ಪ್ರೇಮ ಭವಿಷ್ಯ ಆಗಸ್ಟ್‌ 3: ಏಕಾಂಗಿಯಾಗಿರುವವರಿಗೆ ಮನಮೆಚ್ಚುವ ಸಂಗಾತಿ ಸಿಗುತ್ತಾರೆ, ಸಂಗಾತಿಗಳ ನಡುವಿನ ವಿರಸಕ್ಕೆ ಸಂವಹನವೇ ಮದ್ದು-love relationship horoscope august 3 2024 daily astrological predictions in kannada love life today ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪ್ರೇಮ ಭವಿಷ್ಯ ಆಗಸ್ಟ್‌ 3: ಏಕಾಂಗಿಯಾಗಿರುವವರಿಗೆ ಮನಮೆಚ್ಚುವ ಸಂಗಾತಿ ಸಿಗುತ್ತಾರೆ, ಸಂಗಾತಿಗಳ ನಡುವಿನ ವಿರಸಕ್ಕೆ ಸಂವಹನವೇ ಮದ್ದು

ಪ್ರೇಮ ಭವಿಷ್ಯ ಆಗಸ್ಟ್‌ 3: ಏಕಾಂಗಿಯಾಗಿರುವವರಿಗೆ ಮನಮೆಚ್ಚುವ ಸಂಗಾತಿ ಸಿಗುತ್ತಾರೆ, ಸಂಗಾತಿಗಳ ನಡುವಿನ ವಿರಸಕ್ಕೆ ಸಂವಹನವೇ ಮದ್ದು

Love and Relationship Horoscope 3rd August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಲವ್ ಲೈಫ್ ಹೇಗಿದೆ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಆಗಸ್ಟ್‌ 3ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.

ಪ್ರೇಮ ಭವಿಷ್ಯ ಆಗಸ್ಟ್‌ 3: ಏಕಾಂಗಿಯಾಗಿರುವವರಿಗೆ  ಮನಮೆಚ್ಚುವ ಸಂಗಾತಿ ಸಿಗುತ್ತಾರೆ, ಸಂಗಾತಿಗಳ ನಡುವಿನ ವಿರಸಕ್ಕೆ ಸಂವಹನವೇ ಮದ್ದು
ಪ್ರೇಮ ಭವಿಷ್ಯ ಆಗಸ್ಟ್‌ 3: ಏಕಾಂಗಿಯಾಗಿರುವವರಿಗೆ ಮನಮೆಚ್ಚುವ ಸಂಗಾತಿ ಸಿಗುತ್ತಾರೆ, ಸಂಗಾತಿಗಳ ನಡುವಿನ ವಿರಸಕ್ಕೆ ಸಂವಹನವೇ ಮದ್ದು

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್‌ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್‌ 3) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.

ಮೇಷ ರಾಶಿ ಪ್ರೇಮ ಭವಿಷ್ಯ

ನಿಮ್ಮ ತಾಳ್ಮೆ ಹಾಗೂ ಸಹನೆಯ ಗುಣ ಸಂಗಾತಿಯನ್ನು ಸೆಳೆಯುತ್ತದೆ. ನಿಮ್ಮ ಪ್ರತಿ ಕ್ರಿಯೆಗಳು ಸಂಬಂಧದ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಸಂಗಾತಿಯ ಮುಂದೆ ಏನನ್ನೂ ಮುಚ್ಚಿಡಬೇಡಿ. ಮುಕ್ತ ಮಾತುಕತೆಗೆ ಒತ್ತು ನೀಡಿ. ಪ್ರೀತಿಯ ಪ್ರಭಾವವು ಎಲ್ಲಾ ಅಡೆತಡೆಗಳನ್ನು ಮೀರುವಂತಿರಲಿ. ಒಂಟಿಯಾಗಿದ್ದವರಿಗೆ ತಮ್ಮ ಅಭಿರುಚಿಗೆ ತಕ್ಕಂತಹ ಸಂಗಾತಿ ದೊರೆಯಬಹುದು.

ವೃಷಭ ರಾಶಿ ಪ್ರೇಮ ಭವಿಷ್ಯ

ಇಂದು ಸಂಗಾತಿಯೊಂದಿಗೆ ನೀವಾಡುವ ಪ್ರತಿ ಮಾತಿನ ಮೇಲೆ ಗಮನವಿರಲಿ. ನಿಮ್ಮ ಮಾತನ್ನು ಸಂಗಾತಿ ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಸಂಗಾತಿಯೊಂದಿಗೆ ಸಂಘರ್ಷವಿದ್ದರೆ ಇದನ್ನು ಪರಿಹರಿಸಿಕೊಳ್ಳಲು ಹೆಚ್ಚಿನ ಗಮನ ನೀಡಿ. ಯಾವುದಕ್ಕೂ ಅತಿಯಾಗಿ ಪ್ರತಿಕ್ರಿಯಿಸಬೇಡಿ. ಇಂದು ಮುಖ್ಯವಾದ ವಿಚಾರ ನಾಳೆಗೆ ಮುಖ್ಯವಾಗದೇ ಇರಬಹುದು. ಸಂಗಾತಿಯಿಂದ ನಿಮ್ಮ ನಿರೀಕ್ಷೆಯನ್ನು ಎಂಬುದನ್ನು ಆತ್ಮಾವಲೋಕನ ಮಾಡಿಕೊಳ್ಳಿ.

ಮಿಥುನ ರಾಶಿ ಪ್ರೇಮ ಭವಿಷ್ಯ

ದಂಪತಿಗಳು ಸುಗಮ ಸಂವಹನಕ್ಕೆ ಒತ್ತು ನೀಡಿ. ನಿಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನು ಮುಕ್ತವಾಗಿ ವ್ಯಕ್ತಪಡಿಸಿ. ಇದರಿಂದ ಗೊಂದಲಗಳು ನಿವಾರಣೆಯಾಗುತ್ತದೆ. ಒಂದು ಹಗ್‌ ಕೂಡ ಸಂಬಂಧದಲ್ಲಿನ ತಪ್ಪು ತಿಳುವಳಿಕೆಯನ್ನು ದೂರಾಗಿಸಬಹುದು. ಏಕಾಂಗಿಯಾಗಿ ಇರುವವರಿಗೆ ಅವರ ಸ್ನೇಹಪರ ಗುಣವು ಇತರರನ್ನು ಸೆಳೆಯುವಂತೆ ಮಾಡಬಹುದು.

ಕಟಕ ರಾಶಿ ಪ್ರೇಮ ಭವಿಷ್ಯ

ಮುಕ್ತ ಮನಸ್ಸಿನಿಂದ ಒಬ್ಬರಿಗೊಬ್ಬರು ಮಾತನಾಡಿಕೊಳ್ಳಿ. ಸಂಗಾತಿಯ ಮಾತನ್ನು ಆಲಿಸಿ. ಸ್ನೇಹಿತರು, ಸಂಬಂಧಿಕರು ಅಥವಾ ಆಪ್ತರು ಏನು ಹೇಳುತ್ತಾರೆಂದು ಗಮನ ಕೊಡಿ. ಅವರ ಅಭಿಪ್ರಾಯಗಳು ಎಷ್ಟೇ ವಿಲಕ್ಷಣವಾಗಿರಲಿ, ಉತ್ತಮ ಪ್ರೀತಿ ಮತ್ತು ಮೆಚ್ಚುಗೆಯನ್ನು ಬೆಳೆಸುವ ಪರಿಹಾರವನ್ನು ಒಳಗೊಂಡಿರಬಹುದು. ಸಂಗಾತಿಯ ಹುಚ್ಚು ಕಲ್ಪನೆಗಳಿಗೆ ನಿಮ್ಮ ಮನಸ್ಸನ್ನು ಹೇಗೆ ತೆರೆಯಬಹುದು ಮತ್ತು ಅದು ನಿಮ್ಮ ಸಂಬಂಧವನ್ನು ಮುಂದಿನ ಹಂತಕ್ಕೆ ಹೇಗೆ ಕೊಂಡೊಯ್ಯಬಹುದು ಎಂಬುದನ್ನು ಪರಿಗಣಿಸಲು ಇದು ಸಮಯವಾಗಬಹುದು.

ಸಿಂಹ ರಾಶಿ ಪ್ರೇಮ ಭವಿಷ್ಯ

ಸಾಮಾನ್ಯ ಜೀವನದಿಂದ ಹೊರಬನ್ನಿ. ನಿಮ್ಮ ವ್ಯಕ್ತಿತ್ವವು ನಿಮ್ಮ ಸಂಗಾತಿ ಸೆಳೆಯುತ್ತದೆ. ನಿಮ್ಮ ಸ್ವಭಾವವು ಸಂಗಾತಿಯನ್ನು ಇನ್ನಷ್ಟು ಹತ್ತಿರವಾಗಿಸುತ್ತದೆ. ಇದರಿಂದ ನಿಮ್ಮ ಸಂಬಂಧ ವೃದ್ಧಿಯಾಗುತ್ತದೆ. ಒಂಟಿಯಾಗಿರುವವರಿಗೆ ಮನಮೆಚ್ಚುವ ಸಂಗಾತಿ ಸಿಗಬಹುದು.

ಕನ್ಯಾ ರಾಶಿ ಪ್ರೇಮ ಭವಿಷ್ಯ

ಇಂದು ಸ್ನೇಹಿತರೊಂದಿಗೆ ಮಾತನಾಡುವುದರಿಂದ ನಿಮ್ಮ ಹೃದಯ ಹಗುರಾಗುತ್ತದೆ. ಪ್ರೀತಿ ಮತ್ತು ಪ್ರಣಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸ್ನೇಹಿತರು ನಿಮಗೆ ನೆರವಾಗುತ್ತಾರೆ. ಅವರ ಉಪಸ್ಥಿತಿಯು ಸ್ನೇಹದ ಮುಖವನ್ನು ನೀವು ಪ್ರಶಂಸಿಸುವಂತೆ ಮಾಡುತ್ತದೆ. ನಿಮ್ಮ ಜೀವನದಲ್ಲಿರುವ ಪ್ರತಿ ಸ್ನೇಹಿತರನ್ನು ಒಂದೊಂದು ಕಾರಣಕ್ಕಾಗಿ ದೇವರು ನಿಮಗಾಗಿ ಕಳುಹಿಸಿದ್ದಾನೆ ಎಂಬುದು ನಿಮಗೆ ಅರ್ಥವಾಗುತ್ತದೆ. ಸ್ನೇಹಿತರಿಂದ ಪ್ರೀತಿ ವಿವಿಧ ಮಜಲುಗಳ ಬಗ್ಗೆ ನಿಮಗೆ ಅರ್ಥವಾಗುತ್ತದೆ.

ತುಲಾ ರಾಶಿ ಪ್ರೇಮ ಭವಿಷ್ಯ

ನೀವು ಹಾಗೂ ನಿಮ್ಮ ಸಂಗಾತಿ ಇಂದು ಹೊರಗಡೆ ಹೋಗಿ ನಿಮ್ಮ ದಿನವನ್ನು ಎಂಜಾಯ್‌ ಮಾಡಲಿದ್ದೀರಿ. ಇದರಿಂದ ನಿಮ್ಮ ಇಡೀ ದಿನ ಸಂತೋಷದಾಯಕವಾಗಿರುತ್ತದೆ. ಸಾಮಾಜಿಕ ಸಂವಹನಕ್ಕೂ ಗಮನ ಕೊಡಿ. ಸ್ನೇಹಿತರನ್ನೂ ಭೇಟಿ ಮಾಡಿ. ಇದರಿಂದ ನಿಮ್ಮ ವಿಚಾರದಾರೆಗಳು ಬದಲಾಗುತ್ತವೆ.

ವೃಶ್ಚಿಕ ರಾಶಿ ಪ್ರೇಮ ಭವಿಷ್ಯ

ಸಂಗಾತಿಯ ಮೇಲೆ ಗಮನ ಹರಿಸಿ. ಅವರ ಪ್ರೀತಿಯನ್ನು ಗೌರವಿಸಿ. ಅವರನ್ನು ಆದರದಿಂದ ನೋಡಿಕೊಳ್ಳಿ. ಮುಕ್ತ ಸಂವಹನದಿಂದ ನಿಮ್ಮ ಸಂಬಂಧದಲ್ಲಿನ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದು. ಸಂಗಾತಿಯೊಂದಿಗೆ ಭವಿಷ್ಯದ ಬಗ್ಗೆ ಚರ್ಚೆ ಮಾಡುವುದನ್ನು ಮರೆಯಬೇಡಿ.

ಧನು ರಾಶಿ ಪ್ರೇಮ ಭವಿಷ್ಯ

ಸಂಗಾತಿಗೆ ಸರ್ಪ್ರೈಸ್‌ ನೀಡಿ. ಅವರನ್ನು ವೀಕೆಂಡ್‌ ಟ್ರಿಪ್‌ ಅಥವಾ ಲಾಂಗ್‌ ಡ್ರೈವ್‌ ಕರೆದುಕೊಂಡು ಹೋಗಿ ಇದರಿಂದ ಅವರು ಖುಷಿಯಾಗುತ್ತಾರೆ. ರೊಮ್ಯಾಂಟಿಕ್‌ ಕ್ಷಣಗಳನ್ನು ಸಂಬಂಧವನ್ನು ಮತ್ತೆ ಅರಳುವಂತೆ ಮಾಡಬಹುದು. ನಿಮ್ಮಿಬ್ಬರ ನಡುವಿನ ಮನಸ್ತಾಪ ಬೆಳೆಯಲು ಬಿಡಬೇಡಿ.

ಮಕರ ರಾಶಿ ಪ್ರೇಮ ಭವಿಷ್ಯ

ನಿಮ್ಮ ಸಂಗಾತಿಗೆ ನೀವು ಕಳುಹಿಸುವ ಸಂದೇಶಗಳ ಬಗ್ಗೆ ಜಾಗರೂಕರಾಗಿರಿ. ನಕ್ಷತ್ರಗಳ ಪ್ರಭಾವದಿಂದ ನೀವಾಡುವ ಮಾತು, ಮಸೇಜ್‌ಗಳು ಬೇರೆ ಅರ್ಥ ನೀಡಬಹುದು. ಯಾವುದೇ ಮೆಸೇಜ್‌ ಕಳುಹಿಸುವ ಮುನ್ನ ಇನ್ನೊಮ್ಮೆ ಓದಿ. ನಿಮಗೆ ತಮಾಷೆ ಎನ್ನಿಸಬಹುದು ಸಂಗಾತಿಗೆ ಗಂಭೀರವಾಗಬಹುದು.

ಕುಂಭ ರಾಶಿ ಪ್ರೇಮ ಭವಿಷ್ಯ

ಒಂಟಿಯಾಗಿರುವವರಿಗೆ ಸಂಗಾತಿ ಸಿಗುವ ಮುನ್ಸೂಚನೆ ಇದೆ. ಆದರೆ ನಿಮ್ಮ ಆಯ್ಕೆ ತಪ್ಪಾಗಬಹುದು, ಎಚ್ಚರವಿರಲಿ. ನಿಮಗೆ ಅವರ ಮೇಲೆ ಇರುವುದು ಅಥವಾ ಅವರಿಗೆ ನಿಮ್ಮ ಮೇಲಿರುವುದು ಮೋಹವೋ ಅಥವಾ ಪ್ರೀತಿಯೊ ಎಂಬುದನ್ನು ತಿಳಿದುಕೊಳ್ಳಿ. ಹೃದಯದೊಂದಿಗೆ ಮೆದುಳಿನ ಮಾತುಗಳನ್ನೂ ಆಲಿಸಿ.

ಮೀನ ರಾಶಿ ಪ್ರೇಮ ಭವಿಷ್ಯ

ಸಂಬಂಧದಲ್ಲಿ ಇಂದು ಸಣ್ಣಪುಟ್ಟ ಜಗಳಗಳು ಅಥವಾ ದೊಡ್ಡ ಮನಸ್ತಾಪ ಉಂಟಾಗಬಹುದು. ಸಣ್ಣ ಭಿನ್ನಾಭಿಪ್ರಾಯಗಳನ್ನು ದೊಡ್ಡದು ಮಾಡದಿರಿ. ಆದರೆ ಸಾಮರಸ್ಯವನ್ನು ಪುನಃಸ್ಥಾಪಿಸಲು ಇದು ಉತ್ತಮ ದಿನವಾಗಿದೆ. ಸಂಗಾತಿಯನ್ನು ಮೆಚ್ಚಿಸಲು ಅವರಿಷ್ಟದ ಅಡುಗೆ ಮಾಡಿ, ಸಿನಿಮಾಕ್ಕೆ ಜೊತೆಯಾಗಿ ಹೋಗಿ. ಸಣ್ಣ ಸ್ವರ್ಶಕ್ಕೂ ಕೋಪ ನಿಯಂತ್ರಿಸುವ ಗುಣ ಇದೆ, ನಿರ್ಲಕ್ಷ್ಯ ಮಾಡದಿರಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

 

 

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.