Jupiter Transit: ಗುರುವಿನ ರಾಶಿ ಬದಲಾವಣೆ; ಅಗ್ನಿ, ವಾಯು, ಜಲ, ಪೃಥ್ವಿಗೆ ಸಂಬಂಧಿಸಿದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Jupiter Transit: ಗುರುವಿನ ರಾಶಿ ಬದಲಾವಣೆ; ಅಗ್ನಿ, ವಾಯು, ಜಲ, ಪೃಥ್ವಿಗೆ ಸಂಬಂಧಿಸಿದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ?

Jupiter Transit: ಗುರುವಿನ ರಾಶಿ ಬದಲಾವಣೆ; ಅಗ್ನಿ, ವಾಯು, ಜಲ, ಪೃಥ್ವಿಗೆ ಸಂಬಂಧಿಸಿದ ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ?

Jupiter Transit: ಗುರುವು ಸೌರವ್ಯೂಹದ ಅತಿದೊಡ್ಡ ಗ್ರಹವಾಗಿದೆ. ಗುರುವಿನ ರಾಶಿ ಬದಲಾವಣೆ ಅಗ್ನಿ, ವಾಯು, ಜಲ, ಪೃಥ್ವಿಗೆ ಸಂಬಂಧಿಸಿದ ದ್ವಾದಶ ರಾಶಿಗಳಿಗೆ ವೈಯಕ್ತಿಕ ಬೆಳವಣಿಗೆ, ಸಮೃದ್ಧಿ ಮತ್ತು ಅದೃಷ್ಟವನ್ನು ತರುತ್ತದೆ. ಮೇ 1ರಂದು ವೃಷಭ ರಾಶಿಯನ್ನು ಪ್ರವೇಶಿಸುವ ಗುರುವು ಮುಂದಿನ ಒಂದು ವರ್ಷ ಅಂದರೆ, ಮೇ 1 2024ವರೆಗೂ ಅದೇ ರಾಶಿಯಲ್ಲಿರುತ್ತಾನೆ.

ಗುರುವಿನ ರಾಶಿ ಬದಲಾವಣೆ
ಗುರುವಿನ ರಾಶಿ ಬದಲಾವಣೆ

ಗುರುವಿನ ರಾಶಿ ಬದಲಾವಣೆ: ವೃಷಭ ರಾಶಿಯನ್ನು ಪ್ರವೇಶಿಸುವ ಪರೋಪಕಾರಿ ಮತ್ತು ಉದಾರ ಗ್ರಹ ಗುರುವು ಅವಕಾಶಗಳ ಸುನಾಮಿಯನ್ನೇ ಹೊತ್ತು ತರುತ್ತಿದೆ. ವೃಷಭ ರಾಶಿ ಮತ್ತು ಗುರುಗ್ರಹದ ಅಗಾಧ ಶಕ್ತಿಯು ಪ್ರಕೃತಿ, ಕಲೆ, ಸಂಗೀತ ಮತ್ತು ಆಹಾರದೊಂದಿಗೆ ಬಲವಾದ ಸಂಪರ್ಕವನ್ನೊಂದಿಗೆ. ಈ ಸಂಕ್ರಮಣವು ದ್ವಾದಶ ರಾಶಿಗಳ ಮೇಲೆ ಯಾವ ರೀತಿ ಪ್ರಭಾವ ಬೀರಲಿದೆ ನೋಡೋಣ.

ಅಗ್ನಿಗೆ ಸಂಬಂಧಿಸಿದ ರಾಶಿಗಳು - ಮೇಷ, ಸಿಂಹ, ಧನಸ್ಸು

ವೃಷಭ ರಾಶಿಯಲ್ಲಿ ಗುರುವಿನ ಸಂಚಾರವು ಅಗ್ನಿಗೆ ಸಂಬಂಧಿಸಿದ ಚಿಹ್ನೆಗಳಾದ ಮೇಷ, ಸಿಂಹ, ಧನು ರಾಶಿಯವರಿಗೆ ವಿವಿಧ ವಿವಿಧ ಅನುಕೂಲಗಳನ್ನು ತರಲಿದೆ. ಮೇಷ ರಾಶಿಯವರಿಗೆ ಗುರುವು 2ನೇ ಮನೆಯಲ್ಲಿ, ಸಿಂಹ ರಾಶಿಯವರಿಗೆ ಗುರುವು 10 ಮನೆಯಲ್ಲಿ ಹಾಗೂ ಧನು ರಾಶಿಯವರಿಗೆ 6ನೇ ಮನೆಯಲ್ಲಿದ್ದು ಪ್ರಭಾವ ಬೀರಲಿದೆ. ಈ ಮೂರೂ ರಾಶಿಗಳಿಗೆ ಗುರುವು ಹಣಕಾಸಿನ ಬೆಳವಣಿಗೆ, ಸಂಪನ್ಮೂಲ ಹೆಚ್ಚಳ, ಹೆಚ್ಚಿನ ಸಮೃದ್ಧಿಯನ್ನು ತರುತ್ತಿದ್ದಾನೆ. ಈ ಸಮಯದಲ್ಲಿ ನಿಮ್ಮ ಆದಾಯ, ಹೂಡಿಕೆಗಳು ಅಥವಾ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಬಹಳಷ್ಟು ಸುಧಾರಣೆಗಳನ್ನು ಕಾಣುವಿರಿ. ಹಣಕಾಸು, ಹೂಡಿಕೆಗಳು ಮತ್ತು ದೀರ್ಘಾವಧಿಯ ಭದ್ರತೆಯನ್ನು ನಿರ್ಮಿಸಲು ಇದು ಅನುಕೂಲಕರ ಅವಧಿಯಾಗಿದೆ.

ಅಂತೆಯೇ, ಗುರುವಿನ ರಾಶಿ ಬದಲಾವಣೆಯು ವೃತ್ತಿ ಜೀವನದಲ್ಲಿ ಕೂಡಾ ಉತ್ತಮ ಪ್ರಗತಿ ತರಲಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅವಕಾಶಗಳನ್ನು ಹೆಚ್ಚಿಸುತ್ತದೆ. ಸಮಾಜದಲ್ಲಿ ನಿಮಗೆ ಮನ್ನಣೆ ಹೆಚ್ಚಾಗುವಂತೆ ಮಾಡಲಿದೆ. ನೀವು ಆಯ್ಕೆ ಮಾಡಿಕೊಂಡ ಕ್ಷೇತ್ರಗಳಲ್ಲಿ ಪ್ರಗತಿ ಹೊಂದಲಿದ್ದೀರಿ. ಅಪಾರ ಯಶಸ್ಸು, ಅವಕಾಶಗಳು ನಿಮ್ಮದಾಗುತ್ತದೆ. ಈ ಸಮಯದಲ್ಲಿ ನೆಟ್‌ವರ್ಕಿಂಗ್, ವೃತ್ತಿಪರ ಕೌಶಲ್ಯಗಳನ್ನು ವಿಸ್ತರಿಸುವುದು ಮತ್ತು ಮಹತ್ವಾಕಾಂಕ್ಷೆಯ ಗುರಿಗಳನ್ನು ಅನುಸರಿಸುವುದು ಹಾಗೂ ಇನ್ನಿತರ ಬದಲಾವಣೆಗಳನ್ನು ನಿಮ್ಮ ಜೀವನದಲ್ಲಿ ಗಮನಿಸಬಹುದು.

ಭೂಮಿಗೆ ಸಂಬಂಧಿಸಿದ ರಾಶಿಗಳು: ವೃಷಭ, ಕನ್ಯಾ, ಮಕರ

ವೃಷಭ ರಾಶಿಯಲ್ಲಿ ಗುರುವಿನ ಸಂಚಾರವು ಭೂಮಿಯ ಚಿಹ್ನೆಗಳಾದ ವೃಷಭ, ಕನ್ಯಾ ರಾಶಿ, ಮಕರ ರಾಶಿಯವರಿಗೆ ಶುಭ ಉಂಟು ಮಾಡಲಿದೆ. ಗುರುವು ವೃಷಭ ರಾಶಿಯವರಿಗೆ ಮೊದಲ ಮನೆಯಲ್ಲಿ, ಕನ್ಯಾ ರಾಶಿಯವರಿಗೆ 9ನೇ ಮನೆಯಲ್ಲಿ ಮತ್ತು ಮಕರ ರಾಶಿಯವರಿಗೆ 5ನೇ ಮನೆಯಲ್ಲಿ ಇರುತ್ತಾರೆ. ಗುರುವಿನ ರಾಶಿ ಬದಲಾವಣೆಯು ಈ ಮೂರೂ ರಾಶಿಯವರ ವೈಯಕ್ತಿಕ ಬೆಳವಣಿಗೆ, ದೃಢೀಕರಣ ಮತ್ತು ಸಮಗ್ರತೆಯನ್ನು ಉತ್ತೇಜಿಸುತ್ತದೆ. ಅವರ ನಂಬಿಕೆಗಳು ಮತ್ತು ಮೌಲ್ಯಗಳನ್ನು ಸಾಕಾರಗೊಳಿಸಲು ಪ್ರೋತ್ಸಾಹಿಸುತ್ತದೆ. ಈ ರಾಶಿಯವರಿಗೆ ಈ ಸಮಯವು ಆಧ್ಯಾತ್ಮಿಕ ಅಭ್ಯಾಸಗಳು, ತಾತ್ವಿಕ ಮತ್ತು ಪ್ರಪಂಚ ಮತ್ತು ಅದರ ವೈವಿಧ್ಯಮಯ ಸಂಸ್ಕೃತಿಯನ್ನು ಎಕ್ಸ್‌ಪ್ಲೋರ್‌ ಮಾಡಲು ಅನುಕೂಲಕರ ಸಮಯವಾಗಿದೆ.

ವಾಯುವಿಗೆ ಸಂಬಂಧಿಸಿದ ರಾಶಿಗಳು: ಮಿಥುನ, ತುಲಾ, ಕುಂಭ

ಮಿಥುನ ರಾಶಿಯವರಿಗೆ ಗುರು 12ನೇ ಮನೆಯಲ್ಲಿ, ತುಲಾ 8ನೇ ಮನೆಯಲ್ಲಿ ಮತ್ತು ಕುಂಭ ರಾಶಿ 4ನೇ ಮನೆಯಲ್ಲಿ ಇರುತ್ತಾರೆ. ಈ ಚಿಹ್ನೆಗಳಿಗೆ ಮೋಕ್ಷದ ಅಕ್ಷದ ಮೂಲಕ ಗುರುವಿನ ಸಂಚಾರವು ಆಳವಾದ ಆಧ್ಯಾತ್ಮಿಕ ರೂಪಾಂತರ ಮತ್ತು ಆಂತರಿಕ ಪರಿಶೋಧನೆಯ ಅವಧಿಯನ್ನು ಸೂಚಿಸುತ್ತದೆ. ಅವರ ಸ್ವಯಂ-ಶೋಧನೆ ಮತ್ತು ಆಧ್ಯಾತ್ಮಿಕ ಜಾಗೃತಿಯ ಪ್ರಯಾಣವನ್ನು ಪ್ರಾರಂಭಿಸಲು ಅವರನ್ನು ಪ್ರೋತ್ಸಾಹಿಸಲಾಗುತ್ತದೆ. ಈ ಅಸಮಯದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಲು ಹಾಗೂ ಹಿಂದೆ ಘಟಿಸಿದ ನಕಾರಾತ್ಮಕ ಘಟನೆಗಳ ವಿಚಾರಗಳನ್ನು ತೊರೆಯಲು ಅನುವು ಮಾಡಿಕೊಡುತ್ತದೆ. ಆಂತರಿಕ ಬೆಳವಣಿಗೆ ಮತ್ತು ಭಾವನಾತ್ಮಕತೆಗೆ ಅನುಕೂಲವಾಗುವಂತೆ ಧ್ಯಾನ, ಯೋದಂಥ ಅಭ್ಯಾಸಗಳಿಗೆ ವ್ಯಕ್ತಿಗಳು ಆಕರ್ಷಿತರಾಗಬಹುದು.

ನೀರಿಗೆ ಸಂಂಧಿಸಿದ ರಾಶಿಗಳು : ಕರ್ಕಾಟಕ, ವೃಶ್ಚಿಕ, ಮೀನ

ಗುರುವು ಕರ್ಕ ರಾಶಿಯವರಿಗೆ 11ನೇ ಮನೆಯಲ್ಲಿ, ವೃಶ್ಚಿಕ ರಾಶಿಯವರಿಗೆ 7ನೇ ಮನೆಯಲ್ಲಿ ಮತ್ತು ಮೀನ ರಾಶಿಯವರಿಗೆ 3ನೇ ಮನೆಯಲ್ಲಿ ಇರುತ್ತಾರೆ. ವೃತ್ತಿ ಜೀವನದಲ್ಲಿ ವಿಸ್ತರಣೆ, ಬೆಳವಣಿಗೆ ಮತ್ತು ಮನದ ಆಸೆಗಳನ್ನು ಪೂರೈಸುವ ಅವಕಾಶಗಳು, ಸೃಜನಶೀಲತೆ, ಸಂಬಂಧಗಳು ಮತ್ತು ಪಾಲುದಾರಿಕೆಗಳನ್ನು ತರುತ್ತದೆ. ಗುರುವಿನ ಸಂಚಾರವು ವ್ಯಕ್ತಿಗಳು ತಮ್ಮ ಸೃಜನಾತ್ಮಕ ಭಾವೋದ್ರೇಕಗಳು, ಹವ್ಯಾಸಗಳು ಮತ್ತು ಆಸಕ್ತಿಗಳನ್ನು ಉತ್ಸಾಹದಿಂದ ಮತ್ತು ಆಶಾವಾದಿಯಾಗಿ ಮುಂದುವರೆಯಲು ಪ್ರೋತ್ಸಾಹಿಸುತ್ತದೆ.

ಈ ವ್ಯಕ್ತಿಗಳು ಕಠಿಣ ಪರಿಶ್ರಮದಿಂದ ಸ್ವಯಂ ಅಭಿವ್ಯಕ್ತಿಯ ಹೊಸ ಮಾರ್ಗಗಳನ್ನು ಅನ್ವೇಷಿಸಲು, ಸಂತೋಷ ಮತ್ತು ಸ್ವಾಭಾವಿಕತೆಯನ್ನು ಬೆಳೆಸಿಕೊಳ್ಳಲು ಇದು ಉತ್ತಮ ಸಮಯ. ಗುರುವಿನ ರಾಶಿ ಬದಲಾವಣೆಯು ಪಾಲುದಾರಿಕೆಗಳು ಮತ್ತು ಸಂಬಂಧಗಳಲ್ಲಿ ಬೆಳವಣಿಗೆ ಮತ್ತು ಸಮೃದ್ಧಿಯ ಸಾಮರ್ಥ್ಯವನ್ನು ವರ್ಧಿಸುತ್ತದೆ. ಸಂಬಂಧಗಳಲ್ಲಿ ಪರಸ್ಪರ ಸಾಮರಸ್ಯ, ಸಮತೋಲನ ಮತ್ತು ಪರಸ್ಪರ ಪ್ರಯೋಜನವನ್ನು ಪಡೆಯಲು ಪ್ರೋತ್ಸಾಹಿಸುತ್ತದೆ. ಹೊಸ ಪಾಲುದಾರಿಕೆಗಳನ್ನು ರೂಪಿಸಲು, ವೈಯಕ್ತಿಕ ಮತ್ತು ವೃತ್ತಿಪರ, ಅಸ್ತಿತ್ವದಲ್ಲಿರುವ ಸಂಬಂಧಗಳನ್ನು ಗಾಢವಾಗಿಸಲು ಮತ್ತು ಹಂಚಿಕೊಂಡ ಗುರಿಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸಿಕೊಳ್ಳಲು ಇದು ಅನುಕೂಲಕರ ಸಮಯವಾಗಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.