ಸಿಂಹ ರಾಶಿ ವಾರ ಭವಿಷ್ಯ; ಸಿಡುಕುತನ ದುಬಾರಿಯಾಗಲಿದೆ, ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತಿದೆ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಿಂಹ ರಾಶಿ ವಾರ ಭವಿಷ್ಯ; ಸಿಡುಕುತನ ದುಬಾರಿಯಾಗಲಿದೆ, ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತಿದೆ

ಸಿಂಹ ರಾಶಿ ವಾರ ಭವಿಷ್ಯ; ಸಿಡುಕುತನ ದುಬಾರಿಯಾಗಲಿದೆ, ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತಿದೆ

Leo Weekly Horoscope July 14-20: ರಾಶಿಚಕ್ರದ ಐದನೇ ಚಿಹ್ನೆ ಇದು. ಜನನದ ಸಮಯದಲ್ಲಿ ಚಂದ್ರನು ಸಿಂಹರಾಶಿಯಲ್ಲಿ ಸಾಗುತ್ತಿರುವ ಜನರ ರಾಶಿಚಕ್ರದ ಚಿಹ್ನೆಸಿಂಹ. ಈ ವಾರ ಸಿಂಹ ರಾಶಿಯ ವಾರ ಭವಿಷ್ಯದ ಪ್ರಕಾರ, ಈ ರಾಶಿಯವರಿಗೆ ಸಿಡುಕುತನ ದುಬಾರಿಯಾಗಲಿದೆ. ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತಾಗಲಿದೆ.

ಸಿಂಹ ರಾಶಿ ವಾರ ಭವಿಷ್ಯ ಜುಲೈ 14- 20; ಸಿಡುಕುತನ ದುಬಾರಿಯಾಗಲಿದೆ, ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತು ಉಂಟಾಗಲಿದೆ.
ಸಿಂಹ ರಾಶಿ ವಾರ ಭವಿಷ್ಯ ಜುಲೈ 14- 20; ಸಿಡುಕುತನ ದುಬಾರಿಯಾಗಲಿದೆ, ಯೋಗ, ಪ್ರಾಣಾಯಾಮ ರೂಢಿಸಿಕೊಂಡರೆ ಒಳಿತು ಉಂಟಾಗಲಿದೆ.

ಬಹುತೇಕ ಜನರು ತಮ್ಮ ದಿನಚರಿ ಆರಂಭಿಸುವ ಮೊದಲು, ಮಹತ್ವದ ಕೆಲಸ ಕೈಗೊಳ್ಳುವ ಮೊದಲು ತಮ್ಮ ದಿನ ಭವಿಷ್ಯ ಹೇಗಿದೆ, ವಾರ ಭವಿಷ್ಯ, ಮಾಸಿಕ ಭವಿಷ್ಯ ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್.ಸತೀಶ್ ನೀಡಿರುವ ವಾರ ಭವಿಷ್ಯವನ್ನು ಆಧರಿಸಿದ ಸಿಂಹ ರಾಶಿಯ ವಾರ ಭವಿಷ್ಯ ಇಲ್ಲಿದೆ.

ಸಿಂಹ ರಾಶಿ ವಾರ ಭವಿಷ್ಯ ಪ್ರಕಾರ, ಈ ವಾರ ಅಂದರೆ ಜುಲೈ 14 ರಿಂದ 20ರ ಅವಧಿಯಲ್ಲಿ ಈ ರಾಶಿಯವರಿಗೆ ಸ್ವಯಂಕೃತ ಸಂಕಷ್ಟಗಳು ಎದುರಾಗಬಹುದು. ಹೀಗಾಗಿ ಸಿಡುಕುತನ ಬಿಟ್ಟರೆ ಶುಭಫಲವಿದೆ. ಉಳಿದಂತೆ, ಪ್ರೇಮಜೀವನ, ವೃತ್ತಿ ಭವಿಷ್ಯ, ಆರ್ಥಿಕ ಭವಿಷ್ಯ, ಆರೋಗ್ಯ ಭವಿಷ್ಯಗಳ ವಿವರ ಹೀಗಿದೆ.

ಸಿಂಹ ರಾಶಿ ಪ್ರೇಮ ಜಾತಕ (Leo Love Horoscope)- ಈ ವಾರ ಈ ರಾಶಿಯವರ ಪ್ರೇಮ ಜೀವನ ಸಾಧಾರಣ ಇದೆ. ಕೌಟುಂಬಿಕವಾಗಿಯೂ ನೆಮ್ಮದಿ ಕಷ್ಟ. ಸಿಡುಕುತನದ ಕಾರಣ ಆತ್ಮೀಯರೂ ನಿಮ್ಮ ಮಾತನ್ನು ಆಲಿಸುವುದಿಲ್ಲ. ಕುಟುಂಬದಲ್ಲಿ ಶಾಂತಿ ನೆಮ್ಮದಿ ದೂರವಾಗುತ್ತದೆ. ಶಾಂತಿ ಸಂಯಮದಿಂದ ವರ್ತಿಸಿದಲ್ಲಿ ಸುಖಮಯ ಜೀವನ ನಿಮ್ಮದಾಗಲಿದೆ. ಒಂಟಿಯಾಗಿರುವವರಿಗೂ, ಅವಿವಾಹಿತರಾಗಿದ್ದು ವಿವಾಹಾಪೇಕ್ಷಿಗಳಾಗಿದ್ದರೆ ಅಂಥವರೂ ಸಂಯಮದ ವರ್ತನೆ ತೋರಬೇಕಾದ್ದು ಅವಶ್ಯ.

ಸಿಂಹ ರಾಶಿ ವಾರ ಭವಿಷ್ಯ; ಉದ್ಯೋಗ, ಆದಾಯ, ಆರೋಗ್ಯ

ಸಿಂಹ ರಾಶಿ ವೃತ್ತಿ ಭವಿಷ್ಯ (Leo Professional Horoscope): ಉದ್ಯೋಗ ಕ್ಷೇತ್ರದಲ್ಲೂ ಸಾಧಾರಣ ದಿನಗಳನ್ನು ನಿರೀಕ್ಷಿಸಬಹುದು. ತಪ್ಪು ಗ್ರಹಿಕೆಯಿಂದಾಗಿ ಉದ್ಯೋಗವನ್ನು ಬದಲಾಯಿಸುವಿರಿ. ನಿಮ್ಮ ತಪ್ಪು ನಿರ್ಧಾರವನ್ನು ಎಲ್ಲರೂ ವಿರೋಧಿಸುತ್ತಾರೆ. ಆದರೆ, ಅದನ್ನು ಅರ್ಥಮಾಡಿಕೊಳ್ಳುವ ಮನಸ್ಸು ನಿಮಗೆ ಇರುವುದಿಲ್ಲ. ಪಾಲುಗಾರಿಕೆಯ ವ್ಯಾಪಾರದಲ್ಲಿ ಕೆಲವರ ವಿರೋಧದ ನಡುವೆಯೂ ಯಶಸ್ಸನ್ನು ಗಳಿಸುವಿರಿ. ಇನ್ನು, ವಿದ್ಯಾರ್ಥಿಗಳು ತಮಗೆ ದೊರೆಯುವ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳುತ್ತಾರೆ.
ಸಿಂಹ ರಾಶಿ ಆರ್ಥಿಕ ಜಾತಕ (Leo Money Horoscope): ಹಣಕಾಸು ಹರಿವು ತಕ್ಕಮಟ್ಟಿಗೆ ಸಮಾಧಾನಕರವಾಗಿರಲಿದೆ. ಅನಿರೀಕ್ಷಿತವಾಗಿ ಹಣದ ಸಹಾಯ ದೊರೆಯುತ್ತದೆ. ತಂದೆಗೆ ಸಂಬಂಧಿಸಿದ ಭೂವಿವಾದವು ಅಂತ್ಯಗೊಳ್ಳುತ್ತದೆ.

ಸಿಂಹ ರಾಶಿ ಆರೋಗ್ಯ ಜಾತಕ (Leo Health Horoscope): ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕಾದ್ದು ಅಗತ್ಯ. ಮಾನಸಿಕ ಉದ್ವೇಗಗೊಳ್ಳುವ ಕಾರಣ ಇತರೆ ಆರೋಗ್ಯ ಸಮಸ್ಯೆಗಳೂ ಎದುರಾಗಬಹುದು. ಯೋಗ, ಪ್ರಾಣಾಯಾಮ ರೂಢಿಸಿಕೊಳ್ಳುವ ಮೂಲಕ ಶರೀರದ ಮತ್ತು ಮನಸ್ಸಿನ ಆರೋಗ್ಯ ಕಾಪಾಡಿಕೊಳ್ಳಿ.

ಸಿಂಹ ರಾಶಿಯವರಿಗೆ ತಿಳಿದಿರಲೇಬೇಕಾದ ಮಾಹಿತಿಯಿದು

ಅಧಿಪತಿ: ಸೂರ್ಯ, ಶುಭ ದಿನಾಂಕಗಳು: 1, 4, 5, 6, 9, 15, 24. ಶುಭ ವಾರಗಳು: ಭಾನುವಾರ, ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ. ಶುಭ ವರ್ಣ: ಕಿತ್ತಳೆ, ಕೆಂಪು ಮತ್ತು ಹಸಿರು. ಅಶುಭ ವರ್ಣ: ನೀಲಿ ಮತ್ತು ಬಿಳಿ. ಶುಭ ದಿಕ್ಕು: ಪೂರ್ವ ಮತ್ತು ದಕ್ಷಿಣ. ಶುಭ ತಿಂಗಳು: ಡಿಸೆಂಬರ್ 15ರಿಂದ ಜುಲೈ 14. ಶುಭ ಹರಳು: ಹವಳ, ಕನಕ, ಪುಷ್ಯರಾಗ ಮತ್ತು ಮಾಣಿಕ್ಯ. ಶುಭ ರಾಶಿ: ವೃಶ್ಚಿಕ, ಧನಸ್ಸು ಮತ್ತು ಮೇಷ. ಅಶುಭ ರಾಶಿ: ತುಲಾ, ಮಕರ, ಕುಂಭ ಮತ್ತು ವೃಷಭ.

ಸಿಂಹ ರಾಶಿಯವರು ಶುಭ ಫಲ ಪಡೆಯಲು ಸರಳ ಪರಿಹಾರಗಳು

1)ಆದಿತ್ಯಹೃದಯ: ಪ್ರತಿದಿನ ಶ್ರೀ ಆದಿತ್ಯಹೃದಯ ಪಠಿಸುವುದರಿಂದ ಅಥವಾ ಕೇಳುವುದರಿಂದ ಉತ್ತಮ ಆರೋಗ್ಯ ದೊರೆಯುತ್ತದೆ.

2) ಈ ದಾನಗಳಿಂದ ಶುಭ ಫಲ: ಹಸಿರು ಬಣ್ಣದ ಬಟ್ಟೆ ಮತ್ತು ಹೆಸರುಬೇಳೆಯನ್ನು ದಾನ ನೀಡುವುದರಿಂದ ಖರ್ಚುವೆಚ್ಚಗಳು ಕಡಿಮೆ ಆಗಲಿವೆ.

3) ದೇವಾಲಯ, ದೇವರ ಪೂಜೆ: ಶ್ರೀ ಗಣಪತಿ ದೇಗುಲಕ್ಕೆ ಕಪ್ಪು ಮತ್ತು ಬಿಳಿ ಮಿಶ್ರಿತ ನೆಲಹಾಸು ದಾನ ಮಾಡುವುದರಿಂದ ಹಣಕಾಸಿನ ಸಮಸ್ಯೆ ಪರಿಹಾರ ಆಗುತ್ತದೆ. ಬಾಯಿಗೆ ಸಂಬಂಧಿಸಿದ ರೋಗಗಳು ಕಡಿಮೆಯಾಗುತ್ತವೆ. ಶ್ರೀ ಆಂಜನೇಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ವಾದ-ವಿವಾದಗಳು ಕಡಿಮೆಯಾಗಲಿವೆ.

4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ನಿಮ್ಮ ಬಳಿ ಸದಾ ಬಿಳಿ, ಕೆಂಪು ಮತ್ತು ಹಳದಿ ಬಣ್ಣದ ಕರವಸ್ತ್ರ ಇರಿಸಿಕೊಳ್ಳಿ. ನಿರೀಕ್ಷಿತ ಫಲಗಳು ದೊರೆಯಲು ಇದು ಸಹಕಾರಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ,ದಿನ ಭವಿಷ್ಯ, ಗ್ರಹಗಳ ಸಂಚಾರ,ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ,ಹಬ್ಬ,ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯವಿಭಾಗ ನೋಡಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.