ಕೇತು ಸಂಕ್ರಮಣ 2025: ಮಕರ ರಾಶಿಯವರಿಗೆ ವೈದ್ಯಕೀಯ ವೆಚ್ಚಗಳಿರಲಿದೆ, ಕುಂಭ ರಾಶಿಯವರಿಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕೇತು ಸಂಕ್ರಮಣ 2025: ಮಕರ ರಾಶಿಯವರಿಗೆ ವೈದ್ಯಕೀಯ ವೆಚ್ಚಗಳಿರಲಿದೆ, ಕುಂಭ ರಾಶಿಯವರಿಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ

ಕೇತು ಸಂಕ್ರಮಣ 2025: ಮಕರ ರಾಶಿಯವರಿಗೆ ವೈದ್ಯಕೀಯ ವೆಚ್ಚಗಳಿರಲಿದೆ, ಕುಂಭ ರಾಶಿಯವರಿಗೆ ಸಂಗಾತಿಯೊಂದಿಗೆ ಭಿನ್ನಾಭಿಪ್ರಾಯ

Ketu Transit 2025: ಸುಮಾರು 18 ತಿಂಗಳ ನಂತರ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಪ್ರವೇಶಿಸುವ ಕೇತುವು 2025 ಮೇ 18 ರಂದು ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ, ಇದರಿಂದ ದ್ವಾದಶ ರಾಶಿಗಳಿಗೆ ವಿವಿಧ ಫಲ ದೊರೆಯುತ್ತದೆ. ಮಕರ, ಕುಂಭ, ಮೀನ ರಾಶಿ ಕೇತು ಸಂಕ್ರಮಣ 2025ರ ಫಲ ಹೀಗಿದೆ.

ಮಕರ, ಕುಂಭ, ಮೀನ ರಾಶಿ ಕೇತು ಸಂಕ್ರಮಣ 2025ರ ಫಲ
ಮಕರ, ಕುಂಭ, ಮೀನ ರಾಶಿ ಕೇತು ಸಂಕ್ರಮಣ 2025ರ ಫಲ (PC: Canva)

ಕೇತು ಸಂಕ್ರಮಣ 2025: ಜ್ಯೋತಿಷ್ಯ ಶಾಸ್ತ್ರದಲ್ಲಿ ಕೇತು, ರಾಹುವಿನ ದ್ವಿತೀಯಾರ್ಧ ಎಂದು ನಂಬಲಾಗಿದೆ. ಸಮುದ್ರ ಮಂಥನದ ಸಮಯದಲ್ಲಿ, ಸ್ವರ್ಭಾನು ಎಂಬ ರಾಕ್ಷಸನು ದೇವತೆಗಳ ನಡುವೆ ಕುಳಿತು ಅಮೃತವನ್ನು ಕುಡಿಯಲು ಪ್ರಯತ್ನಿಸಿದಾಗ, ವಿಷ್ಣುವು ಮೋಹಿನಿ ಅವತಾರದಲ್ಲಿ ಅವನನ್ನು ಗುರುತಿಸಿ ತನ್ನ ಸುದರ್ಶನ ಚಕ್ರದಿಂದ ಅವನ ತಲೆಯನ್ನು ಕತ್ತರಿಸುತ್ತಾನೆ. ಅಮೃತದ ಕೆಲವು ಹನಿಗಳು ಅವನ ಗಂಟಲನ್ನು ಪ್ರವೇಶಿಸಿದ ಪರಿಣಾಮವಾಗಿ ಅವನು ಶಾಶ್ವತನಾಗುತ್ತಾನೆ. ಪರಿಣಾಮವಾಗಿ, ತಲೆಗೆ ರಾಹು ಎಂದೂ, ಮುಂಡಕ್ಕೆ ಕೇತು ಎಂಬ ಹೆಸರು ಬಂತು.

ಮತ್ತೊಂದು ಕಥೆಯ ಪ್ರಕಾರ ಸೂರ್ಯ ಮತ್ತು ಚಂದ್ರರು ಸ್ವರ್ಭಾನುವಿನ ಬಗ್ಗೆ ವಿಷ್ಣುವಿನ ಅವತಾರವಾದ ಮೋಹಿನಿ ಬಳಿ ದೂರು ನೀಡುತ್ತಾರೆ. ಇದರ ಪರಿಣಾಮವಾಗಿ, ರಾಹು ಮತ್ತು ಕೇತುಗಳು ಸೂರ್ಯ ಮತ್ತು ಚಂದ್ರರನ್ನು ಬಾಧಿಸುತ್ತಾರೆ,. ಗ್ರಹಣಗಳು ಉಂಟಾಗುತ್ತವೆ. ವೈದಿಕ ಜ್ಯೋತಿಷ್ಯದಲ್ಲಿ ರಾಹು ಮತ್ತು ಕೇತುವನ್ನು ನೆರಳು ಗ್ರಹಗಳೆಂದು ಕರೆಯಲಾಗುತ್ತದೆ. ರಾಹು ಮತ್ತು ಕೇತುಗಳು ಪ್ರತಿ 18 ತಿಂಗಳಿಗೊಮ್ಮೆ ಒಂದು ರಾಶಿಯಿಂದ ಮುಂದಿನ ರಾಶಿಗೆ ಸಾಗುತ್ತವೆ. ಅಂತಹ ಸಂದರ್ಭದಲ್ಲಿ ವ್ಯಕ್ತಿಯ ಜೀವನದಲ್ಲಿ ರಾಹು ಕೇತುವಿನ ಪ್ರಭಾವ ಇರುತ್ತದೆ. 2025 ಮೇ 18 ರಂದು ಕೇತು, ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದ ಎಲ್ಲಾ 12 ರಾಶಿಗಳಿಗೆ ವಿವಿಧ ಫಲ ನೀಡುತ್ತಾನೆ.

ಮಕರ, ಕುಂಭ, ಮೀನ ರಾಶಿ ಕೇತು ಸಂಕ್ರಮಣ 2025ರ ಫಲ

 

ಮಕರ ಸಂಕ್ರಾಂತಿ

ಕೇತುವು ಮಕರ ರಾಶಿಯ ಎಂಟನೇ ಮನೆಗೆ ಸಾಗುತ್ತಾನೆ. ಈ ಸಮಯದಲ್ಲಿ, ನೀವು ಅನಿರೀಕ್ಷಿತ ಮೂಲಗಳಿಂದ ಆದಾಯ ಗಳಿಸುತ್ತೀರಿ, ಹಾಗೇ ಇದ್ದಕ್ಕಿದ್ದಂತೆ ವೈದ್ಯಕೀಯ ವೆಚ್ಚಗಳು ಉಂಟಾಗಬಹುದು. ಈ ಸಮಯದಲ್ಲಿ ನೀವು ಪಿತ್ತ ಸಂಬಂಧಿ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಎದುರಿಸಬಹುದು. ಕೇತು ಸಂಕ್ರಮಣದ ಪ್ರಭಾವದಿಂದಾಗಿ, ನಿಮ್ಮ ಆಲೋಚನೆಗಳು ಧರ್ಮ, ಆಧ್ಯಾತ್ಮಿಕ ಅಭ್ಯಾಸ ಮತ್ತು ಆಧ್ಯಾತ್ಮಿಕತೆಯ ಮೇಲೆ ಹೆಚ್ಚು ಕೇಂದ್ರೀಕೃತವಾಗಿರುತ್ತವೆ. ನಿಮ್ಮ ಜ್ಞಾನವು ಜ್ಯೋತಿಷ್ಯದಂತಹ ಹವ್ಯಾಸಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿರಬಹುದು. ಇದು ಆತ್ಮಾವಲೋಕನಕ್ಕೆ ಸೂಕ್ತವಾಗಿದೆ. ಆರೋಗ್ಯ ಸಮಸ್ಯೆಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಬಹುದು. ನೀವು ಆರೋಗ್ಯಕರ ಆಹಾರವನ್ನು ಸೇವಿಸಬೇಕು. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಬೇಕು.

ಪರಿಹಾರ:  ಕೇತುವಿನ ಪ್ರಭಾವದಿಂದ ಪಾರಾಗಳು ಬಡವರಿಗೆ ಅಗತ್ಯ ವಸ್ತುಗಳನ್ನು ದಾನ ಮಾಡಿ

ಕುಂಭ ರಾಶಿ

ಈ ರಾಶಿಯವರಿಗೆ ಕೇತು ಸಂಕ್ರಮಣವು ಏಳನೇ ಮನೆಯಲ್ಲಿ ಸಂಭವಿಸಲಿದೆ, ಇದು ದೀರ್ಘ ಪಾಲುದಾರಿಕೆ ಮತ್ತು ಮದುವೆಯ ಮನೆಯಾಗಿದೆ. ಈ ಸಂದರ್ಭದಲ್ಲಿ, ಕೇತು ಸಂಕ್ರಮಣವು ನಿಮ್ಮ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟು ಮಾಡಬಹುದು. ನಿಮ್ಮ, ನಿಮ್ಮ ಸಂಗಾತಿಯ ನಡುವೆ ಹಲವಾರು ಭಿನ್ನಾಭಿಪ್ರಾಯಗಳು, ಉದ್ವಿಗ್ನತೆಗಳು, ಘರ್ಷಣೆಗಳು ಮತ್ತು ಪರಸ್ಪರ ಅಹಂಕಾರದ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ ನೀವು ಬಹಳ ಎಚ್ಚರವಿರಬೇಕು. ಪರಸ್ಪರ ಅನುಮಾನದಿಂದ ನಿಮ್ಮ ಹಾಗೂ ನಿಮ್ಮ ಸಂಗಾತಿಯ ನಡುವೆ ಅಂತರ ಹೆಚ್ಚಾಗಲಿದೆ. ಆದ್ದರಿಂದ ಆದಷ್ಟು ತಾಳ್ಮೆಯಿಂದ ಇದ್ದು ನಿಮ್ಮ ಸಂಗಾತಿ ಜೊತೆ ಅನ್ಯೋನ್ಯತೆಯಿಂದ ಇರಲು ಪ್ರಯತ್ನಿಸಿ. ಕೇತು ಸಂಕ್ರಮಣ ವ್ಯಾಪಾರಸ್ಥರಿಗೆ ಕೂಡಾ ಸೂಕ್ತವಲ್ಲ. ನಿಮ್ಮ ಕೆಲಸಗಳು ನಿಯಂತ್ರಣದಲ್ಲಿರಲಿ. ತಜ್ಞರಿಂದ ಸಲಹೆ ಪಡೆಯಿರಿ.

ಪರಿಹಾರ: ಪ್ರತಿ ಮಂಗಳವಾರ ಕಪ್ಪು ಮತ್ತು ಬಿಳಿ ಎಳ್ಳನ್ನು ದಾನ ಮಾಡಬೇಕು.

ಮೀನ ರಾಶಿ

ಕೇತು ಸಂಕ್ರಮಣವು ಮೀನ ರಾಶಿಯ 6ನೇ ಮನೆಯಲ್ಲಿ ಸಂಭವಿಸುತ್ತದೆ. ಸಾಮಾನ್ಯವಾಗಿ, ಆರನೇ ಮನೆಯಲ್ಲಿ ಕೇತುವಿನ ಸಂಚಾರವು ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ಆದರೂ ನೀವು ಕೆಲವೊಂದು ವಿಚಾರಗಳ ಬಗ್ಗೆ ಮುನ್ನೆಚರಿಕೆ ವಹಿಸಬೇಕು. ಕೇತು ಸಂಕ್ರಮಣದ ಪರಿಣಾಮದಿಂದಾಗಿ, ದೈಹಿಕ ತೊಂದರೆಗಳು ನಿಮ್ಮನ್ನು ಕಾಡಬಹುದು. ಅದನ್ನು ಪತ್ತೆಹಚ್ಚಲು ಕೂಡಾ ನಿಮಗೆ ಕಷ್ಟವಾಗಬಹುದು. ಆದ್ದರಿಂದ ನೀವು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳನ್ನು ಕೂಡಾ ನಿರ್ಲಕ್ಷಿಸದೆ ಬಹಳ ಎಚ್ಚರಿಕೆಯಿಂದ ಇರಬೇಕು. ಕೇತು ಸಂಚಾರದ ಪರಿಣಾಮ ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ. ಆದಾಯವನ್ನು ಮೀರಿಸಬಹುದಾದ ಹಲವಾರು ವೆಚ್ಚಗಳು ಎದುರಾಗುತ್ತದೆ. ಆದ್ದರಿಂದ ನೀವು ಸಮತೋಲನ ಕಾಯ್ದುಕೊಳ್ಳಬೇಕು. ಕಾರ್ಮಿಕರು ಕೆಲಸದಲ್ಲಿ ಯಶಸ್ಸನ್ನು ಸಾಧಿಸುತ್ತಾರೆ. ವ್ಯಾಪಾರ ಮಾಡುವವರು ಹೊಸ ಮೂಲಗಳನ್ನು ಕಂಡುಕೊಳ್ಳುವ ಸಾಧ್ಯತೆಯಿದೆ. ಈ ಎಲ್ಲಾ ಅಡೆತಡೆಗಳನ್ನು ದಾಟಿದ ನಂತರ ನಿಮಗೆ ಎಲ್ಲಾ ಒಳ್ಳೆಯದಾಗಲಿದೆ.

ಪರಿಹಾರ: ಕೇತು ಗ್ರಹದ ಲಾಭವನ್ನು ಪಡೆಯಲು ಅವಶ್ಯಕತೆ ಇರುವವರಿಗೆ ಹೊದಿಕೆಗಳನ್ನು ದಾನ ಮಾಡಿ.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.