ಗೃಹ ನಿರ್ಮಾಣ 2025: ಭೂಮಿ ಖರೀದಿ ವಿಚಾರದಲ್ಲಿ ಧನಸ್ಸು ರಾಶಿಯವರಿಗೆ ಜಾಗ್ರತೆ ಅಗತ್ಯ, ಮೀನ ರಾಶಿಯವರಿಗೆ ವರ್ಷದ ಮೊದಲಾರ್ಧ ಒಳ್ಳೆಯದು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಗೃಹ ನಿರ್ಮಾಣ 2025: ಭೂಮಿ ಖರೀದಿ ವಿಚಾರದಲ್ಲಿ ಧನಸ್ಸು ರಾಶಿಯವರಿಗೆ ಜಾಗ್ರತೆ ಅಗತ್ಯ, ಮೀನ ರಾಶಿಯವರಿಗೆ ವರ್ಷದ ಮೊದಲಾರ್ಧ ಒಳ್ಳೆಯದು

ಗೃಹ ನಿರ್ಮಾಣ 2025: ಭೂಮಿ ಖರೀದಿ ವಿಚಾರದಲ್ಲಿ ಧನಸ್ಸು ರಾಶಿಯವರಿಗೆ ಜಾಗ್ರತೆ ಅಗತ್ಯ, ಮೀನ ರಾಶಿಯವರಿಗೆ ವರ್ಷದ ಮೊದಲಾರ್ಧ ಒಳ್ಳೆಯದು

House Construction 2025: ಶನಿ, ರಾಹು, ಕೇತುಗಳ ಪ್ರಭಾವದಿಂದ ಕೆಲವರಿಗೆ ಇದುವರೆಗೂ ಸ್ವಂತ ಮನೆ ಕನಸು ನನಸಾಗಿರುವುದಿಲ್ಲ. 2025 ಬರುತ್ತಿದೆ. ಈ ಬಾರಿ ಯಾವ ರಾಶಿಯವರ ಸ್ವಂತ ಮನೆ ಕನಸು ನನಸಾಗುತ್ತದೆ, ಯಾರಿಗೆ ಸಮಸ್ಯೆ ಉಂಟಾಗುತ್ತದೆ? ಧನಸ್ಸು, ಮಕರ, ಕುಂಭ, ಮೀನ ರಾಶಿಯವರ ಗೃಹ ನಿರ್ಮಾಣ 2025 ರ ರಾಶಿಫಲ ಹೀಗಿದೆ.

ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ 2025 ರಲ್ಲಿ ಮನೆ ಖರೀದಿ, ನಿರ್ಮಾಣಕ್ಕೆ ಶುಭ ಸಮಯ
ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ 2025 ರಲ್ಲಿ ಮನೆ ಖರೀದಿ, ನಿರ್ಮಾಣಕ್ಕೆ ಶುಭ ಸಮಯ (PC: Canva)

ಗೃಹ ನಿರ್ಮಾಣ 2025: ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು ಎಂಬ ಗಾದೆ ಮಾತು ಇದೆ. ಒಂದು ಮದುವೆ ಮಾಡುವುದು ಸುಲಭದ ಮಾತಲ್ಲ, ಅದೇ ರೀತಿ ಒಂದು ಮನೆ ಕಟ್ಟುವುದು ಕೂಡಾ ಸುಲಭವಲ್ಲ. ಜೀವನ ಪೂರ್ತಿ ದುಡಿದರೂ ಕೆಲವರಿಗೆ ಸೈಟ್‌ ಕೊಳ್ಳಲು, ಕನಸಿನ ಮನೆ ಕಟ್ಟಿಸಲು ಕೆಲವರಿಗೆ ಸಾಧ್ಯವಾಗುವುದಿಲ್ಲ. ಇದಕ್ಕೆ ಗ್ರಹಗತಿಗಳು ಕೂಡಾ ಕಾರಣ ಎನ್ನಬಹುದು. ಕೆಲವೊಮ್ಮೆ ಎಷ್ಟೇ ಹಣ ಇದ್ದರೂ ಗ್ರಹಗತಿಗಳ ಬೆಂಬಲ ಇಲ್ಲದೆ ಅಂದುಕೊಂಡಿದ್ದನ್ನು ಸಾಧಿಸಲು ಸಾಧ್ಯವಾಗುವುದಿಲ್ಲ.

ಹೊಸ ವರ್ಷ ಬರುತ್ತಿದೆ, ಈ ವರ್ಷವಾದರೂ ಭೂಮಿ ಕೊಳ್ಳುವ, ಮನೆ ಖರೀದಿಸುವ ಅಥವಾ ಕಟ್ಟಲು ಸಾಧ್ಯವಾಗಬಹುದಾ ಎಂದು ಹಲವರು ಕುತೂಹಲದಿಂದ ಕಾಯುತ್ತಿದ್ದಾರೆ. ಯಾವೆಲ್ಲಾ ರಾಶಿಯವರಿಗೆ ಸ್ವಂತ ಮನೆ, ಭೂಮಿ ಕನಸು ನನಸಾಗುತ್ತದೆ, ಯಾವ ರಾಶಿಯವರು ಇನ್ನೂ ಕಾಯಬೇಕು? ಇಲ್ಲಿದೆ ಮಾಹಿತಿ.

ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ 2025 ರಲ್ಲಿ ಮನೆ ಖರೀದಿ, ನಿರ್ಮಾಣಕ್ಕೆ ಶುಭ ಸಮಯ

ಧನಸ್ಸು ರಾಶಿ

ಸ್ವಂತ ಮನೆ ಅಥವಾ ಭೂಮಿಯನ್ನು ಖರೀದಿಸಲು ಯೋಜಿಸುತ್ತಿರುವ ಅಥವಾ ಮನೆ ನಿರ್ಮಿಸಲು ಬಯಸುವ ಧನಸ್ಸು ರಾಶಿಯ ಜನರು ಸ್ವಲ್ಪ ಎಚ್ಚರಿಕೆಯಿಂದ ಇರಬೇಕು. ಈ ವರ್ಷದ ದ್ವಿತೀಯಾರ್ಧವು ಹೆಚ್ಚು ಅನುಕೂಲಕರವಾಗಿರುತ್ತದೆ. ಜನವರಿಯಿಂದ ಮೇ ವರೆಗೆ ರಾಹು ಸಂಚಾರವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ಅವಧಿಯಲ್ಲಿ, ನೀವು ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ಪ್ರಮುಖ ನಿರ್ಧಾರ ತೆಗೆದುಕೊಳ್ಳುವುದನ್ನು ತಪ್ಪಿಸಬೇಕು.

ಮಕರ ರಾಶಿ

ಮಕರ ರಾಶಿಯ ಜನರಿಗೆ 2025 ರಲ್ಲಿ ಸ್ವಂತ ಮನೆಯ ಕನಸನ್ನು ನನಸಾಗಿಸಲು ಪ್ರಯತ್ನಿಸಬಹುದು. ಈ ರಾಶಿಯವರು 2025ರಲ್ಲಿ ಭೂಮಿ ಮತ್ತು ಕಟ್ಟಡಗಳ ವಿಷಯದಲ್ಲಿ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯಬಹುದು. ಮಾರ್ಚ್ ನಂತರ ಶನಿ ಸಂಕ್ರಮಣದಿಂದ ಮನೆ ಅಥವಾ ಭೂಮಿಯನ್ನು ಖರೀದಿಸುವ ನಿಮ್ಮ ಆಸೆ ನೆರವೇರುತ್ತದೆ. ಭೂಮಿ ಅಥವಾ ಆಸ್ತಿ ವ್ಯವಹಾರದ ಬಗ್ಗೆ ಚಿಂತಿಸುತ್ತಿದ್ದರೆ ಈ ಸಮಸ್ಯೆ ಶೀಘ್ರ ಬಗೆಹರಿಯುತ್ತವೆ. ಮನೆ ಅಥವಾ ಕಟ್ಟಡದ ನಿರ್ಮಾಣದಲ್ಲಿ ನೀವು ಪದೇ ಪದೇ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮಾರ್ಚ್ ನಂತರ ಮರಳಿ ಯತ್ನ ಮಾಡಿದರೆ ಯಶಸ್ಸು ಸಾಧ್ಯ.

ಕುಂಭ ರಾಶಿ

ಸ್ವಂತ ಮನೆ ಖರೀದಿಸಬೇಕು, ಮನೆ ಕಟ್ಟಬೇಕು ಅಥವಾ ಭೂಮಿ ಖರೀದಿಸಬೇಕು ಎಂದು ಬಹಳ ದಿನಗಳಿಂದ ಯೋಚಿಸುತ್ತಿದ್ದ ಕುಂಭ ರಾಶಿಯವರಿಗೆ 2025 ಅಷ್ಟು ಅನುಕೂಲವಾಗಿಲ್ಲ. ನೀವು ಮನೆ, ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ವಿಷಯಗಳನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಬೇಕಾಗುತ್ತದೆ. ಹೊಸ ಪ್ಲಾಟ್ ಅಥವಾ ಭೂಮಿಯನ್ನು ಖರೀದಿಸುವಾಗ ಖರೀದಿಸುವವರ ಹಿನ್ನೆಲೆಯನ್ನು ಕೂಲಂಕುಶವಾಗಿ ವಿಚಾರಣೆ ಮಾಡಬೇಕು. ವಿವಾದಾತ್ಮಕ ಒಪ್ಪಂದವು ನಿಮಗೆ ನಷ್ಟವನ್ನು ಉಂಟುಮಾಡಬಹುದು. ಒಂದು ವೇಳೆ ಈ ರಾಶಿಯವರು ಈಗಾಗಲೇ ಸ್ವಲ್ಪ ಭೂಮಿಯನ್ನು ಹೊಂದಿದ್ದರೆ ವರ್ಷದ ಆರಂಭದಲ್ಲಿ ಅಂದರೆ ಜನವರಿಯಿಂದ ಮಾರ್ಚ್‌ವರೆಗೆ ಪ್ರಯತ್ನಿಸಬಹುದು. ನಂತರದ ಸಮಯ ಅಷ್ಟೇನೂ ಅನುಕೂಲವಾಗಿಲ್ಲ.

ಮೀನ ರಾಶಿ

ಭೂಮಿ ಖರೀದಿಸಲು, ನಿರ್ಮಿಸಲು ಅಥವಾ ಹೊಸ ಮನೆಯನ್ನು ನಿರ್ಮಿಸಲು ಸಿದ್ಧರಿರುವ ಮೀನ ರಾಶಿಯವರಿಗೆ 2025 ಉತ್ತಮವಾಗಿರುತ್ತದೆ. ಜನವರಿಯಿಂದ ಮೇ ಮಧ್ಯದಲ್ಲಿ ಯಾವುದೇ ಅಶುಭ ಪರಿಣಾಮಗಳಿರುವುದಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಜಾತಕದಲ್ಲಿ ಪರಿಸ್ಥಿತಿಗಳು ಅನುಕೂಲಕರವಾಗಿದ್ದರೆ ಮತ್ತು ಗ್ರಹಗಳ ಯಾವುದೇ ಅಡ್ಡ ಪರಿಣಾಮಗಳಿಲ್ಲದಿದ್ದರೆ, ನೀವು ಭೂಮಿಯನ್ನು ಖರೀದಿಸಲು ಸಾಧ್ಯವಾಗುತ್ತದೆ. ಆದರೆ ಮೇ ಮಧ್ಯದ ನಂತರದ ಅವಧಿಯಲ್ಲಿ, ನೀವು ಭೂಮಿ ಅಥವಾ ಕಟ್ಟಡಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ. ಮೇ ಮಧ್ಯದ ಮೊದಲು ಭೂಮಿ ಮತ್ತು ಆಸ್ತಿಯನ್ನು ಖರೀದಿಸಬಹುದು. ಈ ಅವಧಿಯಲ್ಲಿ ಮನೆ ಕಟ್ಟುವ ಕೆಲಸವನ್ನೂ ಮಾಡಬಹುದು. ಒಟ್ಟಾರೆ ಈ ವರ್ಷದ ಮೊದಲಾರ್ಧ ಭೂಮಿ ಮತ್ತು ಕಟ್ಟಡಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ನಿಮಗೆ ಧನಾತ್ಮಕ ಫಲಿತಾಂಶಗಳನ್ನು ನೀಡುತ್ತದೆ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.