ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ; ಇದೇ ದಿನ ಮತ್ತೆ ಸೃಷ್ಟಿಯಾಗುತ್ತಿದೆ ದ್ವಾಪರ ಯುಗದಲ್ಲಿದ್ದ ಸಮಯ-indian festival krishna janmashtami 2024 is very special due to rohini nakshatra vasudeva yoga rsm ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ; ಇದೇ ದಿನ ಮತ್ತೆ ಸೃಷ್ಟಿಯಾಗುತ್ತಿದೆ ದ್ವಾಪರ ಯುಗದಲ್ಲಿದ್ದ ಸಮಯ

ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ; ಇದೇ ದಿನ ಮತ್ತೆ ಸೃಷ್ಟಿಯಾಗುತ್ತಿದೆ ದ್ವಾಪರ ಯುಗದಲ್ಲಿದ್ದ ಸಮಯ

ಈ ಬಾರಿ ಆಗಸ್ಟ್‌ 26 ರಂದು ಆಚರಿಸಲಾಗುತ್ತಿರುವ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷಗಳಿಂದ ಕೂಡಿದೆ. ರೋಹಿಣಿ ನಕ್ಷತ್ರ, ವಾಸುದೇವ ಯೋಗ ಸೇರಿದಂತೆ ದ್ವಾಪರ ಯುಗದ ಕಾಲದಲ್ಲಿ ರೂಪುಗೊಂಡಿದ್ದ ಅಪರೂಪದ ವಿಶೇಷಗಳು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯಂದು ರೂಪುಗೊಳ್ಳುತ್ತಿದೆ.

ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ; ಇದೇ ದಿನ ಮತ್ತೆ ಸೃಷ್ಟಿಯಾಗುತ್ತಿದೆ ದ್ವಾಪರ ಯುಗದಲ್ಲಿದ್ದ ಸಮಯ
ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷ; ಇದೇ ದಿನ ಮತ್ತೆ ಸೃಷ್ಟಿಯಾಗುತ್ತಿದೆ ದ್ವಾಪರ ಯುಗದಲ್ಲಿದ್ದ ಸಮಯ

ಜನ್ಮಾಷ್ಟಮಿ: ಈ ಬಾರಿ ಆಗಸ್ಟ್‌ 26 ರಂದು ಕೃಷ್ಣ ಜನ್ಮಾಷ್ಟಮಿ ಆಚರಿಸಲಾಗುತ್ತಿದೆ. ಉಡುಪಿ, ಇಸ್ಕಾನ್‌ ಹಾಗೂ ಇತರ ಕೃಷ್ಣನ ದೇವಾಲಯಗಳಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆಗೆ ಎಲ್ಲಾ ತಯಾರಿ ನಡೆಯುತ್ತಿದೆ. ವಿಷ್ಣುವಿನ 8ನೇ ಅವತಾರವಾದ ಶ್ರೀಕೃಷ್ಣ ಜನಿಸಿದ ದಿನವನ್ನು ಪ್ರತಿ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನಾಗಿ ಆಚರಿಸಲಾಗುತ್ತಿದೆ.

ಈ ಬಾರಿಯ ಕೃಷ್ಣ ಜನ್ಮಾಷ್ಟಮಿ ಬಹಳ ವಿಶೇಷವಾಗಿದೆ. ದ್ವಾಪರಕಾಲದಂತೆ ಈ ಬಾರಿ ಆ ದಿನ 4 ವಿಶೇಷ ಯೋಗಗಳು ಸಂಭವಿಸುತ್ತಿವೆ.

ರೋಹಿಣಿ ನಕ್ಷತ್ರ

ಶ್ರೀಕೃಷ್ಣನು ರೋಹಿಣಿ ನಕ್ಷತ್ರದಲ್ಲಿ ಜನಿಸಿದನು . ಈ ವರ್ಷ ಜನ್ಮಾಷ್ಟಮಿ ದಿನದಂದು ಈ ನಕ್ಷತ್ರವೇ ಇದೆ. ಈ ಬಾರಿಯ ರೋಹಿಣಿ ನಕ್ಷತ್ರವು ಆಗಸ್ಟ್ 26 ರಂದು ರಾತ್ರಿ 9.10 ರಿಂದ ಪ್ರಾರಂಭವಾಗಲಿದೆ. ಹೀಗಾಗಿ ಸೋಮವಾರ ಮಧ್ಯರಾತ್ರಿ ರೋಹಿಣಿ ನಕ್ಷತ್ರದ ಜೊತೆ ಅಷ್ಟಮಿ ತಿಥಿ ಕೂಡಿ ಬರುವುದು ಜಯಂತಿ ಯೋಗ ರೂಪುಗೊಳ್ಳಲಿದೆ. ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರ. ಚಂದ್ರನು ಮನಸ್ಸು ಮತ್ತು ಭಾವನೆಗಳಿಗೆ ಸಂಬಂಧಿಸಿದೆ. ಈ ನಕ್ಷತ್ರದಲ್ಲಿ ಜನಿಸಿದ ಜನರು ತೀಕ್ಷ್ಣವಾದ ಬುದ್ಧಿವಂತಿಕೆ, ವರ್ಚಸ್ವಿ ವ್ಯಕ್ತಿತ್ವ, ಹೆಚ್ಚಿನ ಮಾನಸಿಕ ಸಾಮರ್ಥ್ಯ ಹೊಂದಿರುತ್ತಾರೆ. ಈ ಶುಭ ಯೋಗದ ಪ್ರಯುಕ್ತ ಈ ದಿನ ಮಾಡುವ ಕಾರ್ಯಕ್ಕೆ ವಿಶೇಷ ಮಹತ್ವವಿದೆ.

ಅಷ್ಟಮಿ ತಿಥಿ

ಶ್ರೀ ಕೃಷ್ಣನು ಶ್ರಾವಣ ಮಾಸದ ಕೃಷ್ಣ ಪಕ್ಷ ಅಷ್ಟಮಿ ತಿಥಿಯಂದು ಜನಿಸಿದನು . ಈ ಬಾರಿಯ ಅಷ್ಟಮಿ ತಿಥಿ ಕಾಕತಾಳೀಯವಾಗಿ ಜನ್ಮಾಷ್ಟಮಿಯ ದಿನವೇ ಬರುತ್ತದೆ. ಇದು ಈ ಹಬ್ಬವನ್ನು ಇನ್ನಷ್ಟು ವಿಶೇಷವನ್ನಾಗಿಸಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಕ್ತರು ಈ ದಿನ ಉಪವಾಸ ಮತ್ತು ಪೂಜೆ ಮಾಡಿದರೆ ವಿಶೇಷ ಫಲಗಳನ್ನು ಪಡೆಯಬಹುದು.

ವೃಷಭ ರಾಶಿ

ಶ್ರೀ ಕೃಷ್ಣನು ವೃಷಭ ರಾಶಿಯಲ್ಲಿ ಜನಿಸಿದನು. ಈ ಬಾರಿಯೂ ಚಂದ್ರನು ವೃಷಭ ರಾಶಿಯಲ್ಲಿಯೇ ಇದ್ದಾನೆ. ವೃಷಭ ರಾಶಿಯನ್ನು ಶುಕ್ರನು ಆಳುತ್ತಾನೆ . ಇದು ಪ್ರೀತಿ, ಸೌಂದರ್ಯ ಮತ್ತು ಭೌತಿಕ ಸಂತೋಷಗಳ ಅಂಶವೆಂದು ಪರಿಗಣಿಸಲಾಗಿದೆ. ಈ ರಾಶಿಯಲ್ಲಿ ಚಂದ್ರನ ಸಂಚಾರವು ಶ್ರೀ ಕೃಷ್ಣನ ವಿಶೇಷ ಅನುಗ್ರಹವನ್ನು ತೋರಿಸುತ್ತದೆ. ಈ ದಿನ ಭಕ್ತರು ಕೃಷ್ಣನ ಪೂಜೆ ಮಾಡುವುದರಿಂದ ಕೃಷ್ಣನ ಆಶೀರ್ವಾದ ಪಡೆಯಬಹುದು.

ವಾಸುದೇವ ಯೋಗ

ಕಾಕತಾಳೀಯವೆಂಬಂತೆ ಈ ವರ್ಷ ಜನ್ಮಾಷ್ಟಮಿಯಂದು ವಾಸುದೇವ ಯೋಗದ ರಚನೆಯೂ ಆಗುತ್ತಿದೆ. ವಾಸುದೇವ ಯೋಗವನ್ನು ಅತ್ಯಂತ ಪವಿತ್ರವೆಂದು ಪರಿಗಣಿಸಲಾಗಿದೆ. ಏಕೆಂದರೆ ಈ ಯೋಗವು ಶ್ರೀಕೃಷ್ಣನ ಜನ್ಮ ಕಾಲದಲ್ಲೂ ಇತ್ತು. ಈ ಯೋಗವು ಜೀವನದಲ್ಲಿ ಸಮೃದ್ಧಿ, ಸಂತೋಷ ಮತ್ತು ಶಾಂತಿಯ ಅಂಶವಾಗಿದೆ. ಈ ಯೋಗದ ಸಮಯದಲ್ಲಿ ಉಪವಾಸ ಮತ್ತು ಪೂಜೆ ಮಾಡುವುದು ಭಕ್ತರಿಗೆ ಜೀವನದಲ್ಲಿ ಶಾಂತಿ, ಯಶಸ್ಸನ್ನು ತರುತ್ತದೆ.

ಈ ನಾಲ್ಕು ವಿಶೇಷಗಳಿಂದ ಈ ವರ್ಷದ ಜನ್ಮಾಷ್ಟಮಿ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಭಕ್ತರು ಈ ಶುಭ ದಿನದಂದು ಶ್ರೀಕೃಷ್ಣನನ್ನು ಪೂಜಿಸಿ ಆತನ ಕೃಪೆಗೆ ಪಾತ್ರರಾಗಬಹುದು. ಜನ್ಮಾಷ್ಟಮಿಯಂದು ಉಪವಾಸ ಮತ್ತು ಪೂಜೆಗಳನ್ನು ಮಾಡುವುದರಿಂದ ಮತ್ತು ಮಧ್ಯರಾತ್ರಿಯಲ್ಲಿ ಶ್ರೀಕೃಷ್ಣನ ಜನ್ಮದಿನವನ್ನು ವಿಶೇಷವಾಗಿ ಆಚರಿಸುವ ಮೂಲಕ ವಿಶೇಷ ಫಲಗಳನ್ನು ಪಡೆಯಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.