Rashi Name Letters: ಜ್ಯೋತಿಷದಲ್ಲಿ ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ? ಹೆಸರಿನ ಮೊದಲಾಕ್ಷರ ನೋಡಿ ರಾಶಿ ಕಂಡುಹಿಡಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Rashi Name Letters: ಜ್ಯೋತಿಷದಲ್ಲಿ ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ? ಹೆಸರಿನ ಮೊದಲಾಕ್ಷರ ನೋಡಿ ರಾಶಿ ಕಂಡುಹಿಡಿಯಿರಿ

Rashi Name Letters: ಜ್ಯೋತಿಷದಲ್ಲಿ ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ? ಹೆಸರಿನ ಮೊದಲಾಕ್ಷರ ನೋಡಿ ರಾಶಿ ಕಂಡುಹಿಡಿಯಿರಿ

Rashi Name Letters in Kannada: ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ? ಹೆಸರಿನ ಮೊದಲಾಕ್ಷರ ನೋಡಿಕೊಂಡು ಜನ್ಮರಾಶಿ ತಿಳಿಯುವುದು ಹೇಗೆ? ಮಗುವಿಗೆ ಜನ್ಮರಾಶಿಗೆ ತಕ್ಕಂತೆ ಹೆಸರಿಡಲು ಬಯಸುವವರಿಗೆ ಮೇಷದಿಂದ ಮೀನಾವರೆಗಿನ "ಜನ್ಮರಾಶಿ ಮತ್ತು ಅಕ್ಷರಗಳ ವಿವರ" ಇಲ್ಲಿ ನೀಡಲಾಗಿದೆ.

Rashi by Name Letter: ಜ್ಯೋತಿಷದಲ್ಲಿ ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ?
Rashi by Name Letter: ಜ್ಯೋತಿಷದಲ್ಲಿ ಯಾವ ಜನ್ಮರಾಶಿಗೆ ಯಾವ ಅಕ್ಷರ ಬರುತ್ತದೆ?

ಜನ್ಮರಾಶಿಗೆ ತಕ್ಕಂತೆ ಮಕ್ಕಳಿಗೆ ನಾಮಕರಣ ಮಾಡುವ ಪದ್ಧತಿಯನ್ನು ಸಾಕಷ್ಟು ಜನರು ಅನುಸರಿಸುತ್ತಾರೆ. ಇದೇ ಕಾರಣಕ್ಕೆ ಪೂಜೆ ಮಾಡುವ ಸಮಯದಲ್ಲಿ ಆರ್ಚಕರಿಗೆ ನೀವು ಹೆಸರು ಹೇಳಿದ ತಕ್ಷಣ ಅವರಾಗಿಯೇ ನಿಮ್ಮ ಜನ್ಮರಾಶಿಯನ್ನು ಊಹಿಸಿ ಮಂತ್ರ ಪಠಿಸುತ್ತಾರೆ. ಜನನ ಸಮಯದಲ್ಲಿ ಗ್ರಹಗಳ ಸ್ಥಾನವನ್ನು ಆಧರಿಸಿ ಜಾತಕದ ಆಧಾರದ ಮೇಲೆ ಮಗುವಿಗೆ ಒಂದು ಅಕ್ಷರವನ್ನು ನಿರ್ಧರಿಸಿ ನಾಮಕರಣ ಮಾಡಲಾಗುತ್ತದೆ. ಮಗು ಜನನವಾದ ಸಮಯದಲ್ಲಿ ಜ್ಯೋತಿಷಿಗಳು ಅಥವಾ ಶಾಸ್ತ್ರ ಬಲ್ಲವರಲ್ಲಿ ಹೆಸರಿನ ಮೊದಲಾಕ್ಷರ ತಿಳಿಯುವ ಕ್ರಮ ಈಗಲೂ ಬಹುತೇಕ ಕಡೆಗಳಲ್ಲಿ ಇದೆ. ಮನೆಯಲ್ಲಿ ಪಂಚಾಂಗ ಪುಸ್ತಕವಿದ್ದರೆ ಈ ರೀತಿ ಯಾವ ರಾಶಿಗೆ ಯಾವ ಅಕ್ಷರವೆಂದು ಸುಲಭವಾಗಿ ತಿಳಿದುಕೊಳ್ಳಬಹುದು. ಈಗಿನ ಆನ್‌ಲೈನ್‌ ಜಗತ್ತಿನಲ್ಲಿ ಯಾವ ಅಕ್ಷರಕ್ಕೆ ಯಾವ ರಾಶಿ ಎಂಬ ವಿವರ ಸುಲಭವಾಗಿ ದೊರಕುತ್ತದೆ.

ಯಾವ ರಾಶಿಗೆ ಯಾವ ಅಕ್ಷರ?

ಮೇಷ: ಅ, ಚ, ಚು, ಚೆ, ಲ, ಲಿ, ಲು, ಲೆ

ಮೇಷರಾಶಿಯಲ್ಲಿ ಜನಿಸಿದ ಮಗುವಿಗೆ ಅ, ಚ, ಚು, ಚೆ, ಲ, ಲಿ, ಲು, ಲೆ ಅಕ್ಷರಗಳಿಂದ ಆರಂಭವಾಗುವಂತಹ ಹೆಸರು ಇಡಬಹುದು. ಇಲ್ಲಿ ಅ ಅಕ್ಷರ ಇರುವುದರಿಂದ ಸಾಕಷ್ಟು ಜನರು ಅಕ್ಷರ, ಅರ್ಪಿತಾ, ಅನನ್ಯ ಎಂದೆಲ್ಲ ಚಂದದ ಹೆಸರುಗಳನ್ನು ಹುಡುಕಿ ಇಡಬಹುದು. ಚ ಲ ಅಕ್ಷರಗಳ ಹೆಸರನ್ನೂ ಇಡಬಹುದು. ಹಾಗಂತ, ಎ ಅಥವಾ ಅಕ್ಷರ ಇರುವ ಮಕ್ಕಳನ್ನು ನೋಡಿ ಇವರು ಮೇಷ ರಾಶಿಯಲ್ಲಿ ಜನಿಸಿದವರು ಎಂದು ಈ ಕಾಲದಲ್ಲಿ ತಿಳಿದುಕೊಂಡರೆ ತಪ್ಪಾಗಬಹುದು. ಜಾತಕದ ಆಧಾರವಿಲ್ಲದೆ "ಎ" ಮೊದಲಾಕ್ಷರದ ಹೆಸರೇ ಬೇಕು ಎಂದು ಸಾಕಷ್ಟು ಜನರು ಹೆಸರು ಇಟ್ಟಿರಬಹುದು.

ವೃಷಭ: ಉ, ಎ, ಈ, ಔ, ದ, ದೀ, ವೊ

ವೃಷಭ ರಾಶಿಯ ಮಕ್ಕಳಿಗೆ ಉ, ಎ, ಈ, ಔ, ದ, ದೀ, ವೊ ಅಕ್ಷರಗಳಿಂದ ಆರಂಭವಾಗುವ ಹೆಸರು ಇಡಬಹುದು. ಶಾಲೆಯಲ್ಲಿ ಮಗುವಿನ ಅಟೆಂಡೆನ್ಸ್‌ ಪುಸ್ತಕದಲ್ಲಿ ಮೊದಲು ಬರಬೇಕೆಂದು ಬಯಸುವವರು ಎ ಅಕ್ಷರದಿಂದ ಹೆಸರು ಇಡಬಹುದು. ಉ, ದ ಸೇರಿದಂತೆ ಇತರೆ ಅಕ್ಷರಗಳಿಂದಲೂ ಮಗುವಿಗೆ ಸೂಕ್ತವಾದ ಹೆಸರು ಇಡಬಹುದು.

ಮಿಥುನ: ಕೆ, ಕೊ, ಕೆ, ಘ, ಛ, ಹ, ಡ

ಮಿಥುನ ರಾಶಿಯವರಿಗೆ ̧ಕೆ, ಕೊ, ಕೆ, ಘ, ಛ, ಹ, ಡ ಮುಂತಾದ ಅಕ್ಷರಗಳ ಆಯ್ಕೆ ಇವೆ. ಡ, ಘದಂತಹ ಅಕ್ಷರಗಳಲ್ಲಿ ಸುಲಭವಾಗಿ ಸುಂದರ ಹೆಸರು ದೊರಕದೆ ಇರಬಹುದು.

ಕರ್ಕಾಟಕ: ಹಾ, ಹೇ, ಹೋ, ಡಾ, ಹೀ, ಡೋ

ಕರ್ಕಾ ರಾಶಿಯಲ್ಲಿ ಜನಿಸಿದವರಿಗೆ ಹ ಅಕ್ಷರದಲ್ಲಿ ಹೆಸರು ಇಡಬಹುದು. ಡಾ ಡೋದಲ್ಲಿ ಹೆಸರು ಇಡಲು ಕಷ್ಟವಾಗಬಹುದು.

ಸಿಂಹ: ಮಿ, ಮೇ, ಮಿ, ಟೇ, ಟಾ, ಟೀ

ಸಿಂಹ ರಾಶಿಯಲ್ಲಿ ಜನಿಸಿದವರಿಗೆ ಮಿ, ಮೇ ಅಕ್ಷರಗಳಲ್ಲಿ ಸುಲಭವಾಗಿ ಹೆಸರು ಇಡಬಹುದು. ಟಾ ಟೀ ಟೇಯಲ್ಲಿ ಹೆಸರು ಇಡಲು ತುಸು ಕಷ್ಟವಾಗಬಹುದು.

ಕನ್ಯಾ: ಪ, ಷ, ಣ, ಪೆ, ಪೊ, ಪ

ಕನ್ಯಾ ರಾಶಿಯಲ್ಲಿ ಜನಸಿದವರಿಗೆ ಪ ಅಕ್ಷರ ಪ್ರಮುಖವಾಗಿ ಸೂಕ್ತವಾಗಬಹುದು. ಷ ಅಕ್ಷರದಲ್ಲಿ ಷಣ್ಮುಖ ಇತ್ಯಾದಿ ಸಿಮೀತ ಹೆಸರುಗಳ ಆಯ್ಕೆ ದೊರಕಬಹುದು.

ತುಲಾ: ರೇ, ರೋ, ರಾ, ತಾ, ತೇ, ತೂ

ವೃಶ್ಚಿಕ: ಲೊ, ನೆ, ನಿ, ನೂ, ಯಾ, ಯಿ

ಧನು : ಧಾ, ಯೇ, ಯೋ, ಭಿ, ಭೂ, ಫಾ, ಢಾ

ಮಕರ: ಜಾ, ಜಿ, ಖೋ, ಖೂ, ಗ, ಗೀ, ಭೋ

ಕುಂಭ: ಗೆ, ಗೋ, ಸಾ, ಸೂ, ಸೆ, ಸೋ, ದ

ಮೀನ: ದೀ, ಚಾ, ಚಿ, ಝ, ದೋ, ದೂ

ಹೀಗೆ ವಿವಿಧ ಜನ್ಮರಾಶಿಗಳಿಗೆ ತಕ್ಕಂತೆ ಹೆಸರಿಡಲು ಮೊದಲ ಅಕ್ಷರಗಳು ಬರುತ್ತವೆ. ಎಯಿಂದ ಝಡ್‌ ತನಕ ಹೆಸರಿಡಲು ಸಾವಿರಾರು, ಲಕ್ಷಾಂತರ ಚಂದದ ಹೆಸರುಗಳು ಇರುತ್ತವೆ. ಈ ಅಕ್ಷರಗಳಿಗೆ ಜ್ಯೋತಿಷದಲ್ಲಿ ತನ್ನದೇ ಆದ ಮಹತ್ವ ಇರುತ್ತದೆ. ಈ ಅಕ್ಷರಗಳು ವ್ಯಕ್ತಿಯೊಬ್ಬರ ಸಂತೋಷ, ಸಮೃದ್ಧಿ, ಯಶಸ್ಸಿನ ಮೇಲೆಯೂ ಪರಿಣಾಮ ಬೀರುತ್ತದೆ.

ಡಿಸ್‌ಕ್ಲೈಮರ್‌/ ಹಕ್ಕು ನಿರಾಕರಣೆ

ಲಭ್ಯವಿರುವ ಮಾಹಿತಿ ಆಧರಿಸಿದ ಬರಹ ಇದಾಗಿದೆ. ಈ ಲೇಖನದಲ್ಲಿ ನೀಡಲಾದ ಮಾಹಿತಿಯು ಸಂಪೂರ್ಣವಾಗಿ ಸತ್ಯ ಮತ್ತು ನಿಖರವಾಗಿದೆ ಎಂದು ನಾವು ಹೇಳಿಕೊಳ್ಳುವುದಿಲ್ಲ. ವಿವರವಾದ ಮತ್ತು ಹೆಚ್ಚಿನ ಮಾಹಿತಿಗಾಗಿ  ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.