ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Mars Jupiter Transit: 12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಗುರು ಕುಜ ಭೇಟಿ; ಈ 4 ರಾಶಿಯವರಿಗೆ ವೃದ್ಧಿಸಲಿದೆ ಸಂಪತ್ತು

Mars Jupiter Transit: 12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಗುರು ಕುಜ ಭೇಟಿ; ಈ 4 ರಾಶಿಯವರಿಗೆ ವೃದ್ಧಿಸಲಿದೆ ಸಂಪತ್ತು

Jupiter Mars Transit: ವೃಷಭ ರಾಶಿಯಲ್ಲಿರುವ ಮಂಗಳನು ಜುಲೈ 12 ರಂದು ಗುರುಗ್ರಹದ ಸಮೀಪ ಬರುತ್ತಾನೆ. ಸುಮಾರು 12 ವರ್ಷಗಳ ನಂತರ ಗುರು ಮತ್ತು ಮಂಗಳ ಸಂಯೋಜನೆ ಆಗುತ್ತಿದ್ದು 4 ರಾಶಿಯವರಿಗೆ ಬಹಳ ಅನುಕೂಲಗಳು ದೊರೆಯಲಿವೆ.

12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಗುರು ಕುಜ ಭೇಟಿ; ಈ 4 ರಾಶಿಯವರಿಗೆ ವೃದ್ಧಿಸಲಿದೆ ಸಂಪತ್ತು
12 ವರ್ಷಗಳ ನಂತರ ಒಂದೇ ರಾಶಿಯಲ್ಲಿ ಗುರು ಕುಜ ಭೇಟಿ; ಈ 4 ರಾಶಿಯವರಿಗೆ ವೃದ್ಧಿಸಲಿದೆ ಸಂಪತ್ತು

ಗುರು ಮಂಗಳ ಸಂಯೋಗ: ವೈದಿಕ ಜ್ಯೋತಿಷ್ಯದ ಪ್ರಕಾರ ಎಲ್ಲಾ ಗ್ರಹಗಳು ಒಂದು ನಿರ್ದಿಷ್ಟ ಸಮಯದ ನಂತರ ರಾಶಿಯನ್ನು ಬದಲಾಯಿಸುತ್ತವೆ. ಇದು ಮೇಷದಿಂದ ಮೀನದವರೆಗಿನ 12 ರಾಶಿಗಳ ಮೇಲೆ ಶುಭ ಮತ್ತು ಅಶುಭ ಪರಿಣಾಮಗಳನ್ನು ಬೀರುತ್ತದೆ.

ಮುಂದಿನ ತಿಂಗಳು ಅಂದರೆ ಜುಲೈನಲ್ಲಿ ಗುರು ಮತ್ತು ಮಂಗಳ ಗ್ರಹಗಳ ಸಂಯೋಜನೆ ಇರುತ್ತದೆ. ಈ ಕಾರಣದಿಂದಾಗಿ ಕೆಲವು ರಾಶಿಚಕ್ರದವರು ಬಹಳ ಶುಭ ಫಲಿತಾಂಶಗಳನ್ನು ಪಡೆಯುತ್ತಾರೆ. ದೃಕ್ ಪಂಚಾಂಗದ ಪ್ರಕಾರ ಮಂಗಳವು ಪ್ರಸ್ತುತ ಮೇಷ ರಾಶಿಯಲ್ಲಿ ಸಾಗುತ್ತಿದೆ. ಮತ್ತು ದೇವರ ಅಧಿಪತಿ ಎಂದು ಪರಿಗಣಿಸಲ್ಪಟ್ಟ ಗುರುವು ವೃಷಭ ರಾಶಿಯಲ್ಲಿದೆ. ಗುರುವು ವರ್ಷವಿಡೀ ಈ ರಾಶಿಯಲ್ಲಿಯೇ ಇರುತ್ತಾನೆ. ಅದೇ ಸಮಯದಲ್ಲಿ ಜುಲೈ 12, 2024 ರಂದು ರಾತ್ರಿ 07:12 ಕ್ಕೆ ವೃಷಭ ರಾಶಿಯಲ್ಲಿರುವ ಮಂಗಳವು ಗುರುಗ್ರಹದ ಸಮೀಪಕ್ಕೆ ಬರುತ್ತಾನೆ. ಸುಮಾರು 12 ವರ್ಷಗಳ ನಂತರ ಗುರು ಮತ್ತು ಮಂಗಳನ ಸಂಯೋಗವಾಗುತ್ತದೆ.

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ವೃಷಭ ರಾಶಿಯಲ್ಲಿ ಮಂಗಳ ಮತ್ತು ಗುರುಗಳ ಸಂಯೋಗದ ರಚನೆ ಕೆಲವು ರಾಶಿಗಳ ಜನರಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇವರಿಗೆ ಸಂಪತ್ತು ಹೆಚ್ಚಾಗಬಹುದು. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ವ್ಯಾಪಾರದ ಪರಿಸ್ಥಿತಿಯು ಬಲವಾಗಿರುತ್ತದೆ. ನಿಮ್ಮ ವೃತ್ತಿಜೀವನದಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ಗುರು ಮತ್ತು ಮಂಗಳ ಗ್ರಹಗಳ ಸಂಯೋಜನೆಯಿಂದ ಯಾವ ರಾಶಿಚಕ್ರದ ಚಿಹ್ನೆಗಳು ಅದೃಷ್ಟ ತರುತ್ತವೆ ನೋಡೋಣ.

ವೃಷಭ ರಾಶಿ

ಮಂಗಳ ಮತ್ತು ಗುರುಗಳ ಸಂಯೋಜನೆ ವೃಷಭ ರಾಶಿಯವರಿಗೆ ಬಹಳ ಪ್ರಯೋಜನ ನೀಡುತ್ತದೆ. ಮತ್ತೊಬ್ಬರ ಬಳಿ ಇದ್ದ ಹಣ ವಾಪಸ್ ಬರಲಿದೆ. ಪ್ರಮುಖ ಕೆಲಸಗಳಲ್ಲಿನ ಅಡೆತಡೆಗಳು ನಿವಾರಣೆಯಾಗುತ್ತವೆ. ಸಾಮಾಜಿಕ ಸ್ಥಾನಮಾನ ಮತ್ತು ಪ್ರತಿಷ್ಠೆ ಹೆಚ್ಚುತ್ತದೆ. ಆರ್ಥಿಕ ಅಂಶವು ಪ್ರಬಲವಾಗಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಕಷ್ಟು ಪ್ರಗತಿ ಸಾಧಿಸುವಿರಿ. ಈ ಸಮಯದಲ್ಲಿ ನೀವು ಶಕ್ತಿ ಮತ್ತು ಆತ್ಮವಿಶ್ವಾಸದಿಂದ ತುಂಬಲಿದ್ದೀರಿ. ದಿಢೀರ್‌ ಹಣ ಗಳಿಸುವ ಮಾರ್ಗಗಳು ದೊರೆಯುತ್ತದೆ.

ಸಿಂಹ ರಾಶಿ

ಮಂಗಳ ಮತ್ತು ಗುರುವಿ ಸಂಯೋಜನೆಯು ಸಿಂಹ ರಾಶಿಯವರಿಗೆ ಬಹಳ ಶುಭ. ಈ ಸಮಯದಲ್ಲಿ ನೀವು ಪ್ರಗತಿಗೆ ಅಸಂಖ್ಯಾತ ಅವಕಾಶಗಳನ್ನು ಪಡೆಯುತ್ತೀರಿ. ಬಹುಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಯಶಸ್ವಿಯಾಗುತ್ತವೆ. ಹೊಸ ಕೆಲಸ ದೊರೆಯುತ್ತದೆ. ತಂದೆಯೊಂದಿಗೆ ಉತ್ತಮ ಸಂಬಂಧ ಇರಲಿದೆ. ಉದ್ಯೋಗಿಗಳು ಬಡ್ತಿ ಪಡೆಯಲಿದ್ದಾರೆ. ಪೋಷಕರ ಸಹಾಯದಿಂದ ಹಣ ಸಂಪಾದಿಸಲು ಹಲವು ಅವಕಾಶಗಳಿವೆ. ವೃತ್ತಿ ಮತ್ತು ವ್ಯವಹಾರದಲ್ಲಿ ಅದೃಷ್ಟವು ನಿಮ್ಮನ್ನು ಸಂಪೂರ್ಣವಾಗಿ ಬೆಂಬಲಿಸುತ್ತದೆ.

ವೃಶ್ಚಿಕ ರಾಶಿ

ಮಂಗಳ ಮತ್ತು ಗುರು ಸಂಯೋಜನೆ ವೃಶ್ಚಿಕ ರಾಶಿಯವರಿಗೆ ಕೂಡಾ ಬಹಳ ಶುಭ ಫಲಿತಾಂಶಗಳನ್ನು ನೀಡುತ್ತವೆ. ಈ ಅವಧಿಯಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗುತ್ತವೆ. ಹಣಕಾಸಿನ ದಾರಿಗಳು ಸುಗಮವಾಗಿರುತ್ತದೆ. ವಿವಿಧ ಮೂಲಗಳಿಂದ ಆದಾಯ ಹರಿದು ಬರಲಿದೆ. ದಾಂಪತ್ಯ ಜೀವನದಲ್ಲಿ ಸುಖ ಸಂತೋಷ ನೆಲೆಸಿರುತ್ತದೆ. ಸಂಬಂಧಗಳು ಸುಧಾರಿಸಲಿವೆ. ಕುಟುಂಬ ಸದಸ್ಯರಿಂದ ಬೆಂಬಲ ದೊರೆಯುತ್ತದೆ. ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯಲಿದ್ದೀರಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.