ಪ್ರೇಮ ಭವಿಷ್ಯ ಜು. 30: ಹಳೆಯ ಸಂಬಂಧದಿಂದ ದೂರ ಇದ್ದಷ್ಟೂ ನಿಮಗೆ ಒಳ್ಳೆಯದು, ಈ ರಾಶಿಯವರ ಪ್ರೀತಿ ಮದುವೆ ಹಂತಕ್ಕೆ ಮುಂದುವರೆಯಲಿದೆ
Love and Relationship Horoscope 30 July 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 30 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜುಲೈ 30: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಜುಲೈ 30) ಲವ್ ಲೈಫ್ ಹೇಗಿದೆ ಎಂದು ನೋಡೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ
ಪರಿಚಿತರು ಮತ್ತು ಸಂಬಂಧಿಕರೊಂದಿಗೆ ಹೆಚ್ಚು ಬೆರೆಯಿರಿ. ಸಾಂಸ್ಕೃತಿಕ ಮೌಲ್ಯಗಳಿಗೆ ಒತ್ತು ನೀಡಿ. ಸಂಬಂಧಗಳು ಸುಧಾರಿಸುತ್ತವೆ. ಸ್ನೇಹಿತರು ನಿಮ್ಮ ಎಲ್ಲಾ ಕೆಲಸದಲ್ಲೂ ಬೆಂಬಲ ನೀಡುವರು. ರಕ್ತ ಸಂಬಂಧಿಗಳ ನಡುವಿನ ಬಾಂಧವ್ಯ ಹೆಚ್ಚಾಗಲಿದೆ. ಸಂಗಾತಿ ಜೊತೆ ಸಂತೋವಾಗಿರಲಿದ್ದೀರಿ. ದೂರಾದ ಪ್ರೀತಿ ಮತ್ತೆ ನಿಮ್ಮನ್ನು ಅರಸಿ ಬರಬಹುದು.
ವೃಷಭ ರಾಶಿ
ದಿನದ ಮೊದಲ ಭಾಗದಲ್ಲಿ ನಿಮ್ಮ ಹಾಗೂ ಸಂಗಾತಿಯ ನಡುವೆ ಸಣ್ಣ ಗೊಂದಲಗಳಿರುತ್ತವೆ. ಅವುಗಳನ್ನು ಪರಿಹರಿಸಲು ನೀವು ಪ್ರಯತ್ನ ಪಡಬೇಕು. ರೊಮ್ಯಾಂಟಿಕ್ ಡಿನ್ನರ್ಗೆ ನಿಮ್ಮ ಪ್ರೇಮಿಯನ್ನು ಕರೆದೊಯ್ಯಿರಿ. ಸಂಜೆ ಕೂಡಾ ನೀವು ಲಾಂಗ್ ರೈಡ್ ಹೋಗಿ. ಪ್ರೇಮಿಯೊಂದಿಗೆ ಸಂವಹನ ಮಾಡುವಾಗ ಎಚ್ಚರ. ಅವಿವಾಹಿತ ವೃಷಭ ರಾಶಿಯ ಮಹಿಳೆಯರು ತಮ್ಮ ಪ್ರೇಮಿಯೊಂದಿಗೆ ಸಮಯ ಕಳೆಯುವಾಗ ಜಾಗರೂಕರಾಗಿರಬೇಕು.
ಮಿಥುನ ರಾಶಿ
ಇಂದು ನಿಮ್ಮ ಪ್ರೇಮ ಜೀವನದಲ್ಲಿ ತಿರುವುಗಳನ್ನು ಎದುರು ನೋಡಬಹುದು. ಬ್ರೇಕ್ಅಪ್ ಆದವರ ಹಳೆಯ ಪ್ರೀತಿ ಮತ್ತೆ ಚಿಗುರಲಿದೆ. ಒಂಟಿಯಾಗಿರುವ ಹೆಣ್ಣುಮಕ್ಕಳಿಗೆ ವ್ಯಕ್ತಿಯೊಬ್ಬರ ಮೇಲೆ ಪ್ರೀತಿ ಮೂಡಬಹುದು. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಹಿಂಜರಿಯಬೇಡಿ. ಕೆಲವರು ಪ್ರೀತಿ ವಿಚಾರದಲ್ಲಿ ಪೋಷಕರಿಂದ ಒಪ್ಪಿಗೆ ಪಡೆಯಬಹುದು. ಮಿಥುನ ರಾಶಿಯವರು ವಿವಾಹೇತರ ಸಂಬಂಧದಿಂದ ದೂರ ಇರಿ, ಇದರಿಂದ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.
ಕಟಕ ರಾಶಿ
ನಿಮ್ಮ ಸಂಗಾತಿಯನ್ನು ಸಂತೋಷವಾಗಿರಿಸಿಕೊಳ್ಳಿ. ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ನೀವು ಭಾವನೆಗಳನ್ನು ಹಂಚಿಕೊಳ್ಳುವಾಗ, ಪ್ರೇಮಿಯನ್ನು ಅಸಮಾಧಾನಗೊಳಿಸಬಹುದಾದ ಹಿಂದಿನ ವಿಷಯಗಳ ಬಗ್ಗೆ ಚರ್ಚಿಸಬೇಡಿ. ವೈಯಕ್ತಿಕ ಮತ್ತು ವೃತ್ತಿಪರ ಪ್ರಯತ್ನಗಳಲ್ಲಿ ನೀವಿಬ್ಬರೂ ಪರಸ್ಪರ ಬೆಂಬಲಿಸಬೇಕು. ಇಂದು, ನೀವು ಮಾಜಿ ಪ್ರೇಮಿಯೊಂದಿಗಿನ ಹಳೆಯ ಸಮಸ್ಯೆಗಳನ್ನು ಸಹ ಪರಿಹರಿಸಬಹುದು. ಕೆಲವು ವೃಷಭ ರಾಶಿಯವರು ಇದು ಹಳೆಯ ಪ್ರೇಮ ಸಂಬಂಧವನ್ನು ಪುನರಾರಂಭಿಸುಸವ ಸಾಧ್ಯತೆ ಇದೆ.
ಸಿಂಹ ರಾಶಿ
ನಿಮ್ಮವರ ಭಾವನೆಗಳಿಗೆ ಆದ್ಯತೆ ನೀಡಿ ಮತ್ತು ಸ್ನೇಹ ಸಂಬಂಧವನ್ನು ಕಾಪಾಡಿಕೊಳ್ಳಿ. ವಿವಾಹಿತ ದಂಪತಿಗಳು ತಮ್ಮ ಅತ್ತೆಯನ್ನು ಗೌರವಿಸಬೇಕು. ಕೆಲವು ಮಿಥುನ ರಾಶಿಯ ವಿವಾಹಿತರು ಸಂಗಾತಿಯ ಮನೆಯಲ್ಲಿ ಸಮಸ್ಯೆಗಳನ್ನು ಎದುರಿಸಬಹುದು. ಇದನ್ನು ತಕ್ಷಣವೇ ಪರಿಹರಿಸಿಕೊಳ್ಳಿ. ಕುಟುಂಬ ಸದಸ್ಯರಲ್ಲಿ ನಂಬಿಕೆ ಕಾಪಾಡಿಕೊಳ್ಳಿ. ವೈಯಕ್ತಿಕ ವಿಷಯಗಳಿಗೆ ಒತ್ತು ನೀಡಿ. ಪ್ರೀತಿಪಾತ್ರರೊಂದಿಗೆ ಹೆಚ್ಚು ಸಮಯ ಕಳೆಯಿರಿ.
ಕನ್ಯಾ ರಾಶಿ
ಪ್ರೇಮ ಜೀವನದಲ್ಲಿ ಯಾವುದೇ ಸಮಸ್ಯೆಗಳು ಇರುವುದಿಲ್ಲ. ಆದರೆ ಸಣ್ಣ ಪುಟ್ಟ ಮನಸ್ತಾಪಗಳು ಸಾಮಾನ್ಯವಾಗಿರುತ್ತದೆ. ಹಳೆಯ ಪ್ರೇಮ ಸಂಬಂಧ ತೊಂದರೆಗೆ ಕಾರಣವಾಗಬಹುದು. ಪ್ರಬುದ್ಧ ವರ್ತನೆ ತೋರಿಸಬೇಕು. ಹೊಸ ಸಂಬಂಧದಲ್ಲಿ ಇರುವವರು ಪ್ರೇಮಿಯೊಂದಿಗೆ ಹೆಚ್ಚು ಸಮಯ ಒಟ್ಟಿಗೆ ಕಳೆಯಬೇಕಾಗುತ್ತದೆ. ಪ್ರೇಮ ಜೀವನದ ಮೇಲೆ ಪರಿಣಾಮ ಬೀರುವ ವಾದ ವಿವಾದಗಳನ್ನು ಇಂದು ತಪ್ಪಿಸಿ. ಕೆಲವು ಪ್ರೇಮ ಸಂಬಂಧಗಳು ಮದುವೆ ಹಂತಕ್ಕೆ ಮುಂದುವರೆಯುತ್ತವೆ. ದಿನದ ಎರಡನೇ ಭಾಗ ಕೆಲವು ಕನ್ಯಾ ರಾಶಿಯವರಿಗೆ ಉತ್ತಮವಾಗಿಲ್ಲ. ಬ್ರೇಕ್ ಅಪ್, ವಿಚ್ಚೇದನಗಳಾಗಬಹುದು.
ತುಲಾ ರಾಶಿ
ಇಂದು ಪ್ರೀತಿಯ ಪ್ರತಿ ಕ್ಷಣವನ್ನು ಅನುಭವಿಸುತ್ತೀರಿ. ಹೊಸ ಸಂಬಂಧವನ್ನು ಸ್ವೀಕರಿಸಲು ಸಿದ್ಧರಾಗಿರಿ. ಒಂಟಿಯಾಗಿರುವವರು ಪ್ರಯಾಣ ಮಾಡುವಾಗ, ಕೆಲಸದಲ್ಲಿ ಅಥವಾ ಅಧಿಕೃತ ಸಮಾರಂಭದಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ನಿಮ್ಮ ಪ್ರೀತಿಗೆ ಒಪ್ಪಿಗೆ ಸಿಗಬೇಕು ಎಂದರೆ ದಿನದ ಮೊದಲ ಭಾಗದಲ್ಲಿ ಪ್ರಪೋಸ್ ಮಾಡಿ. ಈಗಾಗಲೇ ಪ್ರೀತಿಯಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.
ವೃಶ್ಚಿಕ ರಾಶಿ
ಇಂದು ನಿಮ್ಮ ಸಂಗಾತಿಯ ಬಗ್ಗೆ ಬಹಳ ಭಾವುಕರಾಗಿರುವಿರಿ, ಸಂಗಾತಿಗೆ ಸಾಕಷ್ಟು ಪ್ರೀತಿ ನೀಡಿ. ನಿಮ್ಮ ಮನೆಯಲ್ಲಿ ನಿಮ್ಮ ಪ್ರೀತಿ ವಿಚಾರ ಚರ್ಚೆಗೆ ಒಳಗಾಗಬಹುದು. ಸಂಜೆ ವೇಳೆಗೆ ಎಲ್ಲವೂ ಒಂದು ಹಂತಕ್ಕೆ ಬರಲಿದೆ. ನಿಮ್ಮ ಪ್ರೇಮಿಗೆ ಉಡುಗೊರೆ ನೀಡುವ ಮೂಲಕ ಅವರಿಗೆ ಖುಷಿ ನೀಡಬಹುದು. ನೀವು ಹೊಸದಾಗಿ ಯಾರನ್ನಾದರೂ ಭೇಟಿ ಮಾಡಿದ್ದರೆ ಅವರ ಬಳಿ ಪ್ರೇಮ ನಿವೇದನೆ ಮಾಡುವ ಮುನ್ನ ಸ್ವಲ್ಪ ಸಮಯ ತೆಗೆದುಕೊಳ್ಳಿ. ಪ್ರೇಮಿ ಮೇಲೆ ಕೋಪದಿಂದ ವರ್ತಿಸಿದರೆ ಅದು ಸಮಸ್ಯೆಗೆ ಕಾರಣವಾಗಬಹುದು. ಯಾವ ಪರಿಸ್ಥಿತಿ ಇದ್ದರೂ ಸಂಯಮದಿಂದ ಇರಿ.
ಧನಸ್ಸು ರಾಶಿ
ಪ್ರೇಮಿಯೊಂದಿಗೆ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಿರಿ. ನಿಮ್ಮ ಭಾವನೆಗಳನ್ನು ನಿಯಂತ್ರಿಸಿ ಮತ್ತು ವಾದ ಮಾಡುವಾಗ ತಾಳ್ಮೆ ಕಳೆದುಕೊಳ್ಳಬೇಡಿ. ಕೆಲವು ವಿವಾಹ ಸಂಬಂಧಗಳು ಪ್ರಕ್ಷುಬ್ಧತೆಯನ್ನು ಕಾಣುತ್ತವೆ. ಪೋಷಕರು ಮಧ್ಯ ಪ್ರವೇಶಿಸಬೇಕಾಗುತ್ತದೆ. ಕೆಲವು ಧನು ರಾಶಿಯ ಸ್ಥಳೀಯರು, ವಿಶೇಷವಾಗಿ ಮಹಿಳೆಯರು ನಿಮಗೆ ದೀರ್ಘ ಕಾಲದಿಂದ ಪರಿಚಯ ಇರುವ ವ್ಯಕ್ತಿಯೊಬ್ಬರಿಂದ ಪ್ರೀತಿಯ ಪ್ರಸ್ತಾಪ ಪಡೆಯಬಹುದು. ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವೂ ಆಗಬಹುದು.
ಮಕರ ರಾಶಿ
ಇಂದು ಪ್ರೀತಿಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳನ್ನು ಪ್ರಬುದ್ಧ ರೀತಿಯಲ್ಲಿ ನಿಭಾಯಿಸಿ. ನಿಮ್ಮ ಪ್ರೀತಿಯ ಜೀವನದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಬುದ್ಧಿವಂತರಾಗಿರಿ. ಈ ರಾಶಿಯ ಒಂಟಿ ಜನರು ಇಂದು ತಮ್ಮ ಜೀವನದಲ್ಲಿ ವಿಶೇಷ ವ್ಯಕ್ತಿಯೊಬ್ಬರನ್ನು ಎದುರು ನೋಡಬಹುದು. ನೀವು ಯಾರಿಗಾದರೂ ಪ್ರೇಮ ನಿವೇದನೆ ಮಾಡುವುದಿದ್ದರೆ ಧನಾತ್ಮಕ ಪ್ರತಿಕ್ರಿಯೆ ಪಡೆಯಲಿದ್ದೀರಿ. ನಿಮ್ಮ ಪ್ರೇಮ ಜೀವನ ರೊಮ್ಯಾಂಟಿಕ್ ಆಗಿರಲಿದೆ. ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಲಿದ್ದೀರಿ. ಇದರಿಂದ ನಿಮ್ಮ ನಡುವಿನ ಪ್ರೀತಿ ಇನ್ನಷ್ಟು ಹೆಚ್ಚಾಗಲಿದೆ.
ಕುಂಭ ರಾಶಿ
ಪ್ರೀತಿಯ ವಿಚಾರಕ್ಕೆ ಇಂದು ಒಳ್ಳೆಯ ದಿನ. ಸಣ್ಣಪುಟ್ಟ ಮನಸ್ತಾಪ ಉಂಟಾಗಬಹುದು, ಆದರೆ ವಿಷಯಗಳು ನಿಯಂತ್ರಣ ಕಳೆದುಕೊಳ್ಳುವ ಮುನ್ನ ಅದನ್ನು ಪರಿಹರಿಸಿಕೊಳ್ಳಿ. ನಿಮ್ಮ ಕೆಲವು ಮಾತುಗಳು ಸಂಗಾತಿಯ ಬೇಸರಕ್ಕೆ ಕಾರಣವಾಗಬಹುದು, ಇದರಿಂದ ಅಶಾಂತಿ ಉಂಟಾಗಬಹುದು. ವಿವಾಹಿತ ಕುಂಭ ರಾಶಿಯವರು ವಿವಾಹೇತರ ಸಂಬಂಧಗಳಿಂದ ದೂರವಿರಬೇಕು. ಏಕೆಂದರೆ ನಿಮ್ಮ ಸಂಗಾತಿಯು ಸಂಜೆಯ ವೇಳೆಗೆ ನಿಮ್ಮನ್ನು ರೆಡ್ ಹ್ಯಾಂಡ್ ಆಗಿ ಹಿಡಿಯಬಹುದು. ವೈವಾಹಿಕ ಜೀವನದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು.
ಮೀನ ರಾಶಿ
ಮೀನ ರಾಶಿಯವರು ಇಂದು ರೊಮ್ಯಾಂಟಿಕ್ ಮೂಡ್ನಲ್ಲಿದ್ದು ಇದು ನಿಮ್ಮ ಪ್ರೀತಿಯ ಜೀವನವನ್ನು ಇನ್ನಷ್ಟು ಬಲಪಡಿಸುತ್ತದೆ.ಸಂಗಾತಿಯೊಂದಿಗೆ ಸಮಯ ಕಳೆಯುವಾಗ ಕೂಲ್ ಆಗಿರಿ. ನಿಮ್ಮ ಮಾತುಗಳಿಂದ ಪ್ರೇಮಿಗೆ ನೋವಾಗದಂತೆ ಎಚ್ಚರ ವಹಿಸಿ. ಕೆಲವು ಪ್ರೇಮ ಪ್ರಕರಣಗಳು ಮದುವೆ ಹಂತಕ್ಕೆ ತಿರುಗುತ್ತವೆ. ಒಬ್ಬರನ್ನೊಬ್ಬರು ತಿಳಿದುಕೊಳ್ಳಲು ನೀವು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಬಹುದಾದ ರಜೆಯನ್ನು ಪ್ಲ್ಯಾನ್ ಮಾಡುವಿರಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.