ಈ ರಾಶಿಯವರು ಯಾವಾಗಲೂ ಇತರರಿಗೆ ಸ್ಫೂರ್ತಿಯಾಗಿರುತ್ತಾರೆ: ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕದ ಇವರ ಪಟ್ಟಿಯಲ್ಲಿ ನೀವು ಇದ್ದೀರಾ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಈ ರಾಶಿಯವರು ಯಾವಾಗಲೂ ಇತರರಿಗೆ ಸ್ಫೂರ್ತಿಯಾಗಿರುತ್ತಾರೆ: ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕದ ಇವರ ಪಟ್ಟಿಯಲ್ಲಿ ನೀವು ಇದ್ದೀರಾ

ಈ ರಾಶಿಯವರು ಯಾವಾಗಲೂ ಇತರರಿಗೆ ಸ್ಫೂರ್ತಿಯಾಗಿರುತ್ತಾರೆ: ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕದ ಇವರ ಪಟ್ಟಿಯಲ್ಲಿ ನೀವು ಇದ್ದೀರಾ

Inspires Zodiac Signs: ರಾಶಿಯ ಆಧಾರದ ಮೇಲೆ ಜನರ ಸ್ವಭಾವ ಮತ್ತು ವ್ಯಕ್ತಿತ್ವವನ್ನು ಹೇಳಬಹುದು. ಕೆಲವು ರಾಶಿಗೆ ಸೇರಿದವರು ಯಾವಾಗಲೂ ಇತರರಿಗೆ ಸ್ಫೂರ್ತಿಯನ್ನು ನೀಡುತ್ತಾರೆ. ಇತರರಿಗೆ ಸ್ಫೂರ್ತಿ ನೀಡುವ ರಾಶಿಗಳು ಯಾವುವು ಎಂದು ನೋಡೋಣ.

ಈ ರಾಶಿಯವರು ಯಾವಾಗಲೂ ಇತರರಿಗೆ ಸ್ಪೂರ್ತಿಯಾಗುತ್ತಾರೆ: ಇವುಗಳಲ್ಲಿ ನಿಮ್ಮ ರಾಶಿಯೂ ಸೇರಿದೆಯಾ ಎಂದು ಚೆಕ್‌ ಮಾಡಿ
ಈ ರಾಶಿಯವರು ಯಾವಾಗಲೂ ಇತರರಿಗೆ ಸ್ಪೂರ್ತಿಯಾಗುತ್ತಾರೆ: ಇವುಗಳಲ್ಲಿ ನಿಮ್ಮ ರಾಶಿಯೂ ಸೇರಿದೆಯಾ ಎಂದು ಚೆಕ್‌ ಮಾಡಿ (PC: HT File Photo)

ಜ್ಯೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳಿವೆ. ಆ ರಾಶಿಗಳ ಆಧಾರದ ಮೇಲೆ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಅಷ್ಟೇ ಅಲ್ಲದೇ ಜನರ ಸ್ವಭಾವ, ವ್ಯಕ್ತಿತ್ವ ಮತ್ತು ನಡೆನುಡಿಯಂತಹ ವಿಷಯಗಳನ್ನು ಹೇಳಬಹುದು. ಕೆಲವು ರಾಶಿಗೆ ಸೇರಿದ ಜನರು ಯಾವಾಗಲೂ ಇತರರಿಗೆ ಸ್ಫೂರ್ತಿಯಾಗಿರುತ್ತಾರೆ. ಮತ್ತೊಬ್ಬರ ಸಮಸ್ಯೆಗಳನ್ನು ನಿವಾರಿಸಲು ಸದಾ ತಯಾರಾಗಿರುತ್ತಾರೆ. ಬೇರೆಯವರ ಕನಸು, ಗುರಿಗಳಿಗೆ ಧನಾತ್ಮಕ ರೀತಿಯಲ್ಲಿ ಪ್ರೇರಣೆ ನೀಡುತ್ತಾರೆ. ಹಾಗಾದರೆ ಇತರರಿಗೆ ಸ್ಫೂರ್ತಿ ನೀಡುವ ರಾಶಿಗಳು ಯಾವುವು? ಅವರು ಯಾವ ರೀತಿಯಲ್ಲಿ ಸ್ಫೂರ್ತಿ ನೀಡುತ್ತಾರೆ ಎಂದು ತಿಳಿದುಕೊಳ್ಳೋಣ.

ಇತರರಿಗೆ ಸ್ಫೂರ್ತಿ ನೀಡುವ ರಾಶಿಗಳು

ಸಿಂಹ ರಾಶಿ

ಸಿಂಹ ರಾಶಿಯವರು ಹುಟ್ಟಿನಿಂದಲೇ ನಾಯಕತ್ವದ ಗುಣಗಳನ್ನು ಹೊಂದಿರುತ್ತಾರೆ. ಈ ರಾಶಿಯವರು ಯಾವಾಗಲೂ ಪ್ರಭಾವಶಾಲಿಗಳಾಗಿರುತ್ತಾರೆ. ಇತರರಿಗೆ ಸ್ಫೂರ್ತಿ ನೀಡುತ್ತಾರೆ. ಅವರ ವ್ಯಕ್ತಿತ್ವ ವಿಭಿನ್ನವಾಗಿರುತ್ತದೆ. ಆಕರ್ಷಕ ಸ್ವಭಾವಕ್ಕೆ ಹೆಸರುವಾಸಿಯಾಗಿರುತ್ತಾರೆ. ಈ ಸ್ವಭಾವವೇ ಆಗಾಗ್ಗೆ ಸುತ್ತಮುತ್ತಲಿನವರಿಗೆ ಸ್ಫೂರ್ತಿ ನೀಡುತ್ತದೆ. ಸವಾಲುಗಳನ್ನು ಎದುರಿಸಲು ಹಿಂದೇಟು ಹಾಕುವುದಿಲ್ಲ. ತೊಂದರೆಗಳನ್ನು ನಿವಾರಿಸಲು ಸ್ಫೂರ್ತಿಯ ಮಾತುಗಳನ್ನು ಹೇಳುತ್ತಾರೆ. ಪೂರ್ಣವಾಗಿ ಬೇರೆಯವರನ್ನು ನಂಬುತ್ತಾರೆ. ಇವರ ಗುರಿಗಳು ಇತರರಿಗೆ ಪ್ರೇರಣೆಯಾಗಿರುತ್ತವೆ. ಕನಸುಗಳ ಬಗ್ಗೆ ಇತರರು ಉತ್ಸುಕರಾಗುವಂತೆ ಮಾಡುತ್ತಾರೆ. ನಕಾರಾತ್ಮಕತೆಯನ್ನು ಧನಾತ್ಮಕವಾಗಿ ಪರಿವರ್ತಿಸುವುದು ಹೇಗೆ ಎಂದು ಇವರಿಗೆ ಚೆನ್ನಾಗಿ ತಿಳಿದಿರುತ್ತದೆ.

ಮೇಷ ರಾಶಿ

ಈ ರಾಶಿಯವರು ಕೂಡಾ ಇತರರಿಗೂ ಸ್ಫೂರ್ತಿ ನೀಡುತ್ತಾರೆ. ಮೇಷ ರಾಶಿಯವರು ತಮ್ಮ ಉತ್ಸಾಹ ಮತ್ತು ತಾವು ಮಾಡುವ ಎಲ್ಲಾ ಕೆಲಸದಲ್ಲೂ ಅತ್ಯುತ್ತಮರಾಗಬೇಕೆಂಬ ಬಯಕೆಯಿಂದ ಇತರರನ್ನು ಮೆಚ್ಚಿಸುತ್ತಾರೆ. ಇದು ಇತರರಿಗೆ ಸ್ಫೂರ್ತಿಯನ್ನ ನೀಡುತ್ತದೆ. ಯಾವುದೇ ಸವಾಲು ಎದುರಿಸಲು ಎಂದಿಗೂ ಅವರು ಹಿಂದೆ ಸರಿಯುವುದಿಲ್ಲ. ಇದು ಎಲ್ಲರನ್ನೂ ಮೆಚ್ಚಿಸುತ್ತದೆ. ಹಿನ್ನಡೆಗಳ ಹೊರತಾಗಿಯೂ ಗುರಿಗಳನ್ನು ಸಾಧಿಸುವುದು ಮತ್ತು ಕನಸುಗಳನ್ನು ನನಸಾಗಿಸಲು ಶ್ರಮಿಸುವುದು ಇತರರಿಗೆ ಸ್ಫೂರ್ತಿ ನೀಡುತ್ತದೆ. ಮೇಷ ರಾಶಿಯವರು ಕಠಿಣ ಸವಾಲುಗಳನ್ನು ಎದುರಿಸುವಷ್ಟು ಧೈರ್ಯಶಾಲಿಗಳಾಗಿರುತ್ತಾರೆ. ಇದು ಇತರರಿಗೂ ಆದರ್ಶವಾಗಿ ತೋರುತ್ತದೆ.

ಧನು ರಾಶಿ

ಧನು ರಾಶಿಯವರು ಸಾಹಸವನ್ನು ಇಷ್ಟಪಡುತ್ತಾರೆ. ಇವರಿಗೆ ಕುತೂಹಲ ಸ್ವಲ್ಪ ಹೆಚ್ಚಿರುತ್ತದೆ. ಸಾಹಸಕ್ಕಾಗಿ ಯಾವಾಗಲೂ ಎದುರುನೋಡುತ್ತಿರುತ್ತಾರೆ. ಧನು ರಾಶಿಯವರಿಗೆ ವಿಶೇಷ ಸಾಮರ್ಥ್ಯವಿದೆ. ಅವರು ಹೊಸ ಅನುಭವಗಳನ್ನು ಪಡೆಯಲು ಇತರರನ್ನು ಪ್ರೇರೇಪಿಸುತ್ತಾರೆ. ಯಾವಾಗಲೂ ಪ್ರಪಂಚದಲ್ಲಿರುವ ಬೇರೆ ಬೇರೆ ವಿಷಯಗಳ ಬಗ್ಗೆ ಕಲಿಯಲು ಪ್ರಯತ್ನಿಸುತ್ತಾರೆ. ಕಲಿಕೆ ಮತ್ತು ಬೆಳವಣಿಗೆಯನ್ನು ಎಂದಿಗೂ ನಿಲ್ಲಿಸದಂತೆ ಅವರು ಇತರರನ್ನು ಪ್ರೇರೇಪಿಸುತ್ತಾರೆ.

ಕುಂಭ ರಾಶಿ

ಕುಂಭ ರಾಶಿಯವರು ಹೆಚ್ಚು ಯೋಚಿಸುತ್ತಾರೆ. ಮುಂದಾಲೋಚನೆ ಇವರ ಸ್ವಭಾವವಾಗಿರುತ್ತದೆ. ಇತರರಿಗಿಂತ ತುಂಬಾ ಭಿನ್ನರು. ಬೇರೆಯವರನ್ನು ಪ್ರೇರೇಪಿಸಲು ಹೊಸ ಯೋಚನೆಗಳನ್ನು ಮಾಡುತ್ತಾರೆ. ಈ ಗುಣಗಳು ಇತರರಿಗೆ ಸ್ಫೂರ್ತಿ ನೀಡುತ್ತವೆ. ಅಲ್ಲದೆ, ಇವರು ಯಾವಾಗಲೂ ಇತರರಿಗೆ ಮಾದರಿಯಾಗಿ ನಿಲ್ಲುತ್ತಾರೆ. ಜಗತ್ತನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಯಾವಾಗಲೂ ಇತರರನ್ನು ಪ್ರೇರೇಪಿಸುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರು ಇತರರಿಗೆ ತುಂಬಾ ಶಾಂತಿಯುತವಾಗಿರಲು ಹೇಳುತ್ತಾರೆ. ಇವರ ಈ ರೀತಿಯ ಮಾತುಗಳು ಸಮತೋಲನದಿಂದಿರಲು ಸಹಾಯ ಮಾಡುತ್ತದೆ. ಈ ರಾಶಿಯವರು ಯಾವಾಗಲೂ ಎಲ್ಲರನ್ನೂ ಒಂದಾಗಿಸುತ್ತಾರೆ. ಒಗ್ಗಟ್ಟಾಗಿ ಇರುವ ಕಲೆಯನ್ನು ತಿಳಿದಿರುತ್ತಾರೆ. ಕಲೆ, ಸಂಗೀತ, ಪ್ರಕೃತಿ ಮತ್ತು ಸೌಂದರ್ಯದ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಾರೆ. ತಮ್ಮ ಕಣ್ಣುಗಳ ಮೂಲಕ ಜಗತ್ತನ್ನು ನೋಡುವ ಸೃಜನಶೀಲತೆಯನ್ನು ಹೊಂದಿರುತ್ತಾರೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.