ಜನವರಿ ತಿಂಗಳಲ್ಲಿ ಸ್ಕಂದ ಷಷ್ಠಿ ಯಾವಾಗ, ಸುಬ್ರಹ್ಮಣ್ಯನನ್ನು ಪೂಜಿಸಲು ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜನವರಿ ತಿಂಗಳಲ್ಲಿ ಸ್ಕಂದ ಷಷ್ಠಿ ಯಾವಾಗ, ಸುಬ್ರಹ್ಮಣ್ಯನನ್ನು ಪೂಜಿಸಲು ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ

ಜನವರಿ ತಿಂಗಳಲ್ಲಿ ಸ್ಕಂದ ಷಷ್ಠಿ ಯಾವಾಗ, ಸುಬ್ರಹ್ಮಣ್ಯನನ್ನು ಪೂಜಿಸಲು ಶುಭ ಮುಹೂರ್ತ ಯಾವುದು? ಇಲ್ಲಿದೆ ಮಾಹಿತಿ

ಜನವರಿ 5, ಭಾನುವಾರ ಸ್ಕಂದ ಷಷ್ಠಿಯನ್ನು ಆಚರಿಸಲಾಗುತ್ತಿದೆ. ಈ ದಿನ ತ್ರಿಪುಷ್ಕರ ಯೋಗ, ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಮೂರು ಶುಭ ಯೋಗಗಳು ರೂಪುಗೊಳ್ಳುತ್ತಿವೆ. ಶಿವ-ಪಾರ್ವತಿಯರ ಹಿರಿಯ ಮಗ ಕಾರ್ತಿಕೇಯನ ಆರಾಧನೆಗೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ.

ಜನವರಿ 2025 ಸ್ಕಂದ ಷಷ್ಠಿ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ
ಜನವರಿ 2025 ಸ್ಕಂದ ಷಷ್ಠಿ ದಿನಾಂಕ, ಶುಭ ಮುಹೂರ್ತ, ಪೂಜಾ ವಿಧಾನ

ಸ್ಕಂದ ಷಷ್ಠಿ 2025: ಹಿಂದೂ ಧರ್ಮದಲ್ಲಿ, ಸ್ಕಂದ ಷಷ್ಠಿಯನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿ ದಿನಾಂಕದಂದು ಆಚರಿಸಲಾಗುತ್ತದೆ. ಶಿವ-ಪಾರ್ವತಿಯರ ಹಿರಿಯ ಮಗ ಕಾರ್ತಿಕೇಯನ ಆರಾಧನೆಗೆ ಈ ದಿನವನ್ನು ಮಂಗಳಕರವೆಂದು ಪರಿಗಣಿಸಲಾಗಿದೆ. ಸುಬ್ರಹ್ಮಣ್ಯನನ್ನು ದೇವತೆಗಳ ದಂಡನಾಯಕ ಎಂದು ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಕಾರ್ತಿಕೇಯನನ್ನು ಪೂಜಿಸುವುದರಿಂದ, ವ್ಯಕ್ತಿಯು ಜೀವನದ ಎಲ್ಲಾ ದುಃಖ ಮತ್ತು ಅಡೆತಡೆಗಳಿಂದ ಪರಿಹಾರವನ್ನು ಪಡೆಯುತ್ತಾನೆ. ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಇರುತ್ತದೆ. ಜನವರಿ ತಿಂಗಳಿನಲ್ಲಿ ಸ್ಕಂದ ಷಷ್ಠಿಯ ದಿನಾಂಕ, ಶುಭ ಮುಹೂರ್ತ ಹಾಗೂ ಪೂಜಾ ವಿಧಾನ ಹೀಗಿದೆ.

ಜನವರಿ 2025 ರಲ್ಲಿ ಸ್ಕಂದ ಷಷ್ಠಿ ಯಾವಾಗ?

ಪಂಚಾಂಗದ ಪ್ರಕಾರ,ಪುಷ್ಯ ಮಾಸದ ಶುಕ್ಲ ಪಕ್ಷದ ಷಷ್ಠಿ ತಿಥಿಯು 04 ಜನವರಿ 2025 ರಂದು ರಾತ್ರಿ 10 ಗಂಟೆಗೆ ಪ್ರಾರಂಭವಾಗಿ, ಮರುದಿನ ಅಂದರೆ 05 ಜನವರಿ ರಂದು ರಾತ್ರಿ 08:15 ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ, ಸ್ಕಂದ ಷಷ್ಠಿಯನ್ನು 05 ಜನವರಿ 2025 ಭಾನುವಾರದಂದು ಆಚರಿಸಲಾಗುತ್ತದೆ. ಜನವರಿ 5 ರಂದು ಸ್ಕಂದ ಷಷ್ಠಿಯ ದಿನ ತ್ರಿಪುಷ್ಕರ ಯೋಗ, ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಮೂರು ಶುಭ ಯೋಗಗಳು ರೂಪುಗೊಳ್ಳುತ್ತಿವೆ.

ಶುಭ ಮುಹೂರ್ತ

ಬ್ರಹ್ಮ ಮುಹೂರ್ತ: ಬೆಳಗ್ಗೆ 05:26 ರಿಂದ 06:20

ಅಭಿಜಿತ್ ಮುಹೂರ್ತ: ಮಧ್ಯಾಹ್ನ 12:06 ರಿಂದ 12:47

ವಿಜಯ ಮುಹೂರ್ತ: ಮಧ್ಯಾಹ್ನ 02:11 ರಿಂದ 02:52

ತ್ರಿಪುಷ್ಕರ ಯೋಗ: ರಾತ್ರಿ 08:15 ರಿಂದ 08:18

ಸರ್ವಾರ್ಥ ಸಿದ್ಧಿ ಯೋಗ: ರಾತ್ರಿ 08:18 ರಿಂದ ಬೆಳಗ್ಗೆ 07:15 (ಜನವರಿ 06)

ರವಿಯೋಗ: ಬೆಳಗ್ಗೆ 07:15 ರಿಂದ ರಾತ್ರಿ 08:18 ರವರೆಗೆ

ಪೂಜಾ ವಿಧಾನ

ಸ್ಕಂದ ಷಷ್ಠಿಯ ದಿನ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು

ಮನೆಯ ಪೂಜಾಕೋಣೆಯನ್ನು ಸ್ವಚ್ಛಗೊಳಿಸಿ

ಕಾರ್ತಿಕೇಯನ ವಿಗ್ರಹವನ್ನು ಗಂಧ, ಹೂವುಗಳಿಂದ ಅಲಂಕಾರ ಮಾಡಿ ಪ್ರತ್ಯೇಕ ಪೀಠದಲ್ಲಿ ಪ್ರತಿಷ್ಠಾಪಿಸಿ

ಕಾರ್ತಿಕೇಯನಿಗೆ ಹಣ್ಣು, ಹೂವು, ಧೂಪ, ದೀಪ, ಅಕ್ಷತೆ ಮತ್ತು ಶ್ರೀಗಂಧವನ್ನು ಅರ್ಪಿಸಿ

ನಂತರ ಕಾರ್ತಿಕೇಯನ ಮುಂದೆ ದೀಪವನ್ನು ಹಚ್ಚಿ, ವಿಧಿವಿಧಾನಗಳ ಪ್ರಕಾರ ಪೂಜೆ ಮಾಡಿ ಆರತಿ ಮಾಡಿ.

ಕಾರ್ತಿಕೇಯನ ಮಂತ್ರಗಳನ್ನು ಪಠಿಸಿ, ಸ್ಕಂದ ಷಷ್ಠಿ ಉಪವಾಸದ ಕಥೆಯನ್ನು ಪಠಿಸಿ

ಕಾರ್ತಿಕೇಯ ಮಂತ್ರ

  • ದೇವ ಸೇನಾಪತೇ ಸ್ಕಂದ ಕಾರ್ತಿಕೇಯ ಭವೋದ್ಭವ

ಕುಮಾರ ಗುಹ ಗಾಂಗೇಯ ಶಕ್ತಿಹಸ್ತ ನಮೋಸ್ತುತೇ

  • ಓಂ ತತ್ಪುರುಷಾಯ ವಿದ್ಮಹೇ ಮಹಾ ಸೈನ್ಯಾ ಧೀಮಹಿ ತನ್ನೋ ಸ್ಕಂದ ಪ್ರಚೋದಯಾತ್‌
  • ಓಂ ಶಾರ್ವಾನಾ - ಭಾವಾಯಾ ನಮಃ

ಜ್ಞಾನಶಕ್ತಿಧರಾ ಸ್ಕಂದ ವಲ್ಲೀಯಿಕಲ್ಯಾಣ ಸುಂದರಾ

ದೇವಸೇನಾ ಮನಃ ಕಾಂತಾ ಕಾರ್ತಿಕೇಯಾ ನಮೋಸ್ತುತೇ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.