ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿ ಜಾತಕರಿಗೆ ಶಾಂತಿ, ಸಂತಸ, ನೆಮ್ಮದಿ

ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿ ಜಾತಕರಿಗೆ ಶಾಂತಿ, ಸಂತಸ, ನೆಮ್ಮದಿ

ಕನ್ಯಾ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿಯ ಜಾತಕರಿಗೆ ಅನುಕೂಲಕರ ಫಲಿತಾಂಶಗಳಿವೆ. ನೀವು ಆರಂಭಿಸುವ ಎಲ್ಲ ಕೆಲಸಗಳಲ್ಲಿಯೂ ಉತ್ತಮ ಫಲವೇ ಸಿಗಲಿದೆ. ಮನಸ್ಸಿನ ನೆಮ್ಮದಿಗಾಗಿ ಯಾವ ದೇವರನ್ನು ಹೇಗೆ ಆರಾಧಿಸಬೇಕು ಎನ್ನುವ ಮಾಹಿತಿಯನ್ನೂ ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ ಈ ಬರಹದಲ್ಲಿ ನೀಡಿದ್ದಾರೆ.

ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ
ಕನ್ಯಾ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಯುಗಾದಿ ವರ್ಷ ಭವಿಷ್ಯ 2024: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿಯವರಿಗೆ ಗುರು ಗ್ರಹ ಸಂಕ್ರಮಣ, 6ನೇ ಸ್ಥಾನದಲ್ಲಿ ಶನಿ, 7ನೇ ಸ್ಥಾನದಲ್ಲಿ ರಾಹು ಮತ್ತು 1ನೇ ಸ್ಥಾನದಲ್ಲಿ ಕೇತು ಸಂಚಾರ ಮಾಡುವುದರಿಂದ ಅನುಕೂಲಕರ ಫಲಗಳು ಸಿಗಲಿವೆ. 6 ನೇ ಮನೆಯಲ್ಲಿ ಶನಿ, ಭಾಗ್ಯಸ್ಥಾನದಲ್ಲಿ ಗುರುವಿನ ಅನುಕೂಲಕರ ಅಂಶಗಳು ಇರುವುದರಿಂದ ನೀವು ಮಾಡುವ ಎಲ್ಲ ಕೆಲಸಗಳಲ್ಲಿಯೂ ಯಶಸ್ವಿಯಾಗುತ್ತೀರಿ.

ಕನ್ಯಾ ರಾಶಿಯವರಿಗೆ ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಸಂಪತ್ತು ಮತ್ತು ಕೀರ್ತಿ ಲಭಿಸುತ್ತದೆ. ಜನ್ಮ ರಾಶಿಯಲ್ಲಿ ಕೇತು ಮತ್ತು ಕಳತ್ರ ಸ್ಥಾನದಲ್ಲಿ ರಾಹು ಪ್ರಭಾವದಿಂದಾಗಿ, ಈ ರಾಶಿಯವರು ಕೆಲಸದಲ್ಲಿ ಒತ್ತಡ ಮತ್ತು ಕುಟುಂಬದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ. ಕೋಪವನ್ನು ಹತೋಟಿಯಲ್ಲಿಟ್ಟುಕೊಂಡರೆ ಈ ರಾಶಿಯವರಿಗೆ ಉತ್ತಮ ಫಲಿತಾಂಶಗಳು ಸಿಗುತ್ತವೆ. ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾಗಿರುತ್ತದೆ. ಆದರೆ, ಶನಿ ಮತ್ತು ಗುರುಗಳ ಹೊಂದಾಣಿಕೆಯಿಂದ ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಪಡೆಯುತ್ತಾರೆ.

ಉದ್ಯಮಿಗಳಿಗೆ ಈ ವರ್ಷ ಎಲ್ಲ ರೀತಿಯಲ್ಲೂ ಅನುಕೂಲಕರವಾಗಿದೆ. ಉದ್ಯಮಿಗಳು ಆರ್ಥಿಕ ಲಾಭ, ಖ್ಯಾತಿ ಮತ್ತು ವಿಜಯವನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳಿಗೆ ಈ ವರ್ಷ ಒತ್ತಡ ಹೆಚ್ಚಿದ್ದರೂ ಯೋಜಿತ ರೀತಿಯಲ್ಲಿ ಯಶಸ್ಸು ಸಾಧಿಸುವರು. ಕೌಟುಂಬಿಕ ಸಮಸ್ಯೆಗಳಿಂದ ಮಹಿಳೆಯರು ತೊಂದರೆಗೊಳಗಾಗುತ್ತಾರೆ. ಇಷ್ಟದ ವಿಷಯಗಳಿಗೆ ಹಣವನ್ನು ಖರ್ಚು ಮಾಡಲಿದ್ದಾರೆ. ರೈತರು ಮತ್ತು ಚಿತ್ರೋದ್ಯಮಿಗಳಿಗೆ ಅನುಕೂಲಕರ ಫಲಗಳು ಕಂಡು ಬರುತ್ತಿವೆ.

ಕನ್ಯಾ ರಾಶಿಯವರಿಗೆ ಈ ವರ್ಷ ಪ್ರಣಯದ ವಿಚಾರದಲ್ಲಿ ಅನುಕೂಲಕರ ಫಲಗಳೇ ಕಾಣಿಸುತ್ತಿವೆ. ಸಂಗಾತಿಯೊಂದಿಗೆ ಸಂತಸದಿಂದ ಕಾಲ ಕಳೆಯಲಿದ್ದಾರೆ. ಈ ವರ್ಷ ಕನ್ಯಾ ರಾಶಿಯವರಿಗೆ ಆರ್ಥಿಕ ಅಭಿವೃದ್ಧಿಯು ಸಿಗಲಿದೆ. ಧನಲಾಭ ಮತ್ತು ಜಯ ದೊರೆಯಲಿದೆ. ಸಂಪಾದನೆ ಚೆನ್ನಾಗಿ ಆಗುವಾಗ ಸಾಲ ತೀರಿಸಿಕೊಳ್ಳಲು ಗಮನಕೊಡಿ. ಅಪವ್ಯಯ ಮಾಡದಿರಿ.

ಕನ್ಯಾ ರಾಶಿಯವರಿಗೆ ಈ ವರ್ಷ ವೃತ್ತಿಯ ದೃಷ್ಟಿಯಿಂದ ಅನುಕೂಲ ಹೆಚ್ಚು. ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಉದ್ಯೋಗಿಗಳಿಗೆ ಕೆಲಸದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ವ್ಯಾಪಾರಸ್ಥರು ವ್ಯಾಪಾರದಲ್ಲಿ ಉತ್ತಮ ಅಭಿವೃದ್ಧಿ ಕಾಣುತ್ತಾರೆ. ಕಳೆದ ಕೆಲ ತಿಂಗಳುಗಳಿಂದ ಕಾಡುತ್ತಿದ್ದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಿಮ್ಮ ಪಾಲಿಗೆ ಇದು ಕುಟುಂಬ ಸೌಕರ್ಯ, ಸಂತೋಷ ಮತ್ತು ಆರೋಗ್ಯದ ವರ್ಷವಾಗಲಿದೆ.

ಕನ್ಯಾ ರಾಶಿಯವರಿಗೆ ಪರಿಹಾರ ಸೂಚನೆಗಳು

ಮಂಗಳಕರ ಫಲಿತಾಂಶಗಳಿಗಾಗಿ ಕನ್ಯಾ ರಾಶಿಯವರು ವಿಘ್ನೇಶ್ವರನನ್ನು ಪೂಜಿಸಬೇಕು. ಸುಬ್ರಹ್ಮಣ್ಯ ಅಷ್ಟಕ ಪಠಿಸಬೇಕು. ಆದಿತ್ಯ ಹೃದಯ ಪಾರಾಯಣ, ಶ್ರವಣದಿಂದಲೂ ಉತ್ತಮ ಫಲಗಳು ಸಿಗಲಿವೆ. ದಕ್ಷಿಣಾಮೂರ್ತಿ ಸ್ತೋತ್ರ ಪಾರಾಯಣ, ದುರ್ಗಾಮಾತೆಯ ಆರಾಧನೆ, ಸುಬ್ರಹ್ಮಣ್ಯನ ಆರಾಧನೆ ಮಾಡುವುದರಿಂದ ಹೆಚ್ಚಿನ ಶ್ರೇಯಸ್ಸು ಲಭಿಸುತ್ತದೆ. ನವರತ್ನಗಳ ಪೈಕಿ ಪಚ್ಚೆಯನ್ನು ಕನ್ಯಾ ರಾಶಿಯವರು ಧರಿಸಬೇಕು. ಕನ್ಯಾ ರಾಶಿಯವರು ವಿಷ್ಣು ಆರಾಧನೆ ಮಾಡಬೇಕು.

ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕನ್ಯಾ ರಾಶಿಯ ಮಾಸವಾರು ಭವಿಷ್ಯ

ಏಪ್ರಿಲ್ 2024: ಈ ತಿಂಗಳು ಎಲ್ಲಾ ವರ್ಗದ ಜನರನ್ನು ಒಟ್ಟುಗೂಡಿಸುತ್ತದೆ. ಕುಟುಂಬದಲ್ಲಿ ಹೆಚ್ಚುವರಿ ಆದಾಯ, ಸಂತೋಷ, ಮದುವೆ, ಮನೆ ಮತ್ತು ವ್ಯವಹಾರದಲ್ಲಿ ಅಭಿವೃದ್ಧಿಯ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿದೆ. ಮದುವೆಗೆ ಸಂಬಂಧಿಸಿದ ಕಾರ್ಯಕ್ರಮಗಳು ನಡೆಯಲಿವೆ.

ಮೇ 2024: ಕನ್ಯಾ ರಾಶಿಯವರಿಗೆ ಈ ತಿಂಗಳು ಶುಭ ಫಲಗಳನ್ನು ನೀಡಲಿದೆ. ಶ್ರಮಕ್ಕೆ ಅನುಗುಣವಾಗಿ ಗಳಿಕೆಯು ಇರುತ್ತದೆ. ಅಲ್ಪ ಪ್ರಮಾಣದ ಧನಹಾನಿ ಸಾಧ್ಯೆಯಿದೆ. ಮದುವೆಯಂಥ ಶುಭ ಕಾರ್ಯಗಳು ನಿಗದಿಯಾಗಿದ್ದರೆ ಎಚ್ಚರಿಕೆಯಿಂದ ಹೆಜ್ಜೆ ಇಡಿ.

ಜೂನ್ 2024: ಈ ತಿಂಗಳು ಕನ್ಯಾ ರಾಶಿರಯವರಿಗೆ ಅಷ್ಟಾಗಿ ಅನುಕೂಲಕರವಲ್ಲ. ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ತುಸು ಉತ್ತಮ ಫಲಗಳು ಸಿಗಬಹುದು. ಆದರೆ ವ್ಯಾಪಾರದಲ್ಲಿ ಆದಾಯ ಕಡಿಮೆಯಾಗಲಿದೆ. ಅನಾರೋಗ್ಯದ ತೊಂದರೆಗಳು ಕಾಣಿಸಿಕೊಳ್ಳಲಿದ್ದು, ಕೆಲ ಕಾರ್ಯಗಳಲ್ಲಿ ಅನಿರೀಕ್ಷಿತ ಉಪದ್ರವ ಎದುರಾಗಬಹುದು.

ಜುಲೈ 2024: ಕನ್ಯಾ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿಲ್ಲ. ಹಣದ ವೆಚ್ಚ ಹೆಚ್ಚು. ಕೆಲವು ತೊಂದರೆಗಳಿಂದ ಶಾಂತಿಭಂಗವಾಗುತ್ತದೆ. ಅನಗತ್ಯ ಪ್ರಯಾಣಗಳಿಂದ ಕಿರಿಕಿರಿ ಅನುಭವಿಸಬೇಕಾಗುತ್ತದೆ.

ಆಗಸ್ಟ್ 2024: ಈ ತಿಂಗಳು ಕನ್ಯಾ ರಾಶಿಯವರಿಗೆ ಸಾಮಾನ್ಯ ಫಲಗಳನ್ನು ಕೊಡಲಿದೆ. ಆರೋಗ್ಯ ಮತ್ತು ಆಸ್ತಿಗೆ ಸಂಬಂಧಿಸಿದಂತೆ ಅನಿರೀಕ್ಷಿತ ಸಮಸ್ಯೆಗಳು ಉಂಟಾಗಬಹುದು. ಮದುವೆಗೆ ಸಂಬಂಧಿಸಿದಂತೆ ಶುಭ ವಾರ್ತೆಗಳನ್ನು ಕೇಳುವ ಸಾಧ್ಯತೆಯಿದೆ.

ಸೆಪ್ಟೆಂಬರ್ 2024: ಕನ್ಯಾ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿಲ್ಲ. ಅತಿಯಾದ ಕೆಲಸ, ಅನಿರೀಕ್ಷಿತ ಕಿರಿಕಿರಿ ಉಂಟಾಗುತ್ತದೆ. ವ್ಯವಹಾರವೊಂದರಲ್ಲಿ ಹೂಡಿಕೆಗೆ ಯತ್ನಿಸುತ್ತೀರಿ. ಆದಕ್ಕೆ ಹಲವು ವಿಘ್ನಗಳು ಎದುರಾಗುತ್ತವೆ. ತಾಳ್ಮೆಯಿಂದ ನೀವು ಪ್ರತಿಯೊಂದನ್ನೂ ಆಲೋಚಿಸಿ ಮುಂದಿನ ಹೆಜ್ಜೆ ಇಡಬೇಕು.

ಅಕ್ಟೋಬರ್ 2024: ಈ ತಿಂಗಳು ನಿಮಗೆ ಸಾಮಾನ್ಯ ಫಲಗಳನ್ನು ನೀಡಲಿದೆ. ವಿವಾಹದಂಥ ಶುಭ ಕಾರ್ಯಗಳಿಗೆ ಸಂಬಂಧಿಸಿದ ಕೆಲಸಗಳು ಅಂದುಕೊಂಡ ವೇಗದಲ್ಲಿ ನಡೆಯದಿರಬಹುದು. ಸ್ನೇಹಿತರೊಂದಿಗೆ ಸಾಕಷ್ಟು ಚರ್ಚೆ ನಡೆಸುವಿರಿ.

ನವೆಂಬರ್ 2024: ಕನ್ಯಾ ರಾಶಿಯವರಿಗೆ ಈ ತಿಂಗಳು ಮಧ್ಯಮವಾಗಿದೆ. ಆರೋಗ್ಯ ಉತ್ತಮಗೊಳ್ಳುತ್ತದೆ. ಅವಕಾಶ ಸಿಕ್ಕಾಗಲೆಲ್ಲಾ ಸ್ನೇಹಿತರೊಂದಿಗೆ ವಿಹಾರಕ್ಕೆ ಹೋಗಿಬನ್ನಿ. ಕೆಲವೊಮ್ಮೆ ಅನಿರೀಕ್ಷಿತವಾಗಿ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗಿ ಬಂದಾಗ ಹಿಂಜರಿಯಬೇಡಿ. ನಿರುದ್ಯೋಗಿಗಳಿಗೆ ಉದ್ಯೋಗ ಸಿಗುವ ಸಾಧ್ಯತೆಯಿದೆ. ಹಣಕಾಸಿನ ತೊಂದರೆ ಎದುರಾಗಬಹುದಾದರೂ, ಅದು ದೀರ್ಘಕಾಲ ಇರುವುದಿಲ್ಲ.

ಡಿಸೆಂಬರ್ 2024: ಈ ತಿಂಗಳಲ್ಲಿ ಕನ್ಯಾ ರಾಶಿಯವರಿಗೆ ಸಾಮಾನ್ಯ ಫಲಗಳು ಇರುತ್ತವೆ. ಹೊಸ ಸ್ನೇಹಿತರೊಂದಿಗೆ ಶುಭ ಸಮಾರಂಭಗಳಲ್ಲಿ ಭಾಗವಹಿಸುವಿರಿ. ಯಾವುದೇ ಹೊಸ ಸಾಹಸ ಆರಂಭಿಸಬೇಕು ಎಂದುಕೊಂಡಿದ್ದರೆ ಈ ತಿಂಗಳಲ್ಲಿ ಪ್ರಯತ್ನಿಸಬಹುದು. ಶತ್ರುಗಳು ಮಿತ್ರರಾಗುವ ಸಮಯ ಇದು. ಜೀವನದಲ್ಲಿ ಏರಿಳಿತಗಳು ಕಡಿಮೆಯಾಗುತ್ತವೆ. ಉದ್ಯೋಗಿಗಳಿಗೆ ವೃತ್ತಿಯಲ್ಲಿ ಕೆಲ ತೊಂದರೆ ಕಾಣಿಸಬಹುದು.

ಜನವರಿ 2025: ಈ ತಿಂಗಳಲ್ಲಿ ನಿಮಗೆ ನಕಾರಾತ್ಮಕ ಫಲಿತಾಂಶಗಳು ಹೆಚ್ಚು ಕಾಣಿಸಬಹುದು. ಅನಿರೀಕ್ಷಿತ ಸಮಸ್ಯೆಗಳು ತೊಂದರೆಗೆ ಕಾರಣವಾಗಬಹುದು. ಅನಗತ್ಯ ವೆಚ್ಚ, ಸುದೀರ್ಘ ಪ್ರಯಾಣ, ಅನಾರೋಗ್ಯಗಳಿಂದ ತೊಂದರೆ ಆಗಬಹುದು. ದೇಗುಲಕ್ಕೆ ಭೇಟಿ ನೀಡುವ ಸಾಧ್ಯತೆಯಿದೆ. ಮನೆಯಲ್ಲಿ ನಡೆಯಬೇಕಿದ್ದ ಶುಭ ಕಾರ್ಯಗಳು ತಡವಾಗಬಹುದು.

ಫೆಬ್ರವರಿ 2025: ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲ. ಪ್ರಯಾಣದ ಸಮಯದಲ್ಲಿ ಕಳ್ಳತನದ ಭಯ ಕಾಣಿಸಿಕೊಳ್ಳಬಹುದು. ಇದರ ಜೊತೆಗೆ ವೆಚ್ಚ ಹೆಚ್ಚುತ್ತಿರುವುದರಿಂದ ಅಸಹನೆಯೂ ತಲೆದೋರಬಹುದು. ಅನಾರೋಗ್ಯ ಕಾಡಬಹುದಾದ ಮುನ್ಸೂಚನೆ ಸಿಕ್ಕರೆ ನಿರ್ಲಕ್ಷಿಸಬೇಡಿ. ಪರಸ್ಪರ ಮಾತುಕತೆಯಿಂದ ಸಂಬಂಧಗಳನ್ನು ವೃದ್ಧಿಸಿಕೊಳ್ಳಲು ಪ್ರಯತ್ನಿಸಿ.

ಮಾರ್ಚ್ 2025: ಕನ್ಯಾ ರಾಶಿಯವರಿಗೆ ಈ ತಿಂಗಳು ಅನುಕೂಲಕರವಾಗಿಲ್ಲ. ಉದ್ಯಮಿಗಳಿಗೆ ಕೆಲ ವ್ಯವಹಾರಗಳಿಂದ ಲಾಭ ಸಿಗಬಹುದು. ಸರ್ಕಾರಿ ಅಧಿಕಾರಿಗಳಿಂದ ತೊಂದರೆಗಳು ಉಂಟಾಗುವ ಸಾಧ್ಯತೆಯಿದೆ. ರಾಜಕಾರಣಿಗಳು ಮನ್ನಣೆ ಪಡೆಯಲು ಹೊಸ ತಂತ್ರಗಳನ್ನು ರೂಪಿಸಲಿದ್ದಾರೆ.

ಬರಹ: ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ