Kannada Panchanga: ಆಗಸ್ಟ್ 26 ರ ನಿತ್ಯ ಪಂಚಾಂಗ; ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ, ಮುಹೂರ್ತ, ಅಗತ್ಯ ಧಾರ್ಮಿಕ ವಿವರ-kannada panchanga today august 26 2024 hindu calendar krishna janmashtami tithi shubh muhurta panchanga in kannada uks ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kannada Panchanga: ಆಗಸ್ಟ್ 26 ರ ನಿತ್ಯ ಪಂಚಾಂಗ; ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ, ಮುಹೂರ್ತ, ಅಗತ್ಯ ಧಾರ್ಮಿಕ ವಿವರ

Kannada Panchanga: ಆಗಸ್ಟ್ 26 ರ ನಿತ್ಯ ಪಂಚಾಂಗ; ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ, ಮುಹೂರ್ತ, ಅಗತ್ಯ ಧಾರ್ಮಿಕ ವಿವರ

Kannada Panchanga 2024: ನಿತ್ಯ ಬದುಕಿನಲ್ಲಿ ಪಂಚಾಂಗಕ್ಕೆ ವಿಶೇಷ ಮಹತ್ವ ಇದೆ. ದಿನಚರಿ ಆರಂಭಿಸುವುದಕ್ಕೆ ಮುನ್ನವೇ ಇಂದು ಎಷ್ಟು ಗಂಟೆಗೆ ಸೂರ್ಯೋದಯ, ಸೂರ್ಯಾಸ್ತ, ಚಂದ್ರೋದಯ, ಚಂದ್ರಾಸ್ತ, ರಾಹುಕಾಲ, ಗುಳಿಗ ಕಾಲ ಎಂಬಿತ್ಯಾದಿ ಹುಡುಕಾಡುವುದು ಸಹಜ. ಆಗಸ್ಟ್ 26ರ ನಿತ್ಯ ಪಂಚಾಂಗ, ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ ಯೋಗ, ಕರಣ, ಮುಹೂರ್ತ ಮತ್ತು ಇತರೆ ವಿವರ.

Kannada Panchanga: ಆಗಸ್ಟ್ 26 ರ ನಿತ್ಯ ಪಂಚಾಂಗ; ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ, ಮುಹೂರ್ತ,  ಅಗತ್ಯ ಧಾರ್ಮಿಕ ವಿವರ
Kannada Panchanga: ಆಗಸ್ಟ್ 26 ರ ನಿತ್ಯ ಪಂಚಾಂಗ; ಕೃಷ್ಣ ಜನ್ಮಾಷ್ಟಮಿ ದಿನ ವಿಶೇಷ, ಮುಹೂರ್ತ, ಅಗತ್ಯ ಧಾರ್ಮಿಕ ವಿವರ

ಪಂಚಾಂಗ ಗಮನಿಸುವಾಗ ಹಿಂದೂ ಕ್ಯಾಲೆಂಡರ್‌ ಪ್ರಕಾರ, ಪ್ರತಿ ತಿಂಗಳು ಮೂವತ್ತು ದಿನ ಎಂಬುದು ಲೆಕ್ಕಾಚಾರ. ಚಾಂದ್ರಮಾನ ಲೆಕ್ಕಾಚಾರದ ಪ್ರಕಾರ ತಿಂಗಳನ್ನು 15-15 ದಿನಗಳ ವಿಂಗಡನೆ ಮಾಡಲಾಗಿದೆ. ಹುಣ್ಣಿಮೆ, ಅಮಾವಾಸ್ಯೆಗಳು ಆವರ್ತನಾನುಸಾರ ಬರುತ್ತದೆ. ಒಂದು ಶುಕ್ಲ ಪಕ್ಷವಾದರೆ ಇನ್ನೊಂದು ಕೃಷ್ಣ ಪಕ್ಷ. ಇದನ್ನು ಆಧರಿಸಿ ಇಂಗ್ಲಿಷ್‌ ಕ್ಯಾಲೆಂಡರ್‌ನ ಈ ದಿನದ ಅಂದರೆ ಆಗಸ್ಟ್ 26ರ ನಿತ್ಯ ಪಂಚಾಂಗ, ಯೋಗ, ಕರಣ, ಮುಹೂರ್ತ ವಿವರ ಹೀಗಿದೆ.

ಆಗಸ್ಟ್ 26ರ ಪಂಚಾಂಗ

ಶಾಲಿವಾಹನ ಶಕೆ 1946, ಕಲಿ ಯುಗ 5125, ವಿಕ್ರಮ ಸಂವತ್ಸರ 2080, ಪ್ರವಿಷ್ಟ / ಗತಿ 11 ಶ್ರೀ ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶ್ರಾವಣ ಮಾಸ

ದಿನ – ಸೋಮವಾರ

ಸ್ಥಳ – ಬೆಂಗಳೂರು

ಸೂರ್ಯೋದಯ - ಬೆಳಗ್ಗೆ 06:08

ಸೂರ್ಯಾಸ್ತ - ಸಂಜೆ 06:34

ಚಂದ್ರೋದಯ - ಇಂದು 11: 56 PM

ಚಂದ್ರಾಸ್ತ – 12: 21 PM

ಹಗಲಿನ ಅವಧಿ - 12 ಗಂಟೆ 21 ನಿಮಿಷ

ರಾತ್ರಿ ಅವಧಿ - 11 ಗಂಟೆ 38 ನಿಮಿಷ

ತಿಥಿ

ಸೂರ್ಯೋದಯ ತಿಥಿ – ಕೃಷ್ಣ ಪಕ್ಷದ ಅಷ್ಟಮಿ

ಕೃಷ್ಣ ಪಕ್ಷದ ಅಷ್ಟಮಿ ನಾಳೆ (ಆಗಸ್ಟ್‌ 27) 02: 21 AM ವರೆಗೆ, ಅದಾಗಿ ಕೃಷ್ಣ ಪಕ್ಷದ ನವಮಿ

ದಿನ ವಿಶೇಷ - ಕೃಷ್ಣ ಜನ್ಮಾಷ್ಟಮಿ (Krishna Janmashtami) ತಿಥಿ ಮತ್ತು ಮುಹೂರ್ತ ವಿವರ

ಶ್ರೀ ಕೃಷ್ಣ ಜನ್ಮಾಷ್ಟಮಿಯ ನಿಶ್ಚಿತ ಪೂಜಾ ಸಮಯ - ರಾತ್ರಿ 11.58 ರಿಂದ ಆಗಸ್ಟ್ 27ರ ನಸುಕಿನ 12.44 ರ ತನಕ (ಅವಧಿ 46 ನಿಮಿಷ)

ಮೊಸರು ಕುಡಿಕೆ (ದಹಿ ಹಂಡಿ) ಆಚರಣೆ - ಆಗಸ್ಟ್ 27ಕ್ಕೆ

ಧರ್ಮಶಾಸ್ತ್ರದ ಪ್ರಕಾರ ಪಾರಣೆ ಸಮಯ

ಆಗಸ್ಟ್ 27ರ ಅಪರಾಹ್ನ 3.38ರ ಬಳಿಕ

ಪಾರಣೆಯ ದಿನ ರೋಹಿಣಿ ನಕ್ಷತ್ರ ಕೊನೆಗೊಳ್ಳುವ ಸಮಯ ಅಪರಾಹ್ನ 3.38ಕ್ಕೆ ಪಾರಣೆಯ ದಿನ ಅಷ್ಟಮಿ ತಿಥಿ ಸೂರ್ಯೋದಯಕ್ಕೆ ಮೊದಲೇ ಮುಗಿಯುತ್ತದೆ.

ಧರ್ಮಶಾಸ್ತ್ರದ ಪ್ರಕಾರ, ಪರ್ಯಾಯ ಪಾರಣೆ ವಿಧಿ

ಪಾರಣೆ ಸಮಯ ಆಗಸ್ಟ್ 27 ರ ಬೆಳಗ್ಗೆ 6.08ಕ್ಕೆ

ಇದಲ್ಲದೆ ಪಾರಣೆಯನ್ನು ಮಾರನೇ ದಿನ ಸೂರ್ಯೋದಯ ನಂತರ ದೇವ ಪೂಜೆ, ವಿಸರ್ಜನೆ ಮುಗಿಸಿದ ಬಳಿಕ ಮಾಡಬಹುದು.

ಆಧುನಿಕ ಪದ್ಧತಿಯಲ್ಲಿ ಆಗಸ್ಟ್‌ 27 ರ ನಸುಕಿನ 12.44 ಬಳಿಕ ಪಾರಣೆ ಮಾಡುತ್ತಾರೆ. ಅಂದರೆ ಭಾರತದ ಬಹುತೇಕ ಪ್ರದೇಶಗಳಲ್ಲಿ ನಿಶ್ಚಿತ ಪೂಜೆಯ ಬಳಿಕ ಪಾರಣೆ ಮಾಡುತ್ತಾರೆ.

ಅಷ್ಟಮಿ ತಿಥಿ ಶುರು- ಆಗಸ್ಟ್‌ 26ರ ನಸುಕಿನ 3.39ಕ್ಕೆ

ಅಷ್ಟಮಿ ತಿಥಿ ಕೊನೆ - ಆಗಸ್ಟ್‌ 27ರ ನಸುಕಿನ 2.19ಕ್ಕೆ

ರೋಹಿಣಿ ನಕ್ಷತ್ರ ಶುರು- ಆಗಸ್ಟ್‌ 26ರ ಅಪರಾಹ್ನ 3.55ಕ್ಕೆ

ರೋಹಿಣಿ ನಕ್ಷತ್ರ ಕೊನೆ - ಆಗಸ್ಟ್‌ 27ರ ಅಪರಾಹ್ನ 3.38ಕ್ಕೆ

ನಕ್ಷತ್ರ ಮತ್ತು ನಕ್ಷತ್ರ ಚರಣ

ನಕ್ಷತ್ರ

ಕೃತ್ತಿಕ ಇಂದು 03: 56 PM ತನಕ, ಅದಾಗಿ ರೋಹಿಣಿ

ನಕ್ಷತ್ರ ಚರಣ

ಕೃತ್ತಿಕ-2 ಇಂದು 04:17 AM ವರೆಗೆ

ಕೃತ್ತಿಕ-3 ಇಂದು 10:06 AM ವರೆಗೆ

ಕೃತ್ತಿಕ-4 ಇಂದು 03:56 PM ವರೆಗೆ

ರೋಹಿಣಿ-1 ಇಂದು 09:49 PM ವರೆಗೆ

ಯೋಗ

ಧೃವ ಇಂದು 12: 29 PM ತನಕ, ನಂತರ ವ್ಯಾಘಾತ

ಕರಣ

ಪ್ರಥಮ ಕರಣ ಬವ ಇಂದು 03: 40 AM ರ ತನಕ

ದ್ವಿತೀಯ ಕರಣ ಬಾಲವ ಇಂದು 02: 56 PM ರ ತನಕ

ಸೂರ್ಯ ರಾಶಿ – ಸಿಂಹ ರಾಶಿ 16/08/2024, 19:47:58 ರಿಂದ 16/09/2024, 19:43:48 ರ ವರೆಗೆ

ಚಂದ್ರ ರಾಶಿ - ವೃಷಭ ರಾಶಿ 25/08/2024, 22:30:55 ರಿಂದ 28/08/2024, 03:42:48 ರ ವರೆಗೆ

ರಾಹು ಕಾಲ- 07:43 AM ರಿಂದ 09:16 AM ವರೆಗೆ

ಗುಳಿಗ ಕಾಲ – 01:54 PM ರಿಂದ 03:26 PM ವರೆಗೆ

ಯಮಗಂಡ- 10:48 AM ರಿಂದ 12:21 PM ವರೆಗೆ

ಅಭಿಜಿತ್‌ ಮುಹೂರ್ತ - 11:56 AM ರಿಂದ 12:46 PM ವರೆಗೆ

ದುರ್ಮುಹೂರ್ತ - 12:46 PM ರಿಂದ 01:35 PM ತನಕ ಮತ್ತು 03:14 PM ರಿಂದ 04:03 PM ವರೆಗೆ

ಅಮೃತ ಕಾಲ- ಇಂದು 01:37 PM ರಿಂದ 03:10 PM ತನಕ

ವರ್ಜ್ಯಂ- 04:21 AM ರಿಂದ 05:54 AM ತನಕ

ತಾರಾಬಲ: ಭರಣಿ, ಕೃತ್ತಿಕಾ, ರೋಹಿಣಿ, ಮೃಗಶಿರ, ಪುನರ್ವಸು, ಆಶ್ಲೇಷ, ಪೂರ್ವ ಫಾಲ್ಗುಣಿ, ಉತ್ತರ ಫಾಲ್ಗುಣಿ, ಹಸ್ತ, ಚಿತ್ತ, ವಿಶಾಖ, ಜ್ಯೇಷ್ಟ, ಪೂರ್ವಾಷಾಡ, ಉತ್ತರಾಷಾಡ, ಶ್ರಾವಣ, ಧನಿಷ್ಠ, ಪೂರ್ವಭಾದ್ರಪದ, ರೇವತಿ

ಚಂದ್ರಬಲ - ವೃಷಭ, ಕರ್ಕಾಟಕ, ಸಿಂಹ, ವೃಶ್ಚಿಕ, ಧನು, ಮೀನ

ಶುಭವಾಗಲಿ, ಶುಭದಿನ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.