ಪ್ರೇಮ ಭವಿಷ್ಯ ಆಗಸ್ಟ್‌ 13: ಸಂಗಾತಿಯೊಂದಿಗೆ ವ್ಯವಹಾರದ ಚರ್ಚೆ ಬೇಡ, ಮಾತನಾಡುವಾಗ ಎಚ್ಚರವಿರಲಿ-love relationship horoscope august 13 2024 daily astrological predictions love life today astrological prediction smk ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮ ಭವಿಷ್ಯ ಆಗಸ್ಟ್‌ 13: ಸಂಗಾತಿಯೊಂದಿಗೆ ವ್ಯವಹಾರದ ಚರ್ಚೆ ಬೇಡ, ಮಾತನಾಡುವಾಗ ಎಚ್ಚರವಿರಲಿ

ಪ್ರೇಮ ಭವಿಷ್ಯ ಆಗಸ್ಟ್‌ 13: ಸಂಗಾತಿಯೊಂದಿಗೆ ವ್ಯವಹಾರದ ಚರ್ಚೆ ಬೇಡ, ಮಾತನಾಡುವಾಗ ಎಚ್ಚರವಿರಲಿ

Love and Relationship Horoscope 13th August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಲವ್ ಲೈಫ್ ಹೇಗಿದೆ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಆಗಸ್ಟ್‌ 12 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ

ಪ್ರೇಮ ಭವಿಷ್ಯ ಆಗಸ್ಟ್‌ 13: ಸಂಬಂಧದಲ್ಲಿ ಹೊಸ ಹುಮ್ಮಸ್ಸು
ಪ್ರೇಮ ಭವಿಷ್ಯ ಆಗಸ್ಟ್‌ 13: ಸಂಬಂಧದಲ್ಲಿ ಹೊಸ ಹುಮ್ಮಸ್ಸು (Canva)

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್‌ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್‌ 12) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೇಷ: ನಿಮ್ಮ ಪ್ರಿಯತಮೆಯು ನಿಮ್ಮ ಮಾತಿನಿಂದ ಬೇಸರಗೊಳ್ಳುತ್ತಾಳೆ. ನಿಮ್ಮ ಮಾತಿನಿಂದ ಅವರಿಗೆ ನೀವು ಅವರಿಗೆ ಉಪದೇಶ ಮಾಡುತ್ತಿರುವಂತೆ ಅನಿಸಬಹುದು. ಆ ಕಾರಣಕ್ಕಾಗಿ ಅವರಿಗೆ ಇನ್ನಷ್ಟು ಬೋರ್ ಆಗುತ್ತದೆ. ನಿಮ್ಮ ಮಾತಿನ ರೀತಿಯನ್ನು ಬದಲಾಯಿಸಿಕೊಳ್ಳಿ. ಇದೀಗ ನೀವು ಹೆಚ್ಚಿನ ಮಾತನ್ನು ಆಲಿಸಬೇಕು. ನಿಮ್ಮ ಸಂಗಾತಿಯ ಮಾತುಗಳಿಗೆ ಕಿವಿಯಾಗಬೇಕು. ಆಗ ಮಾತ್ರ ಅವರಿಗೆ ಸಮಾಧಾನ ಆಗಲು ಸಾಧ್ಯ.

ವೃಷಭ: ನೀವು ಮಾತನಾಡುವಾಗ ಹೆಚ್ಚಿನ ನಿಗಾ ವಹಿಸಬೇಕು. ಇಲ್ಲವಾದಲ್ಲಿ ನಿಮ್ಮ ಸಂಗಾತಿಗೆ ನಿಮ್ಮ ಮಾತಿನಿಂದ ನೋವಾಗುವ ಸಾಧ್ಯತೆ ತುಂಬಾ ಇದೆ. ಇದೇ ಕಾರಣಕ್ಕೆ ನಿಮ್ಮಬ್ಬರ ನಡುವೆ ತುಂಬಾ ಜಗಳವಾಗಬಹುದು. ವಿಚಾರ ಮಾಡದೇ ಮಾತನಾಡುವುದರಿಂದ ನಿಮ್ಮ ಸಂಗಾತಿ ಬೇಸರಗೊಳ್ಳುತ್ತಾರೆ. ನಿಮ್ಮ ಮಾತು ಒರಟಾಗಿದ್ದರೂ ನೀವು ಸಂಗಾತಿಗೆ ತೋರುವ ಪ್ರೀತಿ ಮನಸಿನಿಂದ ಬರುತ್ತದೆ.

ಮಿಥುನ: ನೀವು ಇಂದು ನಿಮ್ಮ ಸಂಗಾತಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಬೇಕು ಎಂದು ಅಂದುಕೊಂಡಿರುತ್ತೀರಿ. ಆದರೆ ನಿಮ್ಮ ಕೆಲಸದ ನಡುವೆ ಬಿಡುವಾಗುವುದಿಲ್ಲ. ವಿವಿಧ ಜವಾಬ್ದಾರಿಗಳು ನಿಮ್ಮನ್ನು ಬೇರೆಡೆಗೆ ಸೆಳೆಯುತ್ತದೆ. ಆದರೆ ಸಂಗಾತಿಗೆ ನೀವು ಈ ಬಗ್ಗೆ ಮಾಹಿತಿ ನೀಡಿದಲ್ಲಿ ತೊಂದರೆ ಇಲ್ಲ.

ಕರ್ಕ: ನೀವು ಸಂಬಂಧಗಳಲ್ಲಿ ಆತ್ಮವಿಶ್ವಾಸ ಮತ್ತು ಧೈರ್ಯವನ್ನು ತಂದುಕೊಳ್ಳುತ್ತೀರಿ. ಈಗ ಮುಖವಾಡಗಳನ್ನು ಕಳಚುವ ಸಮಯ ಬಂದಿದೆ. ನಿಮ್ಮ ಸಂಗಾತಿ ಹತ್ತಿರ ಪ್ರಾಮಾಣಿಕವಾಗಿ ನೀವು ಹೇಗೆ ಎಂಬುದನ್ನು ಹಾಗೇ ತೋರಿಸಿ ನಾಟಕ ಮಾಡಬೇಡಿ. ಭಯ ಅಥವಾ ಸಂದೇಹವಿಲ್ಲದೆ ನಿಮ್ಮ ಸಂಗಾತಿ ಹತ್ತಿರ ಮುಕ್ತವಾಗಿ ಮಾತನಾಡಿ.

ಸಿಂಹ: ನಿಮ್ಮ ಸಂಬಂಧಗಳು ಪರಿಪೂರ್ಣವಾಗಬೇಕೆಂದು ಬಯಸುವುದು ತಪ್ಪಲ್ಲ. ಯಾರೂ ಪರಿಪೂರ್ಣರಲ್ಲ ಎಂಬುದನ್ನು ನೆನಪಿನಲ್ಲಿಡಿ. ನಿಮ್ಮ ಸಂಗಾತಿಯಲ್ಲಿನ ಸಣ್ಣ ನ್ಯೂನತೆಗಳನ್ನು ಕಂಡು ಅದನ್ನೇ ಹೇಳುವುದನ್ನು ಬಿಟ್ಟು ಅವುಗಳನ್ನು ಬಿಟ್ಟು ಮುಂದೆ ಸಾಗಿ. ಧನಾತ್ಮಕವಾದದ್ದನ್ನು ಕಂಡುಹಿಡಿಯಲು ಪ್ರಯತ್ನಿಸಿ.

ಕನ್ಯಾ: ಇಂದು ನೀವು ಅಂದುಕೊಂಡಷ್ಟು ಒಳ್ಳೆಯ ದಿನವಲ್ಲ. ನಿರೀಕ್ಷೆಗಳು ಈಡೇರದಿದ್ದಾಗ ನಿಜಕ್ಕೂ ನಿರಾಸೆಯಾಗುತ್ತದೆ. ಊಹೆಗಳು ಅಥವಾ ಆರೋಪಗಳನ್ನು ಮಾಡುವ ಬದಲು ಏನಾಗಿದೆಯೋ ಅದನ್ನು ಸ್ವೀಕಾರ ಮಾಡಿ. ನಿರಾಕರಣೆ ಅಥವಾ ಅಸಡ್ಡೆಯಾಗಿ ಕಾಣಿಸಿಕೊಂಡಿರುವುದರ ಬಗ್ಗೆ ನೀವು ಸಂಗಾತಿಯೊಂದಿಗೆ ಮಾತನಾಡಿ ಬಗೆಹರಿಸಿಕೊಳ್ಳಿ. ಎಲ್ಲವೂ ಸರಿ ಆಗುತ್ತದೆ.

ತುಲಾ: ಇಂದು ನೀವು ಎಷ್ಟು ಹಣ ಖರ್ಚು ಮಾಡುತ್ತೀರಿ ಎಂಬುದು ಮುಖ್ಯವಲ್ಲ. ಅದರ ಬದಲಾಗಿ ನೀವು ನಿಮ್ಮ ಸಂಗಾತಿಗಾಗಿ ಎಷ್ಟು ಸಮಯ ನೀಡುತ್ತೀರಿ ಎಂಬುದು ತುಂಬಾ ಮುಖ್ಯ. ಅವರು ನಿಮ್ಮಿಂದ ಉಡುಗೊರೆಯನ್ನು ಬಯಸುತ್ತಿಲ್ಲ. ನೀವು ನೀಡಬಹುದಾದ ಅಮೂಲ್ಯ ಸಮಯವನ್ನು ಬಯಸುತ್ತಾ ಇದ್ದಾರೆ. ಹಾಗಾಗಿ ನೀವು ಇಂದು ನಿಮ್ಮ ಸಂಗಾತಿ ಜೊತೆ ಹೆಚ್ಚಿನ ಸಮಯ ಕಳೆಯಲು ನೋಡಿ.

ವೃಷ್ಚಿಕ: ಇಂದು ನಿಮಗೆ ಚಡಪಡಿಕೆ ಅನಿಸಿದಾಗಲೆಲ್ಲಾ ನಿಮ್ಮನ್ನು ಕಾಡುವುದು ಹೊರಗಿನ ಪ್ರಪಂಚವಲ್ಲ ಆದರೆ ನಿಮ್ಮದೇ ಒಳಗಿನ ಪ್ರಪಂಚ. ನಿಮ್ಮ ಸಂಗಾತಿಯೊಡನೆ ನೀವು ನಿಮ್ಮ ಭವಿಷ್ಯವನ್ನು ಹೇಗೆ ಕಳೆಯ ಬೇಕು ಎಂದು ಆಲೋಚನೆ ಮಾಡುತ್ತಲೆ ದಿನ ಕಳೆಯುತ್ತಿದ್ದೀರ. ಅದರ ಬದಲಾಗಿ ಮುಂದೆ ಏನು ಮಾಡಬಹುದು ಎಂಬುದನ್ನು ಒಮ್ಮೆ ಆಲೋಚನೆ ಮಾಡಿ ನೋಡಿ. ಸಂಬಂಧದ ಭವಿಷ್ಯದ ಬಗ್ಗೆ ಆತುರದ ನಿರ್ಧಾರಗಳು ಬೇಡ.

ಧನು: ಪ್ರೀತಿಪಾತ್ರರ ಮೇಲೆ ನೀವು ಹೆಚ್ಚಿನ ಬೇಡಿಕೆ ಇಡುತ್ತ ಇದ್ದೀರ. ಮೊದಲು ಇದನ್ನು ತಪ್ಪಿಸಿ. ಅವರನ್ನು ಅರ್ಥ ಮಾಡಿಕೊಂಡು ಅವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿ. ನಿಮ್ಮ ಇಚ್ಛೆಯನ್ನು ಅವರ ಮೇಲೆ ಹೇರಬೇಡಿ. ವಾದ ಮಾಡದಿರುವುದು ಉತ್ತಮ. ನೀವು ಹೇಗೆ ಮಾತನಾಡುತ್ತೀರಿ ಎಂಬುದರ ಅರಿವು ನಿಮಗಿರಲಿ. ಇಲ್ಲವಾದರೆ ಸಂಬಂಧ ಕೆಡುತ್ತದೆ.

ಮಕರ: ನೀವು ನಿಮ್ಮ ಸಂಬಂಧಿಕರೊಂದಿಗೆ ವಾಸಿಸುತ್ತಿದ್ದರೆ. ಈ ಸಂಘರ್ಷವು ನಿಮ್ಮ ಸಂಗಾತಿಯ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಮನೆಯ ವ್ಯವಹಾರಗಳನ್ನು ನಿಭಾಯಿಸುವಲ್ಲಿ ಬುದ್ಧಿವಂತರಾಗಿರಿ. ನಿಮ್ಮ ಸಂಗಾತಿಯ ಎದುರು ನೀವು ಜೋರಾಗಿ ಮಾತನಾಡುವುದು ಅಥವಾ ಇನ್ಯಾವುದೇ ಅವರಿಗೆ ಸಂಬಂಧಿಸಿರದ ವಿಷಯದ ಬಗ್ಗೆ ಚರ್ಚೆ ಮಾಡುವುದು ಮಾಡಬೇಡಿ.

ಕುಂಭ: ನಿಮ್ಮ ಹಣಕಾಸಿನ ವ್ಯವಹಾರಗಳನ್ನು ವಿಂಗಡಿಸಲು ನೀವು ಪ್ರಯತ್ನ ಮಾಡುತ್ತೀರಿ. ನಿಮ್ಮ ಆರ್ಥಿಕ ಕಾಳಜಿಗಳು ನಿಮ್ಮ ಜೀವನದಲ್ಲಿ ಪ್ರಾಬಲ್ಯ ಸಾಧಿಸಲು ಬಿಡಬೇಡಿ. ಪ್ರೀತಿ ಮತ್ತು ವಾತ್ಸಲ್ಯವನ್ನು ಹೆಚ್ಚು ನಂಬಿ ಯಾಕೆಂದರೆ ಇದು ಹಣಕ್ಕಿಂತಲೂ ಹೆಚ್ಚಿನದು. ಯಾರೋ ಒಬ್ಬರು ನಿಮಗೆ ಸಮಯ ಕೊಡುತ್ತಿದ್ದಾರೆ ಎಂದಾದರೆ ಅದು ಹಣಕ್ಕಿಂತ ಹೆಚ್ಚು ಮೌಲ್ಯ ಹೊಂದಿದೆ.

ಮೀನ: ಇಂದು ನೀವು ಸಂಬಂಧಗಳಲ್ಲಿ ಬಯಸಿದ್ದನ್ನು ಪಡೆದುಕೊಳ್ಳುತ್ತೀರಿ. ನೀವು ಬಯಸುವ ಪ್ರೀತಿಯ ಜೀವನ ನಿಮ್ಮದಾಗಲಿದೆ. ನಿಮ್ಮ ಸಂಗಾತಿ ಜೊತೆ ಉತ್ತಮ ಬಾಂಧವ್ಯವನ್ನು ನೀವು ಪಡೆಯುತ್ತೀರಿ. ನೀವಿಬ್ಬರು ಸಾಧಿಸಬಹುದಾದ ಉನ್ನತ ಗುರಿಗಳ ಬಗ್ಗೆ ಯೋಚಿಸಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.