ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ನಾರದ ಜಯಂತಿ; ನಾರದ ಮುನಿಯನ್ನು ಸೃಷ್ಟಿಯ ಮೊದಲ ಪತ್ರಕರ್ತ ಎಂದು ಕರೆಯುವುದೇಕೆ, ಬ್ರಹ್ಮಚಾರಿಯಾಗಿ ಉಳಿಯುವಂತೆ ಶಾಪ ಕೊಟ್ಟಿದ್ದು ಯಾರು?

ಇಂದು ನಾರದ ಜಯಂತಿ; ನಾರದ ಮುನಿಯನ್ನು ಸೃಷ್ಟಿಯ ಮೊದಲ ಪತ್ರಕರ್ತ ಎಂದು ಕರೆಯುವುದೇಕೆ, ಬ್ರಹ್ಮಚಾರಿಯಾಗಿ ಉಳಿಯುವಂತೆ ಶಾಪ ಕೊಟ್ಟಿದ್ದು ಯಾರು?

ನಾರದ ಮುನಿ ಶ್ರೀಮನ್‌ ನಾರಾಯಣನ ಪರಮ ಭಕ್ತ. ವೈಶಾಖ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ದೇವರ್ಷಿ ನಾರದ ಮುನಿಗಳ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ಆ ದಿನವನ್ನು ನಾರದ ಜಯಂತಿ ಎಂದು ಕರೆಯಲಾಗುತ್ತದೆ. ನಾರದ ಮುನಿಯನ್ನು ಸೃಷ್ಟಿಯ ಮೊದಲ ಪತ್ರಕರ್ತ ಎಂದು ಕರೆಯುವುದೇಕೆ, ಬ್ರಹ್ಮಚಾರಿಯಾಗೆಂದು ಶಾಪ ಕೊಟ್ಟಿದ್ದು ಯಾರು? ಎಂಬುದರ ಬಗ್ಗೆ ಇಲ್ಲಿದೆ ಮಾಹಿತಿ.

ನಾರದ ಮುನಿಯನ್ನು ಸೃಷ್ಟಿಯ ಮೊದಲ ಪತ್ರಕರ್ತ ಎಂದು ಕರೆಯುವುದೇಕೆ, ಬ್ರಹ್ಮಚಾರಿಯಾಗಿ ಉಳಿಯುವಂತೆ ಶಾಪ ಕೊಟ್ಟಿದ್ದು ಯಾರು?
ನಾರದ ಮುನಿಯನ್ನು ಸೃಷ್ಟಿಯ ಮೊದಲ ಪತ್ರಕರ್ತ ಎಂದು ಕರೆಯುವುದೇಕೆ, ಬ್ರಹ್ಮಚಾರಿಯಾಗಿ ಉಳಿಯುವಂತೆ ಶಾಪ ಕೊಟ್ಟಿದ್ದು ಯಾರು?

ನಾರಾಯಣ ನಾರಾಯಣ ಎನ್ನುತ್ತಾ ಮಹತಿ ಹಿಡಿದು ಲೋಕ ಸಂಚಾರ ಮಾಡುತ್ತಿದ್ದ ನಾರದ ಮುನಿಗಳ ಬಗ್ಗೆ ಯಾರಿಗೇ ತಾನೇ ಗೊತ್ತಿಲ್ಲ. ನಾರದ ವಿಷ್ಣುವಿನ ಮಹಾನ್‌ ಭಕ್ತ. ಇಬ್ಬರ ನಡುವೆ ಮನಸ್ತಾಪ ಉಂಟು ಮಾಡುವಲ್ಲಿ ಎಷ್ಟು ಪ್ರಸಿದ್ದೀಯೋ, ಅವರ ಜಗಳ ಬಿಡಿಸಿ ಒಂದು ಮಾಡುವಲ್ಲಿ ಕೂಡಾ ನಿಪುಣ ಎಂದು ಪುರಾಣ ಕಥೆಗಳು ಹೇಳುತ್ತವೆ.

ಪುರಾಣಗಳಲ್ಲಿ ನಾರದನನ್ನು ಸಂಗೀತ ಪಿತಾಮಹ ಎಂದು ಕರೆಯಲಾಗುತ್ತದೆ. ದೇವಲೋಕದಲ್ಲಿ ನಾರದರು ಮಹತಿ ಎಂದು ಕರೆಯಲ್ಪಡುವ ವೀಣೆಯನ್ನು ಹಿಡಿದುಕೊಂಡು ದೇವಾನುದೇವತೆಗಳನ್ನು ಹಾಡಿನ ಮೂಲಕ ರಂಜಿಸಿದರು. ಮೂರು ಲೋಕವನ್ನು ಸುತ್ತಿ ನಾರದ ಮುನಿಗಳು ಹರಿನಾಮವನ್ನು ಸಾರಿದ್ದಾರೆ ಎಂದು ಹೇಳಲಾಗುತ್ತದೆ. ವೈಶಾ ಮಾಸದ ಕೃಷ್ಣ ಪಕ್ಷದ ಪಾಡ್ಯದಂದು ದೇವರ್ಷಿ ನಾರದ ಮುನಿಗಳ ಜನ್ಮದಿನವನ್ನಾಗಿ ಆಚರಿಸಲಾಗುತ್ತದೆ. ಆದ್ದರಿಂದ ಆ ದಿನವನ್ನು ನಾರದ ಜಯಂತಿ ಎಂದು ಕರೆಯಲಾಗುತ್ತದೆ.

ಈ ವರ್ಷ ನಾರದ ಜಯಂತಿಯನ್ನು ಮೇ 24, ಶುಕ್ರವಾರದಂದು ಆಚರಿಸಲಾಗುತ್ತಿದೆ. ಮಹಾಭಾರತದಲ್ಲಿ ನಾರದ ಮುನಿಗಳ ವೈಶಿಷ್ಟ್ಯವನ್ನು ಹೇಳಲಾಗಿದೆ. ಪುರಾಣದಲ್ಲಿ ನಾರದ ಮುನಿಗಳು ಬ್ರಹ್ಮ ದೇವನ 7 ಮಾನಸ ಪುತ್ರರಲ್ಲಿ ಒಬ್ಬನೆಂದು ಹೇಳಲಾಗಿದೆ. ನಾರದ ಜಯಂತಿಯ ದಿನದಂದು ದೇವರ್ಷಿ ನಾರದ ಮುನಿಗಳನ್ನು ಪೂಜಿಸುವುದರಿಂದ ಶುಭ ಫಲಗಳು ದೊರೆಯುತ್ತವೆ ಮತ್ತು ಜೀವನದಲ್ಲಿ ಯಾವಾಗಲೂ ಸಂತೋಷ ಕೂಡಿರುತ್ತದೆ ಎಂದು ನಂಬಲಾಗಿದೆ. 

ಪುರಾಣ ಪುಣ್ಯ ಕಥೆಗಳಲ್ಲಿ ಬರುವ ನಾರದರು ಶ್ರೀಮನ್‌ ನಾರಾಯಣನ ಪರಮ ಭಕ್ತರಾಗಿದ್ದಾರೆ. ಶ್ರೀಹರಿಯು ನಾರದರ ಮೂಲಕ ಅನೇಕ ಲೋಕ ಕಲ್ಯಾಣ ಕಾರ್ಯಗಳನ್ನು ಮಾಡಿಸಿದನು ಎಂಬ ಕಥೆಗಳಿವೆ. ಅಂತಹ ನಾರಾಯಣನ ಭಕ್ತನಾಗಿರುವ ನಾರದ ಮುನಿಗಳ ಬಗ್ಗೆ ಇನ್ನಷ್ಟು ತಿಳಿಯೋಣ.

ನಾರದ ಮುನಿಗಳು ಯಾರು?

ಧರ್ಮಗ್ರಂಥದ ಪ್ರಕಾರ ನಾರದರು ಬ್ರಹ್ಮನ ಏಳು ಮಾನಸ ಪುತ್ರರಲ್ಲಿ ಒಬ್ಬರು. ನಾರದ, ಸೃಷ್ಟಿಕರ್ತ ಮಹಾವಿಷ್ಣುವಿನ ಮಹಾನ್‌ ಭಕ್ತನಾಗಿದ್ದಾನೆ. ಕೈಯಲ್ಲಿ ಮಹತಿಯನ್ನು ಹಿಡಿದು ಸದಾ ನಾರಾಯಣನ ಧ್ಯಾನ ಮಾಡುತ್ತಿರುತ್ತಾನೆ. ವಾಯುಮಾರ್ಗದ ಮೂಲಕ ಮೂರು ಲೋಕಗಳಿಗೂ ಸಂಚರಿಸಿ ವರ ನೀಡುವುದರ ಜೊತೆಗೆ ಹರಿನಾಮವನ್ನು ಸಾರಿದ್ದಾರೆಂದು ನಂಬಲಾಗಿದೆ. ಈ ಕಾರಣದಿಂದಲೇ ನಾರದರಿಗೆ ಮೂರು ಲೋಕಗಳ ಬಗ್ಗೆ ತಿಳಿದಿತ್ತು. ಅದಕ್ಕಾಗಿಯೇ ನಾರದರನ್ನು ಜಗತ್ತಿನ ಮೊದಲ ಪತ್ರಕರ್ತ ಎಂದೂ ಹೇಳುತ್ತಾರೆ. ಏಕೆಂದರೆ ನಾರದರು ಮೂರೂ ಲೋಕಗಳಲ್ಲಿ ನಡೆಯುವ ಆಗು ಹೋಗುಗಳ ವರದಿ ಮಾಡುತ್ತಿದ್ದರು. ನಾರದರು ಕಠಿಣ ತಪಸ್ಸು ಮಾಡಿ ಬ್ರಹ್ಮರ್ಷಿಯ ಪದವಿಯನ್ನು ಪಡೆದಿದ್ದರು.

ಬ್ರಹ್ಮಚಾರಿಯಾಗಿ ಉಳಿಯುವಂತೆ ಶಾಪ ನೀಡಿದ್ದು ಯಾರು?

ನಾರದ ಮುನಿಗಳು ಅವರ ತಂದೆಯಿಂದಲೇ ಶಾಪವನ್ನು ಪಡೆಯುತ್ತಾರೆ. ಪುರಾಣಗಳ ಅನುಸಾರ, ಬ್ರಹ್ಮ ದೇವನು ನಾರದರಲ್ಲಿ ಸೃಷ್ಟಿಯ ಕಾರ್ಯಗಳಲ್ಲಿ ತನಗೆ ಸಹಾಯ ಮಾಡಲು ಮತ್ತು ಮದುವೆಯಾಗಲು ಕೇಳಿಕೊಂಡನು. ಆದರೆ ವಿಷ್ಣುವಿನ ಭಕ್ತಿಯಲ್ಲಿ ಮುಳುಗಿದ್ದ ನಾರದರು ತಂದೆಯಾದ ಬ್ರಹ್ಮನ ಆಜ್ಞೆಯನ್ನು ಪಾಲಿಸಲು ನಿರಾಕರಿಸಿದರು. ಇದನ್ನು ಸಹಿಸದ ಬ್ರಹ್ಮ ದೇವನು ನಾರದರನ್ನು ನೀನು ಆಜನ್ಮ ಬ್ರಹ್ಮಚಾರಿಯಾಗು ಎಂದು ಶಪಿಸಿದರು.

ನಾರದ ಜಯಂತಿ ಮುಹೂರ್ತ 

ಹಿಂದೂ ಪಂಚಾಂಗದ ಪ್ರಕಾರ ಜ್ಯೇಷ್ಠ ಮಾಸದ ಕೃಷ್ಣ ಪಕ್ಷದ ಪಾಡ್ಯ ತಿಥಿಯಂದು ನಾರದ ಜಯಂತಿಯನ್ನು ಆಚರಿಸಲಾಗುತ್ತದೆ. ಈ ವರ್ಷ ಪಾಡ್ಯ ತಿಥಿಯು ಮೇ 23 ಸಂಜೆ 7 ಗಂಟೆ 22 ನಿಮಿಷಕ್ಕೆ ಪ್ರಾರಂಭವಾಗಿ ಮರುದಿನ ಮೇ 24 ರ ಸಂಜೆ 7 ಗಂಟೆ 24 ನಿಮಿಷಗಳಿಗೆ ಮುಕ್ತಾಯಗೊಳ್ಳಲಿದೆ. ಆದ್ದರಿಂದ ನಾರದ ಜಯಂತಿಯನ್ನು ಮೇ 24, ಶುಕ್ರವಾರದಂದು (ಇಂದು) ಆಚರಿಸಲಾಗುತ್ತಿದೆ.

ನಾರದ ಜಯಂತಿಯ ಪೂಜಾ ವಿಧಿಗಳು

ನಾರದ ಜಯಂತಿಯ ದಿನದಂದು ಬೆಳಗ್ಗೆ ಬೇಗ ಎದ್ದು, ನಿತ್ಯಕರ್ಮಗಳನ್ನು ಮುಗಿಸಿ. ದೇವಾನುದೇವತೆಗಳನ್ನು ಸ್ಮರಿಸಿ ದೇವರ ಧ್ಯಾನ ಮಾಡಬೇಕು. ಸ್ವಚ್ಚ ಬಟ್ಟೆ ಧರಿಸಿ, ನಿಮ್ಮ ದೇವರ ಮನೆಯನ್ನು ಸ್ವಚ್ಛಗೊಳಿಸಿ, ನಾರದರ ಪ್ರತಿಮೆಯನ್ನಿಡಿ. ನಂತರ ದೀಪ ಹಚ್ಚಿ ಆರತಿ ಮಾಡಿ. ಜೀವನದಲ್ಲಿ ಸುಖ ಶಾಂತಿ, ನೆಮ್ಮದಿ, ಸಿಗಲೆಂದು ಬೇಡಿಕೊಳ್ಳಿ. ದಾನ ಧರ್ಮದಂತಹ ಪುಣ್ಯ ಕೆಲಸಗಳನ್ನು ಮಾಡಿ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ‘ನಾನು ಋಷಿಗಳಲ್ಲಿ ದೇವರ್ಷಿ ನಾರದನಾಗಿದ್ದೇನೆ ಎಂದು ಹೇಳಿದ್ದಾನೆ.’ ಆದ್ದರಿಂದ ನಾರದರನ್ನು ಮಹಾ ವಿಷ್ಣುವಿನ ಅವತಾರ ಎಂದ ಪರಿಗಣಿಸಲಾಗಿದೆ.

ನಾರದ ಜಯಂತಿಯ ಮಹತ್ವ

ನಾರದ ಜಯಂತಿಯ ದಿನದಂದು ಬ್ರಹ್ಮರ್ಷಿ ನಾರದರನ್ನು ಪೂಜಿಸುವುದರಿಂದ ವ್ಯಕ್ತಿಯು ಶಕ್ತಿ, ಬುದ್ಧಿವಂತಿಕೆ ಮತ್ತು ಶುದ್ಧ ಮನಸ್ಸನ್ನು ಪಡೆಯುತ್ತಾನೆ ಎಂಬ ನಂಬಿಕೆಯಿದೆ. ಈ ಶುಭ ದಿನದಂದು ದೇವಸ್ಥಾನದಲ್ಲಿ ಶ್ರೀಕೃಷ್ಣನಿಗೆ ಕೊಳಲನ್ನು ಅರ್ಪಿಸಿದರೆ ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ ಎಂದು ನಂಬಲಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)