ಪ್ರೇಮ ಭವಿಷ್ಯ ಆಗಸ್ಟ್ 27: ನಿಮ್ಮ ಸಂಗಾತಿ ಮಾತನ್ನು ತಾಳ್ಮೆಯಿಂದ ಆಲಿಸಿ, ನೀವು ನೀಡುವ ಸಮಯವೇ ಅವರಿಗೆ ಅಮೂಲ್ಯ
Love and Relationship Horoscope 27 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್ 26 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್ 27) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ ಲವ್ ಲೈಫ್ (Aries Love Horoscope): ಇಂದು ನಿಮ್ಮ ಪ್ರೇಮಿಯ ಮನಸ್ಥಿತಿ ಚೆನ್ನಾಗಿರುವಂತೆ ನೋಡಿಕೊಳ್ಳಿ. ಸಂಗಾತಿಯ ಮಾತುಗಳನ್ನು ಶಾಂತವಾಗಿ ಆಲಿಸಿ. ಇದು ಬಂಧವನ್ನು ಬಲಪಡಿಸಲು ನಿಮಗೆ ಸಹಾಯ ಮಾಡುತ್ತದೆ. ನಿಮ್ಮ ಸಂಗಾತಿ ಇಂದು ತನ್ನ ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ನೀವು ಯಾವುದೇ ಹಿಂಜರಿಕೆಯಿಲ್ಲದೆ ಭಾವನೆಗಳನ್ನು ವ್ಯಕ್ತಪಡಿಸಬಹುದು. ಕೆಲವು ಮಹಿಳೆಯರು ಗರ್ಭಿಣಿಯಾಗುವ ಸಾಧ್ಯತೆ ಹೆಚ್ಚು. ಮೇಷ ರಾಶಿಯ ಕೆಲವರು ತಮ್ಮ ಮದುವೆಯ ವಿಚಾರದಲ್ಲಿ ಸಣ್ಣ ಅಡೆತಡೆಗಳನ್ನು ಎದುರಿಸಬಹುದು. ಮೂರನೇ ವ್ಯಕ್ತಿ ಯಾವುದೇ ಕಾರಣವಿಲ್ಲದೆ ಹಸ್ತಕ್ಷೇಪ ಮಾಡಬಹುದು. ಸರಿಯಾದ ರೀತಿಯಲ್ಲಿ ಮಾತನಾಡುವ ಮೂಲಕ ನಿಮ್ಮ ಸಂಬಂಧವನ್ನು ಗಟ್ಟಿಯಾಗಿಟ್ಟುಕೊಳ್ಳಿ.
ವೃಷಭ ರಾಶಿ ಪ್ರೇಮ ಜೀವನ (Taurus Love Horoscope): ಒಟ್ಟಿಗೆ ಹೆಚ್ಚು ಸಮಯ ಕಳೆಯುವ ಮೂಲಕ ಸಂಬಂಧದಲ್ಲಿ ಸಂತೋಷವನ್ನು ಕಂಡುಕೊಳ್ಳಿ. ನಿಮ್ಮ ಸಂಗಾತಿ ಇಮ್ಮನ್ನು ತುಂಬಾ ಇಷ್ಟ ಪಡುತ್ತಾರೆ. ನೀವು ಭಿನ್ನಾಭಿಪ್ರಾಯಗಳನ್ನು ಹೊಂದಿರುವಾಗ, ನಿಮ್ಮ ಸಂಗಾತಿಯೊಡನೆ ಮುಕ್ತವಾಗಿ ಮಾತನಾಡಿ ಎಲ್ಲವನ್ನೂ ಪರಿಹರಿಸಿಕೊಳ್ಳಿ. ಮಿಯೊಂದಿಗೆ ವಾದ ಮಾಡಬೇಡಿ ಮತ್ತು ಬದಲಿಗೆ ಆರೋಗ್ಯಕರ ಚರ್ಚೆಗಳನ್ನು ಮಾಡಿ. ಪ್ರೇಮ ಜೀವನದಲ್ಲಿ ಹೊರಗಿನವರ ಹಸ್ತಕ್ಷೇಪವನ್ನು ಮಾಡಬಹುದು. ಆದರೆ ಒಬ್ಬರ ಮೇಲೆ ಇನ್ನೊಬ್ಬರು ನಂಬಿಕೆ ಇಟ್ಟುಕೊಂಡರೆ ಉತ್ತಮ.
ಮಿಥುನ ರಾಶಿ ಲವ್ ಲೈಫ್ (Gemini Love Horoscope) ಇಂದು, ಪ್ರೀತಿಯ ಜೀವನದಲ್ಲಿ ಸಣ್ಣ ಸಮಸ್ಯೆಗಳು ಎದುರಾಗಬಹುದು. ಸಂಬಂಧದಲ್ಲಿನ ಸಮಸ್ಯೆಗಳನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಿ. ಕೆಲವು ಮಿಥುನ ರಾಶಿಯವರು ನಮ್ಮ ಪ್ರೀತಿಗೆ ಪೋಷಕರಿಂದ ಬೆಂಬಲ ಪಡೆಯುತ್ತಾರೆ, ಆದರೆ ಮಹಿಳೆಯರು ಸ್ವಲ್ಪ ಜಾಗರೂಕರಾಗಿರಬೇಕು. ವಿವಾಹಿತರ ಜೀವನದಲ್ಲಿ ಕಚೇರಿ ಪ್ರಣಯವು ತೊಂದರೆಗೆ ಕಾರಣವಾಗಬಹುದು. ನಿಮ್ಮ ವೈವಾಹಿಕ ಜೀವನದಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡಲು ಬಿಡಬೇಡಿ.
ಕಟಕ ರಾಶಿ ಪ್ರೇಮ ಜೀವನ (Cancer Love Horoscope): ಪ್ರೇಮಿಯೊಂದಿಗೆ ಸಮಯ ಕಳೆಯುವಾಗ ಜಾಗರೂಕರಾಗಿರಿ. ಯಾಕೆಂದರೆ ನೀವು ಆಡಿದ ಮಾತನ್ನು ಅವರು ತಪ್ಪಾಗಿ ತಿಳಿದುಕೊಂಡು ಬೇಸರ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಅದು ಸಂಬಂಧದಲ್ಲಿ ಗೊಂದಲವನ್ನು ಉಂಟುಮಾಡಬಹುದು. ಪ್ರೇಮಿಗಾಗಿ ಹೆಚ್ಚು ಸಮಯವನ್ನು ಮೀಸಲಿಡಿ ಮತ್ತು ವೈಯಕ್ತಿಕವಾಗಿ ಅವರ ಜೊತೆ ಮಾತನಾಡಿ. ನೀವು ಮಾತನಾಡುವುದಕ್ಕಿಂತ ಹೆಚ್ಚಾಗಿ ಅವರ ಮಾತನ್ನು ನೀವು ಕೇಳುವ ಅಗತ್ಯವಿದೆ. ಕರ್ಕಾಟಕ ರಾಶಿಯ ಮಹಿಳೆಯರು ಸಹ ಹಳೆಯ ಸಂಬಂಧಕ್ಕೆ ಮತ್ತೆ ಹಿಂದಿರುಗುವ ಸಾಧ್ಯತೆ ಇದೆ.
ಸಿಂಹ ರಾಶಿಯ ಪ್ರೇಮ ಜಾತಕ (Leo Love Horoscope) ಪ್ರೀತಿಯ ಜೀವನದಲ್ಲಿ ಪ್ರಾಮಾಣಿಕವಾಗಿರಿ ಮತ್ತು ಹಿಂದಿನ ಎಲ್ಲಾ ಸಮಸ್ಯೆಗಳನ್ನು ನೀವು ಪರಿಹರಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ. ನಿಮ್ಮ ಸಂಗಾತಿಯ ಅಭಿಪ್ರಾಯಗಳಿಗೆ ಬೆಲೆ ಕೊಡಿ ಮತ್ತು ನಿಮ್ಮ ಆಲೋಚನೆಗಳನ್ನು ಸಂಗಾತಿಯ ಮೇಲೆ ಹೇರಬೇಡಿ. ಸಂವಹನವನ್ನು ಮುಕ್ತವಾಗಿಡಿ ಮತ್ತು ಇದು ಪ್ರೇಮ ಸಂಬಂಧದಲ್ಲಿನ ಹೆಚ್ಚಿನ ತೊಂದರೆಗಳನ್ನು ಪರಿಹರಿಸುತ್ತದೆ. ಸಿಂಹ ರಾಶಿಯ ಪುರುಷರು ಕಚೇರಿಯ ಪ್ರಣಯದಲ್ಲಿ ತೊಡಗಬಹುದು, ಇದು ಕೆಲಸದಲ್ಲಿ ಉತ್ಪಾದಕತೆಯ ಮೇಲೆ ಪರಿಣಾಮ ಬೀರಬಹುದು. ಒಂಟಿಯಾಗಿರುವವರು ಇಂದು ಪ್ರಯಾಣ ಮಾಡುವಾಗ, ಸಮಾರಂಭದಲ್ಲಿ ಅಥವಾ ಪಾರ್ಟಿಯಲ್ಲಿ ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ.
ಕನ್ಯಾ ರಾಶಿ ಪ್ರೇಮ ಜಾತಕ (Virgo Love Horoscope) ಇಂದು ಕನ್ಯಾ ರಾಶಿಯವರ ಸಂಬಂಧಗಳಲ್ಲಿ ಆಸಕ್ತಿದಾಯಕ ಟ್ವಿಸ್ಟ್ ಎದುರಾಗುತ್ತದೆ. ದೂರದ ಸಂಬಂಧದಲ್ಲಿರುವವರು ತಮ್ಮ ಸಂಬಂಧಗಳಲ್ಲಿ ಸುಧಾರಣೆಯನ್ನು ಕಾಣುತ್ತಾರೆ. ವಿಘಟನೆಯ ಪರಿಸ್ಥಿತಿ ಸುಧಾರಿಸುತ್ತದೆ. ಇದ್ದಕ್ಕಿದ್ದಂತೆ ಪ್ರೀತಿಯ ಜೀವನ ಸಂತೋಷ ಎದುರಾಗುತ್ತದೆ. ಇಂದು ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಂಗಾತಿಯ ಆಯ್ಕೆಯ ಬಗ್ಗೆ ಸ್ವಲ್ಪ ಸೂಕ್ಷ್ಮವಾಗಿರಿ. ಇಂದು ಕನ್ಯಾ ರಾಶಿಯ ಕೆಲವು ಸ್ತ್ರೀಯರು ಸಂಗಾತಿಯಿಂದ ಬೆಂಬಲವನ್ನು ಪಡೆಯುತ್ತಾರೆ.
ತುಲಾ ರಾಶಿಯ ಪ್ರೇಮ ಜಾತಕ (Libra Love Horoscope): ಪ್ರೇಮ ಸಂಬಂಧದಲ್ಲಿ ಸಣ್ಣಪುಟ್ಟ ತೊಂದರೆಗಳನ್ನು ಕಾಣಬಹುದು. ಇದು ಹೆಚ್ಚಾಗಿ ಅಹಂಕಾರಗಳಿಂದ ಉಂಟಾಗುತ್ತದೆ. ಇಬ್ಬರಲ್ಲಿ ಒಬ್ಬರು ತಮ್ಮ ಅಹಂಕಾರವನ್ನು ಬಿಟ್ಟರೂ ಎಲ್ಲವೂ ಸರಿ ಹೂಗುತ್ತದೆ. ವಿಷಯಗಳು ಕೈ ಮೀರುವ ಮೊದಲು ನೀವು ಈ ಸಮಸ್ಯೆಗಳನ್ನು ಪರಿಹರಿಸುತ್ತೀರಿ. ಯಾವುದೇ ಸಮಸ್ಯೆ ಆಗಲು ನೀವು ಬಿಡುವುದಿಲ್ಲ. ನಿಮ್ಮ ಸಂಗಾತಿಯ ಬೇಡಿಕೆಗಳ ಬಗ್ಗೆ ಸಂವೇದನಾಶೀಲರಾಗಿರಿ. ಅವರಿಗೆ ಏನು ಇಷ್ಟ ಅಥವಾ ಏನು ಇಷ್ಟ ಎಂಬುದನ್ನು ತಿಳಿದುಕೊಂಡು ನೀವು ಮುನ್ನಡೆಯಿರಿ.
ವೃಶ್ಚಿಕ ರಾಶಿ ಪ್ರೀತಿ ಪ್ರೇಮ ವಿಚಾರ (Scorpio love relation) ಗಾಸಿಪ್‌ಗಳು ಇಂದು ನಿಮ್ಮ ಪ್ರೇಮ ಸಂಬಂಧದ ಮೇಲೆ ಪರಿಣಾಮ ಬೀರಲು ಬಿಡಬೇಡಿ. ಇಂದು ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ಹಳೆಯ ಘಟನೆಗಳನ್ನು ಕೆದಕದಿರಿ. ಇಂದು ಕೆಲವು ಸಣ್ಣ ಭಿನ್ನಾಭಿಪ್ರಾಯಗಳಿರಬಹುದು, ಆದರೆ ಪರಿಸ್ಥಿತಿ ಹದಗೆಡುವ ಮೊದಲು ಅವುಗಳನ್ನು ಪರಿಹರಿಸಲು ಖಚಿತಪಡಿಸಿಕೊಳ್ಳಿ. ವಿವಾಹಿತ ದಂಪತಿಗಳು ಕುಟುಂಬವನ್ನು ವಿವಾದಗಳಿಂದ ದೂರವಿಡಬೇಕು. ಇತ್ತೀಚಿಗೆ ಬ್ರೇಕಪ್ ಮಾಡಿಕೊಂಡವರು ಇಂದು ತಮ್ಮ ಜೀವನದಲ್ಲಿ ಹೊಸ ವ್ಯಕ್ತಿ ಬರುತ್ತಾರೆ ಎಂದು ತಿಳಿದು ಸಂತೋಷಪಡುತ್ತಾರೆ.
ಧನು ರಾಶಿ ಲವ್ ಜಾತಕ (Sagittarius Love Horoscope): ನೀವು ಇಂದು ಯಾವುದೇ ಹೆದರಿಕೆ ಇಲ್ಲದೆ ಮುಕ್ತವಾಗಿ ನಿಮ್ಮ ಹೊಸ ಸಂಗಾತಿ ಜೊತೆ ಮಾತನಾಡಿ. ಈ ರೀತಿ ಮಾತನಾಡಿದಾಗ ಮಾತ್ರ ನಿಮಗೆ ಉತ್ತಮ ಸಂಬಂಧ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಆಶ್ಚರ್ಯಕರ ಉಡುಗೊರೆಗಳು ನಿಮಗೆ ಇಂದು ದೊರೆಯಬಹುದು. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ಡಿನ್ನರ್‌ಗೆ ಹೋಗಿ. ಕೆಲವು ಹೆಣ್ಣುಮಕ್ಕಳು ಎಲ್ಲಾ ಹಳೆಯ ದ್ವೇಷಗಳನ್ನು ಪರಿಹರಿಸಿದ ನಂತರ ಮಾಜಿ ಪ್ರೇಮಿಯೊಂದಿಗಿನ ಸಂಬಂಧವನ್ನು ಮತ್ತೆ ಮುಂದುವರೆಸಬಹುದು. ಕುಟುಂಬಕ್ಕೆ ಪ್ರೇಮಿಯನ್ನು ಪರಿಚಯಿಸಲು ಇಂದು ಒಳ್ಳೆಯದು.
ಮಕರ ರಾಶಿ ಪ್ರೇಮ ಜಾತಕ (Capricorn Love Horoscope) ಇಂದು ನಿಮ್ಮ ಸಂಗಾತಿಗೆ ಕಿರಿಕಿರಿಯಾಗದಂತೆ ಎಚ್ಚರ ವಹಿಸಿ. ಪ್ರೇಮಿಯನ್ನು ಮುದ್ದಿಸಲು ಮತ್ತು ಪ್ರೀತಿಯಲ್ಲಿ ವ್ಯಕ್ತಪಡಿಸಲು ಕಾಳಜಿ ವಹಿಸಲು ಅದ್ಯತೆ ನೀಡಿ. ಕೆಲವರು ಸಂಗಾತಿಯೊಂದಿಗೆ ಹೆಚ್ಚಿನ ಸಮಯ ಕಳೆಯಲು ಬಯಸುತ್ತಾರೆ. ಹೊರಗಿನ ವ್ಯಕ್ತಿ ನಿಮ್ಮ ಪ್ರೇಮಿಯ ಮೇಲೆ ಪ್ರಭಾವ ಬೀರಬಹುದು, ಪ್ರೇಮ ಸಂಬಂಧದಲ್ಲಿ ಪ್ರಕ್ಷುಬ್ಧತೆಯನ್ನು ಉಂಟುಮಾಡಬಹುದು. ಇಂದು ಈ ಬಿಕ್ಕಟ್ಟನ್ನು ನಿಭಾಯಿಸಿ. ನಿಮ್ಮ ಜೀವನದಲ್ಲಿ ಸಂತೋಷವನ್ನು ತರಬಹುದಾದ ಮಾಜಿ ಪ್ರೇಮಿಯೊಂದಿಗೆ ಹಳೆಯ ಸಮಸ್ಯೆಗಳನ್ನು ಪರಿಹರಿಸಲು ಈ ದಿನ ಸೂಕ್ತವೆಂದು ನೀವು ಕಂಡುಕೊಳ್ಳುತ್ತೀರಿ. ಮದುವೆಯಾದವರು ಕುಟುಂಬವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸಬಹುದು.
ಕುಂಭ ರಾಶಿಯ ಪ್ರೇಮ ಜಾತಕ (Aquarius Love Horoscope): ನಿಮ್ಮ ಸಂಬಂಧದಲ್ಲಿ ನಂಬಿಕೆ ಮುಖ್ಯ. ನಂಬಿಕೆ ಇದ್ದರೆ ಮಾತ್ರ ಮುಂದಿನ ಕಾರ್ಯ ಸಾಂಗವಾಗುತ್ತ ನಿಮ್ಮ ಬದುಕಿನಲ್ಲಿ ನೆಮ್ಮದಿ ನೆಲೆಸುತ್ತದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಘರ್ಷಣೆಗೆ ಕಾರಣವಾಗುವ ಮಾತಿನ ಚಕಮಕಿಯಲ್ಲಿ ತೊಡಗಬೇಡಿ. ಮೂರನೇ ವ್ಯಕ್ತಿ ಸಂಬಂಧವನ್ನು ಹಾಳು ಮಾಡಲು ಬಂದರೆ ಅದರ ಬಗ್ಗೆ ಗಮನಕೊಡಬೇಡಿ. ಸಂಬಂಧದಲ್ಲಿ ತೊಂದರೆ ಉಂಟುಮಾಡುವ ಮಾಜಿ ಪ್ರೇಮಿಯ ಬಗ್ಗೆ ಜಾಗರೂಕರಾಗಿರಿ. ವಿವಾಹಿತ ಸ್ತ್ರೀಯರು ಮಾಜಿ ಪ್ರೇಮಿಯೊಂದಿಗೆ ಸಂಪರ್ಕ ಹೊಂದಿರಬಾರದು.
ಮೀನ ರಾಶಿಯ ಪ್ರೇಮ ಜೀವನ (Pisces Love Horoscope) ಇಂದು ನಿಮ್ಮ ಪ್ರೇಮಿ ನೀವು ಹೆಚ್ಚು ಅಭಿವ್ಯಕ್ತ ಮತ್ತು ರೊಮ್ಯಾಂಟಿಕ್ ಆಗಿರಬೇಕೆಂದು ನಿರೀಕ್ಷಿಸುತ್ತಾರೆ. ಸಾಧ್ಯವಾದಷ್ಟು ಪರಸ್ಪರ ಒಟ್ಟಿಗೆ ಸಮಯ ಕಳೆಯಲು ಪ್ರಯತ್ನಿಸಿ, ನಿಮ್ಮ ಭಾವನೆಗಳನ್ನು ಹಂಚಿಕೊಳ್ಳಲು ನಾಚಿಕೆಪಡಬೇಡಿ. ಇಂದು ನೀವು ನಿಮ್ಮ ಪ್ರೇಮಿಯನ್ನು ಕುಟುಂಬದೊಂದಿಗೆ ಮತ್ತೆ ಸೇರಿಸಲು ಉಪಕ್ರಮವನ್ನು ತೆಗೆದುಕೊಳ್ಳಬಹುದು. ಒಂಟಿ ಜನರು ಇಂದು ಅವರು ಇಷ್ಟಪಡುವ ವ್ಯಕ್ತಿಯನ್ನು ಭೇಟಿಯಾಗುತ್ತಾರೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.