ಕೇತು ಸಂಕ್ರಮಣ 2025: ಕಟಕ ರಾಶಿಯವರಿಗೆ ಹಣಕಾಸಿನ ಸಮಸ್ಯೆ ಕನ್ಯಾ ರಾಶಿಯವರಿಗೆ ಅನಾರೋಗ್ಯ ಕಾಡಲಿದೆ; ಪರಿಹಾರ ಹೀಗಿದೆ
Ketu Transit 2025: ಸುಮಾರು 18 ತಿಂಗಳ ನಂತರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕೇತುವು 2025 ಮೇ 18 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ, ಇದರಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲ ದೊರೆಯುತ್ತದೆ. ಕಟಕ, ಸಿಂಹ, ಕನ್ಯಾ ರಾಶಿ ಕೇತು ಸಂಕ್ರಮಣ 2025ರ ಫಲ ಹೀಗಿದೆ.
ಕೇತು ಸಂಕ್ರಮಣ 2025: ಜ್ಯೋತಿಷ್ಯಶಾಸ್ತ್ರದಲ್ಲಿ ಕೇತು, ರಾಹುವಿನ ದ್ವಿತೀಯಾರ್ಧ ಎಂದು ನಂಬಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ, ಸ್ವರ್ಭಾನು ಎಂಬ ರಾಕ್ಷಸನು ದೇವತೆಗಳ ನಡುವೆ ಕುಳಿತು ಅಮೃತವನ್ನು ಕುಡಿಯಲು ಪ್ರಯತ್ನಿಸಿದಾಗ, ವಿಷ್ಣುವು ಮೋಹಿನಿ ಅವತಾರದಲ್ಲಿ ಅವನನ್ನು ಗುರುತಿಸಿ ತನ್ನ ಸುದರ್ಶನ ಚಕ್ರದಿಂದ ಅವನ ತಲೆಯನ್ನು ಕತ್ತರಿಸುತ್ತಾನೆ. ಅಮೃತದ ಕೆಲವು ಹನಿಗಳು ಅವನ ಗಂಟಲನ್ನು ಪ್ರವೇಶಿಸಿದ ಪರಿಣಾಮವಾಗಿ ಅವನು ಶಾಶ್ವತನಾಗುತ್ತಾನೆ. ಪರಿಣಾಮವಾಗಿ, ತಲೆಗೆ ರಾಹು ಎಂದೂ, ಮುಂಡಕ್ಕೆ ಕೇತು ಎಂಬ ಹೆಸರು ಬಂತು.
ಮತ್ತೊಂದು ಕಥೆಯ ಪ್ರಕಾರ ಸೂರ್ಯ ಮತ್ತು ಚಂದ್ರರು ಸ್ವರ್ಭಾನುವಿನ ಬಗ್ಗೆ ವಿಷ್ಣುವಿನ ಅವತಾರವಾದ ಮೋಹಿನಿ ಬಳಿ ದೂರು ನೀಡುತ್ತಾರೆ. ಇದರ ಪರಿಣಾಮವಾಗಿ, ರಾಹು ಮತ್ತು ಕೇತುಗಳು ಸೂರ್ಯ ಮತ್ತು ಚಂದ್ರರನ್ನು ಬಾಧಿಸುತ್ತಾರೆ,. ಗ್ರಹಣಗಳು ಉಂಟಾಗುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳೆಂದು ಕರೆಯಲಾಗುತ್ತದೆ. ರಾಹು ಮತ್ತು ಕೇತುಗಳು ಪ್ರತಿ 18 ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮುಂದಿನ ರಾಶಿಗೆ ಸಾಗುತ್ತವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಯ ಜೀವನದಲ್ಲಿ ರಾಹು ಕೇತುವಿನ ಪ್ರಭಾವ ಇರುತ್ತದೆ. 2025 ಮೇ 18 ರಂದು ಕೇತು, ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಎಲ್ಲಾ 12 ರಾಶಿಗಳಿಗೆ ವಿವಿಧ ಫಲ ನೀಡುತ್ತಾನೆ.
ಕಟಕ, ಸಿಂಹ, ಕನ್ಯಾ ರಾಶಿ ಕೇತು ಸಂಕ್ರಮಣ 2025ರ ಫಲ
ಕಟಕ ರಾಶಿ
ಈ ರಾಶಿಯವರಿಗೆ 2ನೇ ಮನೆಯಲ್ಲಿ ಕೇತು ಸಂಕ್ರಮಣ ನಡೆಯುತ್ತದೆ. ಎರಡನೇ ಮನೆ ನಿಮ್ಮ ಹಣ, ಮಾತು ಮತ್ತು ಕುಟುಂಬಕ್ಕೆ ನೆಲೆಯಾಗಿದೆ. ಇದರಿಂದ ನಿಮ್ಮ ಜೀವನದಲ್ಲಿ ಏರಿಳಿತ ಉಂಟಾಗುತ್ತದೆ. ನೀವು ಒಂದೇ ಬಾರಿಗೆ ಎರಡು ವಿಷಯಗಳನ್ನು ಅರ್ಥೈಸಬಲ್ಲ ಬಹಳಷ್ಟು ವಿಷಯಗಳನ್ನು ಹೇಳುತ್ತೀರಿ. ಆದರೆ ಅದನ್ನು ಧನಾತ್ಮಕವಾಗಿ ಅಥವಾ ಋಣಾತ್ಮಕವಾಗಿ ನಿರ್ಧರಿಸುವುದು ನಿಮ್ಮ ಜೊತೆ ಇರುವವರಿಗೆ ಸೇರಿದ್ದು. ಆದರೆ ನಿಮ್ಮ ಮಾತುಗಳಿಂದ ಕೆಲವರು ಅಸಮಾಧಾನಗೊಳ್ಳಬಹುದು. ಈ ಸಮಯದಲ್ಲಿ. ಹಣಕಾಸಿನ ಸಮಸ್ಯೆ ಬಹಳವಾಗಿ ಕಾಡಲಿದೆ. ನೀವು ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತೀರಿ. ಇದರಿಂದ ಕೌಟುಂಬಿಕ ಕಲಹ ಉಂಟಾಗುವ ಸಾಧ್ಯತೆಗಳಿವೆ. ಇದನ್ನೆಲ್ಲಾ ತಪ್ಪಿಸಲು ನೀವು ಪರಿಸ್ಥಿತಿಗಳೊಂದಿಗೆ ವ್ಯವಹರಿಸುವುದನ್ನು ಕಲಿಯಬೇಕು. ರಾಹು ಸಂಕ್ರಮಣದ ಸಮಯದಲ್ಲಿ ನೀವು ಬಾಯಿಯ ಹುಣ್ಣು, ಹಲ್ಲುನೋವು ಮತ್ತು ಇತರ ತೊಂದರೆಗಳಿಂದ ಬಳಲಬಹುದು. ನಿಮ್ಮ ಪ್ರೀತಿಪಾತ್ರರ ಆರೋಗ್ಯದ ಕಡೆಗೂ ನೀವು ಗಮನ ಹರಿಸಬೇಕು.
ಪರಿಹಾರ: ಪ್ರತಿ ಮಂಗಳವಾರ ಗಣೇಶನಿಗೆ ಗರಿಕೆ ಅರ್ಪಿಸಬೇಕು
ಸಿಂಹ ರಾಶಿ
ಸಿಂಹ ರಾಶಿಯಲ್ಲೇ ಕೇತು ಸಂಕ್ರಮಣ ನಡೆಯುತ್ತದೆ. ಮೊದಲ ಮನೆಯಲ್ಲಿ ಸಂಕ್ರಮಣ ನಡೆಯಲಿದ್ದುಈ ರಾಶಿಯವರ ಜೀವನದ ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ. ಮೊದಲ ಮನೆಯಲ್ಲಿ ಕೇತು ಸಂಚಾರವು ಅನಾರೋಗ್ಯ ಹೆಚ್ಚಾಗುವಂತೆ ಮಾಡಬಹುದು. ಆದ್ದರಿಂದ ಆರೋಗ್ಯದ ಬಗ್ಗೆ ನೀವು ಜಾಗರೂಕರಾಗಿರಬೇಕು. ಸಣ್ಣ ಸಮಸ್ಯೆಗಳು ಅಥವಾ ಸೋಂಕುಗಳನ್ನು ನೀವು ಕಡೆಗಣಿಸಲೇಬಾರದು. ನಿಮ್ಮ ಸುತ್ತಮುತ್ತಲಿನವರಿಂದ ಕೂಡಾ ನೀವು ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ನಿಮ್ಮ ಆಲೋಚನೆಗಳು ವಿಭಿನ್ನವಾಗಿರುವುದರಿಂದ ಮತ್ತು ನಿಮ್ಮ ಸಂಗಾತಿಯು ಅವುಗಳನ್ನು ಅರ್ಥಮಾಡಿಕೊಳ್ಳದ ಕಾರಣ ವೈವಾಹಿಕ ಸಂಬಂಧಗಳಲ್ಲಿ ಸಮಸ್ಯೆಗಳು ಉಂಟಾಗಬಹುದು. ವ್ಯಾಪಾರದಲ್ಲೂ ಕೆಲವೊಂದು ಸಮಸ್ಯೆಗಳು ಉಂಟಾಗಬಹುದು. ಆದರೆ ನಿಮ್ಮ ವ್ಯಾಪಾರ ಅಥವಾ ಉದ್ಯೋಗದಲ್ಲಿ ಯಶಸ್ಸು ಗಳಿಸಬೇಕು ಎಂದಾದರೆ ನೀವು ಪರಿಣಿತ ವ್ಯಕ್ತಿಯಿಂದ ಸಲಹೆ ಪಡೆಯಬೇಕು.
ಪರಿಹಾರ: ಮಂಗಳವಾರ ಚಿಕ್ಕ ಮಕ್ಕಳಿಗೆ ಬೆಲ್ಲ ಮತ್ತು ಕಾಳು ಪ್ರಸಾದವನ್ನು ಹಂಚಬೇಕು
ಕನ್ಯಾ ರಾಶಿ
2025 ರಲ್ಲಿ ಕೇತು ಸಂಕ್ರಮಣವು ಕನ್ಯಾ ರಾಶಿಯ 12ನೇ ಮನೆಯಲ್ಲಿ ಸಂಭವಿಸುತ್ತದೆ. ಈ ಸಮಯದಲ್ಲಿ ನೀವು ಎಚ್ಚರಿಕೆಯಿಂದ ಇರಬೇಕು. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಇದು ಸಂಪೂರ್ಣ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ಒತ್ತಡ ಉಂಟುಮಾಡುತ್ತದೆ ಮತ್ತು ಅವುಗಳನ್ನು ಹೇಗೆ ನಿರ್ವಹಿಸುವುದು ಎಂದು ನೀವು ಗೊಂದಲಕ್ಕೊಳಗಾಗುತ್ತೀರಿ. ಕೇತು ಸಂಕ್ರಮಣದ ಸಮಯದಲ್ಲಿ ನಿಮಗೆ ಆರೋಗ್ಯ ಸಮಸ್ಯೆಗಳು ಕೂಡಾ ಕಾಡಬಹುದು. ಜ್ವರ, ತೀವ್ರ ತಲೆನೋವು ನಿಮ್ಮನ್ನು ಬಾಧಿಸಬಹುದು ಆದ್ದರಿಂದ ನಿಮ್ಮ ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಕೇತು ಸಂಕ್ರಮಣದಿಂದಾಗಿ, ನಿಮ್ಮ ಮನಸ್ಸಿನಲ್ಲಿ ಆಧ್ಯಾತ್ಮಿಕ ಪರಿಕಲ್ಪನೆಗಳು ಉದ್ಭವಿಸಬಹುದು ಧ್ಯಾನಕ್ಕೆ ಹೆಚ್ಚಿನ ಸಮಯ ವಿನಿಯೋಗಿಸಬಹುದು. ಕೆಲಸದಲ್ಲಿ ನಿಮಗೆ ಆಸಕ್ತಿಯ ಕೊರತೆ ಉಂಟಾಗುತ್ತದೆ.
ಪರಿಹಾರ: ಕೇತು ಗ್ರಹ ಬೀಜ ಮಂತ್ರವನ್ನು ಪಠಿಸಿದರೆ ಶುಭ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.