ಪವಾಡಗಳಿಗೆ ಹೆಸರಾದ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ; ಚರ್ಮದ ಕಾಯಿಲೆ, ಕುಜದೋಷಕ್ಕೂ ಇಲ್ಲಿದೆ ಪರಿಹಾರ-indian temple sri swayambhu nagaraja balasubramanya swamy temple famous for remedy for kuja dosha skin allergy ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪವಾಡಗಳಿಗೆ ಹೆಸರಾದ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ; ಚರ್ಮದ ಕಾಯಿಲೆ, ಕುಜದೋಷಕ್ಕೂ ಇಲ್ಲಿದೆ ಪರಿಹಾರ

ಪವಾಡಗಳಿಗೆ ಹೆಸರಾದ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ; ಚರ್ಮದ ಕಾಯಿಲೆ, ಕುಜದೋಷಕ್ಕೂ ಇಲ್ಲಿದೆ ಪರಿಹಾರ

ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಾಕಷ್ಟು ಮಹಿಮೆಗೆ ಹೆಸರಾಗಿದೆ. ಈ ದೇವಸ್ಥಾನದಲ್ಲಿ ಇಂದಿಗೂ ನಾಗದೇವತೆ ವಾಸವಿದ್ದು ಇಲ್ಲಿ ಕುಜ ದೋಷ, ಚರ್ಮ ರೋಗ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ ಎಂಬ ನಂಬಿಕೆ ಇದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ಪವಾಡಗಳಿಗೆ ಹೆಸರಾದ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ; ಚರ್ಮದ ಕಾಯಿಲೆ, ಕುಜದೋಷಕ್ಕೂ ಇಲ್ಲಿದೆ ಪರಿಹಾರ
ಪವಾಡಗಳಿಗೆ ಹೆಸರಾದ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ; ಚರ್ಮದ ಕಾಯಿಲೆ, ಕುಜದೋಷಕ್ಕೂ ಇಲ್ಲಿದೆ ಪರಿಹಾರ (PC: instagram , sriswayambhunagaraja website)

ನಮ್ಮ ಸುತ್ತಮುತ್ತ ನಮಗೆ ತಿಳಿದಿರುವ ಎಷ್ಟೋ ಖ್ಯಾತ ದೇವಸ್ಥಾನಗಳ ಜೊತೆಗೆ ನಮಗೆ ಗೊತ್ತಿಲ್ಲದ, ಸಾಕಷ್ಟು ಮಹಿಮೆಗೆ ಹೆಸರಾದ ಅನೇಕ ದೇವಾಲಯಗಳಿವೆ. ಅವುಗಳಲ್ಲಿ ಬೆಂಗಳೂರು ಮೈಸೂರು ರಸ್ತೆಯಲ್ಲಿರುವ ಸ್ವಯಂ ಭೂ ನಾಗರಾಜ ಬಾಲಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಕೂಡಾ ಒಂದು. ಈ ದೇವಸ್ಥಾನ ತನ್ನದೇ ವೈಶಿಷ್ಟ್ಯಕ್ಕೆ ಹೆಸರಾಗಿದೆ. ಹಾಗೇ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಒಂದು ಕಥೆ ಕೂಡಾ ಪ್ರಚಲಿತದಲ್ಲಿದೆ.

1969 ಕಾಲಘಟ್ಟದ ಕಥೆ ಇದು. ಶ್ರೀ ಬಿ.ವೀರನಗೌಡ್ರು ಮತ್ತು ಶ್ರೀ ಮಂಡಿ ರುದ್ರಪ್ಪ ಅಪಾರ ದೈವಭಕ್ತರು. ಇವರ ಹೆಸರಲ್ಲಿ ದೊಡ್ಡ ಜಮೀನೊಂದಿತ್ತು. ಈ ಸ್ಥಳವು ಸಂಪೂರ್ಣವಾಗಿ ಕಲ್ಲುಗಳು, ಮರಗಳು ಮತ್ತು ಮುಳ್ಳಿನ ಗಿಡಗಳಿಂದ ಕೂಡಿತ್ತು. ಇದು ಗಾಢ ಅರಣ್ಯದಂತೆ ಕಾಣುತ್ತಿತ್ತು. ಆದ್ದರಿಂದ ಸುತ್ತಮುತ್ತಲಿನ ಯಾವ ಜನರು ಈ ಸ್ಥಳಕ್ಕೆ ಬರುತ್ತಿರಲಿಲ್ಲ. ಉಪಯೋಗವಿಲ್ಲದ ಈ ಜಮೀನನ್ನು ಮಾಲೀಕರು ಮಾರಾಟ ಮಾಡಲು ನಿರ್ಧರಿಸುತ್ತಾರೆ. ಆ ಜಮೀನನ್ನು ಸಮತಟ್ಟಾಗಿಸಿ ಮಾರಾಟ ಮಾಡುವಂತೆ ಆತ್ಮೀಯರು ಸಲಹೆ ನೀಡುತ್ತಾರೆ.

ಬಂಡೆಗಳ ಮಧ್ಯದಲ್ಲಿ ನೆಲೆಸಿರುವ ನಾಗ ದೇವತೆ

ಜನರ ಸಲಹೆಯಂತೆ ರುದ್ರಪ್ಪನವರು ಭೂಮಿಯನ್ನು ಸಮತಟ್ಟು ಮಾಡಲು ಪ್ರಾರಂಭಿಸುತ್ತಾರೆ. ಆದರೆ ಎಷ್ಟೇ ಕಷ್ಟಪಟ್ಟರೂ ಭೂಮಿಯನ್ನು ಸಮತಟ್ಟು ಮಾಡಲು ಸಾಧ್ಯವಾಗುವುದಿಲ್ಲ. ಕೊನೆಗೆ ಕೆಲಸಗಾರನನ್ನು ಕರೆದು ಜಮೀನಿನ ಮಧ್ಯದಲ್ಲಿದ್ದ ಒಂದು ದೊಡ್ಡ ಬಂಡೆಯನ್ನು ಪುಡಿ ಮಾಡುವಂತೆ ಸೂಚಿಸುತ್ತಾರೆ. ಕೆಲಸಗಾರನೊಬ್ಬ ದೊಡ್ಡ ಬಂಡೆಯ ಪಕ್ಕದಲ್ಲೇ ಮತ್ತೊಂದು ಚಿಕ್ಕ ಬಂಡೆ ಇರುವುದನ್ನು ನೋಡಿ ಅದನ್ನು ಒಡೆಯಲು ಪ್ರಯತ್ನಿಸುತ್ತಾನೆ. ಆದರೆ ಆತ ಇದ್ದಕ್ಕಿದ್ದಂತೆ ಪ್ರಜ್ಞೆ ತಪ್ಪಿ ಬೀಳುತ್ತಾನೆ. ಅಕ್ಕಪಕ್ಕದಲ್ಲಿ ಇರುವವರು ಆತನಿಗೆ ಪ್ರಥಮ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಸೇರಿಸುತ್ತಾರೆ.

ಈ ವಿಚಾರ ಸ್ವಲ್ಪ ಸಮಯದಲ್ಲೇ ಎಲ್ಲರಿಗೂ ತಿಳಿಯುತ್ತದೆ. ಇದು ಮಾಟ ಮಂತ್ರ ರುದ್ರ ಶಕ್ತಿಯ ಕಾರಣದಿಂದ ಹೀಗೆಲ್ಲಾ ಆಗುತ್ತಿದೆ ಎಂದೇ ಎಲ್ಲರೂ ತಿಳಿಯುತ್ತಾರೆ. ಆದರೆ ಕಲವೇ ಕೆಲವರು ಮಾತ್ರ ಇದು ದೈವಿಕ ಶಕ್ತಿ ಎಂದುಕೊಳ್ಳುತ್ತಾರೆ. ಈ ವಿಚಾರ ಕೊನೆಗೆ ಭೂಮಾಲೀಕರಿಗೂ ತಿಳಿಯುತ್ತದೆ. ಆದರೆ ಅವರು ಯಾವುದೇ ರೀತಿಯ ಅತೀಂದ್ರಿಯ ಶಕ್ತಿಗಳನ್ನು ನಂಬುವುದಿಲ್ಲ. ದಿನ ಕಳೆದಂತೆ ಈ ಘಟನೆಯ ಬಗ್ಗೆ ಅಕ್ಕಪಕ್ಕದ ಊರುಗಳಿಗೂ ತಿಳಿಯುತ್ತದೆ. ಎಲ್ಲರೂ . ಕುತೂಹಲದಿಂದ ಬಂಡೆಯನ್ನು ನೋಡಲು ಇಲ್ಲಿ ನೆರೆಯುತ್ತಾರೆ.

ಪವಾಡಗಳಿಗೆ ಹೆಸರಾದ ದೇವಸ್ಥಾನ

ಈ ಘಟನೆಯ ಬಗ್ಗೆ ಕುತೂಹಲದಿಂದ 18 ವರ್ಷದ ಕೂಲಿ ಕಾರ್ಮಿಕ ಮರುದಿನ ಆ ಬಡೆಯ ಮೇಲೆ ಹತ್ತಿ ನಿಲ್ಲುತ್ತಾನೆ. ಇದ್ದಕ್ಕಿದ್ದಂತೆ ಆತನಿಗೆ ತಾನು ಯಾವುದೋ ಜೀವಿಯ ಮೇಲೆ ನಿಂತಂತೆ ಭಾಸವಾಗುತ್ತದೆ. ತಕ್ಷಣವೇ ಅವನು ಕೆಳಗೆ ಬಿದ್ದು ಹಾವಿನಂತೆ ವರ್ತಿಸಲು ಆರಂಭಿಸುತ್ತಾನೆ. ಇದನ್ನು ಜನರು ನೋಡಿ ಆಶ್ಚರ್ಯ ವ್ಯಕ್ತಪಡಿಸುತ್ತಾರೆ. ನಾನು ಸುಮಾರು 145 ವರ್ಷಗಳಿಂದ ಇಲ್ಲಿ ವಾಸಿಸುತ್ತಿದ್ದೇನೆ. ನಾನು 9 ತಲೆ ನಾಗರ ಹಾವಿನ ರೂಪದಲ್ಲಿದ್ದೇನೆ. ನನ್ನ ನಿಜವಾದ ರೂಪವನ್ನು ಯಾರಿಂದಲೂ ನೋಡಲು ಸಾಧ್ಯವಿಲ್ಲ ಎನ್ನುತ್ತಾನೆ. ಜನರು ಆತನ ಮಾತನ್ನು ನಂಬುತ್ತಾರೆ.

ಈ ಘಟನೆ ನಂತರ ಜಮೀನಿನ ಮಾಲೀಕ ಮಂಡಿ ರುದ್ರಪ್ಪ ಅವರ ಮೊದಲ ಪತ್ನಿ ಮುನಿಲಕ್ಷ್ಮಮ್ಮ ಆ ಬಂಡೆಯನ್ನು ಭಕ್ತಿಯಿಂದ ಪೂಜಿಸುತ್ತಾರೆ. ಕ್ರಮೇಣ ಇಲ್ಲಿ ದೇವಸ್ಥಾನ ಕಟ್ಟಲಾಯಿತು. ಪ್ರತಿದಿನ ನೂರಾರು ಭಕ್ತರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇಂದಿಗೂ ಈ ದೇವಾಲಯದಲ್ಲಿ ಅನೇಕ ಪವಾಡಗಳು ನಡೆಯುತ್ತವೆ. ಈ ದೇವಸ್ಥಾನವು ಬೆಂಗಳೂರು-ಮೈಸೂರು ರೈಲ್ವೆ ಹಳಿಗೆ ಸಮೀಪದಲ್ಲಿದೆ, ಇದು ಜಗಜೀವರಾಮನಗರದ ಪಾದರಾಯನಪುರ ಲೇಔಟ್‌ನಲ್ಲಿದೆ. ಈ ದೇವಸ್ಥಾನದಲ್ಲಿ ಪೂಜೆ ಮಾಡಿಸಿದರೆ ಚರ್ಮದ ರೋಗಗಳು ಗುಣವಾಗುತ್ತದೆ. ಮದುವೆ ವಿಳಂಬ ಆಗುತ್ತಿದ್ದವರು ಇಲ್ಲಿ ಪೂಜೆ ಮಾಡಿಸಿದರೆ ಶೀಘ್ರವೇ ಮದುವೆ ನಿಶ್ಚಯವಾಗುತ್ತದೆ. ಕುಜದೋಷ ಸೇರಿದಂತೆ ಇನ್ನೂ ಅನೇಕ ಸಮಸ್ಯೆಗಳು ನಿವಾರಣೆ ಆಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.