ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ; ಗಜಲಕ್ಷ್ಮಿ ರಾಜಯೋಗದಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ; ಗಜಲಕ್ಷ್ಮಿ ರಾಜಯೋಗದಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

Jupiter Venus Transit: ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ ಗಜಲಕ್ಷ್ಮೀ ರಾಜಯೋಗ ಸೃಷ್ಟಿಸುತ್ತಿದೆ. ಇದರ ಪರಿಣಾಮವಾಗಿ ಮೇ 31 ರಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ ದೊರೆಯಲಿದೆ. ಈ ರಾಶಿಯವರು ಆರ್ಥಿಕವಾಗಿ ಪ್ರಬಲರಾಗಲಿದ್ದಾರೆ. ಒಳ್ಳೆ ಸಂಬಳ ದೊರೆಯುವ ಉದ್ಯೋಗ ದೊರೆಯಲಿದೆ.

ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ; ಗಜಲಕ್ಷ್ಮಿ ರಾಜಯೋಗದಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ
ವೃಷಭ ರಾಶಿಯಲ್ಲಿ ಗುರು ಶುಕ್ರ ಸಂಯೋಗ; ಗಜಲಕ್ಷ್ಮಿ ರಾಜಯೋಗದಿಂದ ಮೇಷ ಸೇರಿದಂತೆ ಈ 5 ರಾಶಿಯವರಿಗೆ ದೊರೆಯಲಿದೆ ಲಕ್ಷ್ಮೀ ಕಟಾಕ್ಷ

ಗಜಲಕ್ಷ್ಮಿ ರಾಜಯೋಗ: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ಸಂಕ್ರಮಣ ಬಹಳ ಮುಖ್ಯ. ಪ್ರಸ್ತುತ ಅನೇಕ ಗ್ರಹಗಳು ವೃಷಭ ರಾಶಿಯಲ್ಲಿ ಸಾಗುತ್ತಿವೆ. ಈ ರಾಶಿಯಲ್ಲಿ ಶುಭ ಗ್ರಹಗಳಾದ ಗುರು ಮತ್ತು ಶುಕ್ರ ಸಂಯೋಗವಾಗಿದೆ. 12 ವರ್ಷಗಳ ನಂತರ ಈ ಎರಡು ಗ್ರಹಗಳ ಸಂಯೋಜನೆಯಿಂದ ಗಜಲಕ್ಷ್ಮಿ ರಾಜಯೋಗವು ರೂಪುಗೊಂಡಿದೆ.

ಮೇ 1 ರಿಂದ ಗುರುವು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಮೇ 19 ರಂದು, ಶುಕ್ರ ತನ್ನ ಸ್ವಂತ ವೃಷಭ ರಾಶಿಯನ್ನು ಪ್ರವೇಶಿಸಿದ್ದಾನೆ. ಈ ಸಂದರ್ಭದಲ್ಲಿ ಎರಡೂ ಗ್ರಹಗಳ ಸಂಯೋಜನೆಯಿಂದ 12 ವರ್ಷಗಳ ನಂತರ ಗಜಲಕ್ಷ್ಮಿ ರಾಜಯೋಗ ರೂಪುಗೊಂಡಿದೆ. ಇದರ ಪರಿಣಾಮ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಇದಲ್ಲದೆ ಮೇ 31ರಂದು ಬುಧನು ಈ ರಾಶಿಯನ್ನು ಪ್ರವೇಶಿಸುತ್ತಾನೆ. ಸೂರ್ಯನು ಈಗಾಗಲೇ ಈ ರಾಶಿಯಲ್ಲಿದ್ದಾನೆ. ಇದರಿಂದ ಗಜಲಕ್ಷ್ಮಿ, ಬುಧಾದಿತ್ಯ ಮತ್ತು ಮಾಳವ್ಯ ರಾಜಯೋಗ ಎಂಬ ಮೂರು ಶುಭ ಯೋಗಗಳು ರೂಪುಗೊಳ್ಳುತ್ತವೆ. ಕೆಲವರಿಗೆ ವೃಷಭ ರಾಶಿಯಲ್ಲಿ ನಾಲ್ಕು ಗ್ರಹಗಳ ಸಂಯೋಜನೆಯಿಂದ ಅನುಕೂಲಕರ ಯೋಗವು ರೂಪುಗೊಳ್ಳುತ್ತದೆ.

ಮೇಷ ರಾಶಿ

ಶುಭ ಯೋಗಗಳ ಪರಿಣಾಮ ಮೇಷ ರಾಶಿಯವರಿಗೆ ಅದ್ಭುತ ಫಲಿತಾಂಶವನ್ನು ನೀಡುತ್ತದೆ. ಕೆಲಸದಲ್ಲಿ ಪ್ರಗತಿ ಕಂಡುಬರಲಿದೆ. ನಿಮ್ಮ ಪ್ರಯತ್ನಗಳಿಗೆ ಮನ್ನಣೆ ದೊರೆಯಲಿದೆ. ಸ್ಥಾನಮಾನ ಗೌರವವನ್ನು ಹೆಚ್ಚಿಸುತ್ತದೆ. ಸಂಬಳ ಹೆಚ್ಚಳ ಮತ್ತು ಬಡ್ತಿಯ ಅವಕಾಶಗಳು ಇವೆ, ಇದು ಆರ್ಥಿಕ ಪರಿಸ್ಥಿತಿಗಳನ್ನು ಸುಧಾರಿಸುತ್ತದೆ. ಈ ಸಮಯದಲ್ಲಿ ನಿಮ್ಮ ಮನೆಯಲ್ಲಿ ಕೆಲವು ಶುಭ ಕಾರ್ಯಗಳು ನಡೆಯಲಿವೆ. ಇದರಿಂದಾಗಿ ಮನೆಯ ವಾತಾವರಣವು ಸಂತೋಷದಿಂದ ಕೂಡಿರುತ್ತದೆ. ಹೊಸ ವೃತ್ತಿ ಅವಕಾಶಗಳು ದೊರೆಯಲಿವೆ. ವ್ಯಾಪಾರದಲ್ಲಿ ಆದಾಯ ಹೆಚ್ಚಾಗುತ್ತದೆ. ಉದ್ಯೋಗದಾತರಿಗೆ ಕೂಡಾ ಇದು ಉತ್ತಮ ಸಮಯ. ಪರಿಣಾಮವಾಗಿ, ಉತ್ಸಾಹ ಮತ್ತು ಆತ್ಮವಿಶ್ವಾಸ ಎರಡೂ ಹೆಚ್ಚಾಗುತ್ತದೆ.

ಕರ್ಕಾಟಕ ರಾಶಿ

ಈ ಗ್ರಹಗಳ ಸಂಯೋಜನೆಯು ಕರ್ಕಾಟಕ ರಾಶಿಯವರಿಗೆ ಬಹಳ ಒಳ್ಳೆಯ ಫಲಗಳನ್ನು ನೀಡುತ್ತಿದೆ. ಈ ರಾಶಿಯವರು. ಮೇಲಧಿಕಾರಿಗಳ ಗೌರವ ಮತ್ತು ವಿಶ್ವಾಸ ಗಳಿಸುತ್ತಾರೆ. ನಿಮ್ಮ ಪ್ರಾಮಾಣಿಕತೆ ಹಾಗೂ ಕಠಿಣ ಪರಿಶ್ರಮ ನಿಮ್ಮನ್ನು ಕೆಲಸದ ಸ್ಥಳದಲ್ಲಿ ಎಲ್ಲರೂ ನಿಮ್ಮನ್ನು ಹೊಗಳುವಂತೆ ಮಾಡುತ್ತದೆ. ನಿಮ್ಮ ಹಿರಿಯ ಅಧಿಕಾರಿಯ ವಿಶ್ವಾಸ ಗಳಿಸುವಲ್ಲಿಯೂ ನೀವು ಯಶಸ್ವಿಯಾಗುತ್ತೀರಿ. ಈ ಸಮಯದಲ್ಲಿ ವ್ಯಾಪಾರಿಗಳು ಹೆಚ್ಚು ಹಣವನ್ನು ಗಳಿಸುತ್ತಾರೆ. ಪ್ರೀತಿ ಜೀವನ ಉತ್ತಮವಾಗಿರಲಿದೆ. ನಿಮಗೆ ಬರಬೇಕಿದ್ದ ಬಾಕಿ ಹಣ ದೊರೆಯಲಿದೆ. ಆರೋಗ್ಯ ಸುಧಾರಿಸುತ್ತದೆ.

ಕನ್ಯಾ ರಾಶಿ

ಕನ್ಯಾ ರಾಶಿಯಲ್ಲಿ ಜನಿಸಿದವರಿಗೆ ಈ ಯೋಗವು ಬಹಳ ಒಳ್ಳೆಯದು. ನೀವು ಉದ್ಯೋಗವನ್ನು ಬದಲಾಯಿಸುವ ಬಗ್ಗೆ ಯೋಚಿಸುತ್ತಿದ್ದರೆ ಇದು ಉತ್ತಮ ಸಮಯ. ಈ ಅವಧಿಯಲ್ಲಿ ನಿಮಗೆ ಅನೇಕ ಅತ್ಯುತ್ತಮ ಅವಕಾಶಗಳು ಹುಡುಕಿ ಬರಲಿದೆ. ಇವು ನಿಮಗೆ ಆರ್ಥಿಕವಾಗಿ ಲಾಭವನ್ನು ತರುತ್ತವೆ. ಹಣ ಉಳಿಸುತ್ತೀರಿ. ಪ್ರೀತಿಯ ಜೀವನ ಅದ್ಭುತವಾಗಿರುತ್ತದೆ. ಪ್ರೇಮಿಗಳು ಮದುವೆಯಾಗಲು ಬಯಸುತ್ತಿದ್ದರೆ, ಮನೆಯಲ್ಲಿ ಹೇಳಲು ಇದು ಸೂಕ್ತ ಸಮಯ.

ವೃಶ್ಚಿಕ ರಾಶಿ

ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಗಜಲಕ್ಷ್ಮಿ ರಾಜಯೋಗದಿಂದ ಬಹಳಷ್ಟು ಪ್ರಯೋಜನವನ್ನು ಪಡೆಯುತ್ತಾರೆ . ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ನಿಮ್ಮ ಜೀವನಕ್ಕೆ ಬೇಕಾದ ಆಯ್ಕೆಗಳನ್ನು ಮಾಡುವ ಸಾಮರ್ಥ್ಯ ನಿಮಗೆ ದೊರೆಯಲಿದೆ. ಇದು ನಿಮಗೆ ಲಾಭವನ್ನು ತರುತ್ತದೆ. ವ್ಯಾಪಾರ ವ್ಯವಹಾರಗಳಲ್ಲಿ ಯಶಸ್ವಿಯಾಗುವಿರಿ. ಕುಟುಂಬದ ಸದಸ್ಯರ ನಡುವೆ ಉತ್ತಮ ಬಾಂಧವ್ಯ ಏರ್ಪಸುತ್ತದೆ.

ಮೀನ ರಾಶಿ

ಮೀನ ರಾಶಿಯವರಿಗೆ ಗಜಲಕ್ಷ್ಮಿ ರಾಜಯೋಗವು ಅತ್ಯಂತ ಯಶಸ್ವಿ ಫಲಿತಾಂಶಗಳನ್ನು ನೀಡುತ್ತದೆ. ವೃತ್ತಿಜೀವನದ ವಿಚಾರದಲ್ಲಿ ನಿಮಗೆ ಉತ್ತಮ ಫಲಿತಾಂಶ ದೊರೆಯಲಿದೆ. ಕೆಲಸದಲ್ಲಿ ಉತ್ತಮ ಸಾಧನೆ ಮಾಡುವಿರಿ. ಮೇಲಧಿಕಾರಿಗಳು ನಿಮ್ಮ ಕೆಲಸವನ್ನು ಮೆಚ್ಚುತ್ತಾರೆ. ಹೆಚ್ಚು ಸಂಬಳ ದೊರೆಯುವ ಉದ್ಯೋಗ ಅರಸಿ ಬರಲಿದೆ. ಆದರೆ ಆಯ್ಕೆ ನಿಮ್ಮದು. ಹಣಕಾಸಿನ ಕೊರತೆ ಇರುವುದಿಲ್ಲ. ವಿವಿಧ ಮೂಲಗಳಿಂದ ಆದಾಯ ಹುಡುಕಿ ಬರಲಿದೆ. ನಿಮ್ಮ ಸಾಮರ್ಥ್ಯ ಮತ್ತು ಬುದ್ಧಿವಂತಿಕೆಯಿಂದಾಗಿ ನೀವು ವ್ಯಾಪಾರ ಜಗತ್ತಿನಲ್ಲಿ ಉತ್ತಮ ಹಣವನ್ನು ಗಳಿಸುವಿರಿ. ವ್ಯಾಪಾರ ಅಭಿವೃದ್ಧಿ ಹೊಂದುತ್ತದೆ. ಸಂಗಾತಿಯೊಂದಿಗೆ ಪ್ರೀತಿ ವಿಶ್ವಾಸ ಇನ್ನಷ್ಟು ಹೆಚ್ಚಾಗಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)