ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮಿಶ್ರಫಲ ದೊರೆಯಲಿದೆ, ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು

ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಮಿಶ್ರಫಲ ದೊರೆಯಲಿದೆ, ಕೌಟುಂಬಿಕ ಸಮಸ್ಯೆಗಳು ಎದುರಾಗಬಹುದು

ಕುಂಭ ರಾಶಿಯ ಯುಗಾದಿ ವರ್ಷ ಭವಿಷ್ಯ: ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕುಂಭ ರಾಶಿಯ ಜಾತಕದವರಿಗೆ ಮಧ್ಯಮ ಫಲಿತಾಂಶವಿದೆ. ವಾದ, ಜಗಳ, ಕಿರಿಕಿರಿ ಮತ್ತು ಆರೋಗ್ಯ ಸಮಸ್ಯೆಗಳು ಎದುರಾಗಬಹುದು. ಸ್ತ್ರೀಯರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಸಮಸ್ಯೆಗಳ ಪರಿಹಾರಕ್ಕೆ ಏನು ಮಾಡಬೇಕು ಎಂದು ಜ್ಯೋತಿಷಿ ಚಿಲಕಮರ್ತಿ ಪ್ರಭಾಕರ ಶಾಸ್ತ್ರಿ ಈ ಬರಹದಲ್ಲಿ ನೀಡಿದ್ದಾರೆ.

ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ
ಕುಂಭ ರಾಶಿಯ ಮಾಸವಾರು ಯುಗಾದಿ ಭವಿಷ್ಯ

ಯುಗಾದಿ ವರ್ಷ ಭವಿಷ್ಯ 2024: ಶ್ರೀ ಕ್ರೋಧಿನಾಮ ಸಂವತ್ಸರದಲ್ಲಿ ಕುಂಭ ರಾಶಿಯವರಿಗೆ ಮಧ್ಯಮದಿಂದ ಕೆಟ್ಟ ಫಲಿತಾಂಶಗಳು ಲಭಿಸಲಿವೆ. ಕುಂಭ ರಾಶಿಯವರ ಮೇಲೆ ಶನಿಯ ಪ್ರಭಾವ ಅಧಿಕವಾಗಿರುತ್ತದೆ. ವಾಕಸ್ಥಾನದಲ್ಲಿ ರಾಹು ಮತ್ತು ಆಯುಸ್ಥಾನದಲ್ಲಿ ಕೇತುಗಳ ಪ್ರಭಾವದಿಂದಾಗಿ, ಕುಂಭ ರಾಶಿಯವರು ಈ ವರ್ಷ ವಾದ, ಜಗಳ, ಕಿರಿಕಿರಿ ಮತ್ತು ಆರೋಗ್ಯ ಸಮಸ್ಯೆಗಳನ್ನು ಎದುರಿಸಲಿದ್ದಾರೆ. ಹಾಗಾಗಿ ಬೇರೆಯವರೊಂದಿಗೆ ಮಾತನಾಡುವಾಗ ಸೌಜನ್ಯದಿಂದ ವರ್ತಿಸುವುದು ಅವಶ್ಯ. ಉದ್ಯೋಗಿಗಳಿಗೆ ಕೆಲಸದಲ್ಲಿ ಕಲಹಗಳು ಹೆಚ್ಚಲಿದೆ. ರಾಜಕೀಯ ಒತ್ತಡಗಳು ಎದುರಾಗಬಹುದು. ಉದ್ಯೋಗ ಬದಲಾವಣೆಯ ಪ್ರಯತ್ನಗಳು ತೊಂದರೆ ಉಂಟುಮಾಡಬಹುದು. ವ್ಯಾಪಾರಸ್ಥರಿಗೆ ಅಷ್ಟೊಂದು ಅನುಕೂಲಕರವಾಗಿಲ್ಲ. ವ್ಯಾಪಾರದಲ್ಲಿ ಸಮಸ್ಯೆಗಳು ಕಾಡುತ್ತವೆ. ಹಣಕಾಸಿನ ವಿಚಾರದಲ್ಲಿ ತೊಂದರೆ ಉಂಟಾಗಲಿದೆ. ಮಹಿಳೆಯರು ಕೌಟುಂಬಿಕ ಸಮಸ್ಯೆ ಹಾಗೂ ಮಾನಸಿಕ ಸಮಸ್ಯೆಗಳಿಂದ ಬಳಲುತ್ತಾರೆ. ಒತ್ತಡದಿಂದಾಗಿ ಆರೋಗ್ಯ ಸಮಸ್ಯೆಗಳು ಹೆಚ್ಚಬಹುದು. ರೈತರಿಗೆ ಈ ವರ್ಷ ಸರಾಸರಿ ಫಲಿತಾಂಶ ದೊರೆಯಬಹುದು. ಚಲನಚಿತ್ರ ಮತ್ತು ಮಾಧ್ಯಮ ಉದ್ಯಮಕ್ಕೆ ಕಠಿಣ ಸಮಯ. ಕೆಲವರ ಮಾತುಗಳು ನಿಮ್ಮ ಮನಸ್ಸನ್ನು ಘಾಸಿಗೊಳಿಸಬಹುದು. ವಿದ್ಯಾರ್ಥಿಗಳಿಗೆ ಕಠಿಣ ಸಮಯ ಎದುರಾಗಲಿದೆ. ಅನಾರೋಗ್ಯ ಸಮಸ್ಯೆಗಳು ಮತ್ತು ಕಿರಿಕಿರಿಗಳು ಉಂಟಾಗಬಹುದು. 

ದುರ್ಗಾದೇವಿಯನ್ನು ಪೂಜಿಸುವುದರಿಂದ ಶುಭವಾಗಲಿದೆ 

ಕುಂಭ ರಾಶಿಯವರು 2024-25ರ ಕೋಧ್ರಿನಾಮ ಸಂವತ್ಸರದಲ್ಲಿ ಹೆಚ್ಚು ಮಂಗಳಕರ ಫಲಿತಾಂಶಗಳನ್ನು ಪಡೆಯಲು ಬಯಸಿದರೆ ನೀಲಿ ಉಂಗುರವನ್ನು ಧರಿಸಬೇಕು. ದಶರಥನಿಂದ ಶನಿ ಸ್ತೋತ್ರವನ್ನು ಪಠಿಸಿ. ಗುರು ದಕ್ಷಿಣಾಮೂರ್ತಿ ಸ್ತೋತ್ರ ಪಠಿಸಿ. ಶನಿ ದೇವರಿಗೆ ತೈಲಾಭಿಷೇಕ ಮಾಡುವುದರಿಂದ ಹೆಚ್ಚಿನ ಶುಭ ಫಲಗಳು ಲಭಿಸಲಿವೆ. ದುರ್ಗಾ ದೇವಿಯನ್ನು ಪೂಜಿಸುವ ಜೊತೆಗೆ ಸುಬ್ರಹ್ಮಣ್ಯನಿಗೆ ಅಭಿಷೇಕ ಮಾಡುವುದರಿಂದ ತೊಂದರೆಗಳು ನಿವಾರಣೆಯಾಗಲಿದೆ.

ಶ್ರೀಕ್ರೋಧಿನಾಮ ಸಂವತ್ಸರದಲ್ಲಿ ಕುಂಭ ರಾಶಿಯ ಮಾಸವಾರು ಭವಿಷ್ಯ

ಏಪ್ರಿಲ್: ಈ ತಿಂಗಳು ನಿಮಗೆ ಅನುಕೂಲವಾಗಿಲ್ಲ. ಅನಗತ್ಯ ವಿರೋಧಗಳನ್ನು ಎದುರಿಸಬೇಕಾಗಬಹುದು. ಮನೆಯಲ್ಲಿ ಶುಭ ಕಾರ್ಯಗಳ ಮುಂದೂಡಿಕೆಯಿಂದ ಕಿರಿಕಿರಿ ಉಂಟಾಗಲಿದೆ. ಕೆಲಸ-ಕಾರ್ಯಗಳು ಹೆಚ್ಚು ಶ್ರಮ ಬೇಡಬಹುದು. ಒತ್ತಡ ಹೆಚ್ಚಲಿದೆ. ಪ್ರಯಾಣದ ಮೊದಲು ಅನಿರೀಕ್ಷಿತ ಸಮಸ್ಯೆಗಳು ಎದುರಾಗಬಹುದು. ತಿಂಗಳಿಡೀ ಆತಂಕ ಎದುರಾಗುತ್ತದೆ.

ಮೇ: ಈ ತಿಂಗಳು ನಿಮಗೆ ಉತ್ತಮವಾಗಿಲ್ಲ. ವ್ಯಾಪಾರ ಸಂಬಂಧಿ ವಿಷಯಗಳಲ್ಲಿ ನಷ್ಟ ಉಂಟಾಗುವುದು. ಆತಂಕದ ಜೊತೆಗೆ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಸ್ಥಿರ ಆಸ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳು ಕಾಡುತ್ತದೆ.

ಜೂನ್: ಈ ತಿಂಗಳು ನಿಮಗೆ ಅನುಕೂಲಕರವಾಗಿಲ್ಲ. ಅನಾರೋಗ್ಯದ ಸೂಚನೆಗಳಿವೆ. ಸ್ನೇಹಿತರಿಗಾಗಿ ಸಮಯ ವ್ಯರ್ಥ ಮಾಡಲಿದ್ದೀರಿ. ಪ್ರಯತ್ನಗಳಿಗೆ ತಕ್ಕ ಫಲ ಲಭಿಸದೇ ಇರಬಹುದು. ಕೆಲಸದಲ್ಲಿ ತೊಂದರೆ ಎದುರಾಗಬಹುದು. ಕೈ ಸೇರಬೇಕಾದ ಹಣ ಬಾರದೇ ಇರಬಹುದು. ಭೂಮಿಗೆ ಸಂಬಂಧಿತ ಸಮಸ್ಯೆಗಳು ಮುಂದುವರಿಯಬಹುದು. ನ್ಯಾಯಾಲಯದ ಪ್ರಕರಣಗಳು ಇನ್ನಷ್ಟು ಜಟಿಲವಾಗುವ ಸಾಧ್ಯತೆ.

ಜುಲೈ: ಕುಂಭ ರಾಶಿಯವರಿಗೆ ಈ ತಿಂಗಳು ಹೆಚ್ಚು ಉತ್ತಮವಾಗಿಲ್ಲ. ರೈತರಿಗೆ ತಕ್ಕಮಟ್ಟಿನ ಅನುಕೂಲ ಇರಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಎದುರಾಗಬಹುದು, ಮಾತಿನ ಮೇಲೆ ಹಿಡಿತವಿದ್ದರೆ ಉತ್ತಮ. ಪ್ರಯಾಣದಲ್ಲಿ ಅಡಚಣೆಗಳು ಉಂಟಾಗಬಹುದು. ದೂರ ಪ್ರಯಾಣದಿಂದ ಆಯಾಸ ಕಾಡಬಹುದು. ತಲೆತಿರುಗುವಿಕೆಯಂತಹ ತೊಂದರೆಗಳು ಎದುರಾಗಲಿದೆ.

ಆಗಸ್ಟ್: ಈ ತಿಂಗಳು ನಿಮಗೆ ಮಧ್ಯಮವಾಗಿರುತ್ತದೆ. ಅನಗತ್ಯ ವೆಚ್ಚಗಳು ಎದುರಾಗಲಿದೆ. ಶತ್ರುಗ್ರಹದ ಸ್ಥಿತಿಯಿಂದಾಗಿ ಶ್ರಮ ಮತ್ತು ಒತ್ತಡ ಇರುತ್ತದೆ. ಮನೆಯಲ್ಲಿ ಶುಭಕಾರ್ಯಗಳು ನಡೆಯಲಿವೆ. ಬಂಧುಮಿತ್ರ ಸಮಾಗಮವಾಗಲಿದೆ. ಪ್ರಯತ್ನದಲ್ಲಿ ನಿರಂತರತೆಯ ಕೊರತೆ ಕಾಡುತ್ತದೆ.

ಸೆಪ್ಟೆಂಬರ್: ಈ ತಿಂಗಳು ನಿಮಗೆ ಉತ್ತಮವಾಗಿದೆ. ಸಂಬಂಧಿಕರು ಮತ್ತು ಮಾಜಿ ಸ್ನೇಹಿತರ ಪುನರ್ಮಿಲನವಾಗಿದೆ. ಶುಭಸುದ್ದಿಗಳನ್ನು ಕೇಳಲಿದ್ದೀರಿ.

ಅಕ್ಟೋಬರ್: ಈ ತಿಂಗಳು ನಿಮಗೆ ಮಧ್ಯಮವಾಗಿದೆ. ಖ್ಯಾತಿ ಮತ್ತು ಅದೃಷ್ಟ ಜೊತೆಯಾಗುತ್ತದೆ. ಮಾನಸಿಕ ಒತ್ತಡ ಹೆಚ್ಚಲಿದೆ. ವೈವಾಹಿಕ ಸಂಬಂಧ ಉತ್ತಮವಾಗಿರುತ್ತದೆ. ಆಕಸ್ಮಿಕವಾಗಿ ಕೆಲವು ವಿಷಯಗಳಲ್ಲಿ ತೊಡಗಿಸಿಕೊಳ್ಳಲಿದ್ದೀರಿ. ನಿರೀಕ್ಷೆಗಿಂತ ಹೆಚ್ಚಿನ ಖರ್ಚು ಎದುರಾಗಲಿದೆ.

ನವೆಂಬರ್: ಈ ತಿಂಗಳು ನಿಮಗೆ ಮಧ್ಯಮವಾಗಿದೆ. ವ್ಯಾಪಾರದಲ್ಲಿ ಅಲ್ಪ ಬೆಳವಣಿಗೆ ಇರಲಿದೆ. ದೈವಿಕ ಶುಭ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ಸ್ತ್ರೀಯರಿಗೆ ಈ ತಿಂಗಳು ಲಾಭವಾಗಲಿದೆ. ರೈತರಿಗೆ ಸ್ವಲ್ಪ ಅನುಕೂಲ ದೊರೆಯಲಿದೆ. ಶಾಂತಿ ಕದಡಲಿದೆ.

ಡಿಸೆಂಬರ್: ಈ ತಿಂಗಳು ಕುಂಭ ರಾಶಿಯವರಿಗೆ ಮಧ್ಯಮ ಸಮಯ. ಒಳ್ಳೆಯ ಕಾರ್ಯಗಳ ಪ್ರಯತ್ನಗಳು ಫಲ ನೀಡುತ್ತವೆ. ಸಾಲದ ಸಮಸ್ಯೆ ಎದುರಾಗಬಹುದು. ಸಂಬಂಧಿಕರನ್ನು ಸಂಧಿಸಲಿದ್ದೀರಿ. ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ದುಡಿಮೆ ಹೆಚ್ಚಿದ್ದರೂ ಖರ್ಚೂ ಅಷ್ಟೇ ಇರುತ್ತದೆ, ಆದರೂ ಆದಾಯದ ಕೊರತೆ ಬಾಧಿಸದು.

ಜನವರಿ 2025: ಈ ತಿಂಗಳು ನಿಮಗೆ ಸಾಧಾರಣ ಫಲಿತಾಂಶ ಸಿಗಲಿದೆ. ಅನಾರೋಗ್ಯದ ಸೂಚನೆಗಳಿವೆ. ನ್ಯಾಯಾಲಯಕ್ಕೆ ಸಂಬಂಧಿಸಿದ ವಿಷಯಗಳನ್ನು ಮುಂದೂಡುವುದು ಉತ್ತಮ. ಆದಾಯ ಹೆಚ್ಚಲಿದೆ. ಶತ್ರುಗಳು ನಿಮ್ಮ ವಿರುದ್ಧ ಜಯ ಸಾಧಿಸಲಿದ್ದಾರೆ. ಕೆಲವು ಸಮಸ್ಯೆಗಳಿಗೆ ಪರಿಹಾರ ದೊರೆಯಲಿದೆ.

ಫೆಬ್ರವರಿ 2025: ಈ ತಿಂಗಳು ನಿಮಗೆ ಅನುಕೂಲಕರವಾಗಿದೆ. ವ್ಯವಹಾರದಲ್ಲಿ ಅಭಿವೃದ್ಧಿ ಇರಲಿದೆ. ಹಿರಿಯರಿಂದ ಉಪಕಾರ ದೊರೆಯುವುದು. ಉದ್ಯೋಗ ಪ್ರಯತ್ನಗಳು ಫಲ ನೀಡುತ್ತವೆ. ಯಾವುದೇ ನಕಾರಾತ್ಮ ಅಂಶ ಇಲ್ಲದಿರುವುದು ಒಳ್ಳೆಯದು. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಗಳಿಸಲಿದ್ದೀರಿ. ಸಂಬಂಧಿಕರ ಆಗಮನಯಿಂದ ಖುಷಿ ಸಿಗಲಿದೆ.

ಮಾರ್ಚ್ 2025: ಕುಂಭ ರಾಶಿಯವರಿಗೆ ಈ ತಿಂಗಳು ಮಧ್ಯಮವಾಗಿರುತ್ತದೆ. ಸ್ವಂತ ಕೆಲಸದಲ್ಲಿ ನಿರಾಸಕ್ತಿ ಹೆಚ್ಚುತ್ತದೆ. ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಮನೆಯಲ್ಲಿ ಶುಭ ಕಾರ್ಯಗಳು ನಡೆಯಲಿವೆ. ಪತ್ನಿಯ ಆರೋಗ್ಯ ಹದಗೆಡಲಿದೆ. ಸ್ತ್ರೀ ಸಮಸ್ಯೆಗಳು ದೂರವಾಗುತ್ತವೆ.

ಬರಹ: ಚಿಲಕಮರ್ತಿ ಪ್ರಭಾಕರ ಚಕ್ರವರ್ತಿ ಶರ್ಮ