ಪ್ರೇಮ ಭವಿಷ್ಯ 2025: ಸಂಬಂಧಗಳಲ್ಲಿ ಬಿರುಕು, ಪ್ರೇಮ ವಿವಾಹ ಸಾಧ್ಯತೆ; ಮೇಷ, ವೃಷಭ, ಮಿಥುನ ರಾಶಿ ದಾಂಪತ್ಯ, ಲವ್‌ ಲೈಫ್‌ ಹೇಗಿದೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮ ಭವಿಷ್ಯ 2025: ಸಂಬಂಧಗಳಲ್ಲಿ ಬಿರುಕು, ಪ್ರೇಮ ವಿವಾಹ ಸಾಧ್ಯತೆ; ಮೇಷ, ವೃಷಭ, ಮಿಥುನ ರಾಶಿ ದಾಂಪತ್ಯ, ಲವ್‌ ಲೈಫ್‌ ಹೇಗಿದೆ?

ಪ್ರೇಮ ಭವಿಷ್ಯ 2025: ಸಂಬಂಧಗಳಲ್ಲಿ ಬಿರುಕು, ಪ್ರೇಮ ವಿವಾಹ ಸಾಧ್ಯತೆ; ಮೇಷ, ವೃಷಭ, ಮಿಥುನ ರಾಶಿ ದಾಂಪತ್ಯ, ಲವ್‌ ಲೈಫ್‌ ಹೇಗಿದೆ?

Love Horoscope 2025: ಹೊಸ ವರ್ಷ ಬರುತ್ತಿದ್ದಂತೆ , ಹೊಸ ಆಸೆ, ಕನಸುಗಳು ಉಂಟಾಗುವುದು ಸಹಜ. ಒಂಟಿಯಾಗಿರುವವರು ಪ್ರೀತಿಗಾಗಿ ಕಾಯುತ್ತಿದ್ದಾರೆ. ಸಮಸ್ಯೆಯಲ್ಲಿರುವವರು ಸಂಬಂಧ ಗಟ್ಟಿ ಮಾಡಿಕೊಳ್ಳಲು ಕಾಯುತ್ತಿದ್ದಾರೆ. ಮುಂದಿನ ವರ್ಷ ಮೇಷ, ವೃಷಭ, ಮಿಥುನ ರಾಶಿ ದಾಂಪತ್ಯ, ಲವ್‌ ಲೈಫ್‌ ಹೇಗಿದೆ? ಇಲ್ಲಿದೆ ಪ್ರೇಮ ಭವಿಷ್ಯ 2025.

ಮೇಷ, ವೃಷಭ, ಮಿಥುನ ರಾಶಿ ಪ್ರೇಮ ಭವಿಷ್ಯ 2025
ಮೇಷ, ವೃಷಭ, ಮಿಥುನ ರಾಶಿ ಪ್ರೇಮ ಭವಿಷ್ಯ 2025 (PC: Canva)

ಪ್ರೇಮ ಭವಿಷ್ಯ 2025: ಪ್ರೀತಿ, ಮದುವೆ ಎನ್ನುವುದು ಪ್ರತಿಯೊಬ್ಬರ ಜೀವನದಲ್ಲೂ ಪ್ರಮುಖ ಹಂತವಾಗಿದೆ. ಹೊಸ ವರ್ಷ ಆರಂಭವಾಗುತ್ತಿದೆ. ಮುಂದಿನ ವರ್ಷವಾದರೂ ನಮಗೂ ಪ್ರೀತಿ ದೊರೆಯಬಹುದಾ? ಈಗ ಇರುವ ಪ್ರೀತಿ ಸಕ್ಸಸ್‌ ಆಗಬಹುದಾ? ವೈವಾಹಿಕ ಜೀವನ ಹೇಗಿರುತ್ತದೆ? ಪ್ರೀತಿಯ ಸಮಸ್ಯೆಗಳು ಯಾವಾಗ ಕೊನೆಗೊಳ್ಳುತ್ತದೆ. ಹೊಸ ಅಧ್ಯಾಯ ಯಾವಾಗ ಆರಂಭವಾಗುತ್ತದೆ? ಹೀಗೆ, ಪ್ರೀತಿಯನ್ನು ಬಯಸುವ ಪ್ರತಿಯೊಬ್ಬರೂ ಯೋಚಿಸುವುದು ಸಹಜ.

ಜ್ಯೋತಿಷ್ಯದಲ್ಲಿ, ಶುಕ್ರನನ್ನು ಪ್ರೀತಿಯ ಗ್ರಹವೆಂದು ಪರಿಗಣಿಸಲಾಗುತ್ತದೆ. ಜಾತಕದಲ್ಲಿ ಶುಕ್ರನು ಬಲವಾದ ಸ್ಥಾನದಲ್ಲಿದ್ದರೆ, ವ್ಯಕ್ತಿಯ ಜೀವನದಲ್ಲಿ ಪ್ರೀತಿ ಇರುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಇದಕ್ಕೆ ವಿರುದ್ಧವಾಗಿ, ರಾಹು, ಮಂಗಳ ಅಥವಾ ಶನಿಯೊಂದಿಗೆ ಶುಕ್ರನ ಸಂಯೋಜನೆಯು ಸಂಬಂಧಗಳಿಗೆ ಪ್ರತಿಕೂಲವಾಗಿದೆ. ಶುಕ್ರನ ಜೊತೆಯಲ್ಲಿ ರಾಹು, ಮಂಗಳ ಅಥವಾ ಶನಿಯ ಉಪಸ್ಥಿತಿಯು ಸಂಬಂಧಗಳಲ್ಲಿ ಬಿರುಕು ಉಂಟುಮಾಡುವ ಸಾಧ್ಯತೆ ಇದೆ. 2025 ರಲ್ಲಿ ದ್ವಾದಶ ರಾಶಿಯವರ ಪ್ರೇಮ, ವೈವಾಹಿಕ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಲಿವೆ. ಮೇಷ, ವೃಷಭ, ಮಿಥುನ ರಾಶಿಯವರ ಲವ್‌, ದಾಂಪತ್ಯ ಜೀವನ ಹೇಗಿದೆ ನೋಡೋಣ.

ಮೇಷ ರಾಶಿ

2025 ಲವ್ ಜಾತಕದ ಪ್ರಕಾರ, ಮೇಷ ರಾಶಿಯ ವ್ಯಕ್ತಿಗಳು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಅನುಭವಿಸುತ್ತಾರೆ. ಜನವರಿಯಿಂದ ಮಾರ್ಚ್‌ವರೆಗೆ, 5 ಮನೆಯ ಮೇಲೆ ಶನಿಯ ಪ್ರಭಾವವು ಅವರ ಸಂಬಂಧಗಳ ಮೇಲೆ ಸಮಸ್ಯೆ ಉಂಟುಮಾಡಬಹುದು. ಮೇ ನಂತರ ನಿಮ್ಮ ಸಂಬಂಧದಲ್ಲಿ ತಪ್ಪು ತಿಳುವಳಿಕೆ ಉಂಟಾಗಬಹುದು. ನಿಮ್ಮ ಸಂಗಾತಿಯೊಂದಿಗೆ ನಂಬಿಕೆಯನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.

ವಿವಾಹಿತ ವ್ಯಕ್ತಿಗಳಿಗೆ, 2025 ಉತ್ತಮ ಫಲಿತಾಂಶಗಳನ್ನು ತರುತ್ತದೆ. ನೀವು ಮದುವೆಯ ವಯಸ್ಸಿನವರಾಗಿದ್ದರೆ ಮತ್ತು ಮದುವೆಯಾಗಲು ಬಯಸುತ್ತಿದ್ದರೆ, ಈ ವರ್ಷ ನೀವು ಮದುವೆ ಕಾರ್ಯಗಳಲ್ಲಿ ಮುಂದುವರೆಯಬಹುದು.

ವೃಷಭ ರಾಶಿ

ವೃಷಭ ರಾಶಿಯವರು ಈ ವರ್ಷ ಮಿಶ್ರ ಫಲಿತಾಂಶಗಳನ್ನು ಪಡೆಯುತ್ತಾರೆ. ಜನವರಿಯಿಂದ ಮೇ ವರೆಗೆ, ನಿಮ್ಮ 5ನೇ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ನಿಮ್ಮ ಸಂಬಂಧಗಳಲ್ಲಿ ಸಾಂದರ್ಭಿಕ ತಪ್ಪುಗ್ರಹಿಕೆಯನ್ನು ಉಂಟುಮಾಡಬಹುದು. ಮೇ ಮಧ್ಯದವರೆಗೆ, ಐದನೇ ಮನೆಯ ಮೇಲೆ ಗುರುವಿನ ಅಂಶವು ಈ ತಪ್ಪು ಗ್ರಹಿಕೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ. ನಿಮ್ಮ ಪ್ರೇಮ ಜೀವನದಲ್ಲಿ ಕೆಲವು ಸಮಸ್ಯೆಗಳಿದ್ದರೂ, ಕಾಲ ಕ್ರಮೇಣ ಅವು ಬಗೆಹರಿಯುತ್ತದೆ. ಈ ವರ್ಷ, ನಿಮ್ಮ ಸಂಗಾತಿಗೆ ನಿಮ್ಮ ಪ್ರೀತಿಯನ್ನು ಸ್ಪಷ್ಟವಾಗಿ ವ್ಯಕ್ತಪಡಿಸಬೇಕು ಮತ್ತು ನಂಬಿಕೆಯನ್ನು ಕಾಪಾಡಿಕೊಳ್ಳಬೇಕು.

ವಿವಾಹಿತ ವೃಷಭ ರಾಶಿಯವರಿಗೆ ಈ ವರ್ಷ ಅನುಕೂಲಕರವಾಗಿರುತ್ತದೆ. ನಿಮ್ಮ ವೈವಾಹಿಕ ಜೀವನದಲ್ಲಿ ನೀವು ನಿರೀಕ್ಷಿಸುವುದಕ್ಕಿಂತ ಉತ್ತಮ ಫಲಿತಾಂಶಗಳನ್ನು ನೀವು ಪಡೆಯಬಹುದು. ಮದುವೆಯ ವಯಸ್ಸಿನವರಿಗೆ ಅಥವಾ ಮದುವೆಯಾಗಲು ಪ್ರಯತ್ನಿಸುತ್ತಿರುವವರಿಗೆ ಈ ವರ್ಷ ಧನಾತ್ಮಕ ಫಲಿತಾಂಶಗಳನ್ನು ತರುತ್ತದೆ. 2025 ರಲ್ಲಿ ನಿಮಗೆ ನಿಶ್ಚಿತಾರ್ಥ ಅಥವಾ ಮದುವೆ ಫಿಕ್ಸ್‌ ಆಗುವ ಸಾಧ್ಯತೆ ಇದೆ.

ಮಿಥುನ ರಾಶಿ

ರಾಶಿಚಕ್ರದ ಮೂರನೇ ಚಿಹ್ನೆಯಾದ ಮಿಥುನ ರಾಶಿಯವರಿಗೆ ಪ್ರೇಮ ಜೀವನದಲ್ಲಿ ಈ ವರ್ಷ ಉತ್ತಮ ಫಲಿತಾಂಶ ನೀಡುತ್ತದೆ. ನಿಮ್ಮ ಐದನೇ ಮನೆಯ ಮೇಲೆ ಯಾವುದೇ ನಕಾರಾತ್ಮಕ ಗ್ರಹಗಳ ಪ್ರಭಾವಗಳಿಲ್ಲದೆ, ನಿಮ್ಮ ಪ್ರೀತಿಯ ಜೀವನವು ಅನುಕೂಲಕರವಾಗಿರುತ್ತದೆ. ಆದರೆ ನೀವು ಜನವರಿಯಿಂದ ಮೇ ಮಧ್ಯದವರೆಗೆ ಕೆಲವು ತೊಂದರೆಗಳನ್ನು ಎದುರಿಸಬಹುದು, ಆದರೆ ವರ್ಷದ ಉಳಿದ ಭಾಗ ಧನಾತ್ಮಕವಾಗಿರುತ್ತದೆ.

ವಿವಾಹಿತ ಮಿಥುನ ರಾಶಿಯವರಿಗೆ, ಶನಿಯ ಸಂಚಾರವು ಕೆಲವು ಸಮಸ್ಯೆಗಳನ್ನು ತರಬಹುದು. ಮಾರ್ಚ್ ನಂತರ ಹೆಚ್ಚು ಜಾಗರೂಕರಾಗಿರಬೇಕು. ಮದುವೆಯ ವಯಸ್ಸಿನವರಿಗೆ ಅಥವಾ ಮದುವೆಯಾಗಲು ಪ್ರಯತ್ನಿಸುತ್ತಿರುವವರಿಗೆ, ಈ ವರ್ಷ ಸಾಕಷ್ಟು ಅನುಕೂಲಕರವಾಗಿರುತ್ತದೆ. ಮೇ ನಂತರ, ನೀವು ಪ್ರೇಮ ವಿವಾಹ ಭಾಗ್ಯವಿದೆ ಅಥವಾ ನಿಮ್ಮ ಕುಟುಂಬದ ಸದಸ್ಯರು ಆಯ್ಕೆ ಮಾಡುವ ಯಾರನ್ನಾದರೂ ಮದುವೆಯಾಗಬಹುದು.

ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.