ಈ ಬಾರಿ ರಾಖಿ ಕಟ್ಟಲು ಸೂಕ್ತ ಮುಹೂರ್ತ ಯಾವುದು? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಭದ್ರಾ ಕಾಲ ಎಂದರೇನು?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ಬಾರಿ ರಾಖಿ ಕಟ್ಟಲು ಸೂಕ್ತ ಮುಹೂರ್ತ ಯಾವುದು? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಭದ್ರಾ ಕಾಲ ಎಂದರೇನು?

ಈ ಬಾರಿ ರಾಖಿ ಕಟ್ಟಲು ಸೂಕ್ತ ಮುಹೂರ್ತ ಯಾವುದು? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಭದ್ರಾ ಕಾಲ ಎಂದರೇನು?

Raksha Bandhan 2024: ಒಡ ಹುಟ್ಟಿದವರು ಕಾತುರದಿಂದ ಕಾಯುತ್ತಿರುವ ರಕ್ಷಾ ಬಂಧನ ಹಬ್ಬ ಬಂದೇ ಬಿಟ್ಟಿತು. ಆಗಸ್ಟ್‌ 19 ರಂದು ಹುಣ್ಣಿಮೆ ದಿನ ರಾಖಿ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಂದು ಸಹೋದರರಿಗೆ ರಕ್ಷೆ ಕಟ್ಟಲು ಯಾವ ಸಮಯ ಸೂಕ್ತವಾಗಿದೆ. ಯಾವ ಸಮಯದಲ್ಲಿ ಕಟ್ಟಬಾರದು? ಭದ್ರಾ ಕಾಲ ಎಂದರೇನು? ಇನ್ನಿತರ ವಿಚಾರಗಳ ಬಗ್ಗೆ ಇಲ್ಲಿದೆ ಮಾಹಿತಿ.

ಈ ಬಾರಿ ರಾಖಿ ಕಟ್ಟಲು ಸೂಕ್ತ ಮುಹೂರ್ತ ಯಾವುದು? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಭದ್ರಾ ಸಮಯ ಎಂದರೇನು?
ಈ ಬಾರಿ ರಾಖಿ ಕಟ್ಟಲು ಸೂಕ್ತ ಮುಹೂರ್ತ ಯಾವುದು? ಯಾವ ಸಮಯದಲ್ಲಿ ರಾಖಿ ಕಟ್ಟಬಾರದು? ಭದ್ರಾ ಸಮಯ ಎಂದರೇನು? (PC: Pixabay)

ರಾಖಿ ಹಬ್ಬ 2024: ರಕ್ಷಾಬಂಧನ ಹಬ್ಬವನ್ನು ಶ್ರಾವಣ ಮಾಸದ ಹುಣ್ಣಿಮೆಯ ದಿನ ಆಚರಿಸಲಾಗುತ್ತದೆ. ಈ ದಿನ, ಸಹೋದರಿಯರು ತಮ್ಮ ಸಹೋದರನ ಮಣಿಕಟ್ಟಿನ ಮೇಲೆ ರಕ್ಷಾಸೂತ್ರ ಕಟ್ಟಿ ಅವರು ನೂರು ಕಾಲ ಸುಖ, ಸಂತೋಷದಿಂದ ಬಾಳಲಿ ಎಂದು ಹಾರೈಸುತ್ತಾರೆ. ಇದು ಒಡಹುಟ್ಟಿದವರ ನಡುವಿನ ಶಾಶ್ವತ ಬಂಧವನ್ನು ಸಂಕೇತಿಸುತ್ತದೆ.

ಆದರೆ ಈ ಬಾರಿ ರಕ್ಷಾಬಂಧನದ ದಿನ ಭದ್ರಾ ಛಾಯ ಇರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಕ್ಷಾ ಬಂಧನ ಕಟ್ಟುವ ಸಮಯಕ್ಕೆ ಬಹಳ ಪ್ರಾಮುಖ್ಯತೆ ಇದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ 19 ರಕ್ಷಾಬಂಧನದಂದು ರಾಖಿ ಕಟ್ಟಲು ಹಲವು ಮಂಗಳಕರ ಕ್ಷಣಗಳಿವೆ.

ರಾಖಿ ಹಬ್ಬ ಯಾವಾಗ?

ಆಗಸ್ಟ್ 19 ರಂದು ಪೂರ್ಣಿಮಾ ತಿಥಿಯು ಬೆಳಗ್ಗೆ 03:04 ಬ್ರಹ್ಮ ಮುಹೂರ್ತದಿಂದ ಪ್ರಾರಂಭವಾಗಿ ರಾತ್ರಿ 11:55 ರವರೆಗೆ ಇರುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಹುಣ್ಣಿಮೆಯ ಆರಂಭದಿಂದ ಭದ್ರಾಕಾಲ ಪ್ರಾರಂಭವಾಗುತ್ತದೆ. ಕೆಲವು ಪಂಚಾಂಗಗಳ ಪ್ರಕಾರ, ಭದ್ರಾ ಕಾಲವು ಬೆಳಗ್ಗೆ 05:53 ರಿಂದ ಪ್ರಾರಂಭವಾಗಿ ಮಧ್ಯಾಹ್ನ 01:32 ಕ್ಕೆ ಕೊನೆಗೊಳ್ಳುತ್ತದೆ. ಸಹೋದರಿಯರು ಭದ್ರಕಾಲದ ನಂತರ ಸಹೋದರನ ಮಣಿಕಟ್ಟಿನ ಮೇಲೆ ರಕ್ಷಾಸೂತ್ರವನ್ನು ಕಟ್ಟಬಹುದು.

ಹುಣ್ಣಿಮೆಯ ದಿನ ಶುಭ ಯೋಗಗಳು

ಹಬ್ಬದ ದಿನ ರಾತ್ರಿ 01:33 ರಿಂದ ರಾತ್ರಿ 10:00 ರವರೆಗೆ ರಾಖಿ ಕಟ್ಟಬಹುದು. ರಕ್ಷಾಬಂಧನದಂದು ಮೂರು ಮಂಗಳಕರ ಯೋಗಗಳಿವೆ. ಇವುಗಳಲ್ಲಿ ದಿನವಿಡೀ ಶೋಭನ ಯೋಗ. ಬೆಳಗ್ಗೆ 5:53 ರಿಂದ 8:10 ರವರೆಗೆ ರವಿ ಯೋಗ ಮತ್ತು ಸರ್ವಾರ್ಥ ಸಿದ್ಧಿ ಯೋಗವಿದೆ. ಈ ಅವಧಿಯಲ್ಲಿ ನಿತ್ಯ ಪೂಜೆ ಇತ್ಯಾದಿಗಳನ್ನು ಮಾಡಬಹುದು. ಹುಣ್ಣಿಮೆಯು ಆಗಸ್ಟ್ 19 ರಂದು ಬೆಳಗ್ಗೆ 3:07 ಕ್ಕೆ ಪ್ರಾರಂಭವಾಗಿ ಮಧ್ಯಾಹ್ನ 01:34 ರವರೆಗೆ ಇರುತ್ತದೆ. ರಕ್ಷಾಬಂಧನದ ವೇಳೆ ಭದ್ರಾ ನೆರಳು ಇದ್ದರೆ ರಾಖಿ ಕಟ್ಟುವುದು ಸರಿಯಲ್ಲ. ಆದ್ದರಿಂದ ರಾಖಿಯನ್ನು ಭದ್ರಾ ಅಂತ್ಯದ ನಂತರ ಕಟ್ಟಬಹುದು, ಭದ್ರಾ ಅಂತ್ಯದ ನಂತರ ಎರಡು ಶುಭ ಮುಹೂರ್ತಗಳಿವೆ. ಇವೆ. ಇದರಲ್ಲಿ ಚರ ಯೋಗವು ಮಧ್ಯಾಹ್ನ 02:00 ರಿಂದ 03:40 ರವರೆಗೆ ಇರುತ್ತದೆ. ಲಾಭಾಮೃತ ಮುಹೂರ್ತವು ಮಧ್ಯಾಹ್ನ 03:40 ರಿಂದ 06:56 ರವರೆಗೆ ಇರುತ್ತದೆ.

ಭದ್ರಾ ಸಮಯದಲ್ಲಿ ಏಕೆ ರಾಖಿ ಕಟ್ಟಬಾರದು?

ಪುರಾಣಗಳ ಪ್ರಕಾರ, ಭದ್ರಾ ಸಮಯದಲ್ಲಿ, ಶೂರ್ಪಣಖಿಯು ತನ್ನ ಅಣ್ಣ ರಾವಣನಿಗೆ ರಾಖಿ ಕಟ್ಟಿದಳು. ಇದರಿಂದ ರಾವಣನ ಕುಲ ದುರ್ಬಲವಾಯಿತು. ಆದ್ದರಿಂದಲೇ ಭದ್ರಾ ಕಾಲದಲ್ಲಿ ರಾಖಿ ಕಟ್ಟುವುದು ಶುಭವಲ್ಲ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಈ ಸಮಯದಲ್ಲಿ ಶಿವನು ಕೋಪದಿಂದ ತಾಂಡವ ಆಡುತ್ತಾನೆ ಎಂದು ಹೇಳಲಾಗುತ್ತದೆ. ಈ ಸಮಯದಲ್ಲಿ ಮಾಡಿದ ಯಾವುದೇ ಶುಭ ಕಾರ್ಯವು ಕೆಟ್ಟ ಫಲಿತಾಂಶಗಳನ್ನು ನೀಡುತ್ತದೆ ಎಂದು ನಂಬಲಾಗಿದೆ. ಭದ್ರಾ, ಸೂರ್ಯನ ಮಗಳು ಮತ್ತು ಶನಿಯ ಸಹೋದರಿ. ಬ್ರಹ್ಮ ದೇವರು ಅವಳಿಗೆ ಒಂದು ನಿರ್ದಿಷ್ಟ ಸಮಯವನ್ನು ಕೊಟ್ಟನು. ಅದು ಸುರಕ್ಷಿತ ಅವಧಿ. ಇದನ್ನು ಅಶುಭ ಎನ್ನುತ್ತಾರೆ. ಆದ್ದರಿಂದ ರಾಖಿ ಕಟ್ಟಲು ಇದು ಸೂಕ್ತ ಸಮಯವಲ್ಲ. 

ರಕ್ಷಾ ಬಂಧನ ಕಟ್ಟುವ ತಟ್ಟೆಯಲ್ಲಿ ಏನಿರಬೇಕು?

ರಕ್ಷಾ ಬಂಧನದ ದಿನದಂದು ಸಹೋದರನಿಗೆ ರಾಖಿ ಕಟ್ಟುವ ಮೊದಲು ಪೂಜಾ ಸಾಮಗ್ರಿಗಳ ಪಟ್ಟಿ ತಯಾರಿಸಬೇಕು. ಅದರಲ್ಲಿ ಆರತಿ ಮಾಡಲು ಅಕ್ಷತೆ, ರಾಖಿ, ಸಿಹಿ ತಿಂಡಿಗಳು, ಕುಂಕುಮ, ಕರ್ಪೂರ ಇರಬೇಕು. ರಕ್ಷಾಬಂಧನ ಹಬ್ಬದಲ್ಲಿ ರಾಖಿಗೆ ಅತ್ಯಂತ ಮಹತ್ವವಿದೆ . ಪೂಜಾ ತಟ್ಟೆಯಲ್ಲಿ ರಾಖಿ ಇರುವುದು ಬಹಳ ಮುಖ್ಯ. ರಕ್ಷಾಬಂಧನದ ದಿನದ ಸಹೋದರಿಯರು ಮೊದಲು ತಮ್ಮ ಅಣ್ಣ/ತಮ್ಮನ ಹಣೆಗೆ ತಿಲಕವನ್ನು ಹಚ್ಚುತ್ತಾರೆ. ಹಿಂದೂ ಧರ್ಮದಲ್ಲಿ ಯಾವುದೇ ಶುಭ ಕಾರ್ಯಗಳಿಗೆ ಮೊದಲು ತಿಲಕವನ್ನು ಹಚ್ಚುವ ಸಂಪ್ರದಾಯವಿದೆ. ತಿಲಕ ಹಚ್ಚಿದ ನಂತರ ಅಕ್ಷತೆಯನ್ನು ಹಣೆಯ ಮೇಲೆ ಇಡುತ್ತಾರೆ.

ನಂತರ ಆರತಿ ಮಾಡುತ್ತಾರೆ. ಆರತಿ ಮಾಡಲು ದೀಪದ ಅಗತ್ಯವಿದೆ, ಆದ್ದರಿಂದ ದೀಪವನ್ನು ಪೂಜಾ ತಟ್ಟೆಯಲ್ಲಿ ಇರಿಸಿ. ರಾಖಿ ಕಟ್ಟಿದ ನಂತರ ಸಹೋದರಿಯರು ತಮ್ಮ ಸಹೋದರರಿಗೆ ಸಿಹಿ ತಿನ್ನಿಸುತ್ತಾರೆ. “ಓಂ ಯೇನ ಬದ್ದೋ ಬಲಿ ರಾಜ ದಾನವೇಂದ್ರೋ ಮಹಾಬಲ: ತೇನ್‌ ತ್ವಾಂ ಅಭಿಬಂಧಾಮಿ ರಕ್ಷೆ ಮಾ ಚಲ್ ಮಾ ಚಲ್ ಎಂಬ ಮಂತ್ರವನ್ನು ಹೇಳಿಕೊಂಡು ರಾಖಿ ಕಟ್ಟಬೇಕು. ಹಾಗೇ ಸಹೋದರರು ಕೂಡಾ ತಮ್ಮ ಸಹೋದರಿಯರಿಗೆ ಉಡುಗೊರೆ ಕೊಟ್ಟು ಕೊನೆಯವರೆಗೂ ರಕ್ಷಿಸುವುದಾಗಿ ಭರವಸೆ ನೀಡುತ್ತಾರೆ. 

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.