ಕನ್ನಡ ಪಂಚಾಂಗ: ಏಪ್ರಿಲ್ 10 ರ ನಿತ್ಯ ಪಂಚಾಂಗ; ದಿನ ವಿಶೇಷ, ಯೋಗ, ಕರಣ, ಮುಹೂರ್ತ, ಇತರ ಅಗತ್ಯ ಧಾರ್ಮಿಕ ವಿವರ
Today’s Panchanga: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಏಪ್ರಿಲ್ 10 ರ ನಿತ್ಯ ಪಂಚಾಂಗ, ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

ಹಿಂದು ಪಂಚಾಂಗದಂತೆ ಹೇಳುವುದಾದರೆ, ಪ್ರತಿ ತಿಂಗಳು ಅಂದರೆ ಮೂವತ್ತು ದಿನ. ಚಾಂದ್ರಮಾನ ಪ್ರಕಾರ 15-15 ದಿನಗಳ ವಿಂಗಡನೆ ಮಾಡಲಾಗಿದ್ದು, ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷ. ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್ ಕ್ಯಾಲೆಂಡರ್‌ನ ಈ ದಿನದ ಅಂದರೆ ಏಪ್ರಿಲ್ 10 ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಇಲ್ಲಿದೆ.
ಏಪ್ರಿಲ್ 10 ರ ಪಂಚಾಂಗ
ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 28 ಶ್ರೀ ಶೋಭಕೃತ್ ಸಂವತ್ಸರ, ಉತ್ತರಾಯನ, ಶಿಶಿರ ಋತು, ಫಲ್ಗುಣ ಮಾಸ, ಶುಕ್ಲ ಪಕ್ಷ
ದಿನ – ಬುಧವಾರ
ಸ್ಥಳ – ಬೆಂಗಳೂರು
ಸೂರ್ಯೋದಯ - ಬೆಳಗ್ಗೆ 06:10
ಸೂರ್ಯಾಸ್ತ - ಸಂಜೆ 06:32
ಚಂದ್ರೋದಯ -ಬೆಳಗ್ಗೆ 07: 12
ಚಂದ್ರಾಸ್ತ – ಸಂಜೆ 08: 15
ಹಗಲಿನ ಅವಧಿ - 12 ಗಂಟೆ 17 ನಿಮಿಷ
ರಾತ್ರಿ ಅವಧಿ - 11 ಗಂಟೆ 42 ನಿಮಿಷ
ತಿಥಿ
ಸೂರ್ಯೋದಯ ತಿಥಿ – ಶುಕ್ಲ ಪಕ್ಷದ ಬಿದಿಗೆ
ಶುಕ್ಲ ಪಕ್ಷದ ಬಿದಿಗೆ ಇಂದು ಸಂಜೆ 05: 34 ವರೆಗೆ, ಆನಂತರ ಶುಕ್ಲ ಪಕ್ಷದ ತದಿಗೆ
ನಕ್ಷತ್ರ ಮತ್ತು ನಕ್ಷತ್ರ ಚರಣ
ನಕ್ಷತ್ರ
ಭರಣಿ ನಾಳೆ ನಸುಕಿನ 03: 06 ರ ವರೆಗೆ, ಅದಾಗಿ ಕೃತ್ತಿಕಾ
ನಕ್ಷತ್ರ ಚರಣ
ಅಶ್ವಿನಿ -4 ಇಂದು ಮುಂಜಾನೆ 05: 07 ರ ತನಕ
ಭರಣಿ -1 ಇಂದು ಬೆಳಗ್ಗೆ 10 : 34 ರ ತನಕ
ಭರಣಿ - 2 ಇಂದು ಸಂಜೆ 04: 03 ರ ತನಕ
ಭರಣಿ - 3 ಇಂದು ರಾತ್ರಿ 09: 34 ರ ತನಕ
ಯೋಗ
ವಿಷ್ಕಂಭ ಇಂದು ಬೆಳಗ್ಗೆ 10: 37 ರ ವರೆಗೆ, ನಂತರ ಪ್ರೀತಿ
ಕರಣ
ಪ್ರಥಮ ಕರಣ ಬಾಲವ ಇಂದು ಬೆಳಗ್ಗೆ 07: 37 ರ ವರೆಗೆ
ದ್ವಿತೀಯ ಕರಣ ಕೌಲವ ಇಂದು ಸಂಜೆ 05: 34 ರ ವರೆಗೆ
ಸೂರ್ಯ ರಾಶಿ – ಮೀನಾ ರಾಶಿ 14/03/2024, 12:35:07 ರಿಂದ 13/04/2024, 21:02:12 ವರೆಗೆ
ಚಂದ್ರ ರಾಶಿ - ಮೇಷ ರಾಶಿ 09/04/2024, 07:33: 16 ರಿಂದ 11/04/2024, 08: 41: 27 ರ ವರೆಗೆ
ರಾಹು ಕಾಲ - ಮಧ್ಯಾಹ್ನ 12:21 ರಿಂದ 01:54 ರ ವರೆಗೆ
ಗುಳಿಗ ಕಾಲ – ಬೆಳಗ್ಗೆ 10:48 ರಿಂದ ಮಧ್ಯಾಹ್ನ 01:54 ರ ವರೆಗೆ
ಯಮಗಂಡ- ಬೆಳಗ್ಗೆ 07:43 ರಿಂದ 09:15 ರ ವರೆಗೆ
ಅಭಿಜಿತ್ ಮುಹೂರ್ತ -
ದುರ್ಮುಹೂರ್ತ - ಪೂರ್ವಾಹ್ನ 11:56 ರಿಂದ ಮಧ್ಯಾಹ್ನ 12:46 ರ ವರೆಗೆ
ಅಮೃತ ಕಾಲ – ರಾತ್ರಿ 10: 42 ರಿಂದ ಏಪ್ರಿಲ್ 11 ರ ನಸುಕಿನ 12: 10 ರ ವರೆಗೆ
ವರ್ಜ್ಯಂ- ಮಧ್ಯಾಹ್ನ ನಂತರ 01:54 ರಿಂದ 03:22 ರ ವರೆಗೆ
ತಾರಾಬಲ: ಅಶ್ವಿನಿ, ಭರಣಿ, ಕೃತ್ತಿಕಾ, ರೋಹಿಣಿ, ಆರ್ದ್ರ, ಪುಷ್ಯ, ಮಾಘಾ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಸ್ವಾತಿ, ಅನುರಾಧ, ಮೂಲ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಶತಭಿಷ, ಉತ್ತರಭಾದ್ರಪದ
ಚಂದ್ರಬಲ - ಮೇಷ, ಮಿಥುನ, ಕರ್ಕಾಟಕ, ತುಲಾ, ವೃಶ್ಚಿಕ, ಕುಂಭ
ಶುಭವಾಗಲಿ, ಶುಭದಿನ
----------------------------------------------------------------
(This copy first appeared in Hindustan Times Kannada website. To read more like this please logon to kannada.hindustantimes.com)
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.