ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kubera Yoga: ವೃಷಭ ರಾಶಿಗೆ ಗುರುವಿನ ಪ್ರವೇಶ; ಈ 3 ರಾಶಿಯವರಿಗೆ ಅಷ್ಟೈಶ್ವರ್ಯ ತರಲಿದೆ ಕುಬೇರ ಯೋಗ

Kubera Yoga: ವೃಷಭ ರಾಶಿಗೆ ಗುರುವಿನ ಪ್ರವೇಶ; ಈ 3 ರಾಶಿಯವರಿಗೆ ಅಷ್ಟೈಶ್ವರ್ಯ ತರಲಿದೆ ಕುಬೇರ ಯೋಗ

Kubera Yoga: 12 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಿಸುವ ಗುರುವು ಮೇ 1 ರಂದು ವೃಷಭ ರಾಶಿಗೆ ಪ್ರವೇಶಿಸಲಿದ್ದಾನೆ. ಗುರುವಿನ ಸಂಕ್ರಮಣದಿಂದ ಕುಬೇರ ಯೋಗ ಉಂಟಾಗುತ್ತದೆ. ಇದರಿಂದ 3 ರಾಶಿಯವರಿಗೆ ಅಪಾರ ಸಂಪತ್ತು, ಐಶ್ವರ್ಯ, ಸುಖ ಸಂತೋಷ ಸಿಗುತ್ತದೆ.

ವೃಷಭ ರಾಶಿಗೆ ಗುರುವಿನ ಪ್ರವೇಶ ರೂಪುಗೊಳ್ಳಿದೆ ಕುಬೇರ ಯೋಗ
ವೃಷಭ ರಾಶಿಗೆ ಗುರುವಿನ ಪ್ರವೇಶ ರೂಪುಗೊಳ್ಳಿದೆ ಕುಬೇರ ಯೋಗ

ಕುಬೇರ ಯೋಗ: ದೇವ ಗುರು ಬೃಹಸ್ಪತಿಯನ್ನು ನವಗ್ರಹಗಳಲ್ಲಿ ಅತ್ಯಂತ ಮಂಗಳಕರ ಗ್ರಹವೆಂದು ಪರಿಗಣಿಸಲಾಗಿದೆ. ಗುರುವು 12 ತಿಂಗಳಿಗೊಮ್ಮೆ ತನ್ನ ರಾಶಿಯನ್ನು ಬದಲಾಯಿಸುತ್ತಾನೆ. ಮೇ ತಿಂಗಳಲ್ಲಿ ಗುರುಗ್ರಹದ ನಿರ್ಣಾಯಕ ಸಂಕ್ರಮಣ ನಡೆಯಲಿದೆ. ಮೇ 1 ರಂದು, ಗುರುವು ಮೇಷ ರಾಶಿಯಿಂದ ವೃಷಭ ರಾಶಿಯನ್ನು ಪ್ರವೇಶಿಸುತ್ತಾನೆ.

ಗುರುವು ವೃಷಭ ರಾಶಿಯಲ್ಲಿ ಸಂಚಾರ ಆರಂಭಿಸಿದಾಗ ಅದ್ಭುತವಾದ ಕುಬೇರ ಯೋಗ ಉಂಟಾಗುತ್ತದೆ. ಈ ಯೋಗದ ಪ್ರಭಾವವು ಎಲ್ಲಾ 12 ರಾಶಿಗಳ ಮೇಲೆ ಇರುತ್ತದೆ. ಆದರೆ ಕೆಲವು ರಾಶಿಚಕ್ರ ಚಿಹ್ನೆಗಳ ಜಾತಕರು ಮಾತ್ರ ಅತ್ಯುತ್ತಮ ಲಾಭವನ್ನು ಪಡೆಯಲಿದ್ದಾರೆ. ಕುಬೇರ ಯೋಗವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಅಪಾರ ಸಂಪತ್ತನ್ನು ನೀಡುತ್ತದೆ. ಸಂಪತ್ತಿನ ಪರಮೋಚ್ಛ ದೇವರೆಂದು ಪರಿಗಣಿಸಲ್ಪಟ್ಟಿರುವ ಕುಬೇರನ ಆಶೀರ್ವಾದ ಯಾವ ರಾಶಿಯವರಿಗೆ ಇದೆ? ಯಾವ ರಾಶಿಯವರ ಹಣಕಾಸಿನ ಪರಿಸ್ಥಿತಿ ಉತ್ತಮವಾಗಿರಲಿದೆ ನೋಡೋಣ.

ವೃಷಭ ರಾಶಿ

ಗುರುವು ವೃಷಭ ರಾಶಿಯಲ್ಲಿ ಸಾಗುವ ಪರಿಣಾಮ ಈ ರಾಶಿಯಲ್ಲಿ ಕುಬೇರ ಯೋಗ ಉಂಟಾಗುತ್ತದೆ. ಈ ರಾಶಿ ಲಗ್ನ ಮನೆಯಲ್ಲಿ ಗುರುವಿನ ಸಂಚಾರ ನಡೆಯುತ್ತದೆ. ಅಂತಹ ಸಂದರ್ಭಗಳಲ್ಲಿ ವೃಷಭ ರಾಶಿಯವರಿಗೆ ಭೌತಿಕ ಸಂತೋಷ ಹೆಚ್ಚಾಗುತ್ತದೆ. ವೃತ್ತಿ ಜೀವನದಲ್ಲಿ ಉತ್ತಮ ಸಾಧನೆಗಳು ಉಂಟಾಗುತ್ತವೆ. ಕಚೇರಿಯಲ್ಲಿ ಎದುರಾಗುವ ಎಲ್ಲಾ ಸಮಸ್ಯೆಗಳು ಬಗೆಹರಿಯುತ್ತವೆ. ಬಡ್ತಿ ಪಡೆಯಲಿದ್ದೀರಿ. ಅವರು ಶಕ್ತಿ ಮತ್ತು ಸಂಪೂರ್ಣ ಆತ್ಮವಿಶ್ವಾಸದಿಂದ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ವಿಯಾಗುತ್ತಾರೆ. ಹಣಕಾಸಿನ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಹೊಸ ಆದಾಯ ಮಾರ್ಗಗಳು ತೆರೆಯಲಿವೆ. ಗುರುವಿನ ಸಂಚಾರದಿಂದಾಗಿ ಈಗಿರುವ ದೈಹಿಕ ಮತ್ತು ಮಾನಸಿಕ ತೊಂದರೆಗಳು ದೂರವಾಗುತ್ತವೆ. ಸಮೃದ್ಧಿ ಮತ್ತು ಸಂತೋಷ ದೊರೆಯಲಿದೆ. ಕೆಲಸದಲ್ಲಿ ಉತ್ತಮ ಬದಲಾವಣೆಗಳು ಇರಲಿವೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತವೆ. ನೀವು ಆಸೆ ಪಟ್ಟ ಐಷಾರಾಮಿ ಜೀವನ ನಿಮ್ಮದಾಗುತ್ತದೆ.

ಕರ್ಕಾಟಕ ರಾಶಿ

ಕರ್ಕಾಟಕ ರಾಶಿಯವರಿಗೆ ಕೂಡಾ ಕುಬೇರ ಯೋಗದಿಂದ ಯಥೇಚ್ಛ ಅನುಗ್ರಹ ದೊರೆಯುತ್ತದೆ. ಕುಬೇರ ಯೋಗದ ಫಲವಾಗಿ ಉದ್ಯಮಿಗಳಿಗೆ ಉತ್ತಮ ಲಾಭ ದೊರೆಯುತ್ತದೆ. ಜೀವನದಲ್ಲಿ ದೊಡ್ಡ ಬದಲಾವಣೆಗಳನ್ನು ಕಾಣಬಹುದು. ಈ ರಾಶಿಯವರು ತಮ್ಮ ಮಕ್ಕಳ ಬಗ್ಗೆ ಒಳ್ಳೆಯ ಸುದ್ದಿ ಕೇಳುತ್ತಾರೆ. ಸಮೃದ್ಧಿ ಮತ್ತು ಸಂತೋಷ ಹೆಚ್ಚಾಗುತ್ತದೆ. ಕುಬೇರ ಯೋಗವು ನಿಮಗೆ ಸಕಾರಾತ್ಮಕ ಫಲಿತಾಂಶಗಳನ್ನು ನೀಡುತ್ತದೆ. ನಿಮ್ಮ ಜೀವನ ಸಮೃದ್ಧವಾಗಿರುತ್ತದೆ. ಕುಬೇರ ಯೋಗ ಕರ್ಕಾಟಕ 11 ನೇ ಮನೆಯಲ್ಲಿ ಸಂಭವಿಸಲಿದ್ದು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗುತ್ತದೆ. ಆಧ್ಯಾತ್ಮಿಕ ಆಸಕ್ತಿ ಹೆಚ್ಚುತ್ತದೆ. ಪ್ರೇಮ ಜೀವನ ರೋಮ್ಯಾಂಟಿಕ್ ಆಗಿರಲಿದೆ. ಉದ್ಯೋಗಿಗಳು ಮೇಲಧಿಕಾರಿಗಳಿಂದ ಮೆಚ್ಚುಗೆ ಪಡೆಯುತ್ತಾರೆ. ಜೀವನವು ವಿನೋದಮಯವಾಗಿದೆ. ವೃತ್ತಿಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳು ಕಂಡುಬರುತ್ತವೆ.

ಕನ್ಯಾ ರಾಶಿ

ಕನ್ಯಾ ರಾಶಿಯವರಿಗೆ ಕುಬೇರ ಯೋಗ ಅದೃಷ್ಟ ತರಲಿದೆ. ಅವರು ಸಂಪತ್ತು ಮತ್ತು ಸಂತೋಷ ಎರಡನ್ನೂ ಪಡೆದು ಖುಷಿಯಾಗಿರುತ್ತಾರೆ. ಕುಬೇರನ ಆಶೀರ್ವಾದದಿಂದ ನಿಮಗೆ ಅಪಾರ ಸಂಪತ್ತು ಕೊಡುತ್ತದೆ. ಅನಿರೀಕ್ಷಿತ ಸಾಂಸಾರಿಕ ಸೌಕರ್ಯಗಳು ದೊರೆಯುತ್ತವೆ. ವ್ಯಾಪಾರದಲ್ಲಿ ಪ್ರಗತಿ ಸಾಧಿಸಲಿದ್ದೀರಿ. ಕೆಲಸಕ್ಕಾಗಿ ವಿದೇಶ ಅಥವಾ ಇತರ ಸ್ಥಳಗಳಿಗೆ ಹೋಗಬೇಕಾಗುತ್ತದೆ. ಕಠಿಣ ಪರಿಶ್ರಮವು ಮೆಚ್ಚುಗೆ ಗಳಿಸುತ್ತದೆ. ಕುಟುಂಬದೊಂದಿಗೆ ಸಮಯ ಕಳೆಯಲಿದ್ದೀರಿ. ಸಮಾಜದಲ್ಲಿ ಗೌರವ ಹೆಚ್ಚುತ್ತದೆ. ನಿಮ್ಮ ವ್ಯಕ್ತಿತ್ವ ಸುಧಾರಿಸುತ್ತದೆ. ವಿದೇಶದಲ್ಲಿ ಉದ್ಯೋಗ ಪಡೆಯುವ ಅವಕಾಶವಿದೆ. ಎಲ್ಲಾ ಕಿರಿಕಿರಿ ಕಳೆದು ಮಾನಸಿಕ ನೆಮ್ಮದಿ ದೊರೆಯಲಿದೆ. ಕುಬೇರನ ಆಶೀರ್ವಾದದಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳು ಪರಿಹಾರವಾಗುತ್ತವೆ . ವೈಯಕ್ತಿಕ ಸಂಬಂಧಗಳು ಬಲಗೊಳ್ಳುತ್ತವೆ. ವ್ಯಾಪಾರ ವಿಸ್ತರಣೆಗೆ ನಿಮಗೆ ಅನೇಕ ಅವಕಾಶಗಳು ಹುಡುಕಿ ಬರಲಿದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.