ತಿರುಮಲ ವಿಶೇಷ ದರ್ಶನದ ಟಿಕೆಟ್ ಇಂದು ಬಿಡುಗಡೆ; ಬಾಲಾಜಿ ದರ್ಶನಕ್ಕೆ ಹೊರಡುವ ಮೊದಲು ಬುಕ್ ಮಾಡಿಕೊಳ್ಳಿ
ತಿರುಪತಿ ಬಾಲಾಜಿ ದರ್ಶನ ಪಡೆಯಲು ತಿರುಮಲಕ್ಕೆ ಹೋಗುವ ಪ್ಲಾನ್ ಇದ್ರೆ ಗಮನಿಸಿ. ಟಿಟಿಡಿಯು (ತಿರುಮಲ ತಿರುಪತಿ ದೇವಸ್ಥಾನಂ) ಏಪ್ರಿಲ್ ತಿಂಗಳ ವಿಶೇಷ ದರ್ಶನದ ಟಿಕೆಟ್ ಅನ್ನು ಇಂದು (ಜ.24) ಬಿಡುಗಡೆ ಮಾಡಲಿದೆ. ಜೊತೆಗೆ ವಿವಿಧ ಸೇವೆಗಳ ಟಿಕೆಟ್ ಅನ್ನು ಕೂಡ ನೀವು ಕಾಯ್ದಿರಿಸಬಹುದು. ಈ ಕುರಿತ ವಿವರ ಇಲ್ಲಿದೆ.
ತಿರುಪತಿ ಬಾಲಾಜಿ ದಕ್ಷಿಣ ಭಾರತದ ಪ್ರಸಿದ್ಧ ದೇವಾಲಯಗಳಲ್ಲಿ ಒಂದು. ತಿರುಪತಿ ವೆಂಕಟರಮಣನ ದರ್ಶನ ಮಾಡಬೇಕು ಎಂಬುದು ಹಲವರ ಕನಸಾಗಿರುತ್ತದೆ. ಆದರೆ ಇಲ್ಲಿಗೆ ಹೇಗೆ ಹೋಗುವುದು, ಇಲ್ಲಿ ದರ್ಶನ ಹಾಗೂ ಟಿಕೆಟ್ ವ್ಯವಸ್ಥೆ ಹೇಗಿರುತ್ತದೆ ಎಂದೆಲ್ಲಾ ಗೊಂದಲ ಇರುವುದು ಸಹಜ. ನೀವು ಈ ವರ್ಷ ತಿರುಪತಿಗೆ ಹೋಗಬೇಕು ಎಂದುಕೊಂಡಿದ್ದರೆ ಗಮನಿಸಿ. ಟಿಟಿಡಿಯು ವಿವಿಧ ಪೂಜಾ ಸೇವಾಗಳು ಹಾಗೂ ಏಪ್ರಿಲ್ ತಿಂಗಳ ವಿಶೇಷ ದರ್ಶನದ ಟಿಕೆಟ್ ಅನ್ನು ಇಂದು (ಜ.24) ರಿಲೀಸ್ ಮಾಡಲಿದೆ.
ಶ್ರೀವಾರಿ ದರ್ಶನದ ಅನುಕೂಲಕ್ಕಾಗಿ ಭಕ್ತರಿಗೆ ಈ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ವಿವಿಧ ಸೇವೆಗಳು ಹಾಗೂ ದಿನಗಳು, ದರ್ಶನ ಸಮಯ ಈ ಎಲ್ಲದರ ಮಾಹಿತಿ ಇಲ್ಲಿದೆ.
ಏಪ್ರಿಲ್ ತಿಂಗಳ ಸುಪ್ರಭಾತ, ತೋಮಾಲ, ಅರ್ಚನೆ, ಅಷ್ಟದಳಪಪಾದಾಮಾರಾಧನೆ ಸೇವೆಗಳಿಗೆ ಆನ್‌ಲೈನ್ ಲಕ್ಕಿಡಿಪ್ ನೋಂದಣಿಯು ಜನವರಿ 18 ರಂದು ಬೆಳಿಗ್ಗೆ 10 ರಿಂದ ಜನವರಿ 20ರವರೆಗೆ ನಡೆದಿತ್ತು. ಹೀಗೆ ವಿವಿಧ ಸೇವೆಗಳಿಗೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.
300 ರೂ ವಿಶೇಷ ದರ್ಶನ
ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಪ್ರತಿನಿತ್ಯ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಪ್ರತಿದಿನ ಸರಾಸರಿ 80 ಸಾವಿರದಿಂದ 1 ಲಕ್ಷದವರೆಗೆ ಭಕ್ತರು ವೆಂಕಟೇಶ್ವರನ ದರ್ಶನಕ್ಕಾಗಿ ಭಕ್ತರು ಇಲ್ಲಿಗೆ ಬರುತ್ತಾರೆ. ಸರತಿ ಸಾಲಿನಲ್ಲಿ ನಿಂತು ದರ್ಶನ ಪಡೆಯಲು ಬಯಸುವವರಿಗೆ ಅದೇ ದಿನ ದರ್ಶನ ಸಿಗುತ್ತಿಲ್ಲ. ನೀವು ಅದೇ ದಿನ ದರ್ಶನ ಪಡೆಯಬೇಕು ಅಂತಿದ್ದರೆ, ವಿಶೇಷ ದರ್ಶನಕ್ಕಾಗಿ 300 ರೂ ಟಿಕೆಟ್ ಬುಕ್ ಮಾಡಬೇಕು. ಭಕ್ತಾದಿಗಳಿಗಾಗಿ ಟಿಟಿಡಿ 300 ರೂ ವಿಶೇಷ ಟಿಕೆಟ್ ವ್ಯವಸ್ಥೆ ಮಾಡಿದೆ.
ಏಪ್ರಿಕ್ ತಿಂಗಳಿಗೆ ಇಂದೇ ಕಾಯ್ದಿರಿಸಿ
ಏಪ್ರಿಲ್ ತಿಂಗಳ ದರ್ಶನಕ್ಕೆ 300ರೂ ಟಿಕೆಟ್ ಪಡೆದು ಹೋಗಲು ಬಯಸುವವರು ಇಂದು ಟಿಟಿಡಿ ವೆಬ್‌ಸೈಟ್ ನೋಡಬಹುದು. ಏಪ್ರಿಲ್ ತಿಂಗಳಿಗೆ ಇಂದು (ಜ.24) ಟಿಕೆಟ್ ರಿಲೀಸ್ ಆಗಲಿದೆ. 300 ರೂ ಟಿಕೆಟ್ ಪಡೆದು ದರ್ಶನಕ್ಕೆ ಬರುವವರು ತಿರುಮಲಕ್ಕೆ ಬಂದು ನೇರವಾಗಿ ಶ್ರೀವಾರಿಯ ದರ್ಶನ ಪಡೆಯಬಹುದಾಗಿದೆ. ಈ ಟಿಕೆಟ್ ಪಡೆದವರು ಗರಿಷ್ಠ 5 ಗಂಟೆಯ ಒಳಗೆ ದರ್ಶನ ಮುಗಿಸಿ ಇರುತ್ತಾರೆ.
ಭಕ್ತಾದಿಗಳು ಆನ್‌ಲೈನ್ ಹಾಗೂ ಆಫ್‌ಲೈನ್ ಎರಡರ ಮೂಲಕವೂ ಟಿಕೆಟ್ ಖರೀದಿ ಮಾಡಬಹುದು. ಆನ್‌ಲೈನ್ ಮೂಲಕ ಎಂದರೆ ಟಿಟಿಡಿ ಅವರ ಅಧಿಕೃತ ವೆಬ್‌ಸೈಟ್ ಅಥವಾ ಮೊಬೈಲ್ ಆಪ್ ಮೂಲಕ ಟಿಕೆಟ್ ಬುಕ್ ಮಾಡಬಹುದು. ಜನವರಿ 25 ರಿಂದ 28ರವರೆಗೆ ಏಪ್ರಿಲ್ ತಿಂಗಳ ದರ್ಶನಕ್ಕೆ ಟಿಕೆಟ್ ಬುಕ್ ಮಾಡುವ ವ್ಯವಸ್ಥೆ ಇದೆ.
ಹೆಚ್ಚಿನ ಮಾಹಿತಿಗೆ: https://www.tirumala.org/ ಈ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ನೀವು ಮೊಬೈಲ್ ಆಪ್ ಬಳಸುತ್ತಿದ್ದರೆ ಅದರಲ್ಲಿ ನೋಟಿಫಿಕೇಶನ್‌ಗಳನ್ನು ಪಡೆಯಬಹುದಾಗಿದೆ.
ಇದನ್ನೂ ಓದಿ
Shakambari Vrat: ಶಾಕಾಂಬರಿ ವ್ರತ; ದುರ್ಗೆಗೆ ಶತಾಕ್ಷಿ ಎಂಬ ಹೆಸರು ಬಂದ ಕಥೆಯನ್ನೊಮ್ಮೆ ಓದಿ
Shakambari Vrat: ಜನವರಿ 24 ರಂದು ಶಾಕಾಂಬರಿ ವ್ರತವನ್ನು ಆಚರಿಸಲಾಗುತ್ತಿದೆ. ಶಾಕಾಂಬರಿ ದೇವಿಯನ್ನು ಈಶ್ವರಿ ಮತ್ತು ದುರ್ಗಾ ಮಾತಾ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ಈಕೆಯ ಬಗ್ಗೆ ಭಾಗವತ ಪುರಾಣದಲ್ಲಿ ಮತ್ತು ದೇವಿ ಮಹಾತ್ಮೆಯಲ್ಲಿ ಉಲ್ಲೇಖಿತವಾಗಿದೆ. ಇಂದಿನ ದಿನ ಉತ್ತರ ಭಾರತದಲ್ಲಿ ವಿಜೃಂಭಣೆಯಿಂದ ಈ ಹಬ್ಬವನ್ನು ಆಚರಿಸುತ್ತಾರೆ.