ಪ್ರೇಮ ಭವಿಷ್ಯ ಆ. 10: ಸಂಗಾತಿಯ ಪ್ರಾಮಾಣಿಕತೆಯನ್ನು ಅನುಮಾನಿಸದಿರಿ, ಕೋಪದ ಕೈಗೆ ಬುದ್ಧಿ ಕೊಡಬೇಡಿ, ತಾಳ್ಮೆಯಿಂದ ಪರಿಸ್ಥಿತಿ ನಿಭಾಯಿಸಿ
Love and Relationship Horoscope 10 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್ 10 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್ 10) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ
ಪ್ರೀತಿಯ ಜೀವನದಲ್ಲಿ ಸಮಸ್ಯೆಗಳನ್ನು ತರುವಂತ ಗಾಸಿಪ್ಗಳನ್ನು ನಂಬಬೇಡಿ. ಸಂಬಂಧಗಳು ಹೆಚ್ಚಿನ ಸಂಭಾಷಣೆಯನ್ನು ಬಯಸಬಹುದು. ನೀವು ರೊಮ್ಯಾಂಟಿಕ್ ಡಿನ್ನರ್ ಡೇಟ್ಗೆ ಹೋಗಲು ಯೋಜಿಸಬಹುದು, ಅಲ್ಲಿ ನಿಮ್ಮ ಪ್ರೇಮಿಯನ್ನು ಉಡುಗೊರೆಯೊಂದಿಗೆ ಆಶ್ಚರ್ಯಗೊಳಿಸುತ್ತೀರಿ. ಸಣ್ಣ ತೊಂದರೆಗಳು ಕೈಮೀರಲು ಬಿಡಬೇಡಿ ಮತ್ತು ಸಾಧ್ಯವಾದಷ್ಟು ಬೇಗ ವಿಷಯಗಳನ್ನು ಸರಿಪಡಿಸಲು ಪ್ರಯತ್ನಿಸಿ. ಪ್ರೇಮ ಜೀವನದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪವನ್ನು ತಪ್ಪಿಸಿ.
ವೃಷಭ ರಾಶಿ
ಸಂಬಂಧದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಈ ಸಮಸ್ಯೆಗಳು ನಿಮ್ಮ ಅಹಂಕಾರದ ಪರಿಣಾಮವಾದ್ದರಿಂದ ಅಹಂ ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಯಾವುದೇ ಪ್ರಮುಖ ನಿರ್ಧಾರ ತೆಗೆದುಕೊಳ್ಳುವಾಗ, ನಿಮ್ಮ ಪ್ರೇಮಿಯ ಸಲಹೆಯನ್ನೂ ಕೇಳಿ. ವೈಯಕ್ತಿಕ ಮತ್ತು ವೃತ್ತಿಪರ ವಿಷಯಗಳಲ್ಲಿ ನಿಮ್ಮ ಪ್ರೇಮಿಗೆ ಬೆಂಬಲವಾಗಿರಿ. ಇಂದು ನಿಮ್ಮ ಪ್ರೇಮಿಯನ್ನು ಉತ್ತಮ ಮೂಡ್ನಲ್ಲಿ ಇರಿಸಿಕೊಳ್ಳಿ. ಇದಕ್ಕಾಗಿ ವಾರಾಂತ್ಯದ ರಜೆ ತೆಗೆದುಕೊಳ್ಳಿ. ಇತ್ತೀಚೆಗೆ ಬ್ರೇಕಪ್ ಆದವರು ಮತ್ತೆ ಪ್ರೀತಿಯಲ್ಲಿ ಬೀಳಬಹುದು.
ಮಿಥುನ ರಾಶಿ
ಸಂಬಂಧದಲ್ಲಿ ಸಂತೋಷವನ್ನು ಹಂಚಿ. ಪ್ರೇಮಿಯೊಂದಿಗೆ ಹೆಚ್ಚಿನ ಸಮಯವನ್ನು ಕಳೆಯಿರಿ. ಉತ್ತಮ ಕೇಳುಗರಾಗಿರಿ. ಸಂಬಂಧದ ನಿರ್ಧಾರಗಳಲ್ಲಿ ಪ್ರೇಮಿಯ ಸಲಹೆಗಳನ್ನು ಪರಿಗಣಿಸಿ. ದಿನದ ಮೊದಲಾರ್ಧದಲ್ಲಿ ಸಣ್ಣ ವಾದಗಳು ಇರಬಹುದು. ಆದರೆ, ನೀವು ಅವುಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಗುತ್ತದೆ. ಕೆಲವರು ಮದುವೆ ಫಿಕ್ಸ್ ಆಗುವ ಸಾಧ್ಯತೆ ಇದೆ.
ಕಟಕ ರಾಶಿ
ಸಂಬಂಧದಲ್ಲಿ ಇಂದು ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ನಿಮ್ಮ ಸಂಗಾತಿ ನಿಮ್ಮ ಪ್ರಾಮಾಣಿಕತೆಯನ್ನು ಅನುಮಾನಿಸಬಹುದು. ಯಾವುದೇ ವಿಚಾರದಲ್ಲಿ ಕಾಮೆಂಟ್ ಮಾಡುವಾಗ ಜಾಗರೂಕರಾಗಿರಿ. ಕೋಪದ ಕೈಗೆ ಬುದ್ಧಿ ಕೊಡದಿರಿ. ಇದರಿಂದ ಸಂಬಂಧ ಇನ್ನಷ್ಟು ಕೆಡಬಹುದು. ವಿವಾಹಿತರು ಹೊರಗಿನ ಪ್ರಣಯ ವ್ಯವಹಾರಗಳಿಂದ ದೂರವಿರಬೇಕು. ಇದು ನಿಮ್ಮ ವೈವಾಹಿಕ ಜೀವನದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ನೆನಪಿರಲಿ. ಭೂತಕಾಲದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿ ಮತ್ತು ಭವಿಷ್ಯದ ಬಗ್ಗೆ ಸಕಾರಾತ್ಮಕವಾಗಿರಿ. ಮನೆಯ ಹಿರಿಯರಿಗೆ ನಿಮ್ಮ ಪ್ರೇಮಿಯನ್ನು ಪರಿಚಯಿಸಿ.
ಸಿಂಹ ರಾಶಿ
ಇಂದು ಸಮಸ್ಯೆಗಳನ್ನು ಪರಿಹರಿಸಲು ಸಂಬಂಧದಲ್ಲಿ ಹೆಚ್ಚಿನ ಸಮಯ ಕಳೆಯಿರಿ. ನಿಮ್ಮ ಎದುರು ಹೊಸ ಸವಾಲುಗಳು ಬರಬಹುದು. ದಿನದ ಮೊದಲ ಭಾಗದಲ್ಲಿ ಸಣ್ಣ ಸಮಸ್ಯೆಗಳನ್ನು ನಿರೀಕ್ಷಿಸಿ. ಹಿಂದಿನ ಸಂಬಂಧವು ಗಲಾಟೆಗೆ ಕಾರಣವಾಗಬಹುದು. ನೀವು ಇದನ್ನು ಪ್ರಬುದ್ಧ ಮನೋಭಾವದಿಂದ ನಿಭಾಯಿಸಬೇಕು. ಪ್ರೇಮಿಯ ವೈಯಕ್ತಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಬೇಡಿ. ಕೆಲವು ಸಂಬಂಧಗಳು ಅಚ್ಚರಿಯ ತಿರುವುಗಳನ್ನು ಕಾಣುತ್ತವೆ. ಸಂಬಂಧದ ಬಗ್ಗೆ ಪೋಷಕರಿಗೆ ಮನವರಿಕೆ ಮಾಡಲು ದಿನದ ದ್ವಿತೀಯಾರ್ಧವು ಒಳ್ಳೆಯದು.
ಕನ್ಯಾ ರಾಶಿ
ಪ್ರೀತಿಯ ಜೀವನದಲ್ಲಿ ಸಣ್ಣ ವಿಷಯಗಳು ಹೆಚ್ಚು ಬೆಳೆಯಲು ಬಿಡಬೇಡಿ. ಪ್ರೇಮ ಜೀವನದ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸಿ. ಮದುವೆಯಾಗಲು ಬಯಸುವ ಕೆಲವು ಸ್ಥಳೀಯರು ಮದುವೆಗಾಗಿ ಪೋಷಕರೊಂದಿಗೆ ಚರ್ಚಿಸಬಹುದು. ಪೋಷಕರ ಅನುಮೋದನೆಯನ್ನು ಪಡೆಯುತ್ತೀರಿ. ಪ್ರೇಮಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ. ಸಂತೋಷ ಮತ್ತು ದುಃಖಗಳನ್ನು ಪರಸ್ಪರ ಹಂಚಿಕೊಳ್ಳಿ. ನೀವು ನಿಮ್ಮ ಸಂಗಾತಿಯೊಂದಿಗೆ ಲಾಂಗ್ ಡ್ರೈವ್ ಗೆ ಹೋಗಬಹುದು. ಒಟ್ಟಿಗೆ ಮದುವೆಯ ಬಗ್ಗೆ ಮಾತನಾಡಬಹುದು. ಮಹಿಳೆಯರು ಸಂಬಂಧಗಳಲ್ಲಿ ತಾಳ್ಮೆಯನ್ನು ತೋರಿಸಬೇಕಾಗಿದೆ. ಸಂಗಾತಿಯೊಂದಿಗೆ ಯಾವುದಾದರೂ ವಿಷಯದ ಬಗ್ಗೆ ವಾದ ಬೇಡ.
ತುಲಾ ರಾಶಿ
ನಿಮ್ಮ ಸಂಗಾತಿಯೊಂದಿಗೆ ಹೆಚ್ಚು ಸಮಯ ಕಳೆಯಿರಿ ಮತ್ತು ನಿಮ್ಮ ಭಾವನೆಗಳನ್ನು ಅವರೊಂದಿಗೆ ಹಂಚಿಕೊಳ್ಳಿ. ಇದು ನಿಮ್ಮ ಪ್ರೀತಿಯ ಜೀವನವನ್ನು ಸುಧಾರಿಸುತ್ತದೆ. ಇಂದು ನೀವು ಒಟ್ಟಿಗೆ ರಜೆಯನ್ನು ಯೋಜಿಸಬಹುದು. ಇದು ನಿಮ್ಮ ಸಂಗಾತಿಯೊಂದಿಗೆ ಭಾವನಾತ್ಮಕ ಸಂಬಂಧವನ್ನು ಬಲಪಡಿಸುತ್ತದೆ. ದೂರದ ಸಂಬಂಧದಲ್ಲಿರುವವರು ತಮ್ಮ ಸಂಗಾತಿಯೊಂದಿಗೆ ಮಾತನಾಡುವ ಮೂಲಕ ಸಂಬಂಧದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬೇಕು. ಸಂಬಂಧಗಳಲ್ಲಿ ಸ್ವಲ್ಪ ಸಂವೇದನಾಶೀಲರಾಗಿರಿ. ವಿವಾಹಿತ ಮಹಿಳೆಯರು ಕಚೇರಿ ಪ್ರಣಯದಿಂದ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಹೆಚ್ಚಾಗಬಹುದು.
ವೃಶ್ಚಿಕ ರಾಶಿ
ಇಂದು ಪ್ರೇಮ ಜೀವನದಲ್ಲಿ ಸಂತೋಷ ನೆಲೆಸಿರುತ್ತದೆ. ಒಂಟಿಯಾಗಿರುವ ವೃಶ್ಚಿಕ ರಾಶಿಯವರು ವಿಶೇಷ ವ್ಯಕ್ತಿಯನ್ನು ಭೇಟಿಯಾಗುತ್ತಾರೆ. ನೀವೂ ಪ್ರಪೋಸ್ ಮಾಡುವ ಸಾಧ್ಯತೆ ಇದೆ. ನೀವು ಪ್ರೇಮ ನಿವೇದನೆ ಮಾಡಿದ ವ್ಯಕ್ತಿಯಿಂದ ಸಕಾರಾತ್ಮಕ ಪ್ರತಿಕ್ರಿಯೆ ಪಡೆಯುತ್ತೀರಿ. ಸಂಬಂಧದಲ್ಲಿರುವ ಜನರು ತಮ್ಮ ಸಂಗಾತಿಯೊಂದಿಗೆ ವಿಶೇಷ ಕ್ಷಣಗಳನ್ನು ಆನಂದಿಸುತ್ತಾರೆ. ಇಂದು ನೀವು ನಿಮ್ಮ ಸಂಗಾತಿಯನ್ನು ಪೋಷಕರು ಮತ್ತು ಹಿರಿಯರಿಗೆ ಭೇಟಿ ಮಾಡಿಸುವ ಸಾಧ್ಯತೆ ಇದೆ. ಪ್ರೇಮಿಯ ಕುಟುಂಬದ ಸದಸ್ಯರನ್ನು ಭೇಟಿ ಮಾಡಲು ಸಾಧ್ಯವಾಗುತ್ತದೆ. ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಡಿನ್ನರ್ ಆಯೋಜಿಸಬಹುದು. ವಾರಾಂತ್ಯದಲ್ಲಿ ಜೀವನ ಸಂಗಾತಿಯೊಂದಿಗೆ ಪಿಕ್ನಿಕ್, ಟ್ರಿಪ್ ಆಯೋಜಿಸಬಹುದು.
ಧನಸ್ಸು ರಾಶಿ
ಇಂದು ನಿಮ್ಮ ಲವ್ ಲೈಫ್ ಚೆನ್ನಾಗಿರುತ್ತದೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿಗಳು ನೀವು ಕೆಲಸದಲ್ಲಿ ಹೆಚ್ಚು ಕಳೆಯುವಂತೆ ಮಾಡುತ್ತದೆ. ನಿಮ್ಮ ಆರೋಗ್ಯ ಮತ್ತು ಸಂಪತ್ತು ಎರಡೂ ಇಂದು ಧನಾತ್ಮಕವಾಗಿರುತ್ತವೆ. ಸಂಬಂಧದಲ್ಲಿ ಪ್ರಾಮಾಣಿಕತೆಯಿಂದ ಇರಿ. ಇಂದು ಉತ್ತಮ ಫಲಿತಾಂಶ ದೊರೆಯಲಿದೆ. ಹೊಸ ಕೆಲಸಗಳು ನಿಮ್ಮನ್ನು ಕಾರ್ಯ ನಿರತವಾಗಿರಿಸುತ್ತದೆ. ಆರ್ಥಿಕ ಸಮೃದ್ಧಿ ನಿಮ್ಮ ಕಡೆ ಇರುತ್ತದೆ. ಆರೋಗ್ಯವೂ ಚೆನ್ನಾಗಿದೆ.
ಮಕರ ರಾಶಿ
ಸಣ್ಣ ಭಿನ್ನಾಭಿಪ್ರಾಯಗಳು ಇರುತ್ತವೆ. ಆದರೆ, ಅವುಗಳನ್ನು ಪರಿಹರಿಸಲು ತಾಳ್ಮೆಯಿಂದಿರಿ. ರಾಜತಾಂತ್ರಿಕ ಮನೋಭಾವವನ್ನು ಅಳವಡಿಸಿಕೊಳ್ಳಿ ಮತ್ತು ಕಹಿ ವಾದಗಳಿಂದ ದೂರವಿರಿ. ಜೀವನದಲ್ಲಿ ಸಂತೋಷವನ್ನು ಮರಳಿ ತರುವ ಮಾಜಿ ಪ್ರೇಮಿಯೊಂದಿಗೆ ರಾಜಿ ಮಾಡಿಕೊಳ್ಳುವುದನ್ನು ಬಗ್ಗೆ ಯೋಚಿಸಬಹುದು. ಸಂಬಂಧದಲ್ಲಿ ಯಾವುದೇ ಮೂರನೇ ವ್ಯಕ್ತಿ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಿ. ಇನ್ನೂ ಸಿಂಗಲ್ ಆಗಿ ಇರುವವರ ವಿವಾಹ ನಿಶ್ಚಯವಾಗಲಿದೆ.
ಕುಂಭ ರಾಶಿ
ನಿಮ್ಮ ಪ್ರೇಮಿ ಅರ್ಥಮಾಡಿಕೊಳ್ಳುವ ವ್ಯಕ್ತಿಯಾಗಿರುತ್ತಾರೆ. ಸಂಬಂಧದಲ್ಲಿನ ತೊಂದರೆಗಳನ್ನು ಪರಿಹರಿಸಲು ನಿಮಗೆ ಸಹಾಯ ಮಾಡುತ್ತಾರೆ. ಮುಕ್ತವಾಗಿ ಮಾತನಾಡಿ ಮತ್ತುಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ. ದೂರವಿದ್ದು ಪ್ರೇಮಿಸುವವರು ತಮ್ಮ ಸಂಬಂಧವನ್ನು ಹಸಿರಾಗಿಟ್ಟುಕೊಳ್ಳಲು ನಿರಂತರ ಸಂಪರ್ಕದಲ್ಲಿರುವುದು ಮುಖ್ಯ. ಇಂದು ನೀವು ನಿಮ್ಮ ಮಾಜಿ ಪ್ರೇಮಿಯನ್ನು ಭೇಟಿ ಆಗುವ ಸಂಭವವಿದೆ.
ಮೀನ ರಾಶಿ
ಪ್ರೀತಿಯ ವಿಷಯದಲ್ಲಿ ನೀವು ಇಂದು ಅದೃಷ್ಟವಂತರು. ಹಳೆಯ ವಿವಾದಗಳ ಇತ್ಯರ್ಥ ಸೇರಿದಂತೆ ಸಂಬಂಧವು ಇಂದು ಪ್ರಮುಖ ಧನಾತ್ಮಕ ತಿರುವುಗಳನ್ನು ಕಾಣಲಿದೆ. ಇದು ನಿಮ್ಮ ಸಂತೋಷವನ್ನು ಹೆಚ್ಚಿಸುತ್ತದೆ. ನೀವು ಆಫೀಸ್ನಲ್ಲಿ ಇನ್ನೊಬ್ಬರ ಜೊತೆ ಚೆನ್ನಾಗಿರುವುದನ್ನು ನಿಮ್ಮ ಸಂಗಾತಿ ಸಹಿಸಲಾರರು, ಇದೇ ಕಾರಣಕ್ಕೆ ಇಂದು ಜಗಳವಾಗಲಿದೆ. ನಿಮ್ಮ ಅಭಿಪ್ರಾಯವನ್ನು ನಿಮ್ಮ ಸಂಗಾತಿಗೆ ತಿಳಿಸಿ ಆದರೆ ಅದನ್ನೇ ಒಪ್ಪಿಕೊಳ್ಳಬೇಕು ಎಂದು ನಿಮ್ಮ ಸಂಗಾತಿಗೆ ಬಲವಂತ ಮಾಡಲು ಹೋಗಬೇಡಿ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.