ಪ್ರೇಮ ಭವಿಷ್ಯ ಆ.6: ಮಾಜಿ ಪ್ರೇಮಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ, ಈ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ-love horoscope for 6 august 2024 aries to pisces prema bhavishya love relationship astrology for today ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮ ಭವಿಷ್ಯ ಆ.6: ಮಾಜಿ ಪ್ರೇಮಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ, ಈ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ

ಪ್ರೇಮ ಭವಿಷ್ಯ ಆ.6: ಮಾಜಿ ಪ್ರೇಮಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ, ಈ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ

Love and Relationship Horoscope 6 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್‌ 6 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.

ಪ್ರೇಮ ಭವಿಷ್ಯ ಆ.6: ಮಾಜಿ ಪ್ರೇಮಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ, ಈ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ
ಪ್ರೇಮ ಭವಿಷ್ಯ ಆ.6: ಮಾಜಿ ಪ್ರೇಮಿಯೊಂದಿಗಿನ ಭಿನ್ನಾಭಿಪ್ರಾಯ ದೂರವಾಗಲಿದೆ, ಈ ರಾಶಿಯವರು ಪ್ರೀತಿಯಲ್ಲಿ ಪ್ರಾಮಾಣಿಕತೆಗೆ ಆದ್ಯತೆ ನೀಡಿ

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್‌ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್‌ 6) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೇಷ ರಾಶಿ

ನಿಮ್ಮ ಸಂಬಂಧ ಬಹಳ ಚೆನ್ನಾಗಿರುತ್ತದೆ. ಪ್ರೀತಿಯ ಜೀವನದಲ್ಲಿ ಇಂದು ರೊಮ್ಯಾಂಟಿಕ್‌ ಆಗಿರಲಿದ್ದೀರಿ, ಇಂದು ನಿಮ್ಮ ಪೋಷಕರೊಂದಿಗೆ ಮಾತನಾಡಿ ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಪ್ರಯತ್ನಿಸಿ. ಇಂದು ಕೆಲವರು ತಮ್ಮ ಗೆಳೆಯ ಅಥವಾ ಗೆಳತಿಯನ್ನು ಭೇಟಿಯಾಗಬಹುದು. ಇದರಿಂದ ಜೀವನದಲ್ಲಿ ಸಂತೋಷವನ್ನು ಮರಳಿ ಪಡೆಯಬಹುದು. ಭಿನ್ನಾಭಿಪ್ರಾಯಗಳಿದ್ದರೂ ಸಹ ಶಾಂತವಾಗಿರಿ ಮತ್ತು ಪ್ರಣಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿಮ್ಮ ನಿರ್ಧಾರವನ್ನು ಕೈಗೊಳ್ಳಿ.

ವೃಷಭ ರಾಶಿ

ಪ್ರೇಮಿಯೊಂದಿಗೆ ಭಿನ್ನಾಭಿಪ್ರಾಯಗಳಿದ್ದರೆ ಜಾಗರೂಕರಾಗಿರಿ. ಇಲ್ಲವಾದರೆ ನಿಮ್ಮಿಬ್ಬರ ನಡುವಿನ ಮನಸ್ತಾಪ ಬ್ರೇಕಪ್‌ಗೆ ಕಾರಣವಾಗಬಹುದು. ಏನೇ ಸಮಸ್ಯೆ ಇದ್ದರೂ ತಾಳ್ಮೆಯಿಂದ ನಿಭಾಯಿಸಿ. ಕೆಲವು ಸಂಬಂಧಗಳು ಸುಖಾಂತ್ಯ ಹೊಂದಿರುವುದಿಲ್ಲ. ವಿವಾಹಿತ ಮಹಿಳೆಯರು ತಮ್ಮ ಸಂಗಾತಿಯ ಕುಟುಂಬವನ್ನು ಸಂತೋಷವಾಗಿರಿಸಲು ಕ್ರಮಗಳನ್ನು ತೆಗೆದುಕೊಳ್ಳಬೇಕು. ಇಂದು ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಿರಬಹುದು.

ಮಿಥುನ ರಾಶಿ

ನೀವು ಆಡುವ ಪ್ರತಿ ಮಾತಿನ ಮೇಲೆ ಗಮನವಿರಲಿ. ನಿಮ್ಮ ಪ್ರತಿ ಮಾತದನ್ನು ನಿಮ್ಮ ಸಂಗಾತಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು, ಅದು ಸಂಬಂಧವನ್ನು ಹದಗೆಡಿಸಬಹುದು. ಜೀವನದಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ನಿಮ್ಮ ಸಂಗಾತಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂಬುದನ್ನು ನೆನಪಿನಲ್ಲಿಡಿ. ಕೆಲವು ಮಹಿಳೆಯರು ಪ್ರೇಮ ವಿವಾಹಕ್ಕೆ ಪೋಷಕರ ಬೆಂಬಲವನ್ನು ಪಡೆಯುತ್ತಾರೆ ಮತ್ತು ಮದುವೆಯ ಸಾಧ್ಯತೆಗಳೂ ಇವೆ. ಕೆಲವು ಹೆಣ್ಣುಮಕ್ಕಳು ಭವಿಷ್ಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಈ ವಾರಾಂತ್ಯದಲ್ಲಿ ತಮ್ಮ ಸಂಗಾತಿಯೊಂದಿಗೆ ಸುದೀರ್ಘ ಚರ್ಚೆ ನಡೆಸಬಹುದು.

ಕಟಕ ರಾಶಿ

ಪ್ರೀತಿಯಲ್ಲಿ ಪ್ರಾಮಾಣಿಕತೆ ಅವಶ್ಯಕತೆಯಿದೆ. ವಾದಗಳು ಮತ್ತು ಘರ್ಷಣೆಗಳನ್ನು ತಪ್ಪಿಸಿ ಮತ್ತು ನಿಮ್ಮ ಸಂಬಂಧವನ್ನು ಬಲಪಡಿಸಲು ಸಂಜೆಯನ್ನು ಒಟ್ಟಿಗೆ ಕಳೆಯಿರಿ. ಕರ್ಕಾಟಕ ರಾಶಿಯ ಕೆಲವು ಒಂಟಿ ಮಹಿಳೆಯರು ಇಂದು ಪ್ರಸ್ತಾಪ ಪಡೆದು ಇದು ಮದುವೆವರೆಗೂ ಮುಂದುವರೆಯಬಹುದು. ಪ್ರಣಯದ ವಿಷಯಗಳಲ್ಲಿ, ಯಾವುದೇ ಸ್ನೇಹಿತ ಅಥವಾ ಸಂಬಂಧಿಕರು ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಬಿಡಬೇಡಿ ಏಕೆಂದರೆ ಇದು ಗೊಂದಲಕ್ಕೆ ಕಾರಣವಾಗಬಹುದು.

ಸಿಂಹ ರಾಶಿ

ನಿಮ್ಮ ಪ್ರೇಮ ಜೀವನದಲ್ಲಿ ಕೆಲವು ಸರ್ಪ್ರೈಸ್‌ಗಳು ಎದುರಾಗಲಿವೆ. ನಿಮ್ಮ ಪ್ರೀತಿಯ ವಿಚಾರಕ್ಕೆ ಪೋಷಕರಿಂದ ಒಪ್ಪಿಗೆ ಸಿಗಬಹುದು. ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯುವುದಕ್ಕೆ ಆದ್ಯತೆ ನೀಡಿ. ಸಂಗಾತಿಗೆ ಒಂಟಿ ಎನ್ನುವ ಭಾವನೆ ಬರದಂತೆ ನೋಡಿಕೊಳ್ಳಿ. ಅವರನ್ನು ಕಾಳಜಿ ಮತ್ತು ಗೌರವದಿಂದ ನೋಡಿಕೊಳ್ಳಿ. ಕೆಲವು ಪ್ರೇಮಿಗಳು ಅಥವಾ ದಂಪತಿಗಳು ಪ್ರವಾಸದಲ್ಲಿ ಉತ್ತಮ ಕ್ಷಣಗಳನ್ನು ಕಳೆಯಲಿದ್ದಾರೆ.

ಕನ್ಯಾ ರಾಶಿ

ಇಂದು ಸಂಬಂಧಗಳಲ್ಲಿ ತಾಳ್ಮೆಯನ್ನು ಕಾಪಾಡಿಕೊಳ್ಳಿ. ಪರಸ್ಪರ ಗುಣಮಟ್ಟದ ಸಮಯ ಕಳೆಯಿರಿ. ಹಿಂದಿನ ವಿಚಾರಗಳ ಬಗ್ಗೆ ಹೆಚ್ಚು ಚರ್ಚಿಸಬೇಡಿ. ಇದು ನಿಮ್ಮ ಸಂಗಾತಿಯ ಮನಸ್ಥಿತಿಯನ್ನು ಹಾಳುಮಾಡಬಹುದು. ಸಂಬಂಧದಲ್ಲಿ ಸಮಸ್ಯೆಗಳಿದ್ದರೂ ಸಹನೆ ಕಾಪಾಡಿಕೊಳ್ಳಿ. ಇಂದು, ಕನ್ಯಾ ರಾಶಿಯ ಕೆಲವು ಜನರು ಕೋಪದಿಂದ ಸಂಬಂಧಗಳಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ವಿವಾಹಿತರಿಗೆ ಕಚೇರಿ ಪ್ರಣಯವು ಒಳ್ಳೆಯದಲ್ಲ. ಇಂದು ನಿಮ್ಮ ಸಂಗಾತಿ ನಿಮ್ಮನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬಹುದು.

ತುಲಾ ರಾಶಿ 

ಇಂದು ತುಲಾ ರಾಶಿಯ ಹೆಣ್ಣುಮಕ್ಕಳಿಗೆ ಮದುವೆ ನಿಶ್ಚಯವಾಗುವ ಸಾಧ್ಯತೆ ಇದೆ. ಹೊಸ ಸಂಬಂಧಗಳು ಕೂಡಿ ಬರಲಿವೆ. ಪ್ರೇಮಿಗಳು ಭಾವನೆಗಳನ್ನು ಹಂಚಿಕೊಳ್ಳಲು ಹೆಚ್ಚು ಸಮಯ ಕಳೆಯುತ್ತಾರೆ. ಇಂದು ಉಡುಗೊರೆ ನೀಡುವುದು ಅಥವಾ ಸ್ಪೆಷಲ್‌ ಡಿನ್ನರ್‌ ಆಯೋಜಿಸುವ ಮೂಲಕ ಪ್ರೇಮಿಯನ್ನು ಆಶ್ಚರ್ಯಗೊಳಿಸಿ. ಸಂಬಂಧದಲ್ಲಿ ಅಡೆತಡೆಗಳನ್ನು ತಪ್ಪಿಸಲು ಪಾಲುದಾರರೊಂದಿಗೆ ಮುಕ್ತ ಸಂವಹನ ನಡೆಸುವುದು ಮುಖ್ಯವಾಗಿದೆ. ಪ್ರೇಮಿ ಅಥವಾ ಸಂಗಾತಿ ದೂರದಲ್ಲಿದ್ದರೆ ಹೆಚ್ಚಿನ ಸಂವಹನ ಅಗತ್ಯವಿರುತ್ತದೆ.

ವೃಶ್ಚಿಕ ರಾಶಿ

ಪ್ರೀತಿಯ ವಿಷಯಗಳಲ್ಲಿ ಶಾಂತವಾಗಿರಿ ಮತ್ತು ನಿಮ್ಮ ಸಂಗಾತಿಯನ್ನು ಸಂತೋಷವಾಗಿರಿಸಿಕೊಳ್ಳಿ. ಒಬ್ಬರಿಗೊಬ್ಬರು ಹೆಚ್ಚು ಸಮಯ ಕಳೆಯಿರಿ ಮತ್ತು ಇದು ಹಿಂದಿನ ಮನಸ್ತಾಪಗಳನ್ನು ಮರೆಯಲು ನಿಮಗೆ ಸಹಾಯ ಮಾಡುತ್ತದೆ. ಸಂಬಂಧಗಳಲ್ಲಿ ತಾಳ್ಮೆ ಕಾಪಾಡಿಕೊಳ್ಳಿ. ಎದುರಿಗೆ ಇದ್ದವರ ಮಾತುಗಳನ್ನು ಕೇಳಿ. ಸರ್ಪ್ರೈಸ್ ನೀಡುವುದು ಸಂಬಂಧಕ್ಕೆ ಜೀವ ತುಂಬುತ್ತದೆ. ಒಬ್ಬಂಟಿ ವೃಶ್ಚಿಕ ರಾಶಿಯವರ ಜೀವನದಲ್ಲಿ ವಿಶೇಷ ವ್ಯಕ್ತಿ ಆಗಮಿಸುವ ಸಾಧ್ಯತೆ ಇದೆ.

ಧನಸ್ಸು ರಾಶಿ

ಇಂದು ಪ್ರಣಯದಲ್ಲಿ ಸೃಜನಶೀಲರಾಗಿರಿ ಮತ್ತು ಹೆಚ್ಚು ಸಮಯ ಒಟ್ಟಿಗೆ ಕಳೆಯಿರಿ. ನಿಮ್ಮ ಸಂಗಾತಿ ನಿಮ್ಮ ರೊಮ್ಯಾಂಟಿಕ್ ಸ್ವಭಾವವನ್ನು ಇಷ್ಟಪಡಬಹುದು. ಕೆಲವರ ಮದುವೆ ಕಾರ್ಡ್‌ಗಳು ಪ್ರಿಂಟ್ ಆಗಿರಬಹುದು. ಆದರೆ ಪೋಷಕರಿಂದ ಆಶೀರ್ವಾದ ಪಡೆಯಲು ಮರೆಯಬೇಡಿ. ಈಗೋ ಬಿಡಿ, ಆದರೆ ದಿನಾಂತ್ಯದಲ್ಲಿ ಸಮಸ್ಯೆಗಳು ಮೊದಲ ಸ್ಥಿತಿಗೆ ಮರಳುತ್ತದೆ. ಕೆಲವು ವೈವಾಹಿಕ ಸಂಬಂಧಗಳಲ್ಲಿ ಪ್ರಕ್ಷುಬ್ಧತೆ ಇರುತ್ತದೆ ಮತ್ತು ಪೋಷಕರು ಮಧ್ಯ ಪ್ರವೇಶಿಸಬೇಕಾಗಬಹುದು.

ಮಕರ ರಾಶಿ

ಇಂದು ಒಬ್ಬಂಟಿ ಮಕರ ರಾಶಿ ಜನರು ಹೊಸ ಪ್ರೀತಿಯನ್ನು ಕಂಡುಕೊಳ್ಳುವ ನಿರೀಕ್ಷೆಯಿದೆ. ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲಿದ್ದೀರಿ. ಪ್ರೀತಿಯ ವಿಷಯದಲ್ಲಿ, ಕೆಲವು ಮಹಿಳೆಯರು ತಮ್ಮ ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯುತ್ತಾರೆ. ಕೆಲವರ ಸಂಬಂಧದಲ್ಲಿ ಬಿರುಕು ಉಂಟಾಗಬಹುದು. ವಿಷಯಗಳನ್ನು ಸ್ಪಷ್ಟವಾಗಿರಿಸಲು ನಿಮ್ಮ ಸಂಗಾತಿಯೊಂದಿಗೆ ಮಾತನಾಡಿ. ಮಕರ ರಾಶಿಯ ವಿವಾಹಿತ ಪುರುಷರು ಕಚೇರಿ ಪ್ರಣಯಗಳನ್ನು ತಪ್ಪಿಸಬೇಕು.

ಕುಂಭ ರಾಶಿ

ಪ್ರೀತಿಯ ದೃಷ್ಟಿಯಿಂದ ಇಂದು ಉತ್ತಮ ದಿನ. ಸಣ್ಣ ತಪ್ಪು ತಿಳುವಳಿಕೆಗಳನ್ನು ಹೊಂದಿರಬಹುದು, ಆದರೆ ವಿಷಯಗಳು ನಿಯಂತ್ರಣದಿಂದ ಹೊರಬರುವ ಮೊದಲು ಅವುಗಳನ್ನು ಪರಿಹರಿಸುವುದು ಉತ್ತಮ. ಪ್ರೇಮ ಜೀವನದಲ್ಲಿ ಸಣ್ಣ ಏರಿಳಿತಗಳು ಎದುರಾಗಬಹುದು. ನಿಮ್ಮ ಪ್ರೀತಿಗೆ ಪೋಷಕರಿಂದ ಬೆಂಬಲ ಸಿಗಬಹುದು. ವಿಷಯಗಳನ್ನು ನಿರ್ಧರಿಸಲು ನಿಮ್ಮ ಸಂಗಾತಿಗೆ ಅವಕಾಶ ನೀಡಿ. ಗೌರವ ಮತ್ತು ಕಾಳಜಿಯನ್ನು ನೀಡಿ ಮತ್ತು ಪ್ರತಿಯಾಗಿ ನಿಮ್ಮ ಸಂಗಾತಿಯಿಂದ ನೀವು ಅದನ್ನು ನಿರೀಕ್ಷಿಸಬಹುದು.

ಮೀನ ರಾಶಿ

ಪ್ರೇಮ ಜೀವನದಲ್ಲಿ ಸಣ್ಣ ತೊಂದರೆಗಳು ಉಂಟಾಗಬಹುದು. ಸಂಬಂಧಿಕರಿಂದ ವಿರೋಧದ ರೂಪದಲ್ಲಿ ಅಡೆತಡೆಗಳು ಉಂಟಾಗಬಹುದು ಮತ್ತು ನೀವು ಇದನ್ನು ಪ್ರಬುದ್ಧ ಮನೋಭಾವದಿಂದ ಪರಿಹರಿಸುವುದು ಅತ್ಯಗತ್ಯ. ಹೊಸ ವ್ಯಕ್ತಿಯನ್ನು ಭೇಟಿ ಮಾಡುವ ಒಬ್ಬಂಟಿ ಮೀನ ರಾಶಿಯವರು ಸದ್ಯಕ್ಕೆ ಪ್ರಪೋಸ್‌ನಿಂದ ದೂರ ಉಳಿಯಿರಿ. ಇಂದು, ನೀವು ಮಾಜಿ ಪ್ರೇಮಿಯೊಂದಿಗಿನ ಹಳೆಯ ಸಮಸ್ಯೆಗಳನ್ನು ಸಹ ಪರಿಹರಿಸಬಹುದು, ಇದು ಹಳೆಯ ಪ್ರೇಮ ಸಂಬಂಧದ ಪುನರಾರಂಭವನ್ನು ಸೂಚಿಸುತ್ತದೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.