ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?-indian mythology why maharshi valmiki cursed hunter what lord brahma suggested valmiki ramayana stories sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?

ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?

ರಾಮಾಯಣ ಕಥೆಗಳು: ತಮಸಾ ನದಿ ತೀರದಲ್ಲಿದ್ದ ಮಹರ್ಷಿ ವಾಲ್ಮೀಕಿ, ಆಕಾಶದಲ್ಲಿ ಕ್ರೌಂಚ ಪಕ್ಷಿಗಳ ಜೋಡಿಯನ್ನು ನೋಡಿ ಖುಷಿಯಾಗುತ್ತಾರೆ. ಅದರೆ ಅದೇ ಸಮಯದಲ್ಲಿ ಒಬ್ಬ ಬೇಟೆಗಾರ ಗಂಡು ಪಕ್ಷಿಯನ್ನು ಬೇಟೆ ಆಡುತ್ತಾನೆ. ಇದನ್ನು ಕಂಡ ವಾಲ್ಮೀಕಿ ಆ ಬೇಟೆಗಾರನಿಗೆ ಶಾಪ ನೀಡುತ್ತಾರೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?
ರಾಮಾಯಣ ಕಥೆಗಳು: ಮಹರ್ಷಿ ವಾಲ್ಮೀಕಿ ವ್ಯಾಧನನ್ನು ಶಪಿಸಿದ್ದು ಏಕೆ? ರಾಮಾಯಣ ಕುರಿತಂತೆ ವಾಲ್ಮೀಕಿಗೆ ಬ್ರಹ್ಮನು ಹೇಳಿದ್ದೇನು?

ಮಹರ್ಷಿ ವಾಲ್ಮೀಕಿಗಳಿಗೆ ರಾಮಾಯಣದ ಬಗ್ಗೆ ತಿಳಿಸಿದ ನಾರದರು ಒಮ್ಮೆ ಲೋಕ ಪರ್ಯಟನೆಗೆ ತೆರಳುತ್ತಾರೆ. ಇತ್ತ ವಾಲ್ಮೀಕಿ ಮಹಾಮುನಿ ಮಧ್ಯಾಹ್ನದ ವಿಧಿ ವಿಧಾನಗಳನ್ನು ಪೂರೈಸಲು ತಮಸಾ ನದಿಯ ತೀರಕ್ಕೆ ಬರುತ್ತಾರೆ. ಆ ನದಿಯು ಕೊಂಚವೂ ಕಲ್ಮಶವಿಲ್ಲದೆ ಸ್ವಚ್ಛವಾಗಿತ್ತು. ಇದನ್ನು ಕಂಡ ವಾಲ್ಮೀಕಿಗೆ ಸಂತಸವಾಗುತ್ತದೆ. ಈ ನದಿಯು ಯಾವುದೇ ಕೆಟ್ಟ ಭಾವನೆಗಳಿಲ್ಲದ ಮತ್ತು ಯಾವುದೇ ಕೆಟ್ಟ ಯೋಚನೆಗಳಿಲ್ಲದೆ ಶುಭ್ರವಾದ ಮನಸಿರುವ ತಮ್ಮ ಶಿಷ್ಯ ಭರದ್ವಾಜನಂತೆ ಎಂದುಕೊಳ್ಳುತ್ತಾರೆ.

ಕ್ರೌಂಚ ಪಕ್ಷಿ ಜೋಡಿಯನ್ನು ಭೇಟಿಯಾಡಿದ ವ್ಯಾಧ

ಅದೇ ಸಮಯದಲ್ಲಿ ಆಕಾಶದಲ್ಲಿ ಕ್ರೌಂಚ ಪಕ್ಷಿಗಳ ಮನಮೋಹಕ ಜೋಡಿಯನ್ನು ನೋಡುತ್ತಾರೆ. ಆ ಜೋಡಿ ಹಕ್ಕಿಗಳು ಭಯವಿಲ್ಲದೆ ಸಂತಸದಿಂದ ವಿಹರಿಸುತ್ತಿರುವುದನ್ನು ಕಂಡು ವಾಲ್ಮೀಕಿ ಮಹರ್ಷಿ ಸಂತೋಷಗೊಳ್ಳುತ್ತಾರೆ. ಆದರೆ ಆ ಸಂತೋಷ ಹೆಚ್ಚು ಹೊತ್ತು ನಿಲ್ಲುವುದಿಲ್ಲ. ಬೇಟೆಗಾಗಿ ಬಂದಿದ್ದ ವ್ಯಾಧನೊಬ್ಬನು ಗಂಡು ಪಕ್ಷಿಗೆ ಗುರಿ ಇಟ್ಟು ಬಾಣ ಬಿಡುತ್ತಾನೆ. ಆ ಬಾಣ ಗುರಿ ತಪ್ಪದೆ ಪಕ್ಷಿಯ ಎದೆಗೆ ನಾಟುತ್ತದೆ. ನೋವು ತಾಳಲಾರದೆ ಆ ಗಂಡು ಪಕ್ಷಿ ಸಾಯುತ್ತದೆ. ಭೂಮಿ ಮೇಲೆ ಬಿದ್ದ ಪಕ್ಷಿಯ ರಕ್ತ ಸುತ್ತಮುತ್ತ ಹರಿಯುತ್ತದೆ. ತನ್ನ ಸಂಗಾತಿಗೆ ಒದಗಿದ ಈ ಆಪತ್ತನ್ನುಕಂಡ ಹೆಣ್ಣು ಪಕ್ಷಿ ನೋವನ್ನು ತಡೆಯಲಾರದೆ ಸಂಕಟದಿಂದ ವರ್ತಿಸುತ್ತದೆ. ಈ ಪಕ್ಷಿಯ ರೋಧನೆಯನ್ನು ಕೇಳಲು ಅಲ್ಲಿ ಯಾರೂ ಇರುವುದಿಲ್ಲ. ಆದರೆ ಇದ್ದ ಮಹರ್ಷಿ ವಾಲ್ಮೀಕಿ ಕೂಡಾ ಆ ಹೆಣ್ಣು ಕ್ರೌಂಚ ಪಕ್ಷಿಯ ನೋವನ್ನು ನೋಡುತ್ತಾರೆ. ವ್ಯಾಧನ ವರ್ತನೆಯು ಧರ್ಮ ನೀತಿಗೆ ವಿರುದ್ಧವಾದದ್ದು ಎಂದು ವಾಲ್ಮೀಕಿ ಮಹರ್ಷಿಗಳು ತಿಳಿಯುತ್ತಾರೆ. ಆ ಕ್ಷಣವೇ ತಮ್ಮನ್ನು ತಾವು ಮರೆತ ವಾಲ್ಮೀಕಿ ಮಹರ್ಷಿಗಳು ಆ ಬೇಡನಿಗೆ ಶಾಪವನ್ನು ನೀಡುತ್ತಾರೆ. ತಾವು ಅರಿಷಡ್ವರ್ಗಗಳನ್ನು ಗೆದ್ದವರು ಎಂಬುದನ್ನು ಮರೆತುಬಿಡುತ್ತಾರೆ. ಆ ಪಕ್ಷಿಗಳ ಬಗ್ಗೆ ಇದ್ದ ಅನುಕಂಪ ಅವರಿಗೆ ತಿಳಿಯದೆಯೇ ಶ್ಲೋಕದ ರೂಪದಲ್ಲಿ ಹೊರ ಬರುತ್ತದೆ.

ವ್ಯಾಧನನ್ನು ಶಪಿಸಿದ ವಾಲ್ಮೀಕಿ

ಆ ಬೇಡನನ್ನು ಕುರಿತು ಮಹರ್ಷಿ ವಾಲ್ಮೀಕಿ, ನಿನಗೆ ಇನ್ಮುಂದೆ ಸಂತೋಷದ ಜೀವನವೇ ಇರುವುದಿಲ್ಲ. ಬಹುಕಾಲದವರೆಗೆ ಬದುಕು ಸಹ ನಿನ್ನದಾಗುವುದಿಲ್ಲ. ಅನುರಾಗದಿಂದ ವಿಹರಿಸುತ್ತಿದ್ದ ಈ ಪಕ್ಷಿಗಳಲ್ಲಿ ಗಂಡು ಪಕ್ಷಿಯನ್ನು ಹತ್ಯೆ ಮಾಡಿರುವುದು ನೀನು ಮಾಡಿದ ಮಹಾ ಪಾಪ ಎನ್ನುತ್ತಾರೆ. ನಿನ್ನ ಜೀವನದಲ್ಲಿಯೂ ಸಹ ಇಂತಹ ಸನ್ನಿವೇಶ ಮರು ಕಳಿಸುತ್ತದೆ ಎಂದು ಶಪಿಸುತ್ತಾರೆ. ಆದರೆ ಆತನಿಗೆ ಶಪಿಸಿದ ಕೆಲ ಹೊತ್ತಿನ ನಂತರ ನಾನು ದುಡುಕಿ ಈ ರೀತಿ ತಪ್ಪು ಮಾಡಬಾರದಿತ್ತು ಎನಿಸುತ್ತದೆ. ಅದಕ್ಕಾಗಿ ಬಹಳ ಪಶ್ಚಾತಾಪ ಪಡುತ್ತಾರೆ.

ಇದಾದ ಸ್ವಲ್ಪ ಸಮಯದ ನಂತರ ಬ್ರಹ್ಮನು, ವಾಲ್ಮೀಕಿಯನ್ನು ನೋಡಲು ಅವರ ಆಶ್ರಮಕ್ಕೆ ಬರುತ್ತಾರೆ. ಬ್ರಹ್ಮನನ್ನು ಕಂಡ ವಾಲ್ಮೀಕಿ ನಮಸ್ಕರಿಸುತ್ತಾರೆ. ಬ್ರಹ್ಮನು ವಾಲ್ಮೀಕಿಯನ್ನು ಕುರಿತು ನಿನಗೆ ಅರಿವೇ ಇಲ್ಲದಂತೆ ಶ್ಲೋಕವನ್ನು ರಚಿಸಿರುವೆ. ಇದೇ ರೀತಿ ಶ್ರೀರಾಮಚಂದ್ರನ ಚರಿತ್ರೆಯನ್ನು ನಾಲ್ಕು ಶ್ಲೋಕಗಳ ಸಹಾಯದಿಂದ ರಚಿಸು ಎನ್ನುತ್ತಾನೆ. ಶ್ರೀ ರಾಮನ ಚರಿತ್ರೆಯು ನಾರದ ಮುನಿಗಳಿಂದ ನಿನಗೆ ತಿಳಿದಿದೆ. ರಾಮಾಯಣ ಬರೆಯಲು ಆರಂಭಿಸಿದ ತಕ್ಷಣ ನಾರದರು ಹೇಳದೆ ಇರುವ ವಿಚಾರಗಳು ಸಹ ತಾನಾಗಿಯೇ ನಿನಗೆ ತಿಳಿಯುತ್ತದೆ ಎಂದು ಹೇಳುತ್ತಾನೆ. ಎಲ್ಲಿಯವರೆಗೆ ನದಿ ಸರೋವರಗಳು, ಗಿರಿ ಪರ್ವತಗಳು ಪ್ರಪಂಚದಲ್ಲಿ ಇರುತ್ತವೆಯೋ ಅಲ್ಲಿಯವರೆಗೂ ಭಕ್ತಿ ಭಾವನೆಗಳಿಂದ ನೀನು ರಚಿಸಿದ ರಾಮಾಯಣ ಇರುತ್ತದೆ. ಇದರಿಂದ ನಿನಗೆ ಉತ್ತಮ ಲೋಕ ಪ್ರಾಪ್ತಿಯಾಗುತ್ತದೆ ಎಂದು ಕುಣಿತ ಜಾಗದಲ್ಲಿಯೇ ಅದೃಶ್ಯಗೊಳ್ಳುತ್ತಾನೆ. ಆ ನಂತರ ವಾಲ್ಮೀಕಿ ಮಹರ್ಷಿ ರಾಮಾಯಣವನ್ನು ಬರೆಯುವ ಮಹತ್ಕಾರ್ಯದಲ್ಲಿ ತೊಡಗುತ್ತಾರೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

mysore-dasara_Entry_Point
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.