ಸಾಲದ ಸುಳಿಯಿಂದ ವಿಮುಕ್ತಿ ಪಡೆಯಲು ಬೇಕು ಲಕ್ಷ್ಮೀ ನರಸಿಂಹ ಸ್ವಾಮಿ ಆಶೀರ್ವಾದ; ಪ್ರತಿದಿನ ಈ ಋಣ ವಿಮೋಚನಾ ಸ್ತೋತ್ರ ಪಠಿಸಿ
Runa vimochana Mantram: ಎಷ್ಟೇ ದುಡಿದರೂ ಕೆಲವರಿಗೆ ಕಷ್ಟಗಳು ಪರಿಹಾರವಾಗುವುದಿಲ್ಲ. ಜೊತೆಗೆ ಮತ್ತೊಬ್ಬರಿ ಬಳಿ ತೆಗೆದುಕೊಂಡ ಸಾಲಗಳೂ ತೀರುವುದಿಲ್ಲ. ಇದಕ್ಕೆ ಜ್ಯೋತಿಷ್ಯದಲ್ಲಿ ಕೆಲವೊಂದು ಪರಿಹಾರಗಳಿವೆ. ಪ್ರತಿದಿನ ಋಣ ವಿಮೋಚನ ನೃಸಿಂಹ ಸ್ತೋತ್ರ ಪಠಿಸಿದರೆ ಸಾಲದ ಹೊರೆಯಿಂದ ಮುಕ್ತರಾಗಬಹುದು.
ದುಡ್ಡೇ ದೊಡ್ಡಪ್ಪ ಎಂದು ಎಲ್ಲರೂ ಮಾತನಾಡುವುದನ್ನು ನಾವು ಕೇಳಿದ್ದೇವೆ. ಬೆಳಗ್ಗೆ ಎದ್ದಾಗಿನಿಂದ ರಾತ್ರಿ ಮಲಗುವವರೆಗೂ ದುಡ್ಡು ಇಲ್ಲ ಎಂದರೆ ಜೀವನವೇ ನಡೆಯುವುದಿಲ್ಲ. ದುಡ್ಡು ಅಷ್ಟರ ಮಟ್ಟಿಗೆ ನಮ್ಮ ದೈನಂದಿನ ಜೀವನದ ಭಾಗವಾಗಿದೆ. ಆದರೆ ಎಲ್ಲರ ಬಳಿಯೂ ಜೀವನ ಸಾಗಿಸುವಷ್ಟು ದುಡ್ಡು ಇರುವುದಿಲ್ಲ. ಇದಕ್ಕಾಗಿ ಅವರು ಸಾಲ ಮಾಡುತ್ತಾರೆ. ಆದರೆ ಎಷ್ಟೇ ಕಷ್ಟ ಪಟ್ಟರೂ ಸಾಲ ತೀರಿಸಲು ಸಾಧ್ಯವಾಗುವುದಿಲ್ಲ.
ಧೈರ್ಯ, ಆತ್ಮವಿಶ್ವಾಸದ ಜೊತೆ ಬೇಕು ದೇವರ ಆಶೀರ್ವಾದ
ಹಣಕಾಸಿನ ಸಮಸ್ಯೆಯಿಂದ ಹೊರ ಬರುವುದು ಸ್ವಲ್ಪ ಕಷ್ಟ. ಸಾಲದ ಸುಳಿಯಲ್ಲಿ ಸಿಲುಕಿ ಅದರಿಂದ ಹೊರಬರಲಾಗದೆ ಅನೇಕರು ಚಿಂತಿಸುತ್ತಾರೆ. ಕೆಲವರು ಜೀವನವನ್ನೇ ಮುಗಿಸಿಕೊಳ್ಳುವ ಕೆಟ್ಟ ನಿರ್ಧಾರಕ್ಕೆ ಬರುತ್ತಾರೆ. ಆದರೆ ಜೀವನದಲ್ಲಿ ಧೈರ್ಯ ಇರಬೇಕು, ಆತ್ಮ ವಿಶ್ವಾಸ ಇರಬೇಕು. ಏನೇ ಕಷ್ಟ ಬಂದರೂ ಅದನ್ನು ಎದುರಿಸುವಂಥ ಮನಸ್ಥಿತಿ ಇರಬೇಕು. ನಿಮ್ಮ ಧೈರ್ಯ ಹಾಗೂ ದೇವರ ಆಶೀರ್ವಾದ ಜೊತೆ ಸೇರಿದರೆ ನೀವು ಮಾಡಿದ ಸಾಲದ ಸಮಸ್ಯೆಯಿಂದ ಖಂಡಿತ ಹೊರ ಬರಬಹುದು. ಇದಕ್ಕಾಗಿ ಕೆಲವೊಂದು ಪೂಜೆ ಹಾಗೂ ಶಕ್ತಿಶಾಲಿ ಮಂತ್ರಗಳಿವೆ.
ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಧ್ಯಾನಿಸಿದರೆ ಒಳ್ಳೆಯ ಫಲ ಸಿಗುತ್ತದೆ. ಪ್ರತಿದಿನ ಸಂಜೆ ದೀಪಾರಾಧನೆ ಮಾಡುವುದು ಒಳ್ಳೆಯದು. ಶ್ರೀ ಲಕ್ಷ್ಮೀನರಸಿಂಹ ಸ್ತೋತ್ರವನ್ನು ಪಠಿಸುವುದರಿಂದ ಉತ್ತಮ ಫಲಿತಾಂಶಗಳನ್ನು ಕಾಣಬಹುದು. ಪ್ರತಿದಿನ 18 ಬಾರಿ ಶ್ರೀ ಲಕ್ಷ್ಮೀ ನರಸಿಂಹ ಸ್ತೋತ್ರವನ್ನು ಪಠಿಸುವುದರಿಂದ ಧೈರ್ಯ ಹೆಚ್ಚಾಗುತ್ತದೆ. ನಿಮ್ಮ ಸಾಲಗಳನ್ನು ತೀರಿಸಲು ನಿಮಗೆ ಸಾಧ್ಯವಾಗುತ್ತದೆ. ಗುರುವಾರದಂದು ಈ ಸ್ತೋತ್ರವನ್ನು ಮೊದಲು ಆರಂಭಿಸಬೇಕು.
ಋಣ ವಿಮೋಚನ ನೃಸಿಂಹ ಸ್ತೋತ್ರ
ಧ್ಯಾನ
ವಾಗೀಶ ಯಸ್ಯ ವದನೇ ಲಕ್ಷ್ಮೀರ್ಯಸ್ಯ ಚ ವಕ್ಷಸಿ
ಯಸ್ಯಾಸ್ತೇ ಹೃದಯೇ ಸಂವಿತಂ ನೃಸಿಂಹಮಃ ಭಜೇ
ಅಥ ಸ್ತೋತ್ರ
ದೇವತಾಕಾರ್ಯಸಿದ್ಧ್ಯರ್ಥಂ ಸಭಾಸ್ತಂಭಸಮುದ್ಭವಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಲಕ್ಷ್ಮ್ಯಲಿಂಗಿತಾ ವಾಮಾಂಕಂ ಭಕ್ತಾನಾಂ ವರದಾಯಕಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಅನ್ತಮಾಲಾಧರಂ ಶಂಖಚಕ್ರಾಬ್ಜಯುದ್ಧಹಾರಿಣಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಸ್ಮರಣಾತ್ ಸರ್ವಪಾಪಘ್ನಂ ಕದ್ರುಜವಿಶನಾಶನಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಸಿಂಹನಾದೇನ ಮಹತಾ ದಿಗ್ವಿದಿಗ್ಭಯನಾಶನಂ (ದಿಗ್ದಂತಿ)
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಪ್ರಹ್ಲಾದವರದ ಶ್ರೀಸಂ ದೈತ್ಯೇಶ್ವರವಿದರಣಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಕ್ರೂರಗ್ರಹೈಃ ಪಿಡಿತಾನಾಂ ಭಕ್ತಾನಾಮ್ಭಯಪ್ರದಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ವೇದವೇದಾನ್ತಯಜ್ಞೇಶಂ ಬ್ರಹ್ಮರುದ್ರಾದಿವನ್ದಿತಮ್
ಶ್ರೀ ನೃಸಿಂಹ ಮಹಾವೀರ ನಮಾಮಿ ಋಣಮುಕ್ತಯೇ
ಇತ್ಥಂ ಯಃ ಪಠತೇ ನಿತ್ಯಂ ಋಣಮೋಚನ ಸಿದ್ಧಯೇ (ಗಮನಾರ್ಹ)
ಅನಿರ್ಣೋ ಜಾಯತೇ ತ್ವರಿತ ಧನಂ ವಿಪುಲಮಾಪ್ನುಯಾತ್
ಸರ್ವಸಿದ್ಧಿಪ್ರದಂ ನೃಣಾಂ ಸರ್ವೈಶ್ವರ್ಯಪ್ರದಾಯಕಮ್ ॥
ತಸ್ಮಾತ್ ಸರ್ವಪ್ರತ್ನೇನ ಪಠೇತ್ ಸ್ತೋತ್ರಮಿದಂ ಸದಾ ।।
ಪ್ರತಿದಿನ ಈ ಋಣ ವಿಮೋಚನ ನೃಸಿಂಹ ಸ್ತೋತ್ರವನ್ನ ಪಠಿಸಿ ಸಾಲದ ಹೊರೆಯಿಂದ ಮುಕ್ತರಾಗಿ
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.