ಮಹಾಭಾರತ ಕಥೆಗಳು: ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮಹಾಭಾರತ ಕಥೆಗಳು: ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ?

ಮಹಾಭಾರತ ಕಥೆಗಳು: ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ?

ಮಗು ಹುಟ್ಟಿದ ಸಮಯದಲ್ಲಿ ಕುದುರೆಯಂತೆ ಸದ್ದು ಮಾಡಿದ್ದ ಕಾರಣದಿಂದಾಗಿ ದ್ರೋಣಾಚಾರ್ಯರು ಮಗನಿಗೆ ಅಶ್ಚತ್ಥಾಮ ಎಂದು ಹೆಸರಿಡುತ್ತಾರೆ. ಈತ ಮುಂದೆ ವಿದ್ಯಾಭ್ಯಾಸದಲ್ಲಿ ತಂದೆಯನ್ನೇ ಮೀರಿಸಿದ ಮಗನಾಗಿ ಬೆಳೆಯುತ್ತಾನೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಮಹಾಭಾರತ ಕಥೆಗಳು: ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ? (ಸಾಂದರ್ಭಿಕ ಚಿತ್ರ)
ಮಹಾಭಾರತ ಕಥೆಗಳು: ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸಿದ ಅಶ್ವತ್ಥಾಮ; ದ್ರೋಣಾಚಾರ್ಯರು ಮಗನಿಗೆ ಆ ಹೆಸರು ಇಟ್ಟಿದ್ದೇಕೆ? (ಸಾಂದರ್ಭಿಕ ಚಿತ್ರ)

7 ಜನ ಚಿರಂಜೀವಿಗಳಲ್ಲಿ ಅಶ್ವತ್ಥಾಮ ಕೂಡಾ ಒಬ್ಬ. ಪಾಂಡವರು ಮೋಸದಿಂದ ತನ್ನ ತಂದೆ ದ್ರೋಣರನ್ನು ಕೊಂದರೆಂದು ತಿಳಿದು ಪಾಂಡವರನ್ನು ಕೊಲ್ಲಲು ಅಶ್ವತ್ಥಾಮ ನಿರ್ಧರಿಸುತ್ತಾನೆ. ವಿದ್ಯೆಯಲ್ಲಿ ಈತ ತಂದೆಯನ್ನೂ ಮೀರಿಸಿದ ಪ್ರತಿಭೆ. ಅಶ್ಚತ್ಥಾಮ, ತಂದೆ ದ್ರೋಣಾಚಾರ್ಯ, ಅವರ ತಂದೆ ಕೃಪಾಚಾರ್ಯರ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಸಪ್ತ ಋಷಿಗಳಾದ ಗೌತಮ ಮುನಿಗಳಿಗೆ ಶರದ್ವಂತನೆಂಬ ಮಗ ಜನಿಸುತ್ತಾನೆ. ಬಿಲ್ಲು ಬಾಣಗಳೊಂದಿಗೆ ಶರದ್ವಂತ ಜನಿಸಿರುತ್ತಾನೆ. ಕೇವಲ ವೇದಾಧ್ಯಯನವಲ್ಲದೆ ಶಸ್ತ್ರಾಭ್ಯಾಸವನ್ನು ಸಹ ವಿಶೇಷವಾಗಿ ಆತನು ಕಲಿಯಲು ಆರಂಭಿಸುತ್ತಾನೆ. ಇದನ್ನು ತಿಳಿದ ಇಂದ್ರನಿಗೆ ಕೋಪದ ಜೊತೆ ಅಸೂಯೆ ಉಂಟಾಗುತ್ತದೆ.

ಶರದ್ವಂತನ ತಪೋಭಂಗ ಮಾಡಲು ಅಪ್ಸರೆಯನ್ನು ಕಳಿಸಿದ ಇಂದ್ರ

ಮುನಿಗಳ ಏಕಾಗ್ರತೆಯನ್ನು ಭಂಗಪಡಿಸಲು ಜಾನಪತಿ ಎಂಗ ಅಪ್ಸರೆಯನ್ನು ಕಳುಹಿಸುತ್ತಾನೆ. ಆಕೆಯನ್ನು ಕಂಡ ನಂತರ ಋಷಿಗಳ ತಪೋಭಂಗವಾಗುತ್ತದೆ. ಆಗ ಅವರ ತೇಜಸ್ವಿನಿಂದ ಒಂದು ಹೆಣ್ಣು ಮತ್ತು ಒಂದು ಗಂಡು ಮಕ್ಕಳ ಜನನವಾಗುತ್ತದೆ. ಆದರೆ ಶರದ್ವಂತರು ಆ ಮಕ್ಕಳನ್ನು ಅಲ್ಲಿಯೇ ಬಿಟ್ಟು ಹೊರಟು ಹೋಗುತ್ತಾರೆ. ಇದರಿಂದಾಗಿ ಆ ಮಕ್ಕಳು ಅನಾಥರಾಗುತ್ತಾರೆ. ಕಾಡಿಗೆ ಬೇಟೆಯಾಡಲು ಬಂದ ರಾಜನ ಸೈನಿಕರಿಗೆ ಈ ಶಿಶುಗಳು ದೊರೆಯುತ್ತವೆ. ಆ ಮಕ್ಕಳನ್ನು ಸೈನಿಕರು ಶಂತನು ಮಹಾರಾಜನಿಗೆ ಒಪ್ಪಿಸುತ್ತಾರೆ. ಮಕ್ಕಳಿಗೆ ರಾಜಾಶ್ರಯದ ನಂತರ ಸೂಕ್ತ ಪಾಲನೆ ಮತ್ತು ಪೋಷಣೆ ದೊರೆಯುತ್ತದೆ. ಶರದ್ವಂತರ ಮಕ್ಕಳಾದ ಕೃಪಾಚಾರ್ಯರು, ಪಾಂಡವರು ಮತ್ತು ಕೌರವರಿಗೆ ಸಂಪೂರ್ಣ ವಿದ್ಯೆಯನ್ನು ಧಾರೆಯೆರೆಯುತ್ತಾರೆ. ಕೃಪಾಚಾರ್ಯರು ಪಾಂಡವರು ಮತ್ತು ಕೌರವರಿಗೆ ಶಸ್ತ್ರಾಸ್ತ್ರ ವಿದ್ಯೆಯನ್ನು ಸಂಪೂರ್ಣವಾಗಿ ಕಲಿಸುತ್ತಾರೆ. ಸುಸಂಸ್ಕೃತಿಯನ್ನು ಪರಿಚಯಿಸುವ ಸಲುವಾಗಿ ವೇದ ವೇದಾಂತಗಳನ್ನು ಕಲಿಸುತ್ತಾರೆ.

ಭಾರಧ್ವಾಜ ಮುನಿಗಳ ಪುತ್ರ ದ್ರೋಣಾಚಾರ್ಯ ಜನನ

ಭಾರದ್ವಾಜ ಮಹಾಮುನಿಗಳು ಗಂಗಾ ನದಿಯ ದಡದಲ್ಲಿ ಯಾಗವನ್ನು ಮಾಡಲು ಅನುವಾಗುತ್ತಾರೆ. ಅವರು ಸ್ನಾನ ಮಾಡಲೆಂದು ಗಂಗಾ ನದಿಯ ದಡಕ್ಕೆ ಬರುತ್ತಾರೆ. ಅಲ್ಲಿ ಘೃತಾಚಿ ಎಂಬ ಅಪ್ಸರೆ ಇರುತ್ತಾಳೆ. ಅವರಿಗೆ ಆಕೆಯ ಮೇಲೆ ಮನಸ್ಸಾಗುತ್ತದೆ. ಆಗ ಅವರ ರೇತಸ್ಸು ಕುಂಭದಲ್ಲಿ ಸೇರುತ್ತದೆ. ಆ ಕುಂಭವನ್ನು ದ್ರೋಣ ಎಂದು ಕರೆಯುತ್ತಾರೆ. ಆ ಕುಂಭದಿಂದ ವಿಶೇಷವಾದ ತೇಜಸ್ಸುಳ್ಳ ಗಂಡು ಮಗುವು ಹೊರ ಬರುತ್ತದೆ. ಈ ಮಗು ದ್ರೋಣದಲ್ಲಿ ಜನಿಸಿರುವ ಕಾರಣ ಅವನ ಹೆಸರು ದ್ರೋಣ ಎಂದಾಗುತ್ತದೆ. ಕೌರವ ಪಾಂಡವರ ನೆಚ್ಚಿನ ಗುರುವೇ ಈ ದ್ರೋಣಾಚಾರ್ಯರು. ಇವರಿಗೆ ಅಗ್ನಿವೇಷನೆಂಬ ವಿಶೇಷವಾದ ಗುರುವಿನಿಂದ ತಂದೆಯ ಆಶಯದಂತೆ ವಿದ್ಯಾಭ್ಯಾಸ ನಡೆಯುತ್ತದೆ.

ದ್ರೋಣಾಚಾರ್ಯರ ಪುತ್ರ ಅಶ್ಚತ್ಥಾಮನ ಜನನ

ಭಾರದ್ವಾಜರಿಗೆ ಪಾಂಚಾಲ ರಾಜ್ಯದ ರಾಜನಾದ ಪೃಷತ ಎಂಬ ಆಪ್ತಮಿತ್ರ ಇರುತ್ತಾನೆ. ಇವನ ಮಗನೆ ದ್ರುಪದ. ವೃಷತನ ಹೆಚ್ಚಿನ ಬಾಂಧವ್ಯ ಇರುವ ಕಾರಣ ದ್ರೋಣರು ದ್ರುಪದನ ಜೊತೆಯಾಗಿ ತಮ್ಮ ವಿದ್ಯಾಭ್ಯಾಸ ಮುಂದುವರೆಸುತ್ತಾರೆ. ಇವರು ಉತ್ತಮ ಸಾಧಕರೆಂದೇ ಪ್ರಸಿದ್ಧಿಗೊಳ್ಳುತ್ತಾರೆ. ದ್ರುಪದನಿಗೆ ಜೀವನದಲ್ಲಿ ಯಾವುದೇ ತೊಂದರೆ ಇರುವುದಿಲ್ಲ. ಹುಟ್ಟಿದಾಗಿನಿಂದಲೇ ಆತನು ಸಿರಿತನದಲ್ಲೇ ಬೆಳೆದಿರುತ್ತಾನೆ. ಆದರೆ ದ್ರೋಣಾಚಾರ್ಯರ ಮನೆಯಲ್ಲಿ ಕಡುಬಡತನ ಇರುತ್ತದೆ. ತಂದೆ ಮರಣ ಹೊಂದಿದ ನಂತರ ದ್ರುಪದನೇ ಮಹಾರಾಜನಾಗುತ್ತಾನೆ.


ಗುರು ಹಿರಿಯರ ಸಮ್ಮುಖದಲ್ಲಿ ದ್ರೋಣಾಚಾರ್ಯರಿಗೆ ಕೃಪಾಚಾರ್ಯರ ತಂಗಿಯಾದ ಕೃಷಿ ಎಂಬ ಕನ್ಯೆಯ ಜೊತೆಯಲ್ಲಿ ವಿವಾಹವಾಗುತ್ತದೆ. ಇವರಿಬ್ಬರಿಗೆ ಗಂಡು ಸಂತಾನ ಜನಿಸುತ್ತದೆ. ಜನನದ ವೇಳೆಯಲ್ಲಿಯೇ ಕುದುರೆಯಂತೆ ಧ್ವನಿ ಮಾಡಿದ ಕಾರಣ ಆ ಮಗುವನ್ನು ಅಶ್ವತ್ಥಾಮ ಎಂಬ ಹೆಸರಿನಿಂದ ಕರೆಯುತ್ತಾರೆ. ವಿದ್ಯಾ ಬುದ್ಧಿಯಲ್ಲಿ ಈತನು ಬಹಳ ಪ್ರಸಿದ್ಧಿ ಪಡೆಯುತ್ತಾನೆ. ಮಹಾಭಾರತದ ಯುದ್ದದಲ್ಲಿ ದ್ರೋಣಾಚಾರ್ಯರು ಸೋಲಲು ಪರೋಕ್ಷವಾಗಿ ಅಶ್ವತ್ಥಾಮನೇ ಕಾರಣನಾಗುತ್ತಾನೆ. ಯುದ್ದ ಭೂಮಿಯಲ್ಲಿ ತಂದೆಯನ್ನೇ ಮೀರಿಸುವಂತಹ ಪ್ರತಿಭೆ ಈತನಿಗೆ ಬಳುವಳಿಯಾಗಿ ಬಂದಿತ್ತು.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.