಿ ಈ ಸರಳತೆಯಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕನ್ಯಾ, ಮಕರ ಸೇರಿ ಈ 6 ರಾಶಿಗಳು ಸರಳವಾಗಿ ಬದುಕಲು ಇಷ್ಟಪಡುತ್ತಾರೆ. (ಬರಹ: ಅರ್ಚನಾ ವಿ ಭಟ್‌)

ಕನ್ಯಾ ಸೇರಿದಂತೆ ಸರಳವಾಗಿ ಬದುಕಲು ಇಷ್ಟಪಡುವ ರಾಶಿಗಳಿವು; ನಿಮ್ಮ ಲೈಫ್‌ಸ್ಟೈಲ್‌ ಹೇಗೆ
ಕನ್ಯಾ ಸೇರಿದಂತೆ ಸರಳವಾಗಿ ಬದುಕಲು ಇಷ್ಟಪಡುವ ರಾಶಿಗಳಿವು; ನಿಮ್ಮ ಲೈಫ್‌ಸ್ಟೈಲ್‌ ಹೇಗೆ

ನಮ್ಮಲ್ಲಿ ಹಲವರು ಸಿಂಪಲ್ಲಾಗಿ ಯೋಚಿಸುತ್ತಾರೆ ಅದರಂತೆಯೇ ಜೀವಿಸುತ್ತಾರೆ. ಕೆಲವು ರಾಶಿಗೆ ಸೇರಿದ ಜನರಲ್ಲಿ ಈ ಸರಳತೆಯಿರುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ. ಕನ್ಯಾ, ಮಕರ ಸೇರಿ ಈ 6 ರಾಶಿಗಳು ಸರಳವಾಗಿ ಬದುಕಲು ಇಷ್ಟಪಡುತ್ತಾರೆ.

ಕೆಲವರು ಜೀವನದಲ್ಲಿ ಪಾಶ್‌ ಆಗಿ ಬದುಕಲು ಇಷ್ಟಪಟ್ಟರೆ ಇನ್ನೂ ಕೆಲವರು ಎಷ್ಟೇ ಶ್ರೀಮಂತಿಕೆ ಇದ್ದರೂ ಬಹಳ ಸರಳ ಜೀವನವನ್ನು ಇಷ್ಟಪಡುತ್ತಾರೆ. ಅವರಷ್ಟು ಸಿಂಪಲ್‌ ಜನ ಸಿಗುವುದು ಕಷ್ಟ ಎಂದು ಹೇಳುವುದನ್ನು ನಾವು ಕೇಳಿರುತ್ತೇವೆ. ಜೀವನದ ಪ್ರತಿಯೊಂದು ಅಂಶದಲ್ಲೂ ಸರಳತೆ, ಸ್ಪಷ್ಟ ಯೋಚನೆಗಳನ್ನು ಅವರಲ್ಲಿ ಕಾಣಬಹುದು. ಕೆಲವು ರಾಶಿಗೆ ಸೇರಿದವರು ಸ್ವಾಭಾವಿಕವಾಗಿಯೇ ಸರಳವಾಗಿರುವುದನ್ನು ಬಯಸುತ್ತಾರೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿದೆ. ಅವರು ತೊಂದರೆ–ತೊಡಕುಗಳನ್ನು ಬಗೆಹರಿಸಿಕೊಂಡು, ತಮಗೆ ಅಗತ್ಯವಿರುವುದನ್ನು ಮಾತ್ರ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾರೆ. ಸರಳವಾಗಿ ಬದುಕುವುದರ ಮೇಲೆ ಅವರ ಗಮನವಿರುತ್ತದೆ. ಹಾಗಾದರೆ ಆ ರಾಶಿಗಳು ಯಾವವು? ಇಲ್ಲಿದೆ ಓದಿ.

ಕನ್ಯಾ ರಾಶಿ

ಕನ್ಯಾ ರಾಶಿಯವರು ಸಹಜವಾಗಿಯೇ ಹೊಂದಿಕೊಂಡು ಹೋಗುವ ಪ್ರಜ್ಞೆಯನ್ನು ಹೊಂದಿರುತ್ತಾರೆ. ಅವರು ತೀಕ್ಷ್ಣ ಮತಿಗಳಾಗಿರುತ್ತಾರೆ ಎಂದು ಶಾಸ್ತ್ರ ಹೇಳುತ್ತದೆ. ಇವರು ಸರಳ ಜೀವನವನ್ನು ಮೆಚ್ಚುತ್ತಾರೆ. ಮತ್ತು ತಮ್ಮ ಸುತ್ತಲಿನವರೂ ಅದೇ ರೀತಿಯಲ್ಲಿರಬೇಕೆಂದು ಬಯಸುತ್ತಾರೆ. ಅವರು ಗುಣಮಟ್ಟಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಉತ್ತಮವಾದದನ್ನೇ ಆಯ್ದುಕೊಳ್ಳುವುದು ಇವರ ಗುಣವಾಗಿದೆ. ಕನ್ಯಾ ರಾಶಿಯವರು ಸರಳವಾಗಿ ಬದುಕಲು ಇಷ್ಟಪಡುವುದರ ಜೊತೆಗೆ ಎಲ್ಲ ವಿಷಯಗಳಲ್ಲೂ ಪರಿಪೂರ್ಣತೆಯನ್ನು ಹುಡುಕುತ್ತಾರೆ.

ಮಕರ ರಾಶಿ

ಈ ರಾಶಿಯು ಶಿಸ್ತುಬದ್ಧ ಮತ್ತು ಪ್ರಾಯೋಗಿಕ ಜೀವನಕ್ಕೆ ಹೆಸರುವಾಸಿಯಾಗಿದೆ. ಈ ರಾಶಿಯವರು ತಮ್ಮ ಗುರಿಗಳನ್ನು ಸಾಧಿಸಲು ಸರಳತೆಯನ್ನು ಸಾಧನವನ್ನಾಗಿಸಿಕೊಂಡಿರುತ್ತಾರೆ. ಸರಳವಾಗಿ ಬದುಕುವ ಇವರು ಗೊಂದಲ ಮುಕ್ತ ವಾತಾವರಣಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಅವರ ಶಿಸ್ತುಬದ್ಧ ಜೀವನಶೈಲಿಯಿಂದ ಸ್ಥಿರತೆ ಮತ್ತು ದಕ್ಷತೆಯನ್ನು ಕಾಪಾಡಿಕೊಳ್ಳಲು ಬದ್ಧರಾಗಿರುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರು ಸುಂದರ, ಸಮತೋಲನ ಮತ್ತು ಸಾಮರಸ್ಯದ ಜೀವನವನ್ನು ಇಷ್ಟಪಡುತ್ತಾರೆ. ಹಾಗಾಗಿ ಈ ರಾಶಿಯವರು ಸರಳವಾಗಿರುವುದರ ಕಡೆ ಹೆಚ್ಚು ಆಕರ್ಷಿತರಾಗುತ್ತಾರೆ. ಇವರು ತಮ್ಮ ವಸ್ತುಗಳನ್ನು ಬಹಳ ನಾಜೂಕಿನಿಂದ ಸಂಗ್ರಹಿಸಿಡುತ್ತಾರೆ. ತಮ್ಮ ಅಭಿರುಚಿಗೆ ತಕ್ಕಂತೆಯೇ ಸರಳವಾಗಿರುವ ವಸ್ತುಗಳನ್ನೇ ಆಯ್ದುಕೊಳ್ಳುತ್ತಾರೆ. ಈ ರಾಶಿಯವರು ಅನಗತ್ಯವಾಗಿ ಉಂಟಾಗುವ ಗೊಂದಲಗಳನ್ನು ಕಡಿಮೆ ಮಾಡಿಕೊಳ್ಳುತ್ತಾರೆ.

ಕುಂಭ ರಾಶಿ

ಈ ರಾಶಿಯವರು ಹೊಸ ಚಿಂತನೆ ಮತ್ತು ಮುಂದಾಲೋಚನೆ ಮಾಡುವವರಾಗಿದ್ದಾರೆ. ಇವರಲ್ಲಿರುವ ಪರಿಸರ ಪ್ರಜ್ಞೆ, ಸಾಮಾಜಿಕ ಕಳಕಳಿ ಮತ್ತು ಸದಾ ಎಚ್ಚರಿಕೆಯಿಂದಿರುತ್ತಾರೆ. ಜೀವನ ನಡೆಸಲು ಸರಳ ಮಾರ್ಗಗಳನ್ನು ಅನುಸರಿಸುತ್ತಾರೆ. ಪರಿಸರದ ಮೇಲೆ ಅತಿಯಾಗಿ ಹಸ್ತಕ್ಷೇಪ ಮಾಡದಿರುವುದು ಮತ್ತು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರಲು ಪ್ರೇರೇಪಿಸುತ್ತಾರೆ.

ಮೀನ ರಾಶಿ

ಅತಿ ಸೂಕ್ಷ್ಮ ಮನಸ್ಸಿನವರಾದ ಇವರು ಆಧ್ಯಾತ್ಮಿಕ ಲೋಕದ ಕಡೆಗೆ ಹೆಚ್ಚು ಸಂಪರ್ಕವನ್ನು ಹೊಂದಿರುತ್ತಾರೆ. ಇವರು ಸರಳ ಜೀವನವನ್ನು ಹೆಚ್ಚು ಇಷ್ಟಪಡುತ್ತಾರೆ. ಇವರು ಶಾಂತಿ ಮತ್ತು ಭಾವನೆಗಳಿಗೆ ಬೆಲೆಕೊಡುವುದರಿಂದ ಅಂತಹ ಸರಳ ಜೀವನಕ್ಕೆ ಹೆಚ್ಚು ಆಕರ್ಷಿತರಾಗುತ್ತಾರೆ. ಈ ರಾಶಿಯವರು ವಿಶ್ರಾಂತಿ, ಸೃಜನಶೀಲತೆ ಮತ್ತು ಆಧ್ಯಾತ್ಮ ಚಿಂತನೆಗಳನ್ನು ಉತ್ತೇಜಿಸುವ ಸ್ಥಳಗಳನ್ನು ಬಯಸುತ್ತಾರೆ. ಸರಳವಾಗಿ ಬದುಕಲು ನೋಡುವುದರಿಂದ ದೇಹ, ಮನಸ್ಸು ಮತ್ತು ಆತ್ಮದ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುತ್ತಾರೆ.

ವೃಷಭ ರಾಶಿ

ಈ ರಾಶಿಯವರು ಗೊಂದಲವಿಲ್ಲದ, ಸ್ಥಿರವಾದ ಪ್ರಾಕ್ಟಿಕಲ್‌ ಜೀವನವನ್ನು ಗೌರವಿಸುತ್ತಾರೆ. ಇವರು ಸ್ನೇಹಜೀವಿಗಳು ಮತ್ತು ಮನೆಯಲ್ಲಿ ಶಾಂತ ವಾತಾವರಣವನ್ನು ಬಯಸುವವರಾಗಿರುತ್ತಾರೆ. ಹಾಗಾಗಿ ಇವರು ಸರಳವಾಗಿರುವುದಕ್ಕೆ ಹೆಚ್ಚು ಆದ್ಯತೆ ನೀಡುತ್ತಾರೆ. ಇವರು ಎಲ್ಲದರಲ್ಲೂ ಉತ್ತಮ ಗುಣಮಟ್ಟಕ್ಕೆ ಹೆಚ್ಚು ಮಹತ್ವ ನೀಡುತ್ತಾರೆ. ವೃಷಭ ರಾಶಿಯವರು ನೈಜ ಸೌಂದರ್ಯವನ್ನು ಮೆಚ್ಚಿಕೊಳ್ಳುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಬರಹ: ಅರ್ಚನಾ ವಿ ಭಟ್‌)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.