ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ; ಇದ್ರಲ್ಲಿ ನೀವು ಆಚರಿಸುವ ವ್ರತ ಯಾವುದು?

ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ; ಇದ್ರಲ್ಲಿ ನೀವು ಆಚರಿಸುವ ವ್ರತ ಯಾವುದು?

Indian Festival: ಜೂನ್‌ ತಿಂಗಳ ಅಮಾವಾಸ್ಯೆ ನಂತರ ಜ್ಯೇಷ್ಠ ಮಾಸ ಆರಂಭವಾಗುತ್ತದೆ. ಪ್ರತಿ ತಿಂಗಳು ಒಂದಲ್ಲಾ ಒಂದು ಆಚರಣೆ ಇದ್ದೇ ಇರುತ್ತದೆ. ಹಾಗೇ ಜೂನ್‌ ತಿಂಗಳು ಕೂಡಾ ಧಾರ್ಮಿಕ ದೃಷ್ಟಿಯಿಂದ ಬಹಳ ಮಹತ್ವ ಪಡೆದಿದೆ. ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ ಇಲ್ಲಿದೆ.

ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ; ಇದ್ರಲ್ಲಿ ನೀವು ಆಚರಿಸುವ ವ್ರತ ಯಾವುದು?
ಶನಿ ಜಯಂತಿ, ಗಂಗಾ ದಸರಾ ಸೇರಿದಂತೆ ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ; ಇದ್ರಲ್ಲಿ ನೀವು ಆಚರಿಸುವ ವ್ರತ ಯಾವುದು? (PC: Canva)

ಮೇ ತಿಂಗಳು ಕಳೆಯುತ್ತಿದೆ. ಇನ್ನು 3 ದಿನಗಳು ಕಳೆದರೆ ಜೂನ್‌ ತಿಂಗಳು ಆರಂಭವಾಗುತ್ತದೆ. ಪ್ರತಿ ತಿಂಗಳು ಒಂದಲ್ಲಾ ಒಂದು ವಿಶೇಷ ಇದ್ದೇ ಇರುತ್ತದೆ. ವ್ರತ , ಹಬ್ಬಗಳು ಸೇರಿದಂತೆ ಪ್ರಮುಖ ಆಚರಣೆಗಳಿಗಾಗಿ ಜನರು ಕಾಯುತ್ತಿರುತ್ತಾರೆ. ತಮ್ಮ ಆತ್ಮೀಯರು, ಕುಟುಂಬದವರೊಂದಿಗೆ ಹಬ್ಬಗಳನ್ನು ಆಚರಿಸಲು ಕಾಯುತ್ತಿರುತ್ತಾರೆ.

ಸನಾತನ ಧರ್ಮದಲ್ಲಿ ಪ್ರತಿ ತಿಂಗಳು ಯಾವುದಾದರೊಂದು ದೇವರಿಗೆ ವಿಶೇಷ ಪೂಜೆ ಮಾಡಲಾಗುತ್ತದೆ. ಧಾರ್ಮಿಕ ದೃಷ್ಟಿಯಿಂದ ಜೂನ್‌ ತಿಂಗಳು ಕೂಡಾ ಬಹಳ ಪ್ರಾಮುಖ್ಯತೆ ಪಡೆದಿದೆ. ಸದ್ಯಕ್ಕೆ ವೈಶಾಖ ಮಾಸವಿದ್ದು ಜೂನ್‌ 6, ಅಮಾವಾಸ್ಯೆ ನಂತರ ಜ್ಯೇಷ್ಠ ಆರಂಭವಾಗುತ್ತದೆ. ಜುಲೈ 5 ಅಮಾವಾಸ್ಯೆವರೆಗೂ ಜ್ಯೇಷ್ಠ ಮಾಸವಿದ್ದು ನಂತರ ಆಷಾಢ ಆರಂಭವಾಗುತ್ತದೆ. ಈ ಒಂದು ತಿಂಗಳಲ್ಲಿ ಕೂಡಾ ಏಕಾದಶಿ, ಪ್ರದೋಷ ವ್ರತ ಸೇರಿದಂತೆ ಅನೇಕ ವ್ರತಗಳಿವೆ. ಜೂನ್‌ ತಿಂಗಳು ಬರುವ ಪ್ರಮುಖ ಆಚರಣೆಗಳ ವಿವರ ಹೀಗಿದೆ.

ಜೂನ್‌ ತಿಂಗಳ ವಿಶೇಷ ದಿನಗಳ ಪಟ್ಟಿ

ಅಪರ ಏಕಾದಶಿ - ಜೂನ್ 2, ಭಾನುವಾರ

ಮಾಸಿಕ ಶಿವರಾತ್ರಿ, ಪ್ರದೋಷ ವ್ರತ - ಜೂನ್ 4, ಮಂಗಳವಾರ

ಜ್ಯೇಷ್ಠ ಅಮಾವಾಸ್ಯೆ, ಶನಿ ಜಯಂತಿ - ಜೂನ್ 6, ಗುರುವಾರ

ಮಹಾರಾಣಾ ಪ್ರತಾಪ್ ಜಯಂತಿ - ಜೂನ್ 9, ಭಾನುವಾರ

ಧೂಮಾವತಿ ಜಯಂತಿ, ಕೊಲ್ಲೂರು ಮೂಕಾಂಬಿಕಾ ಜಯಂತಿ - ಜೂನ್ 14, ಶುಕ್ರವಾರ

ಮಿಥುನ ಸಂಕ್ರಾಂತಿ, ಮಹೇಶ ನವಮಿ- ಜೂನ್ 15, ಶನಿವಾರ

ಗಂಗಾ ದಸರಾ, ಮಕ್ಕಳ ಮಹದೇಶ್ವರ ಸ್ವಾಮಿ ವರ್ಧಂತ್ಯೋತ್ಸವ - ಜೂನ್ 16, ಭಾನುವಾರ

ಗಾಯತ್ರಿ ಜಯಂತಿ-ಜೂನ್ 17, ಸೋಮವಾರ

ನಿರ್ಜಲ ಏಕಾದಶಿ - ಜೂನ್ 18, ಮಂಗಳವಾರ

ಪ್ರದೋಷ ವ್ರತ - ಜೂನ್ 19, ಬುಧವಾರ

ವಟ ಸಾವಿತ್ರಿ ವ್ರತ - ಜೂನ್‌ 21, ಶುಕ್ರವಾರ

ಜ್ಯೇಷ್ಠ ಹುಣ್ಣಿಮೆ(ಕಾರ ಹುಣ್ಣಿಮೆ), ಕಬೀರದಾಸ ಜಯಂತಿ - ಜೂನ್ 22, ಶನಿವಾರ

ಸಂಕಷ್ಟಹರ ಚತುರ್ಥಿ - ಜೂನ್‌ 25, ಮಂಗಳವಾರ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.