ಸಿಂಹ ರಾಶಿ ಭವಿಷ್ಯ ಆ.10: ಹೊಸ ಸವಾಲುಗಳು ಎದುರಾಗಲಿದೆ, ಆದಾಯ ಉತ್ತಮವಾಗಿದೆ, ಆದರೂ ಖರ್ಚಿನ ವಿಚಾರದಲ್ಲಿ ಇತಿ ಮಿತಿ ಇರಲಿ
Leo Daily Horoscope 10 August 2024: ರಾಶಿಚಕ್ರಗಳ ಪೈಕಿ ಐದನೆಯದು ಸಿಂಹ. ಜನನದ ಸಮಯದಲ್ಲಿ ಚಂದ್ರನು ಸಿಂಹ ಸಾಗುತ್ತಿರುವ ಜನರ ರಾಶಿಚಕ್ರ ಚಿಹ್ನೆ ಸಿಂಹ ರಾಶಿ. ಇಂದು ಸಿಂಹ ರಾಶಿಯವರ ದಿನ ಭವಿಷ್ಯ ಹೇಗಿದೆ ನೋಡೋಣ.
ಸಿಂಹ ರಾಶಿಭವಿಷ್ಯ ಆಗಸ್ಟ್ 10: ಕೆಲಸದ ಸ್ಥಳದಲ್ಲಿ ಜಾಗರೂಕರಾಗಿರಿ. ಸುರಕ್ಷಿತ ನಾಳೆಗಾಗಿ ಸಂಪತ್ತನ್ನು ಬುದ್ಧಿವಂತಿಕೆಯಿಂದ ನಿರ್ವಹಿಸಿ. ನಿಮ್ಮ ಪ್ರೇಮಿಯ ಜೊತೆಗಿನ ಸಂಬಂಧವನ್ನು ಪರಿಹರಿಸಲು ಇದು ಉತ್ತಮ ಸಮಯ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯುತ್ತಾರೆ.
ಸಿಂಹ ರಾಶಿ ಪ್ರೇಮ ಭವಿಷ್ಯ (Leo Love Horoscope)
ಇಂದು ಸಮಸ್ಯೆಗಳನ್ನು ಪರಿಹರಿಸಲು ಸಂಬಂಧದಲ್ಲಿ ಹೆಚ್ಚಿನ ಸಮಯ ಕಳೆಯಿರಿ. ನಿಮ್ಮ ಎದುರು ಹೊಸ ಸವಾಲುಗಳು ಬರಬಹುದು. ದಿನದ ಮೊದಲ ಭಾಗದಲ್ಲಿ ಸಣ್ಣ ಸಮಸ್ಯೆಗಳನ್ನು ನಿರೀಕ್ಷಿಸಿ. ಹಿಂದಿನ ಸಂಬಂಧವು ಗಲಾಟೆಗೆ ಕಾರಣವಾಗಬಹುದು. ನೀವು ಇದನ್ನು ಪ್ರಬುದ್ಧ ಮನೋಭಾವದಿಂದ ನಿಭಾಯಿಸಬೇಕು. ಪ್ರೇಮಿಯ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಕೆಲವು ಸಂಬಂಧಗಳು ಅಚ್ಚರಿಯ ತಿರುವುಗಳನ್ನು ಕಾಣುತ್ತವೆ. ಸಂಬಂಧದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಲು ದಿನದ ದ್ವಿತೀಯಾರ್ಧವು ಒಳ್ಳೆಯದು.
ಸಿಂಹ ರಾಶಿ ವೃತ್ತಿ ಭವಿಷ್ಯ (Leo Professional Horoscope)
ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಬಗ್ಗೆ ಯೋಚಿಸಿ. ನಿಮ್ಮ ವರ್ತನೆ ಸಕಾರಾತ್ಮಕವಾಗಿದೆ ಮತ್ತು ಹಿರಿಯ ಅಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ನಂಬುತ್ತಾರೆ. ಸಭೆಗಳು ಮತ್ತು ಸಂವಹನಗಳ ಸಮಯದಲ್ಲಿ ಗ್ರಾಹಕರನ್ನು ಮೆಚ್ಚಿಸುವಲ್ಲಿ ನೀವು ಯಶಸ್ವಿಯಾಗಬಹುದು. ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ಸಕಾರಾತ್ಮಕ ಫಲಿತಾಂಶ ಪಡೆಯುತ್ತಾರೆ. ಉದ್ಯಮಿಗಳು ತಮ್ಮ ಪಾಲುದಾರರೊಂದಿಗೆ ಸಾಮರಸ್ಯದ ಸಂಬಂಧವನ್ನು ಕಾಪಾಡಿಕೊಳ್ಳಬೇಕು ಮತ್ತು ವ್ಯಾಪಾರ ನಿರ್ಧಾರಗಳನ್ನು ತೆಗೆದುಕೊಳ್ಳಬಾರದು.
ಸಿಂಹ ರಾಶಿಯ ಹಣಕಾಸು ಭವಿಷ್ಯ (Leo Money Horoscope)
ನಿಮ್ಮ ಬೊಕ್ಕಸಕ್ಕೆ ಹಣ ಬರುತ್ತಿದ್ದರೂ ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಒಳ್ಳೆಯದು. ಆದಾರೂ, ನೀವು ಇಂದು ಎಲೆಕ್ಟ್ರಾನಿಕ್ ಉಪಕರಣಗಳನ್ನು ಖರೀದಿಸುವ ಆಲೋಚನೆಯೊಂದಿಗೆ ಮುಂದುವರಿಯಬಹುದು. ಇಂದು ಸ್ನೇಹಿತರೊಂದಿಗಿನ ಹಣಕಾಸಿನ ವಿವಾದವನ್ನು ಪರಿಹರಿಸಲು ನೀವು ಕ್ರಮ ತೆಗೆದುಕೊಳ್ಳಬಹುದು. ಕೆಲವು ಸಿಂಹ ರಾಶಿಯವರು ಕಚೇರಿಯಲ್ಲಿ ಅಥವಾ ಸ್ನೇಹಿತರೊಂದಿಗೆ ಆಚರಣೆಗೆ ಕೊಡುಗೆ ನೀಡಬೇಕಾಗುತ್ತದೆ. ವಿದೇಶಿ ಕ್ಲೈಂಟ್‌ಗಳೊಂದಿಗೆ ವ್ಯವಹರಿಸುವ ಉದ್ಯಮಿಗಳು ಮುಂಗಡ ಪಾವತಿಗಳನ್ನು ಪಡೆಯುತ್ತಾರೆ. ಅದು ವ್ಯಾಪಾರ ವಿಸ್ತರಣೆಗಳಿಗೆ ಪ್ರಯೋಜನ ನೀಡುತ್ತದೆ.
ಸಿಂಹ ರಾಶಿಯ ಆರೋಗ್ಯ ಜಾತಕ (Leo Health Horoscope)
ಯಾವುದೇ ಪ್ರಮುಖ ಆರೋಗ್ಯ ಸಮಸ್ಯೆ ಇರುವುದಿಲ್ಲ. ಸದ್ಯಕ್ಕೆ ನಿಮ್ಮನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಿಂದ ನೀವು ಮುಕ್ತಿ ಪಡೆಯಬಹುದು. ಆದರೂ, ಮಹಿಳೆಯರು ಇಂದು ಸ್ತ್ರೀರೋಗ ಸಮಸ್ಯೆಗಳನ್ನು ಎದುರಿಸಬಹುದು. ಸಾಹಸ ಕ್ರೀಡೆಗಳು ಮತ್ತು ನೀರೊಳಗಿನ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಾಗ ಜಾಗರೂಕರಾಗಿರಿ. ಗರ್ಭಿಣಿಯರು ಇಂದು ಸಾಹಸ ಕ್ರೀಡೆಗಳಿಂದ ದೂರವಿರಬೇಕು.
ಸಿಂಹ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು
ಅಧಿಪತಿ: ಸೂರ್ಯ, ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.
ಸಿಂಹ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು
1)ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.
2) ಈ ದಾನಗಳಿಂದ ಶುಭ ಫಲ: ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.
3) ದೇವಾಲಯ, ದೇವರ ಪೂಜೆ: ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ. ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.