ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಮೇಷ, ವೃಷಭ ಸೇರಿ 5 ರಾಶಿಯವರು ಪ್ರೀತಿ ಪ್ರೇಮದಲ್ಲಿ ಅದೃಷ್ಟಶಾಲಿಗಳು; ಟೈಮ್‌ ಪಾಸ್‌ ಲವ್‌ ಇವರಿಗೆ ಆಗಿಬರಲ್ಲ

ಮೇಷ, ವೃಷಭ ಸೇರಿ 5 ರಾಶಿಯವರು ಪ್ರೀತಿ ಪ್ರೇಮದಲ್ಲಿ ಅದೃಷ್ಟಶಾಲಿಗಳು; ಟೈಮ್‌ ಪಾಸ್‌ ಲವ್‌ ಇವರಿಗೆ ಆಗಿಬರಲ್ಲ

Love Horoscope: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಯಾ ರಾಶಿ ಚಕ್ರಗಳಿಗೆ ಅದರದ್ದೇ ಆದ ಗುಣವಿಶೇಷಗಳಿವೆ. ಅವು ಆಯಾ ರಾಶಿಯಲ್ಲಿ ಜನಿಸಿದವರಿಗೂ ಅನ್ವಯ. ಇದರಂತೆ, ಮೇಷ, ವೃಷಭ ಸೇರಿ 5 ರಾಶಿಯವರು ಪ್ರೀತಿ ಪ್ರೇಮದಲ್ಲಿ ಅದೃಷ್ಟಶಾಲಿಗಳು; ಟೈಮ್‌ ಪಾಸ್‌ ಲವ್‌ ಇವರಿಗೆ ಆಗಿಬರಲ್ಲ. ಉಳಿದವರ ಪ್ರೇಮ ಕಥೆ ಏನು- ಇಲ್ಲಿದೆ ವಿವರ.

ಮೇಷ, ವೃಷಭ ಸೇರಿ 5 ರಾಶಿಯವರು ಪ್ರೀತಿ ಪ್ರೇಮದಲ್ಲಿ ಅದೃಷ್ಟಶಾಲಿಗಳು; ಟೈಮ್‌ ಪಾಸ್‌ ಲವ್‌ ಇವರಿಗೆ ಆಗಿಬರಲ್ಲ
ಮೇಷ, ವೃಷಭ ಸೇರಿ 5 ರಾಶಿಯವರು ಪ್ರೀತಿ ಪ್ರೇಮದಲ್ಲಿ ಅದೃಷ್ಟಶಾಲಿಗಳು; ಟೈಮ್‌ ಪಾಸ್‌ ಲವ್‌ ಇವರಿಗೆ ಆಗಿಬರಲ್ಲ

Love Horoscope: ಪ್ರೀತಿ ಪ್ರೇಮದ ವಿಚಾರಕ್ಕೆ ಬಂದರೆ ಯಾವ ರಾಶಿಯವರೇ ಇರಲಿ, ಒಂದರೆ ಕ್ಷಣವಾದರೂ ಅದರ ಕಡೆಗೆ ಗಮನಹರಿಸದೇ ಇರಲಾರರು. ಈ ಪ್ರೀತಿ, ಪ್ರೇಮ ಹೇಗೆ ಹುಟ್ಟಿಕೊಳ್ಳುತ್ತೆ ಅಂತ ಕೇಳಿದ್ರೆ, ಒಬ್ಬೊಬ್ಬರು ಒಂದೊಂದು ಉತ್ತರ ಕೊಡಬಹುದು. ಹೌದು, ನಮ್ಮ ಉದ್ದೇಶ, ವ್ಯಕ್ತಿತ್ವಗಳು ಇದಕ್ಕೆ ಬುನಾದಿಯಂತೆ ಕೆಲಸ ಮಾಡುತ್ತವೆ. ಪ್ರೀತಿ ಹುಟ್ಟುವಂತೆ ಮಾಡುತ್ತವೆ. ಪ್ರತಿಯೊಬ್ಬರ ವ್ಯಕ್ತಿತ್ವ ಕೆಲವು ರೂಢಿಸಿಕೊಳ್ಳುವಂಥದ್ದು, ಇನ್ನು ಕೆಲವು ಹುಟ್ಟಿನಿಂದಲೇ ಇರುತ್ತವೆ.

ಸರಳವಾಗಿ ಹೇಳಬೇಕು ಎಂದರೆ ಜ್ಯೋತಿಷ್ಯ ಶಾಸ್ತ್ರ ಹೇಳುವಂತೆ, ಪ್ರತಿಯೊಂದು ರಾಶಿ ಚಕ್ರ ಚಿಹ್ನೆಗೂ ಅದರದ್ದೇ ಆದ ಗುಣಲಕ್ಷಣಗಳಿವೆ. ಇದರಂತೆ, ಪ್ರತಿಯೊಬ್ಬ ವ್ಯಕ್ತಿಗೂ ಅವರವರ ಜನ್ಮರಾಶಿಯ ಗುಣಲಕ್ಷಣಗಳು ಹುಟ್ಟಿನಿಂದಲೇ ಇರುತ್ತವೆ. ಪ್ರೀತಿ ಪ್ರೇಮದ ವಿಚಾರದಲ್ಲಿ ಎಲ್ಲ ರಾಶಿಯವರಿಗೂ ಈ ಗುಣಲಕ್ಷಣ ಇದ್ದೇ ಇದೆ. ಆದರೆ ಕೆಲವು ರಾಶಿಚಕ್ರದವರು ಭಾರಿ ಅದೃಷ್ಟವಂತರು. ಅವರಿಗೆ ಪ್ರೀತಿಯಲ್ಲಿ ಕೊರತೆ ಆಗಲ್ಲ. ಅಂತಹ ಅದೃಷ್ಟ ಈ 5 ರಾಶಿಯವರಲ್ಲಿ ಹೆಚ್ಚು ಇದೆ.

ಪ್ರೀತಿ ಪ್ರೇಮದ ವಿಚಾರದಲ್ಲಿ ಅದೃ‍ಷ್ಟಶಾಲಿಗಳು ಈ 5 ರಾಶಿಯವರು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 5 ರಾಶಿಗಳವರು ಪ್ರೀತಿ ಪ್ರೇಮದ ವಿಚಾರದಲ್ಲಿ ಹೆಚ್ಚು ಅದೃಷ್ಟಶಾಲಿಗಳು. ಮೇಷ, ವೃಷಭ, ಕರ್ಕಾಟಕ, ಕನ್ಯಾ ಮತ್ತು ಮೀನ ರಾಶಿಯವರು ಈ ರೀತಿ ಅದೃಷ್ಟವಂತರು. ಈ ರಾಶಿಗಳವರ ಪ್ರೇಮ ಭವಿಷ್ಯ ಗಮನಿಸೋಣ.

1) ಮೇಷ ರಾಶಿ

ಬಹುತೇಕ ಮೊದಲ ನೋಟದ ಪ್ರೇಮ ಜೀವನಕ್ಕೆ ಒಳಗಾಗುವವರು. ಭೇಟಿಯಾಗುವ ಪ್ರತಿಯೊಬ್ಬ ಹೊಸ ವ್ಯಕ್ತಿಯೂ ಅವರನ್ನು ಮೋಡಿಮಾಡುತ್ತಾರೆ. ಕೆಲವೇ ಕೆಲವರಷ್ಟೇ ಈ ರಾಶಿಯವರ ಮೋಡಿಗೆ ಒಳಗಾಗಲ್ಲ. ವಿರೋಧಿಸಬಹುದು. ಅಂಥವರನ್ನು ಬಿಟ್ಟು ಉಳಿದವರನ್ನು ಈ ರಾಶಿಯವರು ತಮ್ಮವರು ಎಂದು ಹೇಳಿಕೊಳ್ಳುವ ಉದ್ದೇಶದಿಂದ ಹೋಗುತ್ತಾರೆ. ಸ್ಪಂದನೆ ಸಿಕ್ಕರೆ ಬಹಳ ಖುಷಿಪಡುತ್ತಾರೆ. ಸಾಮಾನ್ಯವಾಗಿ ಮೇಷ ರಾಶಿಯವರತ್ತ ಜನರು ಪತಂಗಗಳ ಮಾದರಿಯಲ್ಲಿ ಆರ್ಕಷಿತರಾಗುತ್ತಾರೆ. ಪ್ರೇಮಕ್ಕೆ ಸಿಲುಕಿದ್ದೇನೆ ಎಂಬ ಅರಿವಿಗೆ ಬರುವ ಮೊದಲೇ ಅದರ ಸುಳಿಗೆ ಬಿದ್ದಾಗಿರುತ್ತದೆ. ಈ ರಾಶಿಗೆ ಮಂಗಳ ಅಧಿಪತಿ. ಹೀಗಾಗಿ ಅದೃಷ್ಟದ ಪ್ರೇಮಜೀವನ ಇವರದ್ದು ಎಂದು ಬಾಜಿ ಕಟ್ಟಬಹುದು. ಈ ರಾಶಿಯವರು ಭಗ್ನ ಪ್ರೇಮಿಗಳಾಗುವುದು ಬಹಳ ವಿರಳ.

2) ವೃಷಭ ರಾಶಿ

ಪ್ರೀತಿಯಲ್ಲಿ ಅದೃಷ್ಟಶಾಲಿಯಾಗಿರುವ ರಾಶಿಚಕ್ರದ ಚಿಹ್ನೆಗಳಲ್ಲಿ ವೃಷಭ ರಾಶಿಯೂ ಒಂದು. ಇದೇ ಕಾರಣಕ್ಕೆ ಪ್ರೇಮವಿವಾಹವೇ ಇವರಲ್ಲಿ ಹೆಚ್ಚು. ಸುಖಾ ಸುಮ್ಮನೆ ಕಾಲಹರಣದ ಪ್ರೇಮ, ಸಂಬಂಧಗಳ ಬಗ್ಗೆ ಒಲವಿಲ್ಲ. ಡೇಟಿಂಗ್, ಸುತ್ತಾಟಕ್ಕೂ ಅಷ್ಟೇ ಸಂಗಾತಿಯನ್ನು ಪಕ್ಕಾ ಮಾಡಿಕೊಂಡೇ ಹೊರಡುತ್ತಾರೆ. ಪ್ರೀತಿ, ಪ್ರೇಮದ ವಿಚಾರದಲ್ಲಿ ಮೋಸ, ವಂಚನೆಯನ್ನು ಸಹಿಸಲ್ಲ. ವೃಷಭ ರಾಶಿಯವರ ಪ್ರೇಮ ಸಂಬಂಧ ಬಲವಾದುದು. ಪ್ರೀತಿ, ಪ್ರೇಮದ ವಿಚಾರದಲ್ಲಿ ಅದೃಷ್ಟವಂತರು. ನಿಸ್ವಾರ್ಥ ಭಾವದಿಂದ ಪ್ರೀತಿಪಾತ್ರರನ್ನು ಕಾಣುವಂಥವರು. ಈ ರೀತಿ ನಿಷ್ಕಲ್ಮಶ ಮನೋಭಾವದವರನ್ನು ಕಾಣಲಾಗದು. ಹೀಗಾಗಿ, ಇವರ ಜೊತೆಗೆ ಒಡನಾಡಿದವರು ಬಹುಬೇಗ ಇವರ ಮೋಡಿಗೆ ಒಳಗಾಗುತ್ತಾರೆ. ಇವರೂ ವಿಶ್ವಾಸ ಬೆಳೆದರೆ ಅದನ್ನು ಬಲಪಡಿಸುತ್ತಾರೆ.

3) ಕರ್ಕಾಟಕ ರಾಶಿ

ಈ ರಾಶಿಯವರು ಸ್ವಾಭಾವಿಕವಾಗಿ ಹೆಚ್ಚು ಸೂಕ್ಷ್ಮಭಾವದ ಜನರು. ಪಾಲುದಾರರಲ್ಲಿ ಸಂಗಾತಿಗಳಿಂದ ಇವರು ಬಯಸುವುದು ಸೌಕರ್ಯ ಮತ್ತು ವಾತ್ಸಲ್ಯ. ಏಕಾಕಿಯಾಗಿ ಪ್ರೇಮದ ಬಲೆಗೆ ಬೀಳಲ್ಲ. ಮೊದಲ ನೋಟದ ಪ್ರೇಮ ವ್ಯಕ್ತಪಡಿಸುವುದಿಲ್ಲ. ಮೊದಲು ಅವರನ್ನು ಪೂರ್ತಿಯಾಗಿ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಅದಾಗಿ ಸ್ವಲ್ಪ ಸಮಯ ಅವರೊಂದಿಗೆ ಒಡನಾಡಿ, ಬಳಿಕ ಡೇಟಿಂಗ್ ಅಥವಾ ಪ್ರೇಮ ನಿವೇದನೆ ಮಾಡಿಕೊಳ್ಳುತ್ತಾರೆ. ಹೀಗಾಗಿ ಈ ರಾಶಿಯವರ ಪ್ರೇಮಕ್ಕೆ ಬಾಳ್ವಿಕೆ ಹೆಚ್ಚು. ಹೆಚ್ಚಿನ ರಾಶಿಯವರು ತಮ್ಮನ್ನು ಅಂಟಿಕೊಳ್ಳುವ ಅಥವಾ ಹೆಚ್ಚು ಆಸರೆ ಬಯಸುವವರನ್ನು ದೂರ ಮಾಡುತ್ತಾರೆ. ಆದರೆ ಕರ್ಕಾಟಕ ರಾಶಿಯವರು ಅಂಥವರನ್ನು ಹತ್ತಿರ ಮಾಡಿಕೊಳ್ಳುತ್ತಾರೆ. ಅವರ ಅಗತ್ಯಗಳನ್ನು ಪೂರೈಸುತ್ತಾರೆ. ಸಾಂಗತ್ಯದಲ್ಲಿ ಬದ್ಧತೆಯನ್ನು ಬಯಸುತ್ತಾರೆ. ಅದುವೇ ಸಂಬಂಧಗಟ್ಟಿಗೊಳಿಸುವುದು ಎಂಬುದನ್ನು ಪ್ರತಿಪಾದಿಸುತ್ತಾರೆ. ಪ್ರೀತಿ ಮತ್ತು ಪೋ‍ಷಣೆ ಮಾಡುವ ವಿಚಾರದಲ್ಲಿ ಕರ್ಕಾಟಕಕ್ಕೆ ಸರಿ ಸಾಟಿಯಾದ ರಾಶಿ ಇಲ್ಲ.

4) ಕನ್ಯಾ ರಾಶಿ

ಈ ರಾಶಿಯವರು ಸದಾ ಹರ್ಷ ಚಿತ್ತ. ಇದೇ ಕಾರಣಕ್ಕೆ ಆಕರ್ಷಣೆಯ ಕೇಂದ್ರಬಿಂದುವಾಗುತ್ತಾರೆ. ಅವರ ಬದುಕಿನಲ್ಲಿ ಬರುವ ಪ್ರತಿಯೊಬ್ಬರನ್ನೂ ಆದರಿಸುತ್ತಾರೆ. ಪ್ರಣಯ ಪಾಲುದಾರರ ವಿಚಾರಕ್ಕೆ ಬಂದರೆ, ಇವರು ಆಯ್ಕೆಗಳನ್ನು ಗಮನಿಸುತ್ತಾರೆ. ತನಗೆ ಸರಿಯಾದವರು ಯಾರು ಎಂಬುದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಾರೆ. ಸರಿಯಾದವರು ಎಂದು ಮನವರಿಕೆಯಾದರೆ ಮಾತ್ರವೇ ಬಾಳ ಸಂಗಾತಿಯಾಗಿ ಸ್ವೀಕರಿಸುತ್ತಾರೆ. ಇಲ್ಲದೇ ಇದ್ದರೆ ಇಲ್ಲ. ವೈವಾಹಿಕ ಅಥವಾ ದಾಂಪತ್ಯ ಸಂಬಂಧ ದೀರ್ಘಾವಧಿ ಇರಬೇಕು ಎಂದು ಬಯಸುವವರು. ಸಂಬಂಧಕ್ಕೆ ಪ್ರೀತಿ, ನಂಬಿಕೆ, ವಿಶ್ವಾಸಗಳು ಮುಖ್ಯ ಎಂದು ಹೇಳುವವರು. ಕನ್ಯಾ ರಾಶಿಯವರು ಪ್ರೀತಿಯಲ್ಲಿ ಅದೃಷ್ಟಶಾಲಿಗಳು. ಏಕೆಂದರೆ ಅವರು ಬಯಸಿದ್ದನ್ನು ಗುರುತಿಸುವ ಮತ್ತು ಅದನ್ನು ಪ್ರತ್ಯೇಕವಾಗಿ ಅನುಸರಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆ.

5) ಮೀನ ರಾಶಿ

ಪ್ರೀತಿಯಲ್ಲಿ ಅದೃಷ್ಟವಂತರು ವೃಷಭ ರಾಶಿಯವರು. ಟೈಮ್‌ಪಾಸ್ ಸಂಬಂಧಗಳು ಇಷ್ಟವಾಗುವುದಿಲ್ಲ. ಸಂಗಾತಿಯನ್ನು ಕಡೆಗಣಿಸುವುದಿಲ್ಲ. ಸಂಗಾತಿ ಕಡೆಗಣಿಸುವುದನ್ನು ಬಯಸುವುದೂ ಇಲ್ಲ. ವೃಷಭ ರಾಶಿಯ ಜನರಂತೆಯೇ ಈ ರಾಶಿಯವರು ಕೂಡ ಸಂಬಂಧಗಳಲ್ಲಿ ಅತ್ಯುತ್ತಮವಾದದ್ದನ್ನು ನೀಡುವುದರಿಂದ, ಅವರು ಪ್ರೀತಿಯಲ್ಲಿ ಅದೃಷ್ಟವಂತರು. ಮೀನರಾಶಿಯವರು ಕೂಡ ನಿಸ್ವಾರ್ಥ ಅಥವಾ ಶ್ರದ್ಧೆಯುಳ್ಳ ವ್ಯಕ್ತಿಯಾಗಿದ್ದು, ಅವರ ಪ್ರೀತಿ ಪ್ರತಿದಿನ ಬಲಗೊಳ್ಳುತ್ತದೆ. ವಿವಾಹ ಸಂಬಂಧದಲ್ಲೂ ಅಷ್ಟೇ ದೀರ್ಘಾವಧಿ ಸಂಬಂಧಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುವವರು.

ನಂಬಿಕೆಗೆ ಬಿಟ್ಟ ವಿಚಾರ

ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" (HTಕನ್ನಡ) ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.