ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ವೈಶಾಖ ಹುಣ್ಣಿಮೆ; ವಿಷ್ಣುವಿಗೆ ಪ್ರಿಯವಾದ ದಿನ ಗುರುವಾರ ಈ ರೀತಿ ಪೂಜಿಸಿದರೆ ಜಾತಕದಲ್ಲಿ ದೋಷ ನಿವಾರಣೆ

ಇಂದು ವೈಶಾಖ ಹುಣ್ಣಿಮೆ; ವಿಷ್ಣುವಿಗೆ ಪ್ರಿಯವಾದ ದಿನ ಗುರುವಾರ ಈ ರೀತಿ ಪೂಜಿಸಿದರೆ ಜಾತಕದಲ್ಲಿ ದೋಷ ನಿವಾರಣೆ

Vaishaka Purnima 2024: ಇಂದು (ಮೇ 23) ವೈಶಾಖ ಹುಣ್ಣಿಮೆ. ಇದನ್ನು ಬುದ್ಧ ಪೂರ್ಣಿಮೆ, ಬುದ್ಧ ಜಯಂತಿ ಎಂದೂ ಕರೆಯುತ್ತಾರೆ. ವಿಷ್ಣುವಿಗೆ ಪ್ರಿಯವಾದ ದಿನ ಗುರುವಾರ ಹುಣ್ಣಿಮೆ ಇದೆ. ಹುಣ್ಣಿಮೆಯಂದು ಈ ರೀತಿ ಪೂಜಿಸಿದರೆ ಜಾತಕದಲ್ಲಿ ದೋಷ ನಿವಾರಣೆ ಆಗುತ್ತದೆ.

ಇಂದು ವೈಶಾಖ ಹುಣ್ಣಿಮೆ; ವಿಷ್ಣುವಿಗೆ ಪ್ರಿಯವಾದ ದಿನ ಗುರುವಾರ ಈ ರೀತಿ ಪೂಜಿಸಿದರೆ ಜಾತಕದಲ್ಲಿ ದೋಷ ನಿವಾರಣೆ
ಇಂದು ವೈಶಾಖ ಹುಣ್ಣಿಮೆ; ವಿಷ್ಣುವಿಗೆ ಪ್ರಿಯವಾದ ದಿನ ಗುರುವಾರ ಈ ರೀತಿ ಪೂಜಿಸಿದರೆ ಜಾತಕದಲ್ಲಿ ದೋಷ ನಿವಾರಣೆ

ವೈಶಾಖ ಪೂರ್ಣಿಮೆ 2024: ಹಿಂದೂ ಧರ್ಮದಲ್ಲಿ ವೈಶಾಖ ಮಾಸ ಶುಕ್ಲಪಕ್ಷ ಹುಣ್ಣಿಮೆಗೆ ಬಹಳ ಪ್ರಾಮುಖ್ಯತೆ ಇದೆ. ಈ ದಿನ ಧಾರ್ಮಿಕ ಚಟುವಟಿಕೆಗಳಿಗೆ ಬಹಳ ಮಹತ್ವವಿದೆ. ಈ ದಿನ ನೀವು ನಿಯಮಾನುಸಾರ ಪೂಜೆ, ಉಪವಾಸ ವಿಧಿ ವಿಧಾನಗಳನ್ನು ಪೂರೈಸಿದರೆ ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಈ ಬಾರಿ ಮೇ 23, ಗುರುವಾರ ವೈಶಾಖ ಹುಣ್ಣಿಮೆ ಇದೆ. ಇದನ್ನು ಬುದ್ಧ ಪೂರ್ಣಿಮಾ ಅಥವಾ ಬುದ್ಧ ಜಯಂತಿ ಎಂದೂ ಕರೆಯಲಾಗುತ್ತದೆ.

ವೈಶಾಖ ಹುಣ್ಣಿಮೆಯಂದು ದಾನ ಮತ್ತು ದತ್ತಿ ಚಟುವಟಿಕೆಗಳನ್ನು ಮಾಡುವುದು ಬಹಳ ಒಳ್ಳೆಯದು. ವೈಶಾಖ ಮಾಸದ ಹುಣ್ಣಿಮೆಯಂದು ಸತ್ಯನಾರಾಯಣ ಸ್ವಾಮಿಯನ್ನು ಪೂಜಿಸುವುದರಿಂದ ನಿಮ್ಮ ಮನದ ಆಸೆ ಈಡೇರುತ್ತದೆ ಎಂಬ ನಂಬಿಕೆ ಇದೆ.

ವೈಶಾಖ ಹುಣ್ಣಿಮೆ ಶುಭ ಸಮಯ

ಪಂಚಾಂಗದ ಪ್ರಕಾರ, ವೈಶಾಖ ಮಾಸದ ಹುಣ್ಣಿಮೆ ತಿಥಿಯು ಮೇ 22 ಸಂಜೆ 7:42 ಕ್ಕೆ ಪ್ರಾರಂಭವಾಗಿ ಮೇ 23 ಸಂಜೆ 7.22 ಕ್ಕೆ ಕೊನೆಗೊಳ್ಳುತ್ತದೆ. ವೈಶಾಖ ಪೌರ್ಣಮಿಯನ್ನು ಉದಯ ತಿಥಿಯ ಪ್ರಕಾರ ಮೇ 23 ರಂದು ಆಚರಿಸಲಾಗುತ್ತದೆ. ಈ ಬಾರಿ ಸರ್ವಾರ್ಥ ಸಿದ್ಧಿ ಯೋಗ, ಶಿವಯೋಗ, ವಿಶಾಖ ನಕ್ಷತ್ರ ಹಾಗೂ ಗುರುವಾರ ವೈಶಾಖ ಹುಣ್ಣಿಮೆ ಇದ್ದು ಇದು ನಾಲ್ಕು ಶುಭ ಯೋಗಗಳೊಂದಿಗೆ ಬಂದಿದೆ. ಸರ್ವಾರ್ಥ ಸಿದ್ದಿಯೋಗವು ಗುರುವಾರ ಬೆಳಗ್ಗೆ 9.15 ರಿಂದ ಮೇ 24, ಶುಕ್ರವಾರ ಬೆಳಗ್ಗೆ 5. 26 ವರೆಗೂ ಇದ್ದು ಈ ಸಮಯದಲ್ಲಿ ಪೂಜೆ ಮಾಡಿದರೆ ಬಹಳ ಶುಭಫಲ ದೊರೆಯುತ್ತದೆ. ಶಿವಯೋಗವು ಇಂದು ಮಧ್ಯಾಹ್ನ 12 ಗಂಟೆಯಿಂದ ನಾಳೆ ಬೆಳಗ್ಗೆ 11.22 ವರೆಗೂ ಇರುತ್ತದೆ. ವಿಶಾಖ ನಕ್ಷತ್ರವು ಬೆಳಗ್ಗೆ 9:15 ವರೆಗೂ ಇರುತ್ತದೆ, ನಂತರ ಅನುರಾಧ ನಕ್ಷತ್ರ ಬರುತ್ತದೆ. ವಿಶಾಖ ನಕ್ಷತ್ರವು ಗುರುವಿಗೆ ಸೇರಿದ್ದು, ಹಾಗೂ ಗುರುವಾರ ವಿಷ್ಣುವಿಗೆ ಪ್ರಿಯವಾದ ದಿನ.

ಜಾತಕದಲ್ಲಿನ ದೋಷಕ್ಕೆ ಪರಿಹಾರಗಳು

ವೈಶಾಖ ಹುಣ್ಣಿಮೆಯಂದು ಈ ಪರಿಹಾರಗಳನ್ನು ಕೈಗೊಂಡರೆ ನೀವು ಅರ್ಧ ಸಮಸ್ಯೆಯಿಂದ ಹೊರ ಬಂದಂತೆ. ನಿಮ್ಮನ್ನು ಜಾತಕದಲ್ಲಿರುವ ದೋಷ ಕೂಡಾ ಪರಿಹಾರವಾಗುತ್ತದೆ. ಲಕ್ಷ್ಮಿ ದೇವಿಯ ಆಶೀರ್ವಾದ ಕೂಡಾ ನಿಮಗೆ ದೊರೆಯುತ್ತದೆ.

  • ಇಂದು ಉಪವಾಸ ಮಾಡುವವರು ರಾತ್ರಿ ಚಂದ್ರನಿಗೆ ಅರ್ಘ್ಯವನ್ನು ಅರ್ಪಿಸಿದ ನಂತರ ತಮ್ಮ ಉಪವಾಸವನ್ನು ಮುರಿಯುತ್ತಾರೆ. ಈ ದಿನ ಚಂದ್ರನನ್ನು ಪೂಜಿಸುವುದರಿಂದ ಚಂದ್ರದೋಷ ನಿವಾರಣೆಯಾಗುತ್ತದೆ. ಜಾತಕದಲ್ಲಿ ಚಂದ್ರನ ಸ್ಥಾನ ಕೂಡಾ ಬಲಗೊಳ್ಳುತ್ತದೆ.

ಇದನ್ನೂ ಓದಿ: ಇಲ್ಲಿ ಶಿವಲಿಂಗ ದರ್ಶನ ಮಾಡಲು ನೀರಿನಲ್ಲಿ ಮುಳುಗಿ ಮತ್ತೊಂದು ಬದಿಯಲ್ಲಿ ಏಳಬೇಕು; ಬಾದಾಮಿ ಮಹಾಕೂಟೇಶ್ವರ ದೇವಸ್ಥಾನ ದರ್ಶನ

  • ವೈಶಾಖ ಹುಣ್ಣಿಮೆಯಂದು ಅಶ್ವತ್ಥ ಮರಕ್ಕೆ ನೀರು ಅರ್ಪಿಸಿದರೆ ಪಿತೃ ದೋಷ ನಿವಾರಣೆಯಾಗುತ್ತದೆ. ಕುಟುಂಬದ ಸದಸ್ಯರಿಗೆ ಪಿತೃದೇವತೆಗಳ ಆಶೀರ್ವಾದ ದೊರೆಯುತ್ತದೆ.
  • ನಿಮ್ಮ ವೃತ್ತಿಯಲ್ಲಿ ನೀವು ಅಭಿವೃದ್ಧಿ ಹೊಂದಬೇಕಾದರೆ ಇಂದು ಅಶ್ವತ್ಥ ಮರದ ಕೆಳಗೆ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಿ. ಹೀಗೆ ಮಾಡುವುದರಿಂದ ಕೆಲಸದಲ್ಲಿ ಇದ್ದ ಅಡೆತಡೆಗಳು ನಿವಾರಣೆಯಾಗುತ್ತದೆ. ಎಲ್ಲಾ ಕ್ಷೇತ್ರದಲ್ಲೂ ಯಶಸ್ಸು ಸಾಧಿಸುವಿರಿ.
  • ಶನಿ ದೋಷದಿಂದ ಮುಕ್ತಿ ಹೊಂದಲು ಹುಣ್ಣಿಮೆ ದಿನ ಬಹಳ ಶ್ರೇಷ್ಠವಾದುದು. ಈ ದಿನ ಶನೈಶ್ಛರ ಹಾಗೂ ಅರಳಿ ಮರವನ್ನು ಪೂಜಿಸುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುತ್ತವೆ. ಶನಿಯು ನಿಮ್ಮನ್ನು ಆಶೀರ್ವದಿಸಲಿದ್ದಾನೆ.
  • ಹುಣ್ಣಿಮೆಯಂದು ವಿಷ್ಣು ಮತ್ತು ಲಕ್ಷ್ಮಿ ದೇವಿಯನ್ನು ಪೂಜಿಸಬೇಕು . ಹೀಗೆ ಮಾಡುವುದರಿಂದ ಮನೆಯಲ್ಲಿ ಸಂತೋಷ ನೆಲೆಸಿರುತ್ತದೆ. ಎಂಬ ನಂಬಿಕೆ ಇದೆ. ಪೂಜೆಯ ಸಮಯದಲ್ಲಿ ಲಕ್ಷ್ಮೀದೇವಿ ಪಾದಗಳಿಗೆ ಒಂದಿಷ್ಟು ಗೋಧಿ ಕಾಳುಗಳನ್ನು ಸಮರ್ಪಿಸಬೇಕು. ನಂತರ ಅದನ್ನು ಕೆಂಪು ವಸ್ತ್ರದಲ್ಲಿ ಕಟ್ಟಿ ಹಣ ಇರುವ ಬೀರುವಿನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆ ಪರಿಹಾರವಾಗಿ ನಿಮ್ಮ ಆದಾಯ ಹೆಚ್ಚಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)