ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ

Love and Relationship Horoscope 23 July 2024: ಲವ್ ಲೈಫ್ ಬಗ್ಗೆ ಸ್ವಲ್ಪ ಕುತೂಹಲ ಹೆಚ್ಚು. ನಿತ್ಯ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 23, ಮಂಗಳವಾರದಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.

ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ ಜು. 23: ಮೂರನೇ ವ್ಯಕ್ತಿ ನಿಮ್ಮಿಬ್ಬರ ಸಂಬಂಧ ಹಾಳು ಮಾಡುವ ಸಾಧ್ಯತೆ, ಮನಸ್ತಾಪ ತಪ್ಪಿಸಲು ಮುಕ್ತವಾಗಿ ಚರ್ಚಿಸಿ

Love and Relationship Horoscope 23 July 2024: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್‌ ಹೇಗಿದೆ ಎಂಬ ಬಗ್ಗೆ ಕೂಡ ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಜುಲೈ 23) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್‌ನಲ್ಲಿ ದಿನ ಭವಿಷ್ಯವೂ ಪ್ರಕಟವಾಗುತ್ತಿದ್ದು, ನಿಮ್ಮ ರಾಶಿ ಭವಿಷ್ಯವನ್ನೂ ಓದಬಹುದು ನೋಡಿ.

ಮೇಷ ರಾಶಿ

ನಿಮ್ಮ ಸಂಗಾತಿಯೊಂದಿಗೆ ಉತ್ತಮ ದಿನವನ್ನು ಕಳೆಯಲಿದ್ದೀರಿ. ನೀವು ಇನ್ನೂ ನಿಮ್ಮ ಭಾವನೆಗಳನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಹಂಚಿಕೊಳ್ಳದಿದ್ದಲ್ಲಿ, ಇಂದು ನಿಮಗೆ ಒಳ್ಳೆಯ ದಿನವಾಗಿದೆ. ನಿಮ್ಮ ಸಂಗಾತಿಯೊಂದಿಗೆ ನಿಮ್ಮ ಮನಸ್ಸಿನ ಮಾತನನ್ನು ಹೇಳಬಹುದು. ನಿಮ್ಮ ಸಂಗಾತಿ ನಿಮ್ಮ ಪ್ರಸ್ತಾಪವನ್ನು ಸ್ವೀಕರಿಸುತ್ತಾರೆ.

ವೃಷಭ ರಾಶಿ

ನಿಮ್ಮ ಸಂಗಾತಿಯೊಂದಿಗೆ ಯಾವುದೇ ಖಾಸಗಿ ವಿಷಯವನ್ನು ಹಂಚಿಕೊಳ್ಳಬೇಡಿ, ಇಲ್ಲದಿದ್ದರೆ ನೀವು ಸಮಸ್ಯೆ ಅನುಭವಿಸಬಹುದು. ನಿಮ್ಮ ಸಂಗಾತಿ ಹಾಗೂ ನಿಮ್ಮ ನಡುವಿನ ಸಂಬಂಧವನ್ನು ಹಾಳು ಮಾಡಬಹುದು. ಕಳೆದುಹೋದ ವಿಚಾರಗಳ ಬಗ್ಗೆಯೂ ಯೋಚಿಸದಿರುವುದು ಉತ್ತಮ.

ಮಿಥುನ ರಾಶಿ

ಇಂದು ನಿಮ್ಮ ಸಂಗಾತಿ ಇಬ್ಬರೂ ಆರೋಗ್ಯದ ಕಾರಣದಿಂದಾಗಿ ಚಿಂತಿತರಾಗಬಹುದು. ಹವಾಮಾನದಿಂದಾಗಿ ಆರೋಗ್ಯ ಹದಗೆಡಬಹುದು. ಹೊರಗೆ ಹೋಗುವ ನಿಮ್ಮ ಪ್ಲ್ಯಾನ್‌ ರದ್ದಾಗುವ ಸಾಧ್ಯತೆ ಇದೆ. ಇದರಿಂದಾಗಿ ನಿಮ್ಮ ಮೂಡ್ ಆಫ್ ಆಗುತ್ತದೆ. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಒಬ್ಬರಿಗೊಬ್ಬರು ಆರೋಗ್ಯದ ಕಡೆ ಕಾಳಜಿ ಮಾಡಿ.

ಕಟಕ ರಾಶಿ

ಇಂದು ನಿಮ್ಮ ಸಂಗಾತಿ ತಮ್ಮ ತಪ್ಪಿಗಾಗಿ ನಿಮ್ಮಲ್ಲಿ ಕ್ಷಮೆ ಕೇಳಬಹುದು. ಪ್ರೀತಿಯನ್ನು ಹಂಚಿಕೊಳ್ಳಲು ಇದು ತುಂಬಾ ಒಳ್ಳೆಯ ಸಮಯ. ಹಳೆಯ ವಿಷಯಗಳನ್ನು ನಿರ್ಲಕ್ಷಿಸಿ ಮತ್ತು ನಿಮ್ಮ ಸಂಗಾತಿಯ ತಪ್ಪುಗಳನ್ನು ಕ್ಷಮಿಸಿ, ಅದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಇಂದು ನಿಮ್ಮ ಸಂಗಾತಿ ನಿಮಗೆ ಬಹಳಷ್ಟು ಪ್ರೀತಿಯನ್ನು ನೀಡುತ್ತಾರೆ.

ಸಿಂಹ ರಾಶಿ

ಇಂದು ನಿಮ್ಮ ಸಂಗಾತಿಗೆ ಸಮಯ ನೀಡದಿದ್ದಕ್ಕಾಗಿ ನಿಮ್ಮ ಮೇಲೆ ಮುನಿಸು ತೋರಬಹುದು. ತಮ್ಮ ಅಗತ್ಯಗಳನ್ನು ನಿಮ್ಮಿಂದ ಮರೆ ಮಾಡಬಹುದು, ಅದು ಜಗಳಗಳಿಗೆ ಕಾರಣವಾಗಬಹುದು. ನಿಮ್ಮ ಮಾತಿನ ಮೇಲೆ ಹಿಡಿತವಿರಲಿ. ಜಗಳಗಳನ್ನು ತಪ್ಪಿಸಲು ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಿರಿ. ಅವರ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಕನ್ಯಾ ರಾಶಿ

ಇಂದು ನಿಮ್ಮ ಸಂಗಾತಿಯ ವರ್ತನೆಯಿಂದ ನೀವು ಅತೃಪ್ತರಾಗಬಹುದು. ನಿಮ್ಮ ಸಂಗಾತಿ ನಿಮ್ಮ ಮಾತುಗಳನ್ನು ನಿರ್ಲಕ್ಷಿಸುತ್ತಾರೆ ಎಂದು ನೀವು ಬೇಸರ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮ್ಮ ನಡುವೆ ವಾದ ವಿವಾದ ಉಂಟಾಗಬಹುದು. ನಿಮ್ಮ ಸಂಬಂಧವನ್ನು ಕಾಪಾಡಿಕೊಳ್ಳಲು ಸಣ್ಣ ಪುಟ್ಟ ವಿಷಯಗಳನ್ನು ನಿರ್ಲಕ್ಷಿಸುವುದು ಉತ್ತಮ.

ತುಲಾ ರಾಶಿ

ಇಂದು ನಿಮ್ಮ ಸಂಗಾತಿ ನಿಮಗೆ ಒಳ್ಳೆಯ ಸುದ್ದಿ ನೀಡಬಹುದು. ಕೆಲವರ ಜೀವನದಲ್ಲಿ ಹೊಸ ವ್ಯಕ್ತಿ ಪ್ರವೇಶಿಸುವ ಸಾಧ್ಯತೆ ಇದೆ. ಬಹುಶಃ ಆ ಕ್ಷಣ ನಿಮ್ಮ ಜೀವನದಲ್ಲಿ ಬರಲಿದೆ. ನಿಮ್ಮ ಸಂಗಾತಿಯೊಂದಿಗೆ ನೀವು ಉತ್ತಮ ಸಮಯವನ್ನು ಕಳೆಯಲಿದ್ದೀರಿ.

ವೃಶ್ಚಿಕ ರಾಶಿ

ಸಣ್ಣ ಪುಟ್ಟ ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಸಂಗಾತಿಯೊಂದಿಗೆ ನೀವು ಜಗಳ ಮಾಡಬಹುದು. 3ನೇ ವ್ಯಕ್ತಿ ನಿಮ್ಮ ಪ್ರೀತಿಯ ಜೀವನವನ್ನು ಹಾಳು ಮಾಡಲು ಪ್ರಯತ್ನಿಸುತ್ತಿರುವ ಸಾಧ್ಯತೆಯಿದೆ. ಕೆಲವು ವಿಷಯಗಳನ್ನು ನಿರ್ಲಕ್ಷಿಸುವುದು ಅಥವಾ ನಿಮ್ಮ ಸಂಗಾತಿಯೊಂದಿಗೆ ಕುಳಿತು ಆ ವಿಷಯಗಳ ಬಗ್ಗೆ ಮಾತನಾಡುವುದು ಉತ್ತಮ.

ಧನಸ್ಸು ರಾಶಿ

ಇಂದು ನಿಮ್ಮ ಸಂಗಾತಿಯು ನಿಮ್ಮೊಂದಿಗೆ ತಮ್ಮ ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಬಹುದು. ಅವನ ಮನಸ್ಸಿನಲ್ಲಿ ಕೆಲವು ಸಂದಿಗ್ಧತೆ ನಡೆಯುತ್ತಿದೆ. ಅವಳು/ಅವನು ಇಂದು ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಹುದು, ಈ ಕಾರಣದಿಂದಾಗಿ ನೀವು ಇಂದು ದೊಡ್ಡ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಬಹುದು.

ಮಕರ ರಾಶಿ

ನೀವು ಇಂದು ನಿಮ್ಮ ಸಂಗಾತಿಯೊಂದಿಗೆ ಕುಟುಂಬ ಯೋಜನೆ ಮಾಡಬಹುದು. ನಿಮ್ಮ ಸಂಗಾತಿಯು ಅನಾರೋಗ್ಯ ಸಮಸ್ಯೆಗೆ ಒಳಗಾಗಬಹುದು. ಆದರೆ ಇಂದು ನಿಮ್ಮ ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯಲಿದ್ದೀರಿ ಮತ್ತು ನಿಮ್ಮ ಭವಿಷ್ಯಕ್ಕಾಗಿ ನೀವು ಯೋಜಿಸಬಹುದು.

ಕುಂಭ ರಾಶಿ

ಇಂದು ನಿಮ್ಮ ಸಂಗಾತಿಯೊಂದಿಗೆ ನಿಮ್ಮ ದಿನ ಉತ್ತಮವಾಗಿರಲಿದೆ. ನಿಮ್ಮ ಸಂಗಾತಿ ನಿಮ್ಮೊಂದಿಗೆ ಸಂತೋಷವಾಗಿರುತ್ತಾರೆ. ಇಂದು ಅವರ ನಡವಳಿಕೆಯಿಂದ ನೀವು ಸಂತೋಷವಾಗಿರುತ್ತೀರಿ. ಇಂದು ನೀವು ನಿಮ್ಮ ಕುಟುಂಬದ ಬಗ್ಗೆ ಯೋಜಿಸಬಹುದು. ಅಲ್ಲದೆ, ಇಂದು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಉತ್ತಮ ಸಮಯ, ನಿಮ್ಮ ಮನಸ್ಸಿನಲ್ಲಿ ಏನಿದೆಯೋ ಅದನ್ನು ನಿಮ್ಮ ಸಂಗಾತಿಗೆ ಹೇಳಬಹುದು.

ಮೀನ ರಾಶಿ

ಇಂದು ನೀವು ಕೆಲವು ವಿಷಯಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ಭಿನ್ನಾಭಿಪ್ರಾಯಗಳಿಗೆ ಬಲಿಯಾಗಬಹುದು. ಸಂಗಾತಿಯ ಮಾತಿಗೆ ಪ್ರಾಮುಖ್ಯತೆ ನೀಡುವುದು ಒಳ್ಳೆಯದು. ಅವರ ಆಲೋಚನೆಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಅವರೊಂದಿಗೆ ಸಮಯ ಕಳೆಯಿರಿ. ನಿಮ್ಮ ಸಂಬಂಧವನ್ನು ಉಳಿಸಲು ಪ್ರಯತ್ನಿಸಿ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಆಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬಸಂಸ್ಕೃತಿಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.