ಪ್ರೇಮ ಭವಿಷ್ಯ ಆಗಸ್ಟ್ 20: ಹಿಂದಿನ ಪ್ರೇಮ ಪ್ರಕರಣಗಳು ಸಮಸ್ಯೆ ಉಂಟು ಮಾಡಬಹುದು; ಸಂಗಾತಿಯ ಭಾವನೆಗಳಿಗೆ ಬೆಲೆ ಕೊಡಿ
Love and Relationship Horoscope 20 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್ 20 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್ 20) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್‌ನಲ್ಲಿ ದಿನ ಭವಿಷ್ಯವೂ ಪ್ರಕಟವಾಗುತ್ತಿದ್ದು, ನಿಮ್ಮ ರಾಶಿ ಭವಿಷ್ಯವನ್ನೂ ಓದಬಹುದು ನೋಡಿ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ
ಪ್ರೇಮ ಸಂಬಂಧದಲ್ಲಿ ಎಚ್ಚರಿಕೆಯಿಂದ ಇರಿ. ನಿಮ್ಮ ಸಂಗಾತಿಯಿಂದ ನಿಮಗೆ ಬೆಂಬಲ ಸಿಗುತ್ತದೆ. ಭಾವನೆಗಳನ್ನು ಹಂಚಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳಿ. ಇಂದು ಕೆಲವು ಸಣ್ಣ ಭಿನ್ನಾಭಿಪ್ರಾಯಗಳಿರಬಹುದು ಆದರೆ ಇವು ನಿಮ್ಮ ಪ್ರೀತಿಯ ಜೀವನದಲ್ಲಿ ಯಾವುದೇ ಪರಿಣಾಮ ಬೀರುವುದಿಲ್ಲ. ಮಾಜಿ ಪ್ರೇಮಿಯೊಂದಿಗೆ ತಮ್ಮ ಸಮಸ್ಯೆಗಳನ್ನು ಕೊನೆಗೊಳಿಸಲು ಬಯಸುವವರಿಗೆ ಇಂದು ಉತ್ತಮ ದಿನವಾಗಿದೆ. ಕೆಲವು ಮಹಿಳೆಯರು ಮದುವೆಗೆ ಪೋಷಕರ ಬೆಂಬಲವನ್ನು ಪಡೆಯುತ್ತಾರೆ.
ವೃಷಭ ರಾಶಿ
ಇಂದು ಮುಕ್ತವಾಗಿ ಮಾತನಾಡಿ ಮತ್ತು ಯಾವುದೇ ಮೂರನೇ ವ್ಯಕ್ತಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಿ. ಸಣ್ಣಪುಟ್ಟ ಅಡಚಣೆಗಳಿಂದ ಬೇಸರ ಉಂಟಾಗಬಹುದು ಆದರೆ ಸಂಬಂಧವು ಹಾಗೇ ಉಳಿಯುತ್ತದೆ. ನಿಮ್ಮ ಸಂಗಾತಿಯ ಮಾತುಗಳನ್ನು ತಾಳ್ಮೆಯಿಂದ ಆಲಿಸಿ, ಆಕೆ/ಆತನ ಮೇಲೆ ನಿಮ್ಮ ಅಭಿಪ್ರಾಯವನ್ನು ಹೇರದಿರುವುದು ಸಹ ಮುಖ್ಯವಾಗಿದೆ. ನಿಮ್ಮ ಗುರಿ ನಿಮ್ಮ ಪ್ರೇಮಿಯನ್ನು ಸಂತೋಷವಾಗಿರಿಸುವುದು. ಪ್ರಣಯದ ಅಂತಿಮ ಹಂತದಲ್ಲಿರುವವರು ಮತ್ತು ಮದುವೆಯಾಗಲು ಯೋಜಿಸುತ್ತಿರುವವರು ಹೊಸ ಸಂಬಂಧಗಳಿಂದ ದೂರವಿರಬೇಕು.
ಮಿಥುನ ರಾಶಿ
ಪ್ರೇಮ ಸಂಬಂಧದಲ್ಲಿ ಸ್ಥಿರತೆ ಇರುತ್ತದೆ ಮತ್ತು ನಿಮ್ಮ ಪ್ರೇಮಿಯೊಂದಿಗೆ ಭಾವನೆಗಳನ್ನು ಹಂಚಿಕೊಳ್ಳಲು ನೀವು ಹೆಚ್ಚು ಸಮಯ ಕಳೆಯುತ್ತೀರಿ. ಸಂಬಂಧದಲ್ಲಿ ನಿಮ್ಮ ವರ್ತನೆ ಮುಖ್ಯವಾಗಿದೆ ಮತ್ತು ನೀವು ಪ್ರಣಯ ಭೋಜನವನ್ನು ಸಹ ಯೋಜಿಸಬಹುದು. ದಿನದ ದ್ವಿತೀಯಾರ್ಧದಲ್ಲಿ ಪ್ರೀತಿ ಚಿಗುರಲಿದೆ. ವಿವಾಹಿತ ಪುರುಷರು ಕಚೇರಿ ಪ್ರಣಯದಲ್ಲಿ ತೊಡಗಬಾರದು, ಇದು ವೈವಾಹಿಕ ಜೀವನದಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ನಿಮ್ಮ ವಿಷಯದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಮೂರನೇ ವ್ಯಕ್ತಿಗೆ ಬಿಡಬೇಡಿ ಮತ್ತು ಭಿನ್ನಾಭಿಪ್ರಾಯಗಳು ಉಂಟಾದಾಗ ನೀವು ಶಾಂತವಾಗಿರಬೇಕು.
ಕಟಕ ರಾಶಿ
ಇಂದು, ನಿಮ್ಮ ಸಂಬಂಧದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾಗಬಹುದು. ಹಿಂದಿನ ಪ್ರೇಮ ಸಂಬಂಧವು ಸಮಸ್ಯೆಗಳನ್ನು ಉಂಟುಮಾಡಬಹುದು. ಅಹಂ ಎಲ್ಲದ್ದಕ್ಕೂ ಮುಖ್ಯ ಕಾರಣವಾಗಿರುತ್ತದೆ. ಸಮಸ್ಯೆಗಳನ್ನು ನಿಭಾಯಿಸುವುದನ್ನು ಕಲಿಯಿರಿ. ಭಾವನೆಗಳನ್ನು ಹಂಚಿಕೊಳ್ಳಲು ಇಬ್ಬರೂ ಒಟ್ಟಿಗೆ ಕುಳಿತು ಮಾತನಾಡಿ. ಇಂದು ನಿಮ್ಮ ಅಭಿಪ್ರಾಯವನ್ನು ನೀಡುವಾಗ ಜಾಗರೂಕರಾಗಿರಿ. ಏಕೆಂದರೆ ನಿಮ್ಮ ಪ್ರೇಮಿ ಅದನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದು. ಇಂದು ಕೆಲವು ಸಂಬಂಧಗಳು ಸುಖಾಂತ್ಯವನ್ನು ಹೊಂದಿರದಿರಬಹುದು. ವಿವಾಹಿತ ಮಹಿಳೆಯರು ತಮ್ಮ ಸಂಬಂಧದಲ್ಲಿ ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ದೂರವಿರಬೇಕು.
ಸಿಂಹ ರಾಶಿ
ನೀವು ಇಂದು ಪ್ರೇಮ ಸಂಬಂಧದಲ್ಲಿ ತೊಂದರೆಗಳನ್ನು ಎದುರಿಸುವಿರಿ. ಪರಿಸ್ಥಿತಿ ಕೈ ಮೀರುವ ಮುನ್ನ ನೀವು ಅದನ್ನು ಪರಿಹರಿಸಬೇಕು. ನಿಮ್ಮ ಮಾತುಗಳನ್ನು ಸಂಗಾತಿಯು ತಪ್ಪಾಗಿ ತಿಳಿದುಕೊಂಡು ನಿಮ್ಮ ಬಗ್ಗೆ ಬೇಸರ ಮಾಡಿಕೊಳ್ಳಬಹುದು. ಪ್ರೇಮಿಯ ಭಾವನೆಗಳನ್ನು ನೋಯಿಸದಂತೆ ನೀವು ಜಾಗರೂಕರಾಗಿರಬೇಕು. ಒಬ್ಬಂಟಿ ಸಿಂಹ ರಾಶಿಯವರು ಇಂದು ವಿಶೇಷ ವ್ಯಕ್ತಿಯನ್ನು ಭೇಟಿ ಮಾಡಬಹುದು. ಸಕಾರಾತ್ಮಕ ಪ್ರತಿಕ್ರಿಯೆಯನ್ನು ಪಡೆಯಲು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿ.
ಕನ್ಯಾ ರಾಶಿ
ಪ್ರೇಮ ಜೀವನದಲ್ಲಿ ಯಾವುದೇ ಪ್ರಮುಖ ಘಟನೆಗಳು ಸಂಭವಿಸುವುದಿಲ್ಲ. ದಿನದ ಮೊದಲಾರ್ಧದಲ್ಲಿ ಸಣ್ಣ ಘರ್ಷಣೆಗಳ ಹೊರತಾಗಿಯೂ, ಸಂಬಂಧವು ಸುಗಮವಾಗಿ ಸಾಗುತ್ತದೆ. ವಾದಗಳನ್ನು ತಪ್ಪಿಸಿ. ಸಂಗಾತಿಯೊಂದಿಗೆ ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವುದನ್ನು ಖಚಿತಪಡಿಸಿಕೊಳ್ಳಿ. ಏಕಾಂಗಿಯಾಗಿರುವ ಕನ್ಯಾ ರಾಶಿಯವರು ಮನಸ್ಸಿಗೆ ಹಿಡಿಸಿದ ವ್ಯಕ್ತಿಗೆ ಪ್ರಪೋಸ್ ಮಾಡಲು ಇದು ಉತ್ತಮ ದಿನವಲ್ಲ. ಮಾಜಿ ಪ್ರೇಮಿಯನ್ನು ಭೇಟಿ ಮಾಡುವುದು, ವಿವಾಹೇತರ ಸಂಬಂಧಗಳಿಂದ ದೂರವಿರಿ. ಯಾಕೆಂದರೆ ನಿಮ್ಮ ಸಂಬಂಧ ಹಾಗೂ ಸಾಂಸಾರಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವಿವಾಹಿತ ಸ್ತ್ರೀಯರು ಇಂದು ಗರ್ಭಧರಿಸಬಹುದು.
ತುಲಾ ರಾಶಿ
ಇಂದು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯುವಾಗ ಸ್ವಲ್ಪ ಜಾಗರೂಕರಾಗಿರಿ. ಸಂಗಾತಿಯ ಜೊತೆ ವಾದ ಮಾಡುವುದನ್ನು ತಪ್ಪಿಸಿ. ಅನಗತ್ಯ ವಾದಗಳಿಂದ ದೂರವಿರಿ. ಇದು ಸಂಬಂಧಗಳಲ್ಲಿ ತಪ್ಪು ತಿಳುವಳಿಕೆಯನ್ನು ಹೆಚ್ಚಿಸಬಹುದು. ಪ್ರೇಮಿಯ ಭಾವನೆಗಳನ್ನು ನೋಯಿಸಬೇಡಿ. ಇಂದು ನೀವು ನಿಮ್ಮ ಸಂಗಾತಿಯೊಂದಿಗೆ ರೊಮ್ಯಾಂಟಿಕ್ ಡಿನ್ನರ್ ಯೋಜಿಸಬಹುದು ಮತ್ತು ಮದುವೆಯ ಬಗ್ಗೆ ಪ್ರೇಮಿಯೊಂದಿಗೆ ಚರ್ಚಿಸಬಹುದು. ಒಂಟಿಯಾಗಿರುವ ಹೆಣ್ಣುಮಕ್ಕಳಿಗೆ ಯಾರಾದರೂ ಪ್ರೇಮ ನಿವೇದನೆ ಮಾಡಬಹುದು.
ವೃಶ್ಚಿಕ ರಾಶಿ
ಇಂದು ಪ್ರೇಮ ಜೀವನದಲ್ಲಿ ಸಮಸ್ಯೆಗಳಿರಬಹುದು. ದಿನದ ಮೊದಲಾರ್ಧದಲ್ಲಿ ಸಂಗಾತಿಯ ಜೊತೆ ಘರ್ಷಣೆ ಉಂಟಾಗಬಹುದು. ಪ್ರೀತಿಯ ಸಂಬಂಧವನ್ನು ಅಡ್ಡಿಪಡಿಸುವ ವೈಯಕ್ತಿಕ ಅಹಂಗಳನ್ನು ತಪ್ಪಿಸಿ. ಇಂದು ನಿಮ್ಮ ಸಂಗಾತಿಯ ಮಾತುಗಳನ್ನು ಅಲಿಸಿ, ಆಕೆ/ಆತನೊಂದಿಗೆ ಡಿನ್ನರ್ ಪ್ಲ್ಯಾನ್ ಮಾಡಿ. ವಾದಗಳನ್ನು ತಪ್ಪಿಸಿ. ಜೊತೆಯಾಗಿ ಹೆಚ್ಚು ಸಮಯ ಒಟ್ಟಿಗೆ ಕಳೆಯಿರಿ. ವೃಶ್ಚಿಕ ರಾಶಿಯ ಮಹಿಳೆಯರು ಭಿನ್ನಾಭಿಪ್ರಾಯಗಳನ್ನು ಹೊಂದಿರುವಾಗ ತಾಳ್ಮೆ ತೋರಿಸುವುದು ಬಹಳ ಮುಖ್ಯ. ಕೆಲವು ವಿವಾಹಿತರು ಕಚೇರಿ ಪ್ರಣಯದಲ್ಲಿ ಸಿಕ್ಕಿಬೀಳಬಹುದು. ಇದು ವೈವಾಹಿಕ ಜೀವನದ ಮೇಲೆ ಪರಿಣಾಮ ಬೀರಬಹುದು.
ಧನಸ್ಸು ರಾಶಿ
ಇಂದು ಪ್ರಣಯದ ನಕ್ಷತ್ರಗಳು ಪ್ರಬಲವಾಗಿವೆ. ಇಂದು ರೊಮ್ಯಾಂಟಿಕ್ ಆಗಿರಿ. ಮನ ಮೆಚ್ಚಿದವರಿಗೆ ಪ್ರಪೋಸ್ ಮಾಡಲು ಹಿಂಜರಿಯಬೇಡಿ. ಸಂಬಂಧದಲ್ಲಿರುವವರು ಮತ್ತು ಮದುವೆಯಾಗಲು ಬಯಸುವವರು ತಮ್ಮ ಕುಟುಂಬದ ನಿರ್ಧಾರದಂತೆ ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಬಗ್ಗೆ ಯೋಚಿಸಬಹುದು. ಯಾವುದೇ ರೀತಿಯ ವಿವಾದವನ್ನು ತಪ್ಪಿಸಿ ಮತ್ತು ಪ್ರಣಯ ಭೋಜನ ಅಥವಾ ರಜಾದಿನವನ್ನು ಸಹ ಯೋಜಿಸಿ. ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಒಂಟಿಯಾಗಿರುವವರ ಜೀವನದಲ್ಲಿ ಆಸಕ್ತಿದಾಯಕ ವ್ಯಕ್ತಿಯ ಪ್ರವೇಶವಾಗಲಿದೆ.
ಮಕರ ರಾಶಿ
ಕೆಲವರು ಇಂದು ಹೊಸ ಪ್ರೀತಿಯನ್ನು ಕಂಡುಕೊಳ್ಳುತ್ತಾರೆ. ಪ್ರೀತಿಯ ನಕ್ಷತ್ರಗಳು ಇಂದು ಪ್ರಬಲವಾಗಿವೆ. ಆದ್ದರಿಂದ, ಸಕಾರಾತ್ಮಕ ಪ್ರತಿಕ್ರಿಯೆ ಪಡೆಯಲು ನಿಮ್ಮ ಭಾವನೆಗಳನ್ನು ನೀವು ಹಂಚಿಕೊಳ್ಳಬಹುದು. ನಿಮ್ಮ ಸಂಬಂಧದಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಿದ್ದರೆ, ಮೊದಲು ವಾದ ವಿವಾದವನ್ನು ತಪ್ಪಿಸಿ. ನಿಮ್ಮ ಸಂಗಾತಿಗೆ ವೈಯಕ್ತಿಕ ಜಾಗವನ್ನು ನೀಡಿ ಮತ್ತು ನಿಮ್ಮ ಆಲೋಚನೆಗಳನ್ನು ಪ್ರೇಮಿಯ ಮೇಲೆ ಹೇರಬೇಡಿ. ಕೆಲವರು ಮಾಜಿ ಪ್ರೇಮಿಯನ್ನು ಸಹ ಭೇಟಿಯಾಗಬಹುದು, ಅವರು ನಿಮ್ಮ ಜೀವನದಲ್ಲಿ ಸಂತೋಷ ತರಬಹುದು.
ಕುಂಭ ರಾಶಿ
ಇಂದು ನೀವು ಪ್ರೀತಿಯ ವಿಷಯಗಳಲ್ಲಿ ಯಾವುದೇ ಪ್ರಮುಖ ತೊಂದರೆಗಳನ್ನು ಎದುರಿಸಬೇಕಾಗಿಲ್ಲ. ನಿಮ್ಮ ಪ್ರಬುದ್ಧ ಸ್ವಭಾವವು ನಿಯಂತ್ರಣದಿಂದ ಹೊರ ಬರುವ ಮೊದಲು ವಿಷಯಗಳನ್ನು ಪರಿಹರಿಸುತ್ತದೆ. ಇಂದು ಪ್ರೀತಿಯ ವಿಷಯಗಳಲ್ಲಿ ಬದಲಾವಣೆಗಳಿರಬಹುದು. ಪೋಷಕರ ಒಪ್ಪಿಗೆ ಪಡೆದ ನಂತರ, ಕೆಲವರು ಮದುವೆಯತ್ತ ಹೆಜ್ಜೆ ಹಾಕಬಹುದು. ನಿಮ್ಮ ಸಂಗಾತಿಯ ಭಾವನೆಗಳ ಬಗ್ಗೆ ಸ್ವಲ್ಪ ಸಂವೇದನಾಶೀಲರಾಗಿರಿ ಮತ್ತು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯಲು ಆದ್ಯತೆ ನೀಡಿ. ನಿಮ್ಮ ಸಂಗಾತಿಯನ್ನು ಅಸಮಾಧಾನಗೊಳಿಸುವಂತಹ ಮಾತುಗಳನ್ನ ಆಡದಿರಿ. ರೊಮ್ಯಾಂಟಿಕ್ ಡಿನ್ನರ್ ಆಯೋಜಿಸಿ ನಿಮ್ಮ ದಿನವನ್ನು ಆವಿಸ್ಮರಣೀಯವನ್ನಾಗಿಸಿ.
ಮೀನ ರಾಶಿ
ನಿಮ್ಮ ಪ್ರೀತಿಯ ಜೀವನವು ಇಂದು ಉಲ್ಲಾಸಕರ ಬದಲಾವಣೆಗೆ ಸಿದ್ಧವಾಗಿದೆ. ನೀವು ಒಂಟಿಯಾಗಿರಲಿ ಅಥವಾ ಸಂಬಂಧದಲ್ಲಿರಲಿ. ಮುಕ್ತ ಸಂವಹನವು ಯಾವಾಗಲೂ ನಿಮ್ಮನ್ನು ಗೆಲ್ಲಿಸುತ್ತದೆ. ಇದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ನೀವು ನಿಮ್ಮ ಸಂಗಾತಿಯೊಂದಿಗೆ ಅನ್ಯೋನ್ಯವಾಗಿರಲು ಸಾಧ್ಯ. ದೀರ್ಘಾವಧಿ ಸಮಸ್ಯೆಗಳನ್ನು ಪರಿಹರಿಸಲು ದಂಪತಿಗಳು ಸುಲಭ ದಾರಿ ಕಂಡುಕೊಳ್ಳಲಿದ್ದಾರೆ. ಇದು ಹೆಚ್ಚಿನ ಸಾಮರಸ್ಯಕ್ಕೆ ಕಾರಣವಾಗುತ್ತದೆ. ಆದರೆ ನಂತರ ಎಲ್ಲವೂ ಸರಿ ಆಗುತ್ತದೆ.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.