ಇವರೇಕೆ ಇದ್ದಕ್ಕಿದ್ದಂತೆ ನಮ್ಮ ಬದುಕಿನಿಂದ ನಾಪತ್ತೆಯಾಗ್ತಾರೆ? ಈ ಪ್ರಶ್ನೆಗೆ ಜ್ಯೋತಿಷ್ಯ ರಾಶಿಗಳಲ್ಲಿ ಉತ್ತರವಿದೆ-horoscope zodiac signs some people suddenly disappear from our lives answer to this question in astrology rmy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇವರೇಕೆ ಇದ್ದಕ್ಕಿದ್ದಂತೆ ನಮ್ಮ ಬದುಕಿನಿಂದ ನಾಪತ್ತೆಯಾಗ್ತಾರೆ? ಈ ಪ್ರಶ್ನೆಗೆ ಜ್ಯೋತಿಷ್ಯ ರಾಶಿಗಳಲ್ಲಿ ಉತ್ತರವಿದೆ

ಇವರೇಕೆ ಇದ್ದಕ್ಕಿದ್ದಂತೆ ನಮ್ಮ ಬದುಕಿನಿಂದ ನಾಪತ್ತೆಯಾಗ್ತಾರೆ? ಈ ಪ್ರಶ್ನೆಗೆ ಜ್ಯೋತಿಷ್ಯ ರಾಶಿಗಳಲ್ಲಿ ಉತ್ತರವಿದೆ

ಕೆಲವರು ವಿಚಿತ್ರವಾಗಿ ನಡೆದುಕೊಳ್ಳುತ್ತಾರೆ. ಅವರನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಯಾಕೆ ಹೀಗೆ ಎಂದು ಬಹಳಷ್ಟು ಸಲ ಯೋಚಿಸಲಾಗುತ್ತದೆ. ಕೆಲವರು ಬಂದಷ್ಟೇ ವೇಗವಾಗಿ ಬದುಕಿನಿಂದ ದೂರವಾಗುತ್ತಾರೆ. ಇದಕ್ಕೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಅನ್ನೋದನ್ನು ತಿಳಿಯಿರಿ.

7 ರಾಶಿಯವರು ಯಾಕೆ ಹೀಗೆ ವರ್ತಿಸುತ್ತಾರೆ ಅನ್ನೋದಿಕ್ಕೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.
7 ರಾಶಿಯವರು ಯಾಕೆ ಹೀಗೆ ವರ್ತಿಸುತ್ತಾರೆ ಅನ್ನೋದಿಕ್ಕೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ. (Pixabay)

ನಿಮ್ಮ ಜೊತೆ ತುಂಬಾ ಚೆನ್ನಾಗಿಯೇ ಮಾತನಾಡುವ ಕೆಲ ವ್ಯಕ್ತಿಗಳು ಏಕಾಏಕಿ ಮಾತು ನಿಲ್ಲಿಸುತ್ತಾರೆ. ಆನ್‌ಲೈನ್ ಡೇಟಿಂಗ್‌ನಲ್ಲಿ ಇದು ಹೆಚ್ಚಾಗಿ ನಡೆಯುತ್ತದೆ. ಇದರ ಹೊರತಾಗಿಯೂ ಹಲವರಿಗೆ ಇಂಥ ಅನುಭವವಾಗಿರುತ್ತದೆ. ಆದರೆ ಇವರ ಈ ಗುಣಗಳ ಬಗ್ಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಏನು ಹೇಳಲಾಗಿದೆ ಎಂಬುದನ್ನು ಇಲ್ಲಿ ನೀಡಲಾಗಿದೆ.

1. ಮಿಥುನ ರಾಶಿ: ಕೆಲವರು ಎರಡು ರೀತಿಯ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಕೆಲವೊಮ್ಮೆ ಅವರು ನಿರ್ಧಾರಗಳನ್ನು ತೆಗೆದುಕೊಳ್ಳಲು ಕಷ್ಟಪಡುತ್ತಾರೆ. ಸಮಸ್ಯೆಗಳನ್ನು ಎದುರಿಸುವ ಬದಲು ಪಲಾಯನ ಮಾಡುವಂತವರಾಗಿರುತ್ತಾರೆ.

2. ಕುಂಭ ರಾಶಿ: ಈ ರಾಶಿಯ ಕೆಲವರು ತಮ್ಮ ಸ್ವಾತಂತ್ರ್ಯವನ್ನು ತುಂಬಾ ಇಷ್ಟಪಡುತ್ತಾರೆ. ಸಂಬಂಧದಲ್ಲಿ ಸಿಕ್ಕಿಬಿದ್ದಿದ್ದರೆ ಯಾವುದೇ ರೀತಿಯ ಕಾರಣವನ್ನು ಕೊಡದೆ ದೂರವಾಗುತ್ತಾರೆ. ಆ ನಂತರ ತಮ್ಮ ತಪ್ಪಿನ ಬಗ್ಗೆ ಯೋಚಿಸುತ್ತಾರೆ.

3. ಮೇಷ ರಾಶಿ: ಇವರಲ್ಲಿ ಕೆಲವರು ಉದ್ವೇಗದಿಂದ ವರ್ತಿಸುತ್ತಾರೆ. ಇದ್ದಕ್ಕಿದ್ದಂತೆ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ. ಯಾರೊಂದಿಗೆ ಮುಂದುವರಿಯಬೇಕೆಂದು, ಯಾರು ಉತ್ತಮ ಎಂದು ಯೋಚಿಸದೆ ನಿಮ್ಮನ್ನು ದೂರ ಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ.

4. ವೃಶ್ಚಿಕ ರಾಶಿ: ಈ ರಾಶಿಯವರು ತಮ್ಮ ಖಾಸಗಿತನವನ್ನು ಬಹಳವಾಗಿ ಗೌರವಿಸುತ್ತಾರೆ. ಯಾರಾದೂರ ತುಂಬಾ ಹತ್ತಿರವಾಗುತ್ತಿದ್ದಾರೆ ಎಂದು ಭಾವಿಸಿದರೆ ಇವರು ಮೊದಲು ಮಾಡುವ ಕೆಲಸವೇ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಇದರ ಭಾಗವೇ ಅವರಿಂದ ದೂರವಾಗುವುದು.

5. ಧನು ರಾಶಿ: ಧನು ರಾಶಿವರು ತಾವೇ ಸೃಷ್ಟಿಸಿಕೊಂಡ ಭಾವನೆಯನ್ನು ದ್ವೇಷಿಸಲು ಶುರು ಮಾಡುತ್ತಾರೆ. ಸಂಬಂಧ ತುಂಬಾ ಗಂಭೀರವಾಗಿದೆ ಎಂದು ಭಾವಿಸಿದರೆ ನಿಮ್ಮಿಂದ ದೂರವಾಗಲು ಪ್ರಯತ್ನಿಸುತ್ತಾರೆ. ಇದಕ್ಕಾಗಿ ನಿಮ್ಮನ್ನು ಪ್ರಚೋದಿಸಲು ಮುಂದಾಗುತ್ತಾರೆ. ಯಾಕೆ ಹೀಗೆ ಮಾಡಿದ್ದೇವೆ ಎಂಬುದನ್ನು ಇವರು ಯೋಚಿಸುವುದೇ ಇಲ್ಲ.

6. ಮೀನ ರಾಶಿ: ಈ ರಾಶಿಯವರು ತುಂಭಾ ಸೂಕ್ಷ್ಮವಾಗಿರುತ್ತಾರೆ. ಬೇರೆಯನ್ನು ನೋಯಿಸಲು ಇಷ್ಟಪಡುವುದಿಲ್ಲ. ತಮಗೆ ಯಾರಾದರೂ ನೋಯಿಸಿದರೆ, ಇಷ್ಟವಾಗದಿದ್ದರೆ ಅವರಿಂದ ಅಂತರ ಕಾಯ್ದುಕೊಳ್ಳಲು ಶುರು ಮಾಡುತ್ತಾರೆ. ಅವರೊಂದಿಗೆ ಮಾತುಕತೆಯನ್ನು ಕೊನೆಗೊಳಿಸುವ ನಿರ್ಧಾರ ಮಾಡುತ್ತಾರೆ. ಇವರನ್ನು ಅರ್ಥ ಮಾಡಿಕೊಳ್ಳುವುದು ಸವಾಲಿನ ಕೆಲಸವಾಗಿರುತ್ತದೆ.

7. ಮಕರ ರಾಶಿ: ಇವರು ತುಂಬಾ ಮಹತ್ವಾಕಾಂಕ್ಷೆ ಹೊಂದಿರುವವರು. ಸಂಬಂಧಗಳು ತಮ್ಮ ನಿರ್ದಿಷ್ಟ ಗುರಿಗಳಿಗೆ ಅಡ್ಡಿಯಾಗುತ್ತವೆ ಎಂದು ತಿಳಿದರೆ ಸಾಕು ಅಲ್ಲಿ ಇವರು ವ್ಯವಹರಿಸುವುದಿಲ್ಲ. ಅಲ್ಲಿಂದ ಜಾಗ ಖಾಲಿ ಮಾಡುತ್ತಾರೆ. ಒಬ್ಬ ವ್ಯಕ್ತಿಯಿಂದ ದೂರವಾಗಲು ಇದು ಪ್ರಮುಖ ಕಾರಣವಲ್ಲ, ಹೀಗೆ ಮಾಡುವುದು ಸರಿಯಲ್ಲ ಅಂತ ಗೊತ್ತಿದ್ದರೂ ಇದು ರಾಶಿಯ ಗುಣ ಎಂದು ಹೇಳಲಾಗುತ್ತದೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.