ವಿಶ್ವದ ಬೆಸ್ಟ್ ಸಹೋದರಿಗೆ ರಕ್ಷಾ ಬಂಧನದ ಶುಭಾಶಯಗಳು; ಪ್ರೀತಿಯ ಅಕ್ಕ-ತಂಗಿಯರಿಗೆ ರಾಖಿ ಹಬ್ಬಕ್ಕೆ ವಿಶ್ ಮಾಡಲು ಐಡಿಯಾಗಳು
ಹಬ್ಬ ಹರಿದಿನ, ಶುಭ ಕಾರ್ಯಕ್ರಮಗಳಲ್ಲಿ ಶುಭಾಶಯ ವಿನಿಮಯ ಮಾಡಿಕೊಳ್ಳುವುದರಿಂದ ಖುಷಿ ದುಪ್ಪಟ್ಟಾಗುತ್ತದೆ. ಸೋಮವಾರ ರಕ್ಷಾ ಬಂಧನ ಹಬ್ಬ ಆಚರಿಸಲಾಗುತ್ತಿದೆ. ದೂರದಲ್ಲಿರುವ ನಿಮ್ಮ ಪ್ರೀತಿಯ ಅಕ್ಕ-ತಂಗಿಯರಿಗೆ ಈ ಸಾಲುಗಳು ಮೂಲಕ ಶುಭ ಕೋರಿ.
ಪ್ರತಿ ವರ್ಷ ಶ್ರಾವಣ ಮಾಸದ ಹುಣ್ಣಿಮೆಯಂದು ರಕ್ಷಾ ಬಂಧನವನ್ನು ಆಚರಿಸಲಾಗುತ್ತದೆ. ಈ ಬಾರಿ ಆಗಸ್ಟ್ 19 ರಂದು ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ಹಬ್ಬ ರಕ್ಷಾ ಬಂಧನ ಆಚರಿಸಲಾಗುತ್ತಿದೆ. ಸಹೋದರಿಯರು ತಮ್ಮ ಸಹೋದರನಿಗೆ ರಾಖಿ ಕಟ್ಟಿ ಸಿಹಿ ತಿನ್ನಿಸಲು ಕಾಯುತ್ತಿದ್ದಾರೆ. ತಾವೇ ಖುದ್ದು ಶಾಪಿಂಗ್ ಮಾಡಿ ತಮ್ಮ ಪ್ರೀತಿಯ ಅಣ್ಣ-ತಮ್ಮಂದಿರಿಗೆ ಕಟ್ಟಲು ರಾಖಿ ಕೊಂಡು ತಂದಿದ್ದಾರೆ.
ಹಾಗೇ ಸಹೋದರರು ಕೂಡಾ ತಮಗೆ ರಕ್ಷೆಯನ್ನು ಕಟ್ಟಿ ಶುಭ ಹಾರೈಸುವ ಸಹೋದರಿಯರಿಗೆ ನೀಡಲು ಉಡುಗೊರೆಗಳನ್ನು ಕೊಂಡು ತಂದಿದ್ದಾರೆ. ಕೆಲವರು ತಮ್ಮ ಅಕ್ಕ-ತಂಗಿಯರಿಗೆ ಸರ್ಪ್ರೈಸ್ ಪ್ಲ್ಯಾನ್ ಮಾಡುತ್ತಿದ್ದಾರೆ. ರಕ್ಷಾ ಬಂಧನ ತಿಥಿಯು ಆಗಸ್ಟ್ 19, ಸೋಮವಾರ ಬೆಳಗ್ಗೆ 3:05 ರಿಂದ ಆರಂಭವಾಗಿ ರಾತ್ರಿ 11:56 ಕ್ಕೆ ಕೊನೆಗೊಳ್ಳುತ್ತದೆ. ಈ ಶುಭ ಸಮಯದಂದು ಸಹೋದರಿಯರು ತಮ್ಮ ಸಹೋದರರರ ಮಣಿಕಟ್ಟಿಗೆ ತಾವು ಆರಿಸಿ ತಂದ ರಾಖಿಯನ್ನು ಕಟ್ಟಿ ಅವರ ದೀರ್ಘಾಯುಷ್ಯಕ್ಕೆ ಪ್ರಾರ್ಥಿಸುತ್ತಾರೆ. ಹಾಗೇ ಸಹೋದರರು ಕೂಡಾ ಕೊನೆವರೆಗೂ ನಿಮಗೆ ರಕ್ಷೆಯಾಗಿ ನಿಲ್ಲುವೆ ಎಂದು ವಾಗ್ದಾನ ಮಾಡುತ್ತಾರೆ. ರಕ್ಷಾ ಬಂಧನದಂದು ಶುಭಾಶಯ ವಿನಿಮಯ ಮಾಡಿಕೊಳ್ಳುವುದು ಕೂಡಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುತ್ತದೆ. ನಿಮ್ಮ ಪ್ರೀತಿಯ ಅಕ್ಕ-ತಂಗಿಯರಿಗೆ ಈ ರೀತಿ ಶುಭ ಹಾರೈಸಿ.
- ಪ್ರೀತಿಯ ಸಹೋದರಿಗೆ ರಕ್ಷಾ ಬಂಧನದ ಶುಭಾಶಯಗಳು. ದೇವರು ನಿನಗೆ ಸದಾ ಸುಖ, ಸಂತೋಷ, ಆಯಸ್ಸು ನೀಡಿ ಹಾರೈಸಲಿ.
- ನನ್ನ ಕ್ರೈಂ ಪಾರ್ಟ್ನರ್ ಸಹೋದರಿಗೆ ರಕ್ಷಾ ಬಂಧನದ ಶುಭ ಹಾರೈಕೆಗಳು. ಎಂದೆಂದಿಗೂ ಹೀಗೆ ನಗು ನಗುತ್ತಾ ಸುಖವಾಗಿ ಬಾಳು.
- ವಿಶ್ವದ ಬೆಸ್ಟ್ ಸಹೋದರಿಗೆ ರಕ್ಷಾ ಬಂಧನದ ಶುಭಾಶಯಗಳು, ನಿನ್ನ ಪ್ರೀತಿ, ಹಾರೈಕೆ ಹೀಗೆ ನನ್ನ ಮೇಲಿರಲಿ.
- ನನ್ನ ಆಯಸ್ಸೂ ನಿನಗೆ ಇರಲಿ, ನೂರು ಕಾಲ ನಗು ನಗುತ್ತಾ ಎಲ್ಲರಿಗೂ ಖುಷಿ ಹಂಚುತ್ತಾ ಸುಖ, ಸಂತೋಷದಿಂದ ಬಾಳು. ರಾಖಿ ಹಬ್ಬದ ಶುಭಾಶಯಗಳು.
- ಪ್ರತಿ ಕ್ಷಣದಲ್ಲೂ ನಿನ್ನ ಬೆಂಬಲವಾಗಿ ನಿಲ್ಲುತ್ತೇನೆ, ನಿನ್ನಂಥ ಸಹೋದರಿಯನ್ನು ಪಡೆದ ನಾನೇ ಅದೃಷ್ಟವಂತ, ಪ್ರೀತಿಯ ಸಹೋದರಿಗೆ ರಕ್ಷಾ ಬಂಧನದ ಶುಭ ಹಾರೈಕೆಗಳು.
- ಹುಟ್ಟಿದ ಮನೆಗೆ ಕೀರ್ತಿ ತಂದಂತೆ ಮೆಟ್ಟಿದ ಮನೆಗೂ ನೀನು ಹೆಸರು ತರಲೆಂದು ಈ ರಾಖಿ ಹಬ್ಬದ ವಿಶೇಷ ದಿನದಂದು ಹಾರೈಸುತ್ತಿದ್ದೇನೆ. ರಾಖಿ ಹಬ್ಬ ನಿನ್ನ ಬಾಳಲ್ಲಿ ಎಲ್ಲವನ್ನೂ ತಂದುಕೊಡಲಿ.
- ರಾಖಿ ಹಬ್ಬದಂದು ಮಾತ್ರವಲ್ಲ, ಜೀವನದುದ್ದಕ್ಕೂ ನಿನ್ನ ಪ್ರೀತಿ ನನ್ನ ಮೇಲೆ ಸದಾ ಹೀಗೇ ಇರಲಿ, ನೀನು ನನಗೆ ರಕ್ಷೆ ಕಟ್ಟುವಂತೆ ನಾನು ನಿನ್ನ ಬೆನ್ನ ಹಿಂದೆ ನಿಂತು ನಿನಗೆ ಸದಾ ಕಾವಲಾಗಿರುವೆ. ರಕ್ಷಾ ಬಂಧನದ ಶುಭಾಶಯಗಳು.
- ದಿನಗಳು ಕಳೆದರೂ, ವರ್ಷಗಳು ಉರುಳಿದರೂ, ಋತುಗಳು ಬದಲಾದರೂ ನನ್ನ ನಿನ್ನ ಪ್ರೀತಿ ವಿಶ್ವಾದ ಬದಲಾಗದಿರಲಿ. ಪ್ರೀತಿಯ ಸಹೋದರಿಗೆ ರಾಖಿ ಹಬ್ಬದ ಶುಭ ಹಾರೈಕೆಗಳು.
ಈ ಪ್ರೀತಿಯ ಸಾಲುಗಳ ಮೂಲಕ ನಿಮ್ಮ ಅಕ್ಕ-ತಂಗಿಯರಿಗೆ ರಾಖಿ ಹಬ್ಬದ ಶುಭ ಕೋರಿ.