ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ಆದಾಯ, ಕಂಕಣ ಭಾಗ್ಯ ಕರುಣಿಸಲಿದ್ದಾನೆ ಬೃಹಸ್ಪತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ಆದಾಯ, ಕಂಕಣ ಭಾಗ್ಯ ಕರುಣಿಸಲಿದ್ದಾನೆ ಬೃಹಸ್ಪತಿ

ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ಆದಾಯ, ಕಂಕಣ ಭಾಗ್ಯ ಕರುಣಿಸಲಿದ್ದಾನೆ ಬೃಹಸ್ಪತಿ

Jupiter Transit: ಗುರುವು ಶೀಘ್ರದಲ್ಲೇ ತನ್ನ ರಾಶಿಯನ್ನು ಬದಲಿಸುತ್ತಿದ್ದು ಇದು ದ್ವಾದಶ ರಾಶಿಗಳಿಗೆ ವಿವಿಧ ಫಲಗಳನ್ನು ನೀಡಲಿದೆ. ಜೂನ್‌ 13 ರಂದು ಗುರು ರೋಹಿಣಿ ನಕ್ಷತ್ರಕ್ಕೆ ಸಂಚರಿಸುತ್ತಿದ್ದು ಮೇಷ ಸೇರಿದಂತೆ 4 ರಾಶಿಯವರಿಗೆ ಬೃಹಸ್ಪತಿ ಉತ್ತಮ ಫಲಗಳನ್ನು ನೀಡಲಿದ್ದಾನೆ.

ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ಆದಾಯ, ಕಂಕಣ ಭಾಗ್ಯ ಕರುಣಿಸಲಿದ್ದಾನೆ ಬೃಹಸ್ಪತಿ
ರೋಹಿಣಿ ನಕ್ಷತ್ರಕ್ಕೆ ಗುರು ಪ್ರವೇಶ; ಮೇಷ ಸೇರಿದಂತೆ ಈ 3 ರಾಶಿಯವರಿಗೆ ಆದಾಯ, ಕಂಕಣ ಭಾಗ್ಯ ಕರುಣಿಸಲಿದ್ದಾನೆ ಬೃಹಸ್ಪತಿ

ಗುರು ಸಂಕ್ರಮಣ: ಸುಮಾರು 12 ವರ್ಷಗಳ ನಂತರ ಗುರುವು ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಿರುವ ಗುರುವು 2024 ಮುಗಿಯುವವರೆಗೂ ಅದೇ ರಾಶಿಯಲ್ಲಿ ನೆಲೆಸಿರುತ್ತಾನೆ. ಆದರೆ ಈ ವರ್ಷ ಗುರು ತನ್ನ ನಕ್ಷತ್ರವನ್ನು ಒಟ್ಟು ನಾಲ್ಕು ಬಾರಿ ಬದಲಾಯಿಸುತ್ತಾನೆ. ಇದು ಮೇಷದಿಂದ ಮೀನ ರಾಶಿಯವರಿಗೆ ಶುಭ ಮತ್ತು ಅಶುಭ ಪರಿಣಾಮಗಳನ್ನು ನೀಡುತ್ತದೆ.

ಹಿಂದೂ ಕ್ಯಾಲೆಂಡರ್ ಪ್ರಕಾರ ಜೂನ್ 13 ರಂದು ಗುರು ರೋಹಿಣಿ ನಕ್ಷತ್ರವನ್ನು ಪ್ರವೇಶಿಸುತ್ತಾನೆ. ಆಗಸ್ಟ್ 20ರವರೆಗೆ ಈ ನಕ್ಷತ್ರದಲ್ಲಿ ಸಂಚರಿಸಲಿದ್ದಾರೆ. ಗುರು ರೋಹಿಣಿ ನಕ್ಷತ್ರ ಬದಲಾಗುವುದು ಕೆಲವು ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ರೋಹಿಣಿ ನಕ್ಷತ್ರದ ಅಧಿಪತಿ ಚಂದ್ರ. ಈ ನಕ್ಷತ್ರದಲ್ಲಿ ಜನಿಸಿದವರು ಹೆಚ್ಚಿನ ಮಾನಸಿಕ ಸ್ಥಿರತೆಯನ್ನು ಹೊಂದಿರುತ್ತಾರೆ. ಅತ್ಯುತ್ತಮ ಬುದ್ಧಿವಂತಿಕೆ ಹೊಂದಿರುತ್ತಾರೆ. ಅವರ ಮಾತುಗಳಿಂದ ಇತರರನ್ನು ಆಕರ್ಷಿಸುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ಯಾವುದೇ ಟೀಕೆಗಳನ್ನು ಎದುರಿಸಿ, ಬಯಸಿದ್ದನ್ನು ಸಾಧಿಸುವ ಮನಸ್ಥಿತಿಯನ್ನು ಹೊಂದಿರುತ್ತಾರೆ. ಅಂತಹ ನಕ್ಷತ್ರದಲ್ಲಿ ಶುಭ ಗ್ರಹವೆಂದು ಪರಿಗಣಿಸಲ್ಪಟ್ಟಿರುವ ಗುರುವಿನ ಆಗಮನವು ಅನೇಕ ಶುಭ ಫಲಗಳನ್ನು ನೀಡುತ್ತದೆ.

ಗುರುವು ರೋಹಿಣಿ ನಕ್ಷತ್ರಕ್ಕೆ ಸಂಚರಿಸುವುದರಿಂದ ಸಂತೋಷ ಮತ್ತು ಅದೃಷ್ಟ ಹೆಚ್ಚಾಗುತ್ತದೆ. ಹೊಸ ಆದಾಯ ಮಾರ್ಗಗಳು ಲಾಭ ತರುತ್ತವೆ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ಪ್ರತಿಯೊಂದು ಕಾರ್ಯವು ನಿರೀಕ್ಷಿತ ಫಲಿತಾಂಶವನ್ನು ನೀಡುತ್ತದೆ. ಗುರುವಿನ ಸಂಚಾರವು ಯಾವ ರಾಶಿಚಕ್ರದವರಿಗೆ ಏನು ಫಲಿತಾಂಶ ದೊರೆಯಲಿದೆ ನೋಡೋಣ.

ಮೇಷ ರಾಶಿ

ಮೇಷ ರಾಶಿಯವರಿಗೆ ಗುರು ನಕ್ಷತ್ರ ಸಂಚಾರದಿಂದ ಉತ್ತಮ ಫಲಿತಾಂಶ ಸಿಗುತ್ತದೆ . ಭೂಮಿ ಅಥವಾ ವಾಹನ ಖರೀದಿಗೆ ಇದು ಹೊಸ ಅವಕಾಶ. ಹೊಸ ಆದಾಯದ ಮೂಲಗಳ ಮೂಲಕ ಹಣ ಸಂಪಾದಿಸಲಿದ್ದೀರಿ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪಾರ ಲಾಭಗಳಿವೆ. ಸಂಪತ್ತು ಹೆಚ್ಚಾಗುವ ಸಾಧ್ಯತೆಗಳಿವೆ. ನ್ಯಾಯಾಲಯದ ಪ್ರಕರಣಗಳಿಂದ ಮುಕ್ತಿ ಸಿಗುತ್ತದೆ. ನಿಮ್ಮ ಮನಸ್ಸಿಗೆ ಸಾಂತ್ವನ ನೀಡುವ ಒಳ್ಳೆಯ ಸುದ್ದಿಯನ್ನು ಮಕ್ಕಳು ನೀಡುತ್ತಾರೆ. ನೀವು ಭೌತಿಕ ಸೌಕರ್ಯಗಳೊಂದಿಗೆ ನಿಮ್ಮ ಜೀವನವನ್ನು ಸಂತೋಷದಿಂದ ಕಳೆಯುತ್ತೀರಿ.

ಕರ್ಕಾಟಕ ರಾಶಿ

ಗುರು, ನಕ್ಷತ್ರ ಬದಲಾವಣೆಯಿಂದ ಕರ್ಕಾಟಕ ರಾಶಿಯವರಿಗೆ ಅನಿರೀಕ್ಷಿತ ಲಾಭ ಇದೆ. ಹೊಸ ಆದಾಯ ಮಾರ್ಗಗಳು ಸೃಷ್ಟಿಯಾಗಲಿವೆ. ಉದ್ಯೋಗ ವ್ಯವಹಾರಗಳಲ್ಲಿ ಅನುಕೂಲಕರ ವಾತಾವರಣವಿರುತ್ತದೆ. ಮನಸ್ಸು ಶಾಂತವಾಗಿರುತ್ತದೆ. ಬಹಳ ದಿನಗಳಿಂದ ಉಂಟಾಗಿದ್ದ ಅಡೆತಡೆಗಳು ನಿವಾರಣೆಯಾಗುತ್ತವೆ. ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹಣಕಾಸಿಗೆ ಸಂಬಂಧಿಸಿದ ಸಮಸ್ಯೆಗಳು ದೂರವಾಗುತ್ತವೆ. ವ್ಯಾಪಾರದಲ್ಲಿ ಉತ್ತಮ ಲಾಭ ದೊರೆಯಲಿದೆ. ವ್ಯಾಪಾರಸ್ಥರು ಹೊಸ ವ್ಯವಹಾರಗಳನ್ನು ಮಾಡುವ ಮೂಲಕ ಅಭಿವೃದ್ಧಿ ಹೊಂದುತ್ತಾರೆ.

ತುಲಾ ರಾಶಿ

ರೋಹಿಣಿ ನಕ್ಷತ್ರಕ್ಕೆ ಗುರು ಸಂಕ್ರಮಿಸುವುದರಿಂದ ತುಲಾ ರಾಶಿಯವರಿಗೆ ಲಾಭವಾಗಲಿದೆ. ಅವರು ಎಲ್ಲಾ ಕ್ಷೇತ್ರಗಳಲ್ಲಿ ಉತ್ತಮ ಯಶಸ್ಸನ್ನು ಸಾಧಿಸುತ್ತಾರೆ. ಸಾಮಾಜಿಕ ಪ್ರತಿಷ್ಠೆ ಹೆಚ್ಚುತ್ತದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆಗಳು ದೂರವಾಗುತ್ತವೆ. ಇತರರೊಂದಿಗೆ ನಿಮ್ಮ ಸಂಬಂಧಗಳು ಸುಧಾರಿಸುತ್ತವೆ. ಒಡಹುಟ್ಟಿದವರೊಂದಿಗಿನ ಸಂಬಂಧಗಳು ಗಟ್ಟಿಯಾಗುತ್ತವೆ. ಶುಭ ಗ್ರಹ ಗುರುವಿನ ಅನುಗ್ರಹದಿಂದ, ಒಂಟಿಯಾಗಿರುವ ತುಲಾ ರಾಶಿಯವರಿಗೆ ಕಂಕಣ ಭಾಗ್ಯ ಕೈಗೂಡುವ ಸಾಧ್ಯತೆಯಿದೆ

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.