ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ; ಉಜ್ಜಯಿನಿಯಲ್ಲಿ ನೋಡಬೇಕಾದ ಸ್ಥಳಗಳಿವು
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ; ಉಜ್ಜಯಿನಿಯಲ್ಲಿ ನೋಡಬೇಕಾದ ಸ್ಥಳಗಳಿವು

ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ; ಉಜ್ಜಯಿನಿಯಲ್ಲಿ ನೋಡಬೇಕಾದ ಸ್ಥಳಗಳಿವು

Ujjain Temple: ಅಷ್ಟಾದಶ ಶಕ್ತಪೀಠಗಳಲ್ಲಿ ಉಜ್ಜಯಿನಿಯೂ ಒಂದು. ಶಿವನ ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಒಂದಾದ ಈ ಸ್ಥಳದ ವೈಭವ, ವೈಶಿಷ್ಟ್ಯ, ಕ್ಷೇತ್ರದ ಬಗ್ಗೆ ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ. ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ

ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ; ಉಜ್ಜಯಿನಿಯಲ್ಲಿ ನೋಡಬೇಕಾದ ಸ್ಥಳಗಳಿವು
ಶ್ರೀಕೃಷ್ಣ ಕುಚೇಲನೊಂದಿಗೆ ವಿದ್ಯಾಭ್ಯಾಸ ಮಾಡಿದ್ದು, ದೇವಿಯು ಕಾಳಿದಾಸನಿಗೆ ವಿದ್ಯೆ ನೀಡಿದ್ದು ಇಲ್ಲೇ; ಉಜ್ಜಯಿನಿಯಲ್ಲಿ ನೋಡಬೇಕಾದ ಸ್ಥಳಗಳಿವು (Pixabay)

ಭಾರತದ ಪವಿತ್ರ ಕ್ಷೇತ್ರಗಳಲ್ಲಿ ಉಜ್ಜಯಿನಿ ಕೂಡಾ ಒಂದು. ಇದನ್ನು ಮಹಾಕಾಲ ಲೋಕವೆಂದೂ ಕರೆಯುತ್ತಾರೆ. ಈ ತೀರ್ಥಕ್ಷೇತ್ರವು ಮಧ್ಯಪ್ರದೇಶದಲ್ಲಿದೆ. ಇದು ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದಾಗಿದೆ. ಮೊದಲು ಇದನ್ನು ಅವಂತಿ ಎಂದು ಕರೆಯಲಾಗುತ್ತಿತ್ತು. ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಸ್ತೋತ್ರಗಳಿವೆ.

ನಿಧಾನ ಅವಂತಿ ಕಾಯಾಂ ವಿಹಿತಾವತಾರಂ ಮುಕ್ತಿಪ್ರದಾನಾಯ ಚ ಸಜ್ಜನನಾಮ್

ಅಕಾಲ ಮೃತ್ಯು: ಪರಿರಕ್ಷಣಾರ್ಥಂ ವಂದೇ ಮಹಾಕಾಲ ಮಹಾಸುರೇಶಮ್||

ಅರ್ಥ: ಮಹನೀಯರನ್ನು ಅಕಾಲಿಕ ಮರಣದಿಂದ ಪಾರು ಮಾಡಲು ಅವಂತಿ ನಗರದಲ್ಲಿ (ಉಜ್ಜಯಿನಿಯಲ್ಲಿ) ಕಾಣಿಸಿಕೊಂಡ ಮಹಾಕಾಲ ಎಂಬ ದೇವರಿಗೆ ನಾನು ನಮಸ್ಕರಿಸುತ್ತೇನೆ. ಮಹಾಕಾಳಿ ಇಲ್ಲಿನ ದೇವತೆಯಾಗಿದ್ದು ಇದು ಅಷ್ಟಾದಶ ಶಕ್ತಿಪೀಠಗಳಲ್ಲಿ ಒಂದಾಗಿದೆ. ಸತಿ ಮಂಡಿಯೂರಿ ಕುಳಿತ ಸ್ಥಳವಾಗಿದೆ. ಮಾಳವ ದೇಶದ ಅವಂತಿ ನಗರವು ಶಿಪ್ರಾ ನದಿಯ ದಡದಲ್ಲಿದೆ. ಅವಂತಿ ನಗರವು ಭಾರತದ ಏಳು ಮೋಕ್ಷ ನಗರಗಳಲ್ಲಿ ಒಂದಾಗಿದೆ.

ಅಯೋಧ್ಯಾ ಮಥುರಾ ಮಾಯಾ ಕಾಶೀ ಕಾಂಚೀ ಆವಂತಿಕಾ

ಪುರೀ ದ್ವಾರವತೀ ಚೈವ ಸಪ್ತತೇ ಮೋಕ್ಷದಾಯಕಃ ॥

ಅರ್ಥ: ಪುರಾಣಗಳ ಪ್ರಕಾರ, ಈ ಅವಂತಿಕಾ ನಗರವು ಮೋಕ್ಷ ನೀಡುವ ಸ್ಥಳವಾಗಿದೆ. ಸ್ಕಂದ ಪುರಾಣದ ಅವಂತಿ ಖಂಡವು ಈ ನಗರದ ಹಿರಿಮೆಯನ್ನು ವಿವರಿಸುತ್ತದೆ. ಈ ಅವಂತಿ ನಗರದ ವೈಭವವನ್ನು ಶಿವ ಪುರಾಣ ಮತ್ತು ಮಹಾಭಾರತದಲ್ಲಿಯೂ ವಿವರಿಸಲಾಗಿದೆ.

ಉಜ್ಜಯಿನಿಯ ವೈಶಿಷ್ಟ್ಯ

ಇಲ್ಲಿನ ಶಿಪ್ರಾ ನದಿಯಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಾಶವಾಗುತ್ತದೆ. ಅಷ್ಟ ದರಿದ್ರಗಳು ದೂರವಾಗುತ್ತವೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ. ಶ್ರೀಕೃಷ್ಣ, ಬಲರಾಮ ಮತ್ತು ಕುಚೇಲರು ಸಂದೀಪನಿ ಮುನಿಯ ಹತ್ತಿರ ಅಧ್ಯಯನ ಮಾಡಿದರು ಎಂದು ಭಾಗವತ ಹೇಳುತ್ತದೆ. ಆ ಸಾಂದೀಪನಿ ಋಷಿಯ ಆಶ್ರಮವು ಶಿಪ್ರಾ ನದಿಯ ದಡದಲ್ಲಿದೆ. ಪ್ರಸಿದ್ಧ ರಾಜ ವಿಕ್ರಮಾದಿತ್ಯನು ಉಜ್ಜಯಿನಿಯನ್ನು ತನ್ನ ರಾಜಧಾನಿಯಾಗಿಟ್ಟುಕೊಂಡು ಈ ನಗರವನ್ನು ಆಳಿದನು. ಅವನ ಸಹೋದರ ಭಟ್ಟಿ ಮಂತ್ರಿಯಾಗಿಯೂ, ಮತ್ತೊಬ್ಬ ಸಹೋದರ ಭರ್ತ್ರಿಹರಿ ಶ್ರೇಷ್ಠ ವಿದ್ವಾಂಸನಾಗಿ, ಕಾಳಿದಾಸ ಮಹಾ ಕವಿ ಮುಂತಾದ ಶ್ರೇಷ್ಠರು ಆಸ್ಥಾನ ನವರತ್ನಗಳಾಗಿ ಇತಿಹಾಸದಲ್ಲಿ ಪ್ರಸಿದ್ಧರಾಗಿದ್ದಾರೆ.

ವಿಕ್ರಮಾದಿತ್ಯನ ಕಾಲದಲ್ಲಿ ವರಾಹಮಿಹಿರ ಎಂಬ ಜ್ಯೋತಿಷಿಗಳು ಜ್ಯೋತಿಷ್ಯ ಶಾಸ್ತ್ರವನ್ನು ಬೆಳೆಸಿದರು. ಉಜ್ಜಯಿನಿಯಲ್ಲಿ ತಾರಾ ವೀಕ್ಷಣಾಲಯವನ್ನು ನಿರ್ಮಿಸಲಾಯಿತು. ಭಾರತೀಯ ಜ್ಯೋತಿಷ್ಯವು ಉಜ್ಜಯಿನಿಯಿಂದ ಪ್ರಾರಂಭವಾಯಿತು. ಉಜ್ಜಯಿನಿ ನಗರದ ಸ್ಥಳ ಪುರಾಣವನ್ನು ಸ್ಕಂದ ಪುರಾಣದ ಆವಂತಿಕಾ ಖಂಡ ಅಧ್ಯಾಯ 26 ಶ್ಲೋಕಗಳು 17, 18, 19 ರಲ್ಲಿ ವಿವರಿಸಲಾಗಿದೆ.

ಜ್ಯೋತಿರ್ಲಿಂಗವು ಹೇಗೆ ಬೆಳಗಿತು?

ಬಹಳ ಹಿಂದೆ ಉಜ್ಜಯಿನಿ ನಗರದಲ್ಲಿ ವೇದಪ್ರಿಯ ಎಂಬ ಬ್ರಾಹ್ಮಣನು ವಾಸಿಸುತ್ತಿದ್ದನು. ಅವನು ವೈದಿಕ ಧರ್ಮಶಾಸ್ತ್ರಜ್ಞ ಮತ್ತು ಶಿವಲಿಂಗದ ಆರಾಧಕನಾಗಿದ್ದನು. ಅವನಿಗೆ ದೇವಪ್ರಿಯ, ಸುಮೇದಸ, ಸುಕೃತ ಮತ್ತು ಧರ್ಮವಾಹ ಎಂಬ ನಾಲ್ವರು ಪುತ್ರರಿದ್ದರು. ಅವರ ಗುಣಗಳಿಂದಾಗಿ ಉಜ್ಜಯಿನಿ ನಗರವು ಬ್ರಹ್ಮ ತೇಜಸ್ಸಿನಿಂದ ಕಂಗೊಳಿಸುತ್ತಿತ್ತು. ಆದರೆ ಉಜ್ಜಯಿನಿಯ ಬಳಿಯ ರತ್ನಮಾಲಾ ಎಂಬ ಪರ್ವತದಲ್ಲಿ ದೂಷಣ ಎಂಬ ರಾಕ್ಷಸ ವಾಸಿಸುತ್ತಿದ್ದನು. ತಪಸ್ಸು ಮಾಡಿ ಬ್ರಹ್ಮನಿಂದ ವರಗಳನ್ನು ಪಡೆದಿದ್ದನು. ಅವನು ದೇವತೆಗಳನ್ನು ಸೋಲಿಸಿದ್ದನು. ಯಜ್ಞವಿಧಿಗಳನ್ನು ಮಾಡುವವರಿಗೆ ತೊಂದರೆ ನೀಡುತ್ತಿದ್ದನು. ಮತ್ತು ಯಜ್ಞವನ್ನು ಸಹ ನಾಶ ಮಾಡುತ್ತಿದ್ದನು. ಹಾಗಾಗಿ ಜನರು ವೈದಿಕ ಧರ್ಮವನ್ನು ತ್ಯಜಿಸತೊಡಗಿದರು.

ಪುಣ್ಯತೀರ್ಥಗಳೆಲ್ಲವೂ ಅವನತಿಯ ದಾರಿ ಹಿಡಿಯತೊಡಗಿದವು. ಆದರೆ ಉಜ್ಜಯಿನಿಯಲ್ಲಿ ವೈದಿಕ ಧರ್ಮವು ಬೆಳಗುತ್ತಿತ್ತು. ಅಲ್ಲಿ ಸಂಪತ್ತು ತುಂಬಿತ್ತು. ರಾಕ್ಷಸನಿಗೆ ಅದನ್ನು ನೋಡಿ ಸಹಿಸಲಾಗಲಿಲ್ಲ. ದೇವತೆಗಳು ಮತ್ತು ರಾಜಕುಮಾರರೆಲ್ಲರೂ ನನ್ನ ಪೂರ್ವಜರಿಗೆ ನಮಸ್ಕರಿಸುತ್ತಾರೆ, ಆದರೆ ಈ ಉಜ್ಜಯಿನಿಯಲ್ಲಿರುವವರು ಮಾತ್ರ ಪಾಲಿಸುವುದಿಲ್ಲ. ಅವರಿಗೆ ಶಿಕ್ಷೆಯಾಗಲೇಬೇಕು ಎಂದು ಯೋಚಿಸಿದನು. ವೈದಿಕ ಧರ್ಮವನ್ನು ತೊರೆದು ನನ್ನನ್ನು ಪೂಜಿಸಿ ಆಶ್ರಯಿಸಬೇಕು. ಇಲ್ಲವಾದರೆ, ಉಜ್ಜಯಿನಿಯ ಜನರ ಆಯುಷ್ಯ ಮುಗಿದಂತೆ ಎಂದು ನಾಲ್ಕು ಜನ ಮಂತ್ರಿಗಳನ್ನು ಕಳುಹಿಸಿದನು. ಆ ಮಂತ್ರಿಗಳು ಉಜ್ಜಯಿನಿಗೆ ಹೋಗಿ ಅಲ್ಲಿನ ಜನರಿಗೂ, ವೇದಪ್ರಿಯರ ನಾಲ್ವರು ಮಕ್ಕಳಿಗೂ ಅಪಮಾನದ ಮಾತುಗಳನ್ನಾಡಿದರು. ಆದರೆ ಅವರ್‍ಯಾರೂ ಆ ಮಾತನ್ನು ಲೆಕ್ಕಿಸಲಿಲ್ಲ ಮತ್ತು ಹೆದರಲಿಲ್ಲ.

ದೂಷಣನನ್ನು ವಧಿಸಿದ ಮಹಾಕಾಲ

ದೂಷಣನು ನಗರವನ್ನು ಆಕ್ರಮಿಸುವುದಿಲ್ಲ ಎಂದು ವೇದಪ್ರಿಯರ ಪುತ್ರರು ಉಜ್ಜಯಿನಿ ನಗರದ ಬ್ರಾಹ್ಮಣರಿಗೆ ಮತ್ತು ನರಿಗೆ ಧೈರ್ಯ ಹೇಳಿದರು. ಅವರು ಶಿವಲಿಂಗವನ್ನು ನಿರ್ಮಿಸಿ ಶಿವನನ್ನು ಶಾಸ್ತ್ರೋಕ್ತವಾಗಿ ಪೂಜಿಸಿದರು. ಆ ದೂಷಣಾಸುರನು ತನ್ನ ಸೈನ್ಯದೊಂದಿಗೆ ಬಂದು ಅವರನ್ನು ಸಂಹರಿಸುವಂತೆ ಆಜ್ಞಾಪಿಸಿದನು. ದೂಷಣನು ಏನೇ ತೊಂದರೆ ಮಾಡಿದರೂ ಅಲ್ಲಿನ ಜನರು ಶಿವನ ಆರಾಧನೆಯನ್ನು ಮುಂದುವರಿಸುತ್ತಲೇ ಕುಳಿತರು. ಆ ಸಮಯದಲ್ಲಿ, ಶಿವಲಿಂಗವನ್ನು ಪ್ರತಿಷ್ಠಾಪಿಸಿದ ಸ್ಥಳದಲ್ಲಿ ಭಯಾನಕ ಶಬ್ದದೊಂದಿಗೆ ದೊಡ್ಡ ಕಂದಕ ರೂಪುಗೊಂಡಿತು. ಮಹೇಶ್ವರನು ಅದರಿಂದ ಹೊರಬಂದು ಓ ದೂಷಣಾ! ನಿನ್ನಂತಹ ದುಷ್ಟರನ್ನು ನಾಶಮಾಡಲು ನಾನು ಮಹಾಕಾಲನ ರೂಪದಲ್ಲಿ ಬಂದಿದ್ದೇನೆ ಎಂದು ಒಂದೇ ಘರ್ಜನೆಯಿಂದ ಆ ದೂಷಣನ್ನು ಮತ್ತು ಅವನ ಸೈನ್ಯವನ್ನು ಕೊಂದನು. ಕೆಲವರು ಶಿವನ ಆ ರೂಪಕ್ಕೆ ಹೆಸರು ಓಡಿ ಹೋದರು. ಶಿವನ ಅನುಗ್ರಹದಿಂದಾಗಿ ಉಜ್ಜಯಿನಿಯ ಜನರು ರಾಕ್ಷಸನ ಕಾಟದಿಂದ ವಿಮುಕ್ತಿ ಹೊಂದಿದರು.

ಬ್ರಹ್ಮ, ವಿಷ್ಣು ಮತ್ತು ಇಂದ್ರರು ಬಂದು ಮಹಾಕಾಳೇಶ್ವರನನ್ನು ಪೂಜಿಸಿದರು. ಶಿವನು ಏನು ವರ ಬೇಕೆಂದು ಕೇಳಿದಾಗ ಮಹಾಕಾಳೇಶ್ವರನು ಈ ಸ್ಥಳದಲ್ಲಿ ಜ್ಯೋತಿರ್ಲಿಂಗವಾಗಿ ಕಾಣಿಸಿಕೊಂಡು ಭಕ್ತರ ಇಷ್ಟಾರ್ಥಗಳನ್ನು ಪೂರೈಸಿ ಮೋಕ್ಷವನ್ನು ನೀಡುವಂತೆ ಭಕ್ತರು ಕೇಳಿಕೊಂಡರು. ಹೀಗೆ ಪರಮೇಶ್ವರನು ಉಜ್ಜಯಿನಿಯಲ್ಲಿ ಮಹಾಕಾಳೇಶ್ವರನೆಂಬ ಹೆಸರಿನಲ್ಲಿ ಜ್ಯೋತಿರ್ಲಿಂಗವಾಗಿ ನೆಲೆಸಿದನು. ಅಲ್ಲಿ ಅವನು ತನ್ನ ಭಕ್ತರಿಗೆ ದರ್ಶನ ನೀಡುತ್ತಾ, ಇಷ್ಟಾರ್ಥಗಳನ್ನು ಈಡೇರಿಸುತ್ತಾ ಮುಕ್ತಿಯನ್ನು ದಯಪಾಲಿಸುತ್ತಿದ್ದಾನೆ ಎಂಬ ನಂಬಿಕೆ ಇದೆ.

ಚಂದ್ರಸೇನನ ಕಥೆ

ಒಂದು ಕಾಲದಲ್ಲಿ ಈ ಉಜ್ಜಯಿನಿ ನಗರವನ್ನು ಶಿವಭಕ್ತ ಚಂದ್ರಸೇನ ಎಂಬ ರಾಜ ಆಳುತ್ತಿದ್ದನು. ಒಮ್ಮೆ ಅವನು ಶಿವಪೂಜೆಯಲ್ಲಿ ತೊಡಗಿದ್ದಾಗ ಐದು ವರ್ಷದ ಶ್ರೀಕರ ಎಂಬ ಹಸುಗೂಸು ತನ್ನ ತಾಯಿಯೊಂದಿಗೆ ಅಲ್ಲಿಗೆ ಬಂದು ರಾಜನು ಪೂಜೆ ಮಾಡುತ್ತಿದ್ದುದನ್ನು ನೋಡಿದನು. ಆ ಮಗು ಕೂಡಾ ಶಿವನನ್ನು ಪೂಜಿಸಲು ಬಯಸಿದನು. ಹಿಂತಿರುಗುವ ದಾರಿಯಲ್ಲಿ ಆ ಹುಡುಗನಿಗೆ ಒಂದು ಬೆಣಚುಕಲ್ಲು ಸಿಕ್ಕಿತು. ಅದನ್ನು ತೆಗೆದು ಶಿವಲಿಂಗವೆಂದು ಭಾವಿಸಿ ಅಭಿಷೇಕ ಮತ್ತು ಶ್ರೀಗಂಧದ ಹೂಗಳಿಂದ ಬಹಳ ಶ್ರದ್ಧೆಯಿಂದ ಪೂಜಿಸತೊಡಗಿದನು. ಒಂದು ದಿನ ಆ ಹುಡುಗನು ಧ್ಯಾನದಲ್ಲಿರುವಾಗ ಅವನ ತಾಯಿ ಊಟಕ್ಕೆ ಬಾ ಎಂದು ಅನೇಕ ಬಾರಿ ಕರೆದಳು. ಕೊನೆಗೆ ಬೇಸತ್ತು ಶಿವಲಿಂಗ ಮತ್ತು ಪೂಜಾ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗಿ ಬಲವಂತವಾಗಿ ಹುಡುಗನನ್ನು ಊಟಕ್ಕೆ ಕರೆದೊಯ್ದಳು. ಆದರೆ ಹುಡುಗ ಶಂಭೋ! ಎಂದು ಮಹಾದೇವನನ್ನು ಕರೆದನು, ಅದೇ ವಿಚಾರಕ್ಕೆ ಅಳುತ್ತಾ, ಪ್ರಜ್ಞೆ ತಪ್ಪುತ್ತಾನೆ.

ಬಾಲಕನ ಭಕ್ತಿಗೆ ಮೆಚ್ಚಿ ಶಿವನು ಪ್ರತ್ಯಕ್ಷನಾಗಿ ಅವನನ್ನು ಎಚ್ಚರಗೊಳಿಸಿದನು. ಬಾಲಕನು ಕಣ್ಣು ತೆರೆದಾಗ, ಅವನು ದೇವಾಲಯ ಮತ್ತು ಜ್ಯೋತಿರ್ಲಿಂಗವನ್ನು ನೋಡಿದನು. ಹುಡುಗನು ಇನ್ನಷ್ಟು ಸಂತೋಷದಿಂದ ಶಿವನನ್ನು ಸ್ತುತಿಸಿದನು. ಹುಡುಗನ ಬಳಿಗೆ ಬಂದ ಅವನ ತಾಯಿಯು ನಡೆದದ್ದನ್ನೆಲ್ಲ ನೋಡಿ ಮೈಮರೆತಳು. ರಾಜ ಚಂದ್ರಸೇನನೂ ವಿಷಯ ತಿಳಿದು ತಕ್ಷಣ ಬಾಲಕನನ್ನು ಹೊಗಳಿದನು. ಆ ಸಮಯದಲ್ಲಿ ಹನುಮಂತನು ಅಲ್ಲಿ ಕಾಣಿಸಿಕೊಂಡು ಈ ಜಗತ್ತಿನಲ್ಲಿ ಶಿವನಿಗಿಂತ ಪರತ್ವ ಮತ್ತೊಂದಿಲ್ಲ. ಸಾವಿರಾರು ವರ್ಷಗಳ ತಪಸ್ಸಿನ ನಂತರವೂ ಋಷಿಮುನಿಗಳಿಗೆ ಸಿಗದ ಮಹಾಫಲ ಈ ಬಾಲಕನಿಗೆ ಸಿಕ್ಕಿತು. ಇದು ಆ ಪರಮಾತ್ಮನ ಕೃಪೆ. ಈ ದರ್ಶನ ಪೂಜೆಯಿಂದ ಕೃತಜ್ಞರಾಗಿರಿ. ಈ ಬಾಲಕನ ವಂಶದಲ್ಲಿ ಅವನ ಎಂಟನೆಯ ತಲೆಮಾರಿನವನಾಗಿ ಶ್ರೀಕರ ಬಾಲಕ ನಂದಗೋಪಾಲ ಎಂಬ ಹೆಸರಿನಲ್ಲಿ ಮರುಜನ್ಮ ಪಡೆಯುತ್ತಾನೆ. ಅವರ ವಾತ್ಸಲ್ಯವನ್ನು ಪಡೆಯಲು, ಶ್ರೀಮನ್ನಾರಾಯಣನು ಶ್ರೀಕೃಷ್ಣನಾಗಿ ಅವತರಿಸುತ್ತಾನೆ ಎಂದು ಹೇಳಿ ಅದೃಶ್ಯನಾಗುತ್ತಾನೆ.

ಉಜ್ಜಯಿನಿಯಲ್ಲಿ ಭೇಟಿ ನೀಡಬೇಕಾದ ಪ್ರಸಿದ್ಧ ದೇವಾಲಯಗಳು

1 ಮಹಾಕಾಳೇಶ್ವರ ಮಂದಿರ, 2. ಹರಿಸಿದ್ಧಿ ದೇವಿ, 3. ಇಡಾ ಗಣೇಶ, 4. ಗೋಪಾಲ ಮಂದಿರ 5. ಗಢ ಕಾಳಿಕಾ, 6. ಭರ್ತ್ರಹರಿ ಗುಹೆ, 7. ಕಾಲಭೈರವ 6. ಸಾಂದೀಪನಿ ಆಶ್ರಮ 9. ಸಿದ್ಧವತಂ 10. ಮಂಗಳನಾಧ 11. ನಕ್ಷತ್ರ ವೇಧಶಾಲಾ 12. ಸ್ಕಂದ ಪುರಾಣದಲ್ಲಿ, ಉಜ್ಜಯಿನಿ ಎಂದು ಕರೆಯಲ್ಪಡುವ ಆವಂತಿಕಾ ಕ್ಷೇತ್ರವು ಹಲವಾರು ಶಿವಲಿಂಗಗಳನ್ನು ಹೊಂದಿದೆ.

1. ಶಿಪ್ರಾನದಿ: ಶಿಪ್ರಾ ಅತ್ಯಂತ ಪವಿತ್ರ ನದಿಯಾಗಿದೆ. ಈ ನದಿಯು ಹಿಂದಿನ ಪಾಪವನ್ನೆಲ್ಲಾ ಕಳೆಯುವ ಪವಿತ್ರ ನದಿಯಾಗಿದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಕುಂಭಮೇಳಗಳಲ್ಲಿ ಗಂಗಾ ಮತ್ತು ಗೋದಾವರಿ ನಂತರ, ಉಜ್ಜಯಿನಿಯ ಶಿಪ್ರಾ ನದಿಯಲ್ಲಿ ಸ್ನಾನ ಮಾಡುವುದು ಬಹಳ ಶ್ರೇಷ್ಠಾ ಎಂಬ ನಂಬಿಕೆ ಇದೆ.

2. ಮಹಾಕಾಳೇಶ್ವರ ಮಂದಿರ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರವು ಶಿವನ ಭಕ್ತರು ಭೇಟಿ ನೀಡಬೇಕಾದ ಪ್ರಮುಖ ಸ್ಥಳವಾಗಿದೆ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಅತ್ಯಂತ ಪವಿತ್ರವಾದ ಸ್ಥಳವಿದು. ಅಖಂಡ ಭಾರತದ ಕೇಂದ್ರವಾದ ನವಗ್ರಹಗಳಲ್ಲಿ ಮಹಾಕಾಳೇಶ್ವರವು ಸೂರ್ಯನ ಸ್ಥಾನವಾಗಿದೆ.

3. ಹರಿಸಿದ್ಧಿ ದೇವಿ: ಈಕೆ ವಿಕ್ರಮಾದಿತ್ಯನ ತಾಯಿ. ರುದ್ರ ಸರೋವರದ ಸಮೀಪದಲ್ಲಿ ಹರಿಸಿದ್ಧಿ ದೇವಿಯ ದೇವಸ್ಥಾನವು ವಿಶಾಲವಾದ ಆವರಣವನ್ನು ಹೊಂದಿದೆ. ಇದು ಅವಂತಿಕಾ ಶಕ್ತಿ ಪೀಠವಾಗಿದೆ, ವಿಕ್ರಮಾದಿತ್ಯನಿಂದ ಪೂಜಿಸಲ್ಪಟ್ಟ ಭವಾನಿಯು ಮತ್ತು ಗುಜರಾತ್‌ನ ಮೂಲದ್ವಾರದ ಬಳಿಯ ಕರಾವಳಿ ಪರ್ವತ ಶ್ರೇಣಿಯಲ್ಲಿರುವ ಮತ್ತೊಂದು ದೇವಿ ಇವೆರಡೂ ಒಂದೇ ಆಕಾರದಲ್ಲಿರುವುದು ಗಮನಾರ್ಹ. ಈ ದೇವಿಯ ಪೀಠದ ಮೇಲೆ ಶ್ರೀ ಚಕ್ರವಿದೆ. ಅದರ ಹಿಂದೆ ಅನ್ನಪೂರ್ಣ ಮಂದಿರ, ಅದರ ಪೂರ್ವ ದ್ವಾರದ ಬಳಿ ಒಂದು ಸಣ್ಣ ಬಾವಿ, ಮಧ್ಯದಲ್ಲಿ ಒಂದು ಕಂಬ, ಸಮೀಪದಲ್ಲಿ ಸಪ್ತಸಾಗರ ಎಂಬ ಕೆರೆ, ಹರಿಸಿದ್ಧಿ ಮಂದಿರದ ಹಿಂದೆ ಅಗಸ್ತೇಶ್ವರ ಮಂದಿರವಿದೆ. ಮಹಾಕಾಲ ಮಂದಿರದಿಂದ ಮುಖ್ಯ ಬೀದಿಯವರೆಗೆ ಪ್ರಾಚೀನ ಸಿಂಹದ ಅವಶೇಷಗಳೊಂದಿಗೆ 24 ಕಂಬಗಳ ಮಂಟಪವಿದೆ. ಭದ್ರಕಾಳಿ ದೇವಿಯೂ ಅಲ್ಲಿ ನೆಲೆಸಿದ್ದಾಳೆ ಎಂದು ಭಕ್ತರು ನಂಬಿದ್ದಾರೆ.

4. ಗೋಪಾಲ ಮಂದಿರ : ಇದು ಮಧ್ಯವೇಧಿಯಲ್ಲಿದೆ. ರಾಧಾಕೃಷ್ಣ ಮತ್ತು ಶಂಕರರ ಪ್ರತಿಮೆಗಳನ್ನು ಇಲ್ಲಿ ಕಾಣಬಹುದು. ಈ ದೇವಾಲಯವನ್ನು ರಾಜ ದೌಲತ್ ಸಿಂಧಿಯಾ ಅವರ ಪತ್ನಿ ಬೈಜಾಬಾಯಿ ನಿರ್ಮಿಸಿದರು.

5. ಗಧಾಕಲಿಕಾ : ಅಷ್ಟಾದಶ ಶಕ್ತಿ ಪೀಠಗಳಲ್ಲಿ ಉಜ್ಜಯಿನಿಯ ಪ್ರಮುಖವಾದುದು ಗಧಾಕಲಿಕಾ ಶಕ್ತಿ ಪೀಠ. ಕಾಳಿದಾಸನಿಗೆ ದೇವಿಯು ಪ್ರತ್ಯಕ್ಷಳಾಗಿ ಬುದ್ಧಿ ನೀಡಿದ ಸ್ಥಳವೇ ಗಧಾಕಲಿಕಾ ಮಂದಿರ. ಗೋಪಾಲಮಂದಿರದಿಂದ ಅಲ್ಲಿಗೆ ಮಾರ್ಗವಿದೆ. ಇದು ನಗರದಿಂದ ಮೈಲುಗಳಷ್ಟು ದೂರದಲ್ಲಿದೆ. ಮಹಾಕವಿ ಕಾಳಿದಾಸನು ಈ ಕಾಳಿಯನ್ನು ಪೂಜಿಸಿ ಶ್ರೇಷ್ಠ ಕವಿಯಾದನು. ಕಾಳಿ ಮಂದಿರದ ಹತ್ತಿರ ಸ್ಥಿರ ಗಣೇಶ ಮಂದಿರವಿದೆ ಮತ್ತು ಅದರ ಎದುರು ಪ್ರಾಚೀನ ಹನುಮಾನ್ ಮಂದಿರವಿದೆ. ಸಮೀಪದಲ್ಲಿ ಶ್ರೀ ಮಹಾವಿಷ್ಣು, ಗೌರಭೈರವಮೂರ್ತಿ ಮತ್ತು ಮಹಾಶಾಸನ ವಿಗ್ರಹವಿದೆ.

6. ಭರ್ತ್ರಿಹರಿ ಗುಹೆ: ಭರ್ತ್ರಿಹರಿ ಗುಹೆ ಮತ್ತು ಅವನ ಸಮಾಧಿಯು ಮಹಾಕಾಳಿ ದೇವಸ್ಥಾನದಿಂದ ಎರಡು ಫರ್ಲಾಂಗ್ ದೂರದಲ್ಲಿದೆ. ಚಿಕ್ಕ ದಾರಿಯ ಮೂಲಕ ಗುಹೆಯನ್ನು ಪ್ರವೇಶಿಸಬೇಕು.

7. ಕಾಲಭೈರವ ಕ್ಷೇತ್ರ: ನಗರದಿಂದ 3ಮೈಲಿ ದೂರದಲ್ಲಿ ಶಿಪ್ರಾ ನದಿಯ ದಡದಲ್ಲಿರುವ ಬೆಟ್ಟದ ಮೇಲೆ ಕಾಲಭೈರವಾಲಯವಿದೆ.

8. ಸಿದ್ಧವತಂ: ಕಾಲಭೈರವ ಕ್ಷೇತ್ರದ ಪೂರ್ವ ಭಾಗದಲ್ಲಿರುವ ಶಿಪ್ರಾ ನದಿ ಯೋದ್ದವ ಸಿದ್ಧವತದ ಇನ್ನೊಂದು ಪ್ರಸಿದ್ಧ ಸ್ಥಳವಾಗಿದೆ. ವಟವೃಕ್ಷದ ಪ್ರಾರಂಭದಲ್ಲಿ ನಾಗಬಲಿ, ನಾರಾಯಣ ಬಲಿ ಇತ್ಯಾದಿಗಳನ್ನು ಅರ್ಪಿಸಿ ಸಿದ್ಧವತಾರವನ್ನು ಪೂಜಿಸುತ್ತಾರೆ.

9. ಸಾಂದೀಪನಿ ಆಶ್ರಮ: ಶ್ರೀಕೃಷ್ಣನು ತನ್ನ ಬಾಲ್ಯದಲ್ಲಿ ವಿದ್ಯಾಭ್ಯಾಸ ಮಾಡಿದ ಸ್ಥಳವೇ ಉಜ್ಜಯಿನಿ ಕ್ಷೇತ್ರ. ಉಜ್ಜಯಿನಿಯ ಸಾಂದೀಪನಿ ಮಹರ್ಷಿಗಳ ಆಶ್ರಮದಲ್ಲಿ ಶ್ರೀಕೃಷ್ಣನು ಕುಚೇಲನೊಂದಿಗೆ ಅಧ್ಯಯನ ಮಾಡಿದನು. ಗೋಪಾಲ ಮಂದಿರದಿಂದ ಎರಡು ಮೈಲಿ ದೂರದಲ್ಲಿ ಮಂಗಳನಾಧ ಕ್ಷೇತ್ರಕ್ಕೆ ಹೋಗುವ ದಾರಿಯಲ್ಲಿದೆ. ವಿಷ್ಣು ಸಾಗರ ಮತ್ತು ಪುರುಷೋತ್ತಮ ಸಾಗರ ಹತ್ತಿರದಲ್ಲಿದೆ. ಇದು ಚಿತ್ರಗುಪ್ತನ ಪ್ರಾಚೀನ ಸ್ಥಳದ ಸಮೀಪದಲ್ಲಿದೆ. ಸಾಂದೀಪನಿ ಆಶ್ರಮದಲ್ಲಿ ಕಾವಲ ಜನಾರ್ಧನ ಮಂದಿರವಿದೆ.

10. ಮಂಗಳನಾಧ ಕ್ಷೇತ್ರ: ಸಾಂದೀಪನಿ ಆಶ್ರಮವು ನಾಕಾವಲ ದಿಬ್ಬದ ಮೇಲೆ ಮಂಗಳನಾಧ ಮಂದಿರವನ್ನು ಹೊಂದಿದೆ. ಭೂದೇವಿಯ ಮಗನಾದ ಅಂಗಾರಕ (ಮಂಗಳ) ಇಲ್ಲಿ ಜನಿಸಿದನೆಂದು ಪುರಾಣಗಳು ಹೇಳುತ್ತವೆ. ಪ್ರತಿ ಮಂಗಳವಾರ ಇಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ.

11. ನಕ್ಷತ್ರ ವೇದಶಾಲಾ (ಯಂತ್ರ ಮಹಲ್): ಇದು ಈಗ ಶಿಪ್ರಾ ನದಿಯ ದಕ್ಷಿಣ ದಂಡೆಯಲ್ಲಿ ನಿರ್ಮಾಣ ಹಂತದಲ್ಲಿದೆ. ಈ ಯಂತ್ರಗಳಲ್ಲಿ ಕೆಲವು ಇಂದಿಗೂ ಬಳಕೆಯಲ್ಲಿವೆ.

ಮೇಲಿನ ಸ್ಥಳಗಳಲ್ಲದೆ ಇನ್ನೂ ಅನೇಕ ಶಿವ ದೇವಾಲಯಗಳು, ಶಕ್ತಿ ದೇವಾಲಯಗಳು, ತೀರ್ಥಧಾಮಗಳು, ಕಲ್ಯಾಣಿಗಳು ಭೈರವಾಲಯಗಳು ಇವೆ.

ಸ್ಕಂದ ಪುರಾಣದ ಪ್ರಕಾರ ಉಜ್ಜಯಿನಿಯು ಕ್ಷೇತ್ರಮಣಿ, ಮಹಾಶಶಾಶನಮಣಿ, ಮಹಾಕಾಲವನಮಣಿ, ಮೋಕ್ಷಪ್ರಮಣಿ ಎಂದು ಹೆಸರುವಾಸಿಯಾಗಿದೆ. ಏಕೆಂದರೆ ಇದು ಮರಣ ಹೊಂದಿದವರಿಗೆ ಮೋಕ್ಷ ನೀಡುವ ಅಂದರೆ ಮರುಜನ್ಮ ಪಡೆಯದ, ಪಾಪಗಳನ್ನು ನಾಶಮಾಡುವ ಕ್ಷೇತ್ರ ಎಂದು ಖ್ಯಾತ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮಾ ಮಾಹಿತಿ ನೀಡಿದ್ದಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.