ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು?

ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು?

Indian Festival: ಪ್ರತಿ ತಿಂಗಳು ಮಾಸಿಕ ದುರ್ಗಾಷ್ಟಮಿ ಆಚರಿಸಲಾಗುತ್ತದೆ. ಭಕ್ತರು ದುರ್ಗೆಯನ್ನು ಆರಾಧಿಸಿ ಉಪವಾಸ ಮಾಡಿ ದಾನ ಧರ್ಮಾದಿಗಳಲ್ಲಿ ಪಾಲ್ಗೊಳ್ಳುತ್ತಾರೆ. ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು?
ಮೇ ಮಾಸಿಕ ದುರ್ಗಾಷ್ಟಮಿ ಯಾವಾಗ? ದುರ್ಗೆಯನ್ನು ಹೇಗೆ ಆರಾಧಿಸಬೇಕು, ಯಾವ ಮಂತ್ರಗಳನ್ನು ಪಠಿಸಬೇಕು? (PC: Unsplash)

ಮಾಸಿಕ ದುರ್ಗಾಷ್ಟಮಿ 2024: ನವರಾತ್ರಿ ಸಮಯದಲ್ಲಿ ದುರ್ಗೆಯ ಪೂಜೆ ಅಥವಾ ದುರ್ಗಾಷ್ಟಮಿ ಆಚರಿಸುತ್ತೇವೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಕೂಡಾ ದುರ್ಗಾಷ್ಟಮಿ ಆಚರಿಸಲಾಗುತ್ತದೆ. ಇದನ್ನು ಮಾಸಿಕ ದುರ್ಗಾಷ್ಟಮಿ ಎನ್ನುತ್ತಾರೆ. ಪ್ರತಿ ತಿಂಗಳ ಶುಕ್ಲ ಪಕ್ಷದ ಅಷ್ಟಮಿ ದಿನದಂದು ಇದನ್ನು ಆಚರಿಸಲಾಗುತ್ತದೆ. ಈ ದಿನ ದೇವಿ ಪೂಜೆ ಮಾಡಲಾಗುತ್ತದೆ.

ಸನಾತನ ಧರ್ಮದಲ್ಲಿ ಮಾಸಿಕ ದುರ್ಗಾಷ್ಟಮಿ ದಿನವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಈ ದಿನವನ್ನು ದುರ್ಗಾ ದೇವಿಯ ಆರಾಧನೆಗೆ ಸಮರ್ಪಿಸಲಾಗಿದೆ. ಮಾಸಿಕ ದುರ್ಗಾಷ್ಟಮಿಯನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಅಷ್ಟಮಿ ದಿನಾಂಕದಂದು ಆಚರಿಸಲಾಗುತ್ತದೆ. ಈ ಬಾರಿ ವೈಶಾಖ ಮಾಸದ ಮಾಸಿಕ ದುರ್ಗಾಷ್ಟಮಿಯನ್ನು ಮೇ 15, ಬುಧವಾರ ಆಚರಿಸಲಾಗುತ್ತಿದೆ. ಈ ದಿನ ಉಪವಾಸವನ್ನು ಮಾಡಿ ದುರ್ಗೆಯನ್ನು ಆರಾಧಿಸುವುದರಿಂದ ಭಕ್ತರ ಜೀವನ ಸದಾ ಸಂತೋಷದಿಂದ ಕೂಡಿರುತ್ತದೆ. ಆದಿಶಕ್ತಿಯು ಭಕ್ತರನ್ನು ಸದಾ ಆಶೀರ್ವದಿಸುತ್ತಾಳೆ ಎಂದು ನಂಬಲಾಗಿದೆ.

ನೀವೂ ಕೂಡಾ ಮಾತೆಯ ಆಶೀರ್ವಾದವನ್ನು ಪಡೆಯಲು ಬಯಸಿದರೆ, ಮಾಸಿಕ ದುರ್ಗಾಷ್ಟಮಿಯ ದಿನ, ಬೆಳಗ್ಗೆ ಸೂರ್ಯೋದಯಕ್ಕೂ ಮುನ್ನ ಎದ್ದು ಸ್ನಾನ ಮಾಡಿದ ನಂತರ, ದೇವಿಯನ್ನು ನಿಯಮಾನುಸಾರ ಪೂಜಿಸಿ. ಸಂಜೆವರೆಗೂ ಉಪವಾಸವಿದ್ದು ಮತ್ತೆ ಆರತಿ ಮಾಡಿ. ದುರ್ಗೆಯ ಮಂತ್ರಗಳನ್ನು ಪಠಿಸಿ. ಈ ಮಂತ್ರಗಳನ್ನು ಪಠಿಸುವುದರಿಂದ ಜೀವನದಲ್ಲಿ ನೀವು ಅನುಭವಿಸುತ್ತಿರುವ ಎಲ್ಲಾ ರೀತಿಯ ದುಃಖಗಳು ದೂರವಾಗುತ್ತದೆ. ದುರ್ಗೆಯ ಮಂತ್ರಗಳನ್ನು ಪಠಿಸುವುದರಿಂದ ಮನೆ, ಮನಸ್ಸಿನಲ್ಲಿ ನಕಾರಾತ್ಮಕ ಅಂಶಗಳು ದೂರಾಗಿ ಸದಾ ಧನಾತ್ಮಕತೆ ತುಂಬಿರುತ್ತದೆ.

ದುರ್ಗಾ ಶಕ್ತಿ ಮಂತ್ರ

|| ಶರಣಾಗತ ದೀನಾರ್ಥ ಪರಿತ್ರಾಣ ಪರಾಯಣೇ ।

ಸರ್ವಸ್ಯಾತಿಹರೇ ದೇವಿ ನಾರಾಯಣ ನಮೋಸ್ತುತೇ

ಸರ್ವಸ್ವರೂಪೇ ಸರ್ವೇಶೇ ಸರ್ವಶಕ್ತಿ ಸಮನ್ವಿತೇ ।

ಭಯೇಭ್ಯಸ್ತ್ರಾಹಿ ನೋ ದೇವಿ ದುರ್ಗೇ ದೇವಿ ನಮೋಸ್ತು ತೇ

ರೋಗಶೇಷಾನಪಹಂಸಿತು ।

ರುಷ್ಟಾತು ಕಾಮಾನ್ ಸಕಲಾನಭೀಷ್ಟಾನ್

ತ್ವಾಮಾಶ್ರಿತಾನಾಂನ ವಿಪನ್ನರಾಣಾಂ ।

ತ್ವಮಾಶ್ರಿತಾ ಹೃದಯಾಶ್ರಯತಾಂ ಪ್ರಯಾನ್ತಿ

ಸರ್ವಾಬಾಧಾ ಪ್ರಶಂಸನಂ ತ್ರೈಲೋಕ್ಯಸ್ಯಾಖಿಲೇಶ್ವರಿ ।

ಏವಮೇವ ತ್ವಯಾ ಕಾರ್ಯಮಸ್ಮದ್ದೈರಿವಿನಾಶನಂ

ಸರ್ವಾಬಾಧಾ ವಿರ್ನಿರ್ಮುಕ್ತೋ ಧನಧಾನ್ಯಸುತಾನ್ವಿತ: ।

ಮನುಷ್ಯೋ ಮತ್ಪ್ರಸಾದೇನ ಭವಿಷ್ಯತಿ ನ ಸಂಶಯ

ಜಯಂತಿ ಮಂಗ್ಲಾ ಕಾಲೀ ಭದ್ರಕಾಲೀ ಕಪಾಲಿನೀ ।

ದುರ್ಗಾ ಶಿವಾ ಕ್ಷಮಾ ಧಾತ್ರೀ ಸ್ವಾಹಾ ಸ್ವಧಾ ನಮೋಸ್ತು ತೇ ||

ದುರ್ಗಾ ಧ್ಯಾನ ಮಂತ್ರ

|| ಜಟಾ ಜೂಟ್ ಸಮಾಯುಕ್ತಮರ್ಧೆಂದು ಕೃತ ಲಕ್ಷಣಂ

ಲೋಚನತ್ರಯ ಸಂಯುಕ್ತಾಂ ಪದ್ಮಾನಂದದಮ ||

|| ಓಂ ಜಾತಾ ಜುಟ್ ಸಮಾಯುಕ್ತಮರ್ಧೇಂದು ಕೃತ ಲಕ್ಷಣಂ

ಲೋಚನ್ಯತ್ರ ಸಂಯುಕ್ತಂ ಪದ್ಮೆಂದು ಸದ್ಯ ಶಾನಂ ||

ದುರ್ಗಾ ಸ್ತುತಿ ಮಂತ್ರ

|| ಯಾ ದೇವಿ ಸರ್ವ ಭೂತೇಷು, ಶಾಂತಿ ರೂಪೇಣ ಸಂಸ್ಥಿತಾ

ಯಾ ದೇವಿ ಸರ್ವ ಭೂತೇಷು, ಶಕ್ತಿ ರೂಪೇಣ ಸಂಸ್ಥಿತಾ

ಯಾ ದೇವಿ ಸರ್ವ ಭೂತೇಷು, ಮಾತೃ ರೂಪೇಣ ಸಂಸ್ಥಿತಾ ಯಾ ದೇವಿ ಸರ್ವ ಭೂತೇಷು, ಬುದ್ಧಿ

ನಮಸ್ಯ ರೂಪೇಣೈ, ನಮಸ್ತಾಯೈಃ ||

ದುರ್ಗಾ ಶತ್ರು ಶಾಂತಿ ಮಂತ್ರ

|| ರಿಪವ: ಸಂಕ್ಷಯಮ್ ಯಾಂತಿ ಕಲ್ಯಾಣಂ ಚೋಪಪದ್ಯತೇ

ನನ್ದತೇ ಚ ಕುಲಂ ಪುಂಸಾಂ ಮಾಹಾತ್ಮ್ಯಂ ಮಮೃಮಯಮ್ ||

|| ರಿಪವಃ ಸಂಕ್ಷಯಂ ಯಾಂತಿ ಕಲ್ಯಾಣಂ ಚೋಪ್ ಪದ್ಯತೇ

ನಂದತೇ ಚ ಕುಲಂ ಪುಂಸಾಂ ಮಾಹಾತ್ಮ್ಯಂ ಮಾಮ್ ಶೃಣು ಯಾನ್ಮಾಮ್ ||

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.