Jupiter Transit 2025: ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Jupiter Transit 2025: ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ

Jupiter Transit 2025: ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ

Jupiter Transit 2025: ಹೊಸ ಕ್ಯಾಲೆಂಡರ್ ವರ್ಷದಲ್ಲಿ ಗುರು ಗ್ರಹವು ಮಿಥುನ ಮತ್ತು ಕರ್ಕಾಟಕ ರಾಶಿಯಲ್ಲಿ ಸಂಚರಿಸಲಿದ್ದು, ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ ಉಂಟಾಗಬಹುದು. ಆರ್ಥಿಕ ಲಾಭ, ಶುಭ ಸುದ್ದಿಗಳನ್ನು ನಿರೀಕ್ಷಿಸಬಹುದು.

ಹೊಸ ವರ್ಷ ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ ಉಂಟಾಗಬಹುದು.
ಹೊಸ ವರ್ಷ ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ ಉಂಟಾಗಬಹುದು.

Jupiter Transit 2025: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 2025ರಲ್ಲಿ ಗುರು ಗ್ರಹವು ತನ್ನ ರಾಶಿಚಕ್ರ ಚಿಹ್ನೆಯನ್ನು ಎರಡು ಬಾರಿ ಬದಲಾಯಿಸಲಿದೆ. ಗುರು ಗ್ರಹವು 2025ರ ಮೇ 14 ರಂದು ರಾತ್ರಿ 11.20ಕ್ಕೆ ಮಿಥುನ ರಾಶಿಯಲ್ಲಿ ಸಂಚಾರ ಶುರುಮಾಡಲಿದೆ. ಅದಾಗಿ ಅಕ್ಟೋಬರ್ 18 ರಂದು ಮಿಥುನ ರಾಶಿ ಸಂಚಾರ ಮುಗಿಸಿ ಕರ್ಕಾಟಕ ರಾಶಿಗೆ ಪ್ರವೇಶಿಸಲಿದೆ. ಮುಂದೆ ಡಿಸೆಂಬರ್ 5 ರಂದು ಮತ್ತೆ ಮಿಥುನ ರಾಶಿಗೆ ಮರಳಲಿದೆ. ಹೊಸ ಕ್ಯಾಲೆಂಡರ್ ವರ್ಷದಲ್ಲಿ ಗುರು ಗ್ರಹವು ಮೂರು ಬಾರಿ ರಾಶಿ ಚಕ್ರ ಚಿಹ್ನ ಬದಲಿಸಿ ಸಂಚಾರ ಮುಂದುವರಿಸಲಿದೆ. ಹಿಂದೂ ಸಮುದಾಯದವರು ನವಗ್ರಹಗಳನ್ನು ದೇವರ ರೂಪಗಳೆಂದು ತಿಳಿಯುವ ಕಾರಣ ಗುರು ಅಂದರೆ ಬೃಹಸ್ಮತಿ. ಹೀಗಾಗಿ ಗುರುವಿನ ಸಂಚಾರದ ಕಾರಣ 2025ರ ಕ್ಯಾಲೆಂಡರ್ ವರ್ಷದಲ್ಲಿ ಯಾವ ರಾಶಿ ಚಕ್ರದವರಿಗೆ ಶುಭ ಫಲ ಎಂಬುದನ್ನು ತಿಳಿಯೋಣ.

ಗುರು ಸಂಚಾರ 2025; ಮಿಥುನ, ಕರ್ಕಾಟಕ ರಾಶಿಯಲ್ಲಿ ಗುರು ಸಂಚಾರದಿಂದ ಈ 6 ರಾಶಿಚಕ್ರದವರಿಗೆ ಭರ್ಜರಿ ಪ್ರಯೋಜನ

1) ಮೇಷ ರಾಶಿ: ಈ ರಾಶಿಚಕ್ರ ಚಿಹ್ನೆಗೆ, ಗುರುವಿನ ರಾಶಿಚಕ್ರ ಚಿಹ್ನೆಯು ಶುಭದಾಯಕವಾಗಿದ್ದು, ಅದೃಷ್ಟ ಜೊತೆಗೂಡುತ್ತದೆ. ಪ್ರಯಾಣದಲ್ಲಿ ಲಾಭ ನಿರೀಕ್ಷಿಸಬಹುದು. ಉದ್ಯಮಿಗಳು ವ್ಯವಹಾರದಲ್ಲಿ ಲಾಭ ಪಡೆಯುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಈ ರಾಶಿಯವರು ಪ್ರೇಮಿಗಳಾಗಿದ್ದರೆ ಅವರ ಪ್ರೇಮ ಜೀವನದ ಪರಿಸ್ಥಿತಿ ಸುಧಾರಿಸಬಹುದು. ನಿಮ್ಮ ಸಂಗಾತಿಯ ಬೆಂಬಲವನ್ನು ಪಡೆಯುವ ಸಾಧ್ಯತೆ ಇದೆ.

2) ವೃಷಭ ರಾಶಿ: ವೃಷಭ ರಾಶಿಯವರಿಗೆ ಗುರು ಸಂಚಾರದಿಂದ ಶುಭ ಫಲವೇ ಹೆಚ್ಚು ಸಿಗಬಹುದು. ಸಾಮಾಜಿಕವಾಗಿ ಗೌರವ, ಪ್ರತಿಷ್ಠೆಗಳು ಹೆಚ್ಚಾಗಬಹುದು. ಆರ್ಥಿಕ ಪುರೋಗತಿಗೆ ಅವಕಾಶಗಳಿವೆ. ಜಮೀನು, ಕಟ್ಟಡ, ವಾಹನ ಖರೀದಿ ವಹಿವಾಟು ನಡೆಸುವ ಸಾಧ್ಯತೆಗಳೂ ಇವೆ. ವ್ಯವಹಾರದಲ್ಲಿ ಲಾಭ, ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಉದ್ಯೋಗ ಕ್ಷೇತ್ರದಲ್ಲಿ ಉನ್ನತಿ ಗೋಚರಿಸಬಹುದು. ಬಹಳ ಆತ್ಮವಿಶ್ವಾಸದಿಂದ ಕೆಲಸ ಮಾಡುವಿರಿ. ಆರೋಗ್ಯದ ವಿಚಾರದಲ್ಲಿ ಕೊಂಚ ಎಚ್ಚರ ಬೇಕು.

3) ಮಿಥುನ ರಾಶಿ: ಗುರು ಸಂಕ್ರಮಣವು ಈ ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ಉಂಟುಮಾಡಬಹುದು. ಕೆಲಸದ ಸ್ಥಳದಲ್ಲಿ ದೊಡ್ಡ ಯೋಜನೆಯ ಹೊಣೆಗಾರಿಕೆಯು ಈ ರಾಶಿಯವರ ಹೆಗಲೇರುವ ಸಾಧ್ಯತೆ ಇದೆ. ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಕೇಳುವಿರಿ. ಆರೋಗ್ಯವು ಮೊದಲಿಗಿಂತ ಉತ್ತಮವಾಗಿರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ.

4) ಸಿಂಹ ರಾಶಿ: ಗುರುವಿನ ಆಶೀರ್ವಾದದಿಂದ ವ್ಯಾಪಾರಿಗಳಿಗೆ ಉತ್ತಮ ಲಾಭ, ಉದ್ಯಮಿಗಳಿಗೆ ಉತ್ತಮ ಲಾಭ, ಪ್ರಯೋಜನಗಳನ್ನು ನಿರೀಕ್ಷಿಸಬಹುದು. ಅದೇ ರೀತಿ, ಉದ್ಯೋಗ ಪರಿಸ್ಥಿತಿಗಳು ಉತ್ತಮವಾಗಿರಲಿದೆ. ಇನ್ನು ಈ ರಾಶಿಯವರ ಉತ್ತಮ ಗುಣಗಳು ಗಮನಸೆಳೆಯಲಿವೆ. ಹಾಗೆಯೇ, ಜ್ಞಾನ ವೃದ್ಧಿಗೆ ಅವಕಾಶವಿದೆ. ಉತ್ತಮ ಹೂಡಿಕೆ ಅವಕಾಶಗಳು ಕೂಡ ಎದುರಾಗುತ್ತವೆ ಮತ್ತು ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ.

5) ಕನ್ಯಾ ರಾಶಿ: ಗುರು ಸಂಚಾರವು ಕನ್ಯಾ ರಾಶಿಯವರಿಗೆ ಅದೃಷ್ಟವನ್ನು ತರುತ್ತದೆ. ಹೊಸ ವರ್ಷದಲ್ಲಿ, ಅಂದರೆ 2025ರಲ್ಲಿ ಈ ರಾಶಿ ಚಕ್ರದಲ್ಲಿ ಜನಿಸಿದ ಉದ್ಯೋಗಿಗಳು ಪ್ರಮುಖ ಕಾರ್ಯಗಳಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆ ಇದೆ. ನೀವು ಉತ್ತಮ ಉದ್ಯೋಗಾವಕಾಶಗಳನ್ನು ಪಡೆಯುವ ಸಾಧ್ಯತೆ ಇದೆ. ನಿಮ್ಮ ವ್ಯವಹಾರವೂ ಉತ್ತಮವಾಗಿರಬಹುದು. ನಿಮ್ಮ ಆರೋಗ್ಯವು ಉತ್ತಮವಾಗಿರಬಹುದು. ನೀವು ಒಳ್ಳೆಯ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ.

6) ಕುಂಭ ರಾಶಿ: ಹೊಸ ವರ್ಷ ಅಂದರೆ 2025ರಲ್ಲಿ ಗುರು ಸಂಚಾರದ ಕಾರಣ, ಈ ರಾಶಿಯವರ ಬಾಳಿನಲ್ಲಿ ಆರ್ಥಿಕ ಲಾಭವನ್ನು ನಿರೀಕ್ಷಿಸುವಂತೆ ಮಾಡಿದೆ. ಹಣಕಾಸು ಸ್ಥಿತಿ ಸುಧಾರಿಸಬಹುದು. ಗೌರವ ಕೂಡ ಹೆಚ್ಚಾಗಬಹುದು. ಧಾರ್ಮಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶಗಳು ಎದುರಾಗುತ್ತವೆ. ಮಾನಸಿಕ ಆರೋಗ್ಯ ಸುಧಾರಣೆಯಾಗಲಿದ್ದು, ಆತ್ಮವಿಶ್ವಾಸ ಹೆಚ್ಚಾಗಬಹುದು. ವ್ಯವಹಾರದಲ್ಲಿ ಯಶಸ್ಸು ಪಡೆಯಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner