ಜ್ಯೇಷ್ಠ ಮಾಸದಲ್ಲಿ ಆಚರಿಸುವ ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜ್ಯೇಷ್ಠ ಮಾಸದಲ್ಲಿ ಆಚರಿಸುವ ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ಜ್ಯೇಷ್ಠ ಮಾಸದಲ್ಲಿ ಆಚರಿಸುವ ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

Indian Festival: ಉತ್ತರ ಭಾರತದಲ್ಲಿ ಆಚರಿಸುವ ಪ್ರಮುಖ ವ್ರತಗಳಲ್ಲಿ ರಂಭಾ ವ್ರತ ಕೂಡಾ ಒಂದು. ಇದನ್ನು ರಂಭಾ ತೃತೀಯ ಎಂದು ಕರೆಯಲಾಗುತ್ತದೆ. ಈ ಬಾರಿ ಜೂನ್‌ 9 ರಂದು ರಂಭಾ ವ್ರತ ಆಚರಿಸಲಾಗುತ್ತಿದೆ. ಕೆಲವರು ಈ ದಿನ ಲಕ್ಷ್ಮೀಯನ್ನು ಪೂಜಿಸುತ್ತಾರೆ. ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ.

ಜ್ಯೇಷ್ಠ ಮಾಸದಲ್ಲಿ ಆಚರಿಸುವ ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ
ಜ್ಯೇಷ್ಠ ಮಾಸದಲ್ಲಿ ಆಚರಿಸುವ ರಂಭಾ ವ್ರತದ ಪ್ರಾಮುಖ್ಯತೆ, ಪೂಜಾ ವಿಧಿ ವಿಧಾನ ಹೇಗೆ? ಇಲ್ಲಿದೆ ಮಾಹಿತಿ

ರಂಭಾ ವ್ರತವನ್ನು ಸಾಮಾನ್ಯವಾಗಿ ಉತ್ತರ ಭಾರತದಲ್ಲಿ ಆಚರಿಸಲಾಗುತ್ತದೆ. ಜೇಷ್ಠ ಮಾಸದ ಶುಕ್ಲಪಕ್ಷದ ತದಿಗೆಯಂದು ಈ ವ್ರತವನ್ನು ಆಚರಿಸಲಾಗುತ್ತದೆ. ಅದರ ಪ್ರಕಾರ ಈ ವರ್ಷ ಜೂನ್ 9, ಭಾನುವಾರ ಈ ವ್ರತವನ್ನು ಆಚರಿಸಲಾಗುತ್ತದೆ. ಸಮುದ್ರ ಮಂಥನದ ಸಮಯದಲ್ಲಿ ಅಸುರರ ಗಮನವನ್ನು ಬೇರೆಡೆ ಸೆಳೆಯಲು ರಂಭಾ ಅವತರಿಸುತ್ತಾಳೆ. ಉತ್ತರ ಭಾರತದ ಕೆಲವು ಹಿಂದೂ ಸಮುದಾಯದ ಮಹಿಳೆಯರು ಈ ದಿನವನ್ನು ರಂಭಾವ್ರತವನ್ನಾಗಿ ಆಚರಿಸುತ್ತಾರೆ.

ನಮಗೆಲ್ಲರಿಗೂ ತಿಳಿದಂತೆ ರಂಭೆ, ಊರ್ವಶಿ ಮತ್ತು ಮೇನಕೆಯರು ದೇವಲೋಕದ ಅಪ್ಸರೆಯರು. ಅದರಲ್ಲಿ ರಂಭಾ, ಕಶ್ಯಪ ಮುನಿ ಮತ್ತು ಪ್ರಾಧೆ ಎಂಬುವರ ಮಗಳು. ಗಂಧರ್ವ ತುಂಗುರನ ಪತ್ನಿಯೇ ರಂಭಾ.

ವಿಶ್ವಾಮಿತ್ರನ ತಪಸ್ಸು ಭಂಗಗೊಳಿಸಲು ರಂಭಾಗೆ ಸೂಚಿಸುವ ಇಂದ್ರ

ವಿಶ್ವಾಮಿತ್ರನು ಒಮ್ಮೆ ತಪಸ್ಸಿನಲ್ಲಿ ನಿರತನಾಗಿರುತ್ತಾನೆ. ಆದರೆ ಇಂದ್ರನು ಇದರಿಂದ ಭಯಗೊಳ್ಳುತ್ತಾನೆ. ಈ ಕಾರಣದಿಂದಾಗಿ ರಂಭೆಯನ್ನು ಕರೆದು ವಿಶ್ವಾಮಿತ್ರನ ತಪಸ್ಸನ್ನು ಭಂಗಗೊಳಿಸಲು ಸೂಚಿಸುತ್ತಾನೆ. ಆಗ ತಪಸ್ಸನ್ನು ಕೆಡಿಸಲು ಹೋದ ರಂಭೆಯು ವಿಶ್ವಾಮಿತ್ರನ ಕೋಪಕ್ಕೆ ಗುರಿಯಾಗುತ್ತಾಳೆ. ರಂಭೆಯು ತನ್ನ ತಪ್ಪನ್ನು ಕ್ಷಮಿಸುವಂತೆಯೂ ಶಾಪ ವಿಮೋಚನೆ ಮಾಡುವಂತೆಯೂ ವಿಶ್ವಾಮಿತ್ರರನ್ನು ಮನವಿ ಮಾಡಿದರೂ ಶಾಂತರಾಗದ ವಿಶ್ವಾಮಿತ್ರರು ಕಲ್ಲಾಗುವಂತೆ ರಂಭೆ ಶಾಪ ನೀಡುತ್ತಾರೆ. ದೇವಲೋಕದಲ್ಲಿ ಇರುವ ಎಲ್ಲಾ ಅಪ್ಸರೆಯರಲ್ಲಿ ಈಕೆಯೇ ಅತ್ಯಂತ ಸುಂದರವಾಗಿರುತ್ತಾಳೆ.

ಒಮ್ಮೆ ರಂಭೆ ಸರಯೂ ನದಿಯ ತೀರದಲ್ಲಿ ಚಿನ್ನದ ಕಳಶದಲ್ಲಿ ನೀರನ್ನು ಸಂಗ್ರಹಿಸುತ್ತಾಳೆ. ಆನಂತರ ಆ ನೀರನ್ನು ತೆಗೆದುಕೊಂಡು ರಾಮೇಶ್ವರದ ದಿಕ್ಕಿನಲ್ಲಿ ಸಾಗುತ್ತಾಳೆ. ಈ ನಡುವೆ ಆಕೆ ಧರಿಸಿದ್ದ ಸೀರೆಯ ಸೆರಗು ಆಕಸ್ಮಿಕವಾಗಿ ಅಲ್ಲಿ ನೆಲೆ ಇಲ್ಲದೆ ಅಲೆದಾಡುತ್ತಿದ್ದ ಪಿಶಾಚಿಗಳಿಗೆ ಸೋಕುತ್ತದೆ. ಆಗ ಆ ಪಿಶಾಚಿಗಳಿಗೆ ಶಾಪ ವಿಮೋಚನೆಯಾಗುತ್ತದೆ. ಇದೇ ಕಾರಣದಿಂದ ರಂಭಾ ವ್ರತವು ಬಹಳ ಪ್ರಾಮುಖ್ಯತೆ ಪಡೆದುಕೊಂಡಿದೆ. ಈ ದಿನ ರಂಭಾ ಪೂಜೆ ಮಾಡಿದಲ್ಲಿ ಹಿಂದಿನ ಜನ್ಮದ ಪಾಪ ಕೃತ್ಯಗಳು ನಶಿಸಿ ಶುಭಫಲಗಳು ದೊರೆಯುತ್ತವೆ. ಸೌಂದರ್ಯವೂ ಬಹುಕಾಲ ಉಳಿಯುತ್ತದೆ ಎಂಬ ನಂಬಿಕೆ ಇದೆ.

ಉತ್ತರ ಭಾರತದಲ್ಲಿ ಆಚರಿಸುವ ರಂಭಾ ವ್ರತ

ಕೆಲವು ಪ್ರದೇಶಗಳಲ್ಲಿ ಈ ದಿನ ಲಕ್ಷ್ಮಿಪೂಜೆ ಮಾಡುತ್ತಾರೆ. ಲಕ್ಷ್ಮಿಗೆ ಎಲ್ಲಾ ರೀತಿಯ ತಿಂಡಿ ತಿನಿಸುಗಳನ್ನು ನೇವೇದ್ಯವಾಗಿ ನೀಡಿ ಪೂಜಿಸಲಾಗುತ್ತದೆ. ಮನೆಗೆ ಆಗಮಿಸುವ ದಂಪತಿಗಳಿಗೆ ಭೋಜನ ವ್ಯವಸ್ಥೆ ಮಾಡಿ , ತಾಂಬೂಲ ನೀಡಿದಲ್ಲಿ ಎಲ್ಲಾ ರೀತಿಯ ಅನುಕೂಲತೆಗಳನ್ನು ಪಡೆಯಬಹುದು. ಈ ಪೂಜೆಯ ಪ್ರಭಾವದಿಂದ ಬಹಳ ದಿನದಿಂದ ಕಾಡುತ್ತಿದ್ದ ರೋಗರುಜಿನಗಳು ದೂರವಾಗುತ್ತವೆ. ಪೂಜೆಯ ಫಲವಾಗಿ ತಾವು ಇಷ್ಟಪಟ್ಟ ಹುಡುಗನೊಂದಿಗೆ ವಿವಾಹವಾಗುತ್ತದೆ. ಸಮಾಜದಲ್ಲಿ ಮತ್ತು ಕುಟುಂಬದಲ್ಲಿ ವಿಶಿಷ್ಟ ಸ್ಥಾನಮಾನ ದೊರೆಯುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ.

ಸೂರ್ಯೋದಯಕ್ಕೂ ಮುನ್ನ ನಿತ್ಯಕರ್ಮಗಳನ್ನು ಮುಗಿಸಿ, ಶುಚಿಯಾಗಬೇಕು. ಮೊದಲು ಮನೆಯ ಮುಂದೆ ಮತ್ತು ದೇವರ ಕೋಣೆಯ ಮುಂದೆ ಬಿಳಿ ಮತ್ತು ಕೆಂಪು ಬಣ್ಣದ ರಂಗೋಲಿಗಳನ್ನು ಇಡಬೇಕು. ದೇವರ ಮುಂದೆ ದೀಪಗಳನ್ನು ಹಚ್ಚಬೇಕು. ಸಾಮಾನ್ಯವಾಗಿ ಈ ದಿನ ಪೂಜೆಗೆ ಹಸಿರು ಬಟ್ಟೆ ತೊಡಿಸಿದ ಲಕ್ಷ್ಮಿಯ ವಿಗ್ರಹ ಅಥವಾ ಲಕ್ಷ್ಮಿಯ ಭಾವಚಿತ್ರವನ್ನು ಬಳಸಲಾಗುತ್ತದೆ. ಸೂರ್ಯೋದಯಕ್ಕೂ ಮುನ್ನ ಪೂಜೆ ಆರಂಭಿಸಬೇಕು. ಮೊದಲು ಸೂರ್ಯದೇವನಿಗೆ ಪೂರ್ವ ದಿಕ್ಕಿಗೆ ಮುಖ ಮಾಡಿ ವಂದಿಸಬೇಕು ನಂತರ ಗಣಪತಿ ಪೂಜೆಯನ್ನು ಮಾಡಬೇಕು. 

ಪ್ರತಿದಿನ ಧರಿಸುವ ಒಡವೆಗಳು ಮತ್ತು 24 ಹಸಿರು ಬಣ್ಣದ ಬಳೆಗಳನ್ನು ಇಟ್ಟು ಪೂಜಿಸಬೇಕು. ರಂಭಾ ಮಂತ್ರವನ್ನು 18, 24, 48 ಅಥವಾ 108 ಬಾರಿ ಪಠಿಸಬೇಕು. ಯಾವುದಾದರೂ ಒಂದು ಹೆಣ್ಣು ದೇವರ ದೇಗುಲಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ದಾಣ ನೀಡಿ ಕುಟುಂಬದ ಹಿರಿಯ ಮಹಿಳೆಯ ಹೆಸರಿನಲ್ಲಿ ಪೂಜೆ ಮಾಡಿಸಬೇಕು. ಇದರಿಂದ ಈ ಪೂಜೆಯಿಂದ ಸಂಪೂರ್ಣ ಫಲಗಳು ದೊರೆಯುತ್ತವೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.