ಕನ್ನಡ ಸುದ್ದಿ  /  Astrology  /  Jupiter Transit In Aries Till October 8th Leo Cancer Sagittarius Sign People Get Golden Days Horoscope In Kannada Rsm

Jupiter Transit: ಮೇಷ ರಾಶಿಯಲ್ಲಿ ಗುರು ಸಂಚಾರ; ಅಕ್ಟೋಬರ್‌ 8ವರೆಗೆ ಈ ರಾಶಿಯವರಿಗೆ ಸಕಲ ಮಂಗಳ ನೀಡಲಿದ್ದಾನೆ ಬೃಹಸ್ಪತಿ

Jupiter Transit: ಗುರುವು ಮೇಷ ರಾಶಿಯಲ್ಲಿ ನೇರ ಸಂಚಾರ ಮಾಡಲಿದ್ದು, ಅಕ್ಟೋಬರ್‌ 8ವರೆಗೆ ಮೂರು ರಾಶಿಯವರಿಗೆ ಸಕಲ ಶುಭ ಫಲಗಳನ್ನು ನೀಡುತ್ತಿದ್ದಾನೆ. ಯಾವೆಲ್ಲಾ ರಾಶಿಯವರು ಏನು ಫಲ ಗಳಿಸಲಿದ್ದಾರೆ ನೋಡೋಣ.

ಅಕ್ಟೋಬರ್‌ 8ವರೆಗೂ ಮೇಷ ರಾಶಿಯಲ್ಲಿ ನೇರ ಸಂಚಾರ ಮಾಡುವ ಗುರು
ಅಕ್ಟೋಬರ್‌ 8ವರೆಗೂ ಮೇಷ ರಾಶಿಯಲ್ಲಿ ನೇರ ಸಂಚಾರ ಮಾಡುವ ಗುರು

Jupiter Transit: ಮನುಷ್ಯನ ಜೀವನದಲ್ಲಿ ಪ್ರತಿಯೊಂದು ಗ್ರಹಗಳು ಪ್ರಮುಖ ಪಾತ್ರ ವಹಿಸುತ್ತದೆ. ತಪ್ಪು ಮಾಡಿದವರಿಗೆ ಶನಿಯು ಶಿಕ್ಷೆ ನೀಡುವಂತೆಯೇ, ಗುರುವು ಜನರಿಗೆ ಅದೃಷ್ಟ ಹೊತ್ತು ತರುತ್ತಾನೆ. ಗುರು ಬಲ ಇರುವ ಜನರು ಜೀವನದಲ್ಲಿ ಸುಖ, ಸಂತೋಷ ನೆಮ್ಮದಿ ಗಳಿಸುತ್ತಾರೆ.

ಗುರುವು ಸದ್ಯಕ್ಕೆ ಮೇಷ ರಾಶಿಯಲ್ಲಿ ನೇರ ಸಂಚರಿಸುತ್ತಿದ್ದಾನೆ. ಗುರುಗ್ರಹದ ಈ ನೇರ ಚಲನೆಯು ಕೆಲವು ರಾಶಿಯವರಿಗೆ ಬಹಳ ಒಳ್ಳೆಯ ಫಲಗಳನ್ನು ನೀಡುತ್ತಿದ್ದಾನೆ. ಅದರಲ್ಲಿ ನೀವೂ , ನಿಮ್ಮವರೂ ಸೇರಿದ್ದಾರಾ ಒಮ್ಮೆ ನೋಡಿ.

ಕಳೆದ ವರ್ಷ, ಅಂದರೆ 31 ಡಿಸೆಂಬರ್ 2023 ರಂದು ಗುರುವು ಮೇಷ ರಾಶಿಯಲ್ಲಿ ನೇರ ಸಂಚಾರ ಆರಂಭಿಸಿದ್ದಾನೆ. ಶೀಘ್ರದಲ್ಲೇ ಗುರುವು ಮೇ ತಿಂಗಳ ಆರಂಭದಲ್ಲಿ ಮೇಷ ರಾಶಿಯಿಂದ ವೃಷಭ ರಾಶಿಗೆ ಪ್ರಯಾಣಿಸುತ್ತಾನೆ. ಅಕ್ಟೋಬರ್ ತಿಂಗಳಲ್ಲಿ, ಗುರುವು ನೇರ ಸ್ಥಾನದಿಂದ ಹಿಮ್ಮುಖಕ್ಕೆ ಸಾಗಲಿದ್ದಾನೆ. ಗುರುವಿನ ಈ ಸಂಚಾರದಿಂದ ಕೆಲವು ರಾಶಿಯವರ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ಜೀವನದಲ್ಲಿ ಸುಖ ಸಂತೋಷ ನೆಮ್ಮದಿ ಮಾತ್ರ ನೆಲೆಸಿರುತ್ತದೆ. ಇದುವರೆಗೂ ಅರ್ಧಕ್ಕೆ ನಿಂತಿದ್ದ ನಿಮ್ಮ ಕೆಲಸಗಳು ಪೂರ್ಣಗೊಳ್ಳುತ್ತದೆ.

ಸಿಂಹ ರಾಶಿ

ಗುರುಗ್ರಹದ ನೇರ ಸಂಚಾರದಿಂದ ಸಿಂಹ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿವೆ. ನಿಮ್ಮ ಆತ್ಮವಿಶ್ವಾಸ ಹೆಚ್ಚುತ್ತದೆ. ವೃತ್ತಿ ಜೀವನದಲ್ಲಿ ನೀವು ಮಾಡಿದ ಕಠಿಣ ಪರಿಶ್ರಮಕ್ಕೆ ಯಶಸ್ಸು ದೊರೆಯುವ ಸಾಧ್ಯತೆ ಹೆಚ್ಚಾಗಿದೆ. ಉದ್ಯೋಗ ಮಾಡುವವರು ಗುರುವಿನ ಕೃಪೆಯಿಂದ ತಮ್ಮ ಶ್ರಮದ ಫಲವನ್ನು ಪಡೆಯುತ್ತಾರೆ. ನಿಮ್ಮ ಕೆಲಸವನ್ನು ಪ್ರಶಂಸಿಸಲಾಗುತ್ತದೆ ಮತ್ತು ನೀವು ಕೆಲವು ದೊಡ್ಡ ಜವಾಬ್ದಾರಿಯನ್ನು ಸಹ ಪಡೆಯಬಹುದು. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಯಶಸ್ವಿಯಾಗುತ್ತಾರೆ. ವಿವಿಧ ಮೂಲಗಳಿಂದ ನಿಮಗೆ ಹಣದ ಹರಿವು ಹೆಚ್ಚಾಗಲಿದೆ.

ಕರ್ಕಾಟಕ ರಾಶಿ

ಗುರುಗ್ರಹದ ನೇರ ಸಂಚಾರವು ಕರ್ಕಾಟಕ ರಾಶಿಯವರಿಗೆ ಶುಭಫಲಗಳನ್ನು ನೀಡಲಿದೆ. ವೃತ್ತಿಯಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಸೃಜನಶೀಲ ಚಟುವಟಿಕೆಗಳಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ. ಕೆಲಸದ ಸ್ಥಳದಲ್ಲಿ ನೀವು ಸಹೋದ್ಯೋಗಿಗಳು ಮತ್ತು ಸ್ನೇಹಿತರಿಂದ ಬೆಂಬಲವನ್ನು ಪಡೆಯುತ್ತೀರಿ. ಇದರೊಂದಿಗೆ, ಹಲವಾರು ಕಾರ್ಯಗಳನ್ನು ಪೂರ್ಣಗೊಳಿಸುವ ಮೂಲಕ, ನೀವು ಸಾಮಾಜಿಕ ಕ್ಷೇತ್ರದಲ್ಲೂ ಗೌರವ ಮತ್ತು ಮನ್ನಣೆ ಪಡೆಯಲಿದ್ದೀರಿ.

ಧನು ರಾಶಿ

ಧನು ರಾಶಿಯವರಿಗೆ ಗುರುಗ್ರಹದ ನೇರ ಚಲನೆಯನ್ನು ಬಹಳ ಮಂಗಳಕರವಾಗಿದೆ. ಜೀವನದಲ್ಲಿ ನಡೆಯುತ್ತಿರುವ ತೊಂದರೆಗಳು ಕ್ರಮೇಣ ದೂರವಾಗಲು ಪ್ರಾರಂಭಿಸುತ್ತವೆ. ಇತರ ಜನರ ಮೇಲೆ ನೀವು ಬಹಳ ಪ್ರಭಾವ ಬೀರಲಿದ್ದೀರಿ. ಜನರನ್ನು ಆಕರ್ಷಿಸುವ ಸಾಮರ್ಥ್ಯ ನಿಮ್ಮದಾಗುತ್ತದೆ. ಜನಸಂದಣಿಯಿಂದ ಭಿನ್ನವಾಗಿ ಯೋಚಿಸಿ ನಾಯಕತ್ವದತ್ತ ಹೆಜ್ಜೆ ಹಾಕುವಿರಿ. ದೂರ ಪ್ರಯಾಣದ ಸಾಧ್ಯತೆಯೂ ಇದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.