ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುತ್ತದೆ ಕೇತುವಿನ ಸ್ಥಾನ: ನಿಮ್ಮ ಜಾತಕದಲ್ಲಿ ಕೇತು ಯಾವ ಮನೆಯಲ್ಲಿದ್ದಾನೆ ಪರೀಕ್ಷಿಸಿಕೊಳ್ಳಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುತ್ತದೆ ಕೇತುವಿನ ಸ್ಥಾನ: ನಿಮ್ಮ ಜಾತಕದಲ್ಲಿ ಕೇತು ಯಾವ ಮನೆಯಲ್ಲಿದ್ದಾನೆ ಪರೀಕ್ಷಿಸಿಕೊಳ್ಳಿ

ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುತ್ತದೆ ಕೇತುವಿನ ಸ್ಥಾನ: ನಿಮ್ಮ ಜಾತಕದಲ್ಲಿ ಕೇತು ಯಾವ ಮನೆಯಲ್ಲಿದ್ದಾನೆ ಪರೀಕ್ಷಿಸಿಕೊಳ್ಳಿ

Placement Of Ketu In Birth Chart: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಜಾತಕದಲ್ಲಿ ಕೇತುವಿನ ಸ್ಥಾನವು ವ್ಯಕ್ತಿಯ ಜೀವನದ ವಿವಿಧ ಅಂಶಗಳಾದ ವ್ಯಕ್ತಿತ್ವ, ಸಂಪತ್ತು, ಸಂವಹನ, ಸಂಬಂಧ, ಆಧ್ಯಾತ್ಮಿಕ ಮತ್ತು ಸೃಜನಶೀಲತೆ ಮೊದಲಾದವುಗಳ ಮೇಲೆ ಪ್ರಭಾವ ಬೀರುತ್ತದೆ. ಕೇತು ಯಾವ ಮನೆಯಲ್ಲಿದ್ದರೆ ಏನು ಪರಿಣಾಮ ಬೀರುತ್ತಾನೆ ಎಂದು ನೋಡೋಣ.

ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುತ್ತದೆ ಕೇತುವಿನ ಸ್ಥಾನ: ನಿಮ್ಮ ಜಾತಕದಲ್ಲಿ ಕೇತು ಯಾವ ಮನೆಯಲ್ಲಿದ್ದಾನೆ ಪರೀಕ್ಷಿಸಿಕೊಳ್ಳಿ
ಜೀವನದ ವಿವಿಧ ಅಂಶಗಳನ್ನು ನಿರ್ಧರಿಸುತ್ತದೆ ಕೇತುವಿನ ಸ್ಥಾನ: ನಿಮ್ಮ ಜಾತಕದಲ್ಲಿ ಕೇತು ಯಾವ ಮನೆಯಲ್ಲಿದ್ದಾನೆ ಪರೀಕ್ಷಿಸಿಕೊಳ್ಳಿ (PC: HT File Photo)

ವೈದಿಕ ಜ್ಯೋತಿಷ್ಯ ಶಾಸ್ತ್ರವು ಗ್ರಹ, ನಕ್ಷತ್ರ, ರಾಶಿಗಳನ್ನು ಒಳಗೊಂಡಿದೆ. ಇವೆಲ್ಲವೂ ವ್ಯಕ್ತಿಯ ಜಾತಕದ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಗ್ರಹ, ನಕ್ಷತ್ರ, ರಾಶಿಗಳ ಸ್ಥಾನದ ಮೇರೆಗೆ ಆ ವ್ಯಕ್ತಿಯ ಭವಿಷ್ಯವನ್ನು ಹೇಳಲಾಗುತ್ತದೆ. ಪ್ರತಿಯೊಬ್ಬರ ಜಾತಕವು ಗ್ರಹಗಳ ಸ್ಥಾನವನ್ನು ಅವಲಂಬಿಸಿರುತ್ತದೆ. ಯಾವ ಗ್ರಹ ಯಾವ ಮನೆಯಲ್ಲಿದೆ ಎಂಬುದು ಬಹಳ ಮುಖ್ಯವಾಗಿರುತ್ತದೆ. ವಿವಿಧ ಮನೆಗಳಲ್ಲಿ ಅವುಗಳ ಇರುವಿಕೆಯು ವ್ಯಕ್ತಿಯ ಜೀವನದ ಹಲವಾರು ಅಂಶಗಳನ್ನು ಬಹಿರಂಗಪಡಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳು ಎಂದು ಕರೆಯಲಾಗುತ್ತದೆ. ಕೇತು ಗ್ರಹವು 1 ರಿಂದ 9 ಮನೆಗಳಲ್ಲಿ ಯಾವ ಮನೆಯಲ್ಲಿ ನೆಲೆಸಿದೆ ಅನ್ನುವುದರ ಮೂಲಕ‌ ಅದು ಶುಭ ಮತ್ತು ಅಶುಭ ಫಲಗಳನ್ನು ಉಂಟುಮಾಡುತ್ತದೆ.

ಕೇತು ಗ್ರಹವು 1 ರಿಂದ 9ನೇ ಮನೆಗಳಲ್ಲಿದ್ದಾಗ ಜೀವನದ ವಿವಿಧ ಅಂಶಗಳನ್ನು ಹೇಗೆ ನಿರ್ಧರಿಸುತ್ತದೆ?

1 ನೇ ಮನೆ

ಜಾತಕದಲ್ಲಿ ಕೇತುವು 1ನೇ ಮನೆಯಲ್ಲಿದ್ದಾಗ ಅದು ಆಧ್ಯಾತ್ಮಿಕ ವ್ಯಕ್ತಿತ್ವವನ್ನು ರೂಪಿಸುತ್ತದೆ. ಈ ವ್ಯಕ್ತಿಗಳು ಆತ್ಮಾವಲೋಕನವನ್ನು ಮಾಡಿಕೊಳ್ಳುವವರಾಗಿರುತ್ತಾರೆ. ಇವರು ಆಗಾಗ ನಿಗೂಢ ವ್ಯಕ್ತಿಗಳಂತೆ ಕಾಣಿಸುತ್ತಾರೆ. ಇವರು ಕನಸುಗಳನ್ನು ಕಾಣುವವರು ಮತ್ತು ಇವರನ್ನು ಇತರರು ಸುಲಭವಾಗಿ ಅರ್ಥಮಾಡಿಕೊಳ್ಳಬಹುದಾಗಿದೆ.

2 ನೇ ಮನೆ

ಕೇತು ಗ್ರಹವು 2ನೇ ಮನೆಯಲ್ಲಿದ್ದರೆ ಸಂಪತ್ತು ಮತ್ತು ಮಾತುಗಾರಿಕೆಯನ್ನು ಪ್ರಚೋದಿಸುತ್ತದೆ. ಇವರು ಇಂಪಾದ ಧ್ವನಿಯನ್ನು ಉಡುಗೊರೆಯಾಗಿ ಪಡೆದಿರುತ್ತಾರೆ. ಹಣಕಾಸಿನಲ್ಲಿ ಅನಿರೀಕ್ಷಿತ ತಿರುವುಗಳನ್ನು ಕಾಣಬಹುದು. ಇವರ ಮಾತು ಕವಿವಾಣಿಯ ಸ್ಪರ್ಶವನ್ನು ನೀಡುತ್ತದೆ.

3 ನೇ ಮನೆ

ಇವರ ಮಾತು ಕತ್ತಿಯ ಅಲಗಿನಷ್ಟು ಹರಿತವಾಗಿರುತ್ತದೆ. ಇವರಿಗೆ ಆಳವಾದ ವಿಚಾರಗಳನ್ನು ವ್ಯಕ್ತಪಡಿಸುವ ಕೌಶಲವಿರುತ್ತದೆ. ಇವರು ಎಲ್ಲರಿಗೂ ಆಧಾರವೆಂಬಂತೆ ಕಾಣಿಸುತ್ತಾರೆ. ಇವರು ಅಸಾಧ್ಯ ಪರಿಸ್ಥಿತಿಯಲ್ಲಿಯೂ ಸಂತೋಷವನ್ನು ಕಂಡುಕೊಳ್ಳುತ್ತಾರೆ.

4 ನೇ ಮನೆ

ಜಾತಕದಲ್ಲಿ 4ನೇ ಮನೆಯಲ್ಲಿ ಕೇತುವು ಇದ್ದರೆ ಅವರು ಭೌತಿಕ ಸಾಧನಗಳ ಬಗ್ಗೆ ಹೆಚ್ಚು ಯೋಚಿಸಲಾರರು. ಆದರೆ ಇವರ ಹೃದಯವು ಮನೆ ಮತ್ತು ಕುಟುಂಬದ ಬಗ್ಗೆ ಹೆಚ್ಚು ಒಲವು ತೋರುತ್ತದೆ. ಇವರು ಭಾವಜೀವಿಗಳಾಗಿದ್ದಾರೆ.

5 ನೇ ಮನೆ

ಈ ಮನೆಯಲ್ಲಿ ಕೇತು ಗ್ರಹವಿದ್ದರೆ ಅವರು ಸೃಜನಶೀಲರಾಗಿರುತ್ತಾರೆ. ಇದು ಅವರಲ್ಲಿ ಕಲಾತ್ಮಕ ಪ್ರತಿಭೆಯನ್ನು ಪ್ರೇರೇಪಿಸುತ್ತದೆ. ಸಾಮಾನ್ಯವಾಗಿ ಪ್ರಣಯವು ಇವರಿಗೆ ಬಿಡಿಸಲಾಗದ ಒಗಟಿನಂತೆ ಭಾಸವಾಗುತ್ತದೆ. ಇವರ ಹೃದಯವು ಹೌದು ಎಂದು ಹೇಳುವು ವಿಷಯಗಳಿಗೆ ಕೇತುವು ಮತ್ತೊಮ್ಮೆ ಯೋಚಿಸು ಎಂದು ಹೇಳುತ್ತದೆ.

6 ನೇ ಮನೆ

ಇವರಲ್ಲಿ ಅಡೆತಡೆಗಳನ್ನು ಜಯಿಸುವ ಅನನ್ಯ ಸಾಮರ್ಥ್ಯವಿರುತ್ತದೆ. ಶತ್ರುಗಳಿಂದ ಜಾಗರೂಕರಾಗಿರುತ್ತಾರೆ. ಇದು ಇವರಿಗೆ ಪ್ರಬಲವಾದ ಆಂತರಿಕ ಶಕ್ತಿಯನ್ನು ನೀಡುತ್ತದೆ. ಸವಾಲುಗಳನ್ನು ಎದುರಿಸಿ ಜಯ ಸಾಧಿಸುತ್ತಾರೆ. ಈ ವಿಷಯಗಳು ಇವರ ಎದುರಾಳಿಗಳು ಯೋಚಿಸುವಂತೆ ಮಾಡುತ್ತದೆ.

7 ನೇ ಮನೆ

ಕೇತುವು 7ನೇ ಮನೆಯಲ್ಲಿದ್ದರೆ ಇವರು ಸಂಬಂಧಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಕರ್ಮವನ್ನು ಸಂಗಾತಿಗಳೊಂದಿಗೆ ಸೇರಿ ಅನುಭವಿಸಬಹುದು. ಅವರೊಂದಿಗೆ ಸಮತೋಲನವನ್ನು ಕಂಡುಕೊಳ್ಳುವ ದಾರಿಯಲ್ಲಿ ಬಹಳಷ್ಟು ಪಾಠಗಳನ್ನು ಕಲಿಯಬಹುದು. ಮದುವೆಯೆಂಬುದು ಇವರಿಗೆ ಸುಂದರ ಕಥೆಯಂತೆ ಯಾವಾಗಲೂ ಇರುವುದಿಲ್ಲ.

8 ನೇ ಮನೆ

ಇವರು ಆಧ್ಯಾತ್ಮವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತಾರೆ. ಮರಣಾನಂತರದ ಜೀವನ, ಆತ್ಮ, ಪರಮಾತ್ಮ, ಬ್ರಹ್ಮಾಂಡದ ರಹಸ್ಯ ಮುಂತಾದ ವಿಷಯಗಳಿಗೆ ತಲೆಬಾಗುತ್ತಾರೆ.

9 ನೇ ಮನೆ

ಕೇತುವು 9ನೇ ಮನೆಯಲ್ಲಿದ್ದರೆ ಅದು ಅವರನ್ನು ತತ್ವಜ್ಞಾನಿಯನ್ನಾಗಿಸುತ್ತದೆ. ಆಧ್ಯಾತ್ಮಿಕತೆಯು ಮುಖ್ಯ ಪಾತ್ರವಹಿಸು‌ತ್ತದೆ. ಇದು ಅವರನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ ಹಿಂದೂಸ್ತಾನ್ ಟೈಮ್ಸ್ ಕನ್ನಡ ಪುಷ್ಟಿಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner

ವಿಭಾಗ

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.