ಪ್ರೇಮ ಭವಿಷ್ಯ ಆ. 9: ನಿಮ್ಮ ಆಲೋಚನೆಗಳನ್ನು ಬಲವಂತವಾಗಿ ಪ್ರೇಮಿಯ ಮೇಲೆ ಹೇರಬೇಡಿ, ಪ್ರೀತಿಯಲ್ಲಿ ಪರಸ್ಪರ ಗೌರವ ಇದ್ದರೆ ಹೆಚ್ಚು ಖುಷಿ ಸಿಗಲಿದೆ
Love and Relationship Horoscope 9 August 2024: ಲವ್ ಲೈಫ್ ಬಗ್ಗೆ ಎಲ್ಲರಿಗೂ ಕುತೂಹಲ ಹೆಚ್ಚು. ನಿತ್ಯವೂ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಆಗಸ್ಟ್ 9 ರಂದು ದ್ವಾದಶ ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.
ದ್ವಾದಶ ರಾಶಿಗಳ ಪ್ರೇಮ ಭವಿಷ್ಯ: ನಿತ್ಯ ಬದುಕಿನ ಪ್ರೀತಿ ಪ್ರೇಮ ಪ್ರಣಯ ಬಹಳ ಮುದ ನೀಡುವಂಥದ್ದು. ಆ ಸಂಬಂಧದಲ್ಲೊಂದು ಕಾತರ, ಕುತೂಹಲ ಇದ್ದೇ ಇರುತ್ತದೆ. ಹೀಗಾಗಿ ಅನೇಕರು ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತಾರೆ. ಇಂದು ಲವ್ ಲೈಫ್ ಹೇಗಿದೆ ಎಂದು ಹುಡುಕಾಡಿ ಮನದ ಆತಂಕ, ದುಗುಡ ತಣಿಸುವ ಪ್ರಯತ್ನ ಮಾಡುತ್ತಾರೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಆಗಸ್ಟ್ 9) ಲವ್ ಲೈಫ್ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಎಲ್ಲ ರಾಶಿಗಳ ದಿನ ಭವಿಷ್ಯ ಹಿಂದೂಸ್ತಾನ್ ಟೈಮ್ಸ್ ಕನ್ನಡ ಜಾಲತಾಣದಲ್ಲಿದೆ. ನೀವು ಅದನ್ನೂ ಓದಬಹುದು.
ಮೇಷ ರಾಶಿ
ಪ್ರೇಮ ಜೀವನದಲ್ಲಿ ಪ್ರಾಮಾಣಿಕತೆ ಬಹಳ ಅವಶ್ಯಕ. ನಿಮ್ಮ ಸಂಗಾತಿ ಕೂಡ ಇದನ್ನು ಅರ್ಥಮಾಡಿಕೊಳ್ಳುತ್ತಾರೆ. ಭಾವನೆಗಳನ್ನು ಹಂಚಿಕೊಳ್ಳಿ. ಇದು ನಿಮ್ಮ ಸಂಬಂಧವನ್ನು ಬಲಪಡಿಸುತ್ತದೆ. ಪ್ರೇಮ ಸಂಬಂಧದಲ್ಲಿ ಉತ್ತಮ ಭವಿಷ್ಯಕ್ಕಾಗಿ ಹಿಂದಿನ ಸಮಸ್ಯೆಗಳನ್ನು ಬಿಡಬೇಕು. ನಿಮ್ಮ ಸಂಬಂಧವು ಪೋಷಕರ ಬೆಂಬಲವನ್ನು ಪಡೆದು ಮದುವೆ ಹಂತಕ್ಕೆ ಹೋಗಬಹುದು.
ವೃಷಭ ರಾಶಿ
ಇಂದು ನಿಮ್ಮ ಪ್ರೀತಿಯ ಜೀವನ ಚೆನ್ನಾಗಿದೆ. ಪೋಷಕರ ಒಪ್ಪಿಗೆ ಪಡೆದು ನಿಮ್ಮ ಪ್ರೀತಿಯನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಯೋಚಿಸಬಹುದು. ಕೆಲವರು ಪ್ರೇಮಿಯೊಂದಿಗೆ ಅಹಂನಿಂದ ನಡೆದುಕೊಳ್ಳಬಹುದು. ಆದರೆ ಇದನ್ನು ಬಿಟ್ಟರೆ ನಿಮಗೆ ಒಳಿತು. ಹಿಂದಿನ ವಿಚಾರಗಳನ್ನು ಕೆದಕಬೇಡಿ. ನಿಮ್ಮ ಪ್ರೇಮಿಯನ್ನು ಅಸಮಾಧಾನಗೊಳಿಸಬಹುದಾದ ವಿಷಯಗಳ ಬಗ್ಗೆ ಪ್ರಸ್ತಾಪಿಸಬೇಡಿ. ಇಂದು ಕೆಲವು ಮಹಿಳೆಯರು ಮೂರನೇ ವ್ಯಕ್ತಿಯ ಹಸ್ತಕ್ಷೇಪದಿಂದ ದುಃಖ ಅನುಭವಿಸುತ್ತಾರೆ. ಒಂಟಿಯಾಗಿರುವವರು ಇಂದು ಮತ್ತೆ ಪ್ರೀತಿಯಲ್ಲಿ ಬೀಳಬಹುದು.
ಮಿಥುನ ರಾಶಿ
ನಿಮ್ಮ ಸಂಗಾತಿಗಾಗಿ ಸಮಯ ಮೀಸಲಿಡಿ. ವಾರಾಂತ್ಯದ ರಜೆ ನಿಮ್ಮ ಪ್ರೇಮವನ್ನು ಗಟ್ಟಿಗೊಳಿಸುತ್ತೆ. ವಿಶೇಷ ವ್ಯಕ್ತಿಯನ್ನು ಭೇಟಿಯಾಗಬಹುದು. ಒಂಟಿ ಜನರು ತಮ್ಮ ಭಾವನೆಗಳನ್ನು ಹಂಚಿಕೊಳ್ಳಲು ಸಂತೋಷಪಡುತ್ತಾರೆ. ಈಗಾಗಲೇ ಸಂಬಂಧದಲ್ಲಿರುವವರು ಬಲವಾದ ಸಂಬಂಧವನ್ನು ಹೊಂದಿರುತ್ತಾರೆ. ಪೋಷಕರ ಬೆಂಬಲವನ್ನು ಪಡೆಯುತ್ತೀರಿ. ಮಾಜಿ ಸಂಗಾತಿಯನ್ನು ಭೇಟಿಯಾಗುವಿರಿ. ಆದರೆ ವಿವಾಹಿತರು ವೈವಾಹಿಕ ಜೀವನ ಹಾಳಾಗದಂತೆ ಜಾಗರೂಕರಾಗಿರಬೇಕು.
ಕಟಕ ರಾಶಿ
ಇಂದು ನೀವು ಪ್ರವಾಸವನ್ನು ಪ್ಲ್ಯಾನ್ ಮೂಲಕ ನಿಮ್ಮ ಪ್ರೀತಿಯ ಸಂಬಂಧವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಬಹುದು. ಇಂದು ಒಟ್ಟಿಗೆ ಹೆಚ್ಚು ಸಮಯ ಕಳೆಯಿರಿ ಆದರೆ ಹಿಂದಿನ ವಿಷಯಗಳು ನಿಮ್ಮ ಪ್ರೇಮಿಗೆ ಬೇಸರ ಉಂಟಾಗುವಂತೆ ಮಾಡಬೇಡಿ. ಇಂದು ನೀವು ನಿಮ್ಮ ಸಂಬಂಧದಲ್ಲಿ ಪ್ರಬುದ್ಧರಾಗಿರಬೇಕು ಮತ್ತು ನಿಮ್ಮ ಪ್ರೇಮಿಯನ್ನು ಸಂತೋಷಪಡಿಸಲು ಪ್ರಯತ್ನಿಸಬೇಕು. ಇಂದು ಏಕಾಂಗಿ ಕರ್ಕಾಟಕ ರಾಶಿಯ ಜನರು ಹೊಸ ಪ್ರೀತಿಯನ್ನು ಕಂಡುಕೊಳ್ಳುವ ಸಾಧ್ಯತೆ ಇದೆ. ದಿನದ ದ್ವಿತೀಯಾರ್ಧದಲ್ಲಿ, ನೀವು ಹೊಸ ವ್ಯಕ್ತಿಯನ್ನು ಭೇಟಿ ಮಾಡಬಹುದು.
ಸಿಂಹ ರಾಶಿ
ಇಂದು ಪ್ರೀತಿ ಮತ್ತು ಪ್ರಣಯದಿಂದ ತುಂಬಿದ ದಿನವಾಗಿರುತ್ತದೆ. ಸಂತೋಷದ ಕ್ಷಣಗಳನ್ನು ಕಳೆಯುವಿರಿ. ಪ್ರೇಮಿಯೊಂದಿಗೆ ಪ್ರಣಯ ಭೋಜನವನ್ನು ಯೋಜಿಸುತ್ತೀರಿ. ಅವರಿಗೆ ಆಶ್ಚರ್ಯಕರ ಉಡುಗೊರೆಗಳನ್ನು ಸಹ ನೀಡುತ್ತೀರಿ. ಸಂಬಂಧದಲ್ಲಿರುವವರು ಇಂದು ಯಾವುದೇ ರೀತಿಯ ಚರ್ಚೆಯಿಂದ ದೂರವಿರಬೇಕು. ಅಹಂನಿಂದಾಗಿ ಸಂಬಂಧದಲ್ಲಿ ಸಮಸ್ಯೆಗಳು ಉಂಟಾಗಬಹುದು. ಪ್ರೇಮ ಸಂಬಂಧದಿಂದಾಗಿ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.
ಕನ್ಯಾ ರಾಶಿ
ಇಂದು ನಿಮ್ಮ ಪ್ರೇಮಿಯೊಂದಿಗೆ ಸಂತೋಷದ ಕ್ಷಣಗಳನ್ನು ಆಚರಿಸಲು ಎದುರು ನೋಡಬಹುದು. ಬಿರುಕು ಮೂಡಿದ್ದ ಸಂಬಂಧದಲ್ಲಿ ಹೊಸ ಪ್ರಣಯ ಚಿಗುರಲಿದೆ. ನಿಮ್ಮ ಪ್ರೇಮಿಗೆ ಸರ್ಪ್ರೈಸ್ ಆಗಿ ಉಡುಗೊರೆಗಳನ್ನು ನೀಡಿ ಅವರನ್ನು ಖುಷಿಪಡಿಸಿ. ಪ್ರೀತಿಯ ವಿಚಾರದಲ್ಲಿ ಗೊಂದಲ ಇರುವಾಗ ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸಿ. ನಿಮ್ಮ ಸಂಗಾತಿಗೆ ಅವರದ್ದೇ ಆದ ಸ್ಪೇಸ್ ನೀಡಿ. ಗೌರವ ಮತ್ತು ಕಾಳಜಿಯನ್ನು ನೀಡಿ ಮತ್ತು ಪ್ರತಿಯಾಗಿ ನೀವು ಅದನ್ನು ನಿರೀಕ್ಷಿಸಬಹುದು. ವಾದಗಳನ್ನು ತಪ್ಪಿಸಿ ಮತ್ತು ನೀವು ಹೆಚ್ಚು ಸಮಯವನ್ನು ಒಟ್ಟಿಗೆ ಕಳೆಯುವುದನ್ನು ಮರೆಯಬೇಡಿ.
ತುಲಾ ರಾಶಿ
ಪ್ರೇಮ ಜೀವನದಲ್ಲಿ ಸಣ್ಣ ಸಮಸ್ಯೆಗಳು ಎದುರಾಗಲಿವೆ. ಸಂಬಂಧಿಕರಿಂದಾಗಿ ಪ್ರೇಮ ಜೀವನದಲ್ಲಿ ತೊಂದರೆ ಉಂಟಾಗಬಹುದು. ಯಾವುದೇ ನಿರ್ಧಾರವನ್ನು ಬಹಳ ಬುದ್ಧಿವಂತಿಕೆಯಿಂದ ತೆಗೆದುಕೊಳ್ಳಿ. ಆಲೋಚನೆಗಳನ್ನು ಪ್ರೇಮಿಯ ಮೇಲೆ ಹೇರಬೇಡಿ. ಕೆಲವರು ರೊಮ್ಯಾಂಟಿಕ್ ಡಿನ್ನರ್ ಡೇಟ್ಗೆ ಹೋಗಬಹುದು. ಮಹಿಳೆಯರು ಯಾವುದೇ ರೀತಿಯ ವಿವಾದದೊಂದಿಗೆ ತಾಳ್ಮೆಯಿಂದಿರಬೇಕು.
ವೃಶ್ಚಿಕ ರಾಶಿ
ಪ್ರೇಮಿಗೆ ಸ್ಪೇಸ್ ನೀಡಿ, ಅವರು ದಿನದ 24 ಗಂಟೆಗಳೂ ನಿಮ್ಮೊಂದಿಗೆ ಇರಬೇಕು ಎಂದು ನಿರೀಕ್ಷೆ ಮಾಡಬೇಡಿ. ಆದರೆ ಪ್ರೇಮಿಗಾಗಿ ಹೆಚ್ಚು ಸಮಯ ಕೊಡಿ. ಪ್ರೀತಿಗಾಗಿ ಹೆಚ್ಚಿನ ಸಮಯ ಮೀಸಲಿಡಿ. ಹಳೆಯ ವಿಚಾರಗಳನ್ನು ಕೆದಕಿ ಸಮಸ್ಯೆ ತಂದುಕೊಳ್ಳದಿರಿ. ಕೆಲವು ಪ್ರೇಮ ವ್ಯವಹಾರಗಳಿಗೆ ಹೆಚ್ಚಿನ ಸಂವಹನ ಅಗತ್ಯವಿರುತ್ತದೆ. ಮೂರನೇ ವ್ಯಕ್ತಿ ನಿಮ್ಮ ಸಂಗಾತಿ ಮೇಲೆ ಪ್ರಭಾವ ಬೀರಬಹುದು, ಇದು ಸಮಸ್ಯೆಗೆ ಕಾರಣವಾಗುತ್ತದೆ. ಆದರೆ ಏನೇ ವಿಚಾರ ಇರಲಿ, ತಾಳ್ಮೆಯಿಂದ ಸಮಸ್ಯೆಯನ್ನು ನಿಭಾಯಿಸಿ.
ಧನಸ್ಸು ರಾಶಿ
ಪ್ರಣಯದ ನಿರೀಕ್ಷೆಗಳು ಹೆಚ್ಚಾಗಿರುತ್ತವೆ. ವಿಶೇಷ ವ್ಯಕ್ತಿಯನ್ನು ಭೇಟಿ ಮಾಡುವ ಸಾಧ್ಯತೆ ಇದೆ. ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸಿದ್ಧರಾಗಿರಿ. ಸಂಗಾತಿಗೆ ಸಮಯ ನೀಡಿ, ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ. ಆಶ್ಚರ್ಯಕರ ಉಡುಗೊರೆಗಳನ್ನು ನೀಡಲು ಇದು ಉತ್ತಮ ಸಮಯ. ಕೆಲವು ದಂಪತಿ ತಪ್ಪು ತಿಳುವಳಿಕೆಗಳನ್ನು ಹೊಂದಿರಬಹುದು, ನಂತರದ ಹಂತಗಳಲ್ಲಿ ಗಂಭೀರ ಪರಿಣಾಮಗಳನ್ನು ತಪ್ಪಿಸಲು ಅವುಗಳನ್ನು ಪರಿಹರಿಸಬೇಕಾಗಿದೆ.
ಮಕರ ರಾಶಿ
ಇಂದು ನಿಮ್ಮ ಪ್ರೇಮಿಯನ್ನು ಚೆನ್ನಾಗಿ ನೋಡಿಕೊಳ್ಳಿ ಅವರನ್ನು ಸಂತೋಷವಾಗಿರಿಸಿಕೊಳ್ಳಿ. ಕೆಲವು ಸಣ್ಣ ಸಮಸ್ಯೆಗಳು ದೊಡ್ಡ ಚರ್ಚೆಗಳಾಗಿ ಬದಲಾಗುತ್ತವೆ, ಇದರಿಂದಾಗಿ ನಿಮ್ಮ ಪ್ರೀತಿಯ ಜೀವನ ತೊಂದರೆಗೆ ಸಿಲುಕಬಹುದು. ಆದ್ದರಿಂದ ಸ್ವಲ್ಪ ತಾಳ್ಮೆಯಿಂದ ಪರಿಸ್ಥಿತಿಯನ್ನು ನಿಭಾಯಿಸಲು ಪ್ರಯತ್ನಿಸಿ. ಹಿಂದಿನ ಸಮಸ್ಯೆಗಳನ್ನು ಪರಿಹರಿಸಲು ಇಂದು ಉತ್ತಮ ದಿನವಾಗಿದೆ, ಆದರೆ ಇದಕ್ಕಾಗಿ ನೀವು ನಿಮ್ಮ ಸಂಗಾತಿಯನ್ನು ನೋಯಿಸುವ ಅವಶ್ಯಕತೆ ಇಲ್ಲ. ಇಂದು ಸಂಬಂಧದಲ್ಲಿರುವವರು ತಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಾರೆ.
ಕುಂಭ ರಾಶಿ
ನಿಮ್ಮ ಲವ್ ಲೈಫ್ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಲು ಇಂದು ನಿಮ್ಮ ಸಂಗಾತಿಯೊಡನೆ ಹೆಚ್ಚಿನ ಸಮಯ ಕಳೆಯಿರಿ. ಈ ದಿನ ನೀವು ಕೆಲವು ಸವಾಲುಗಳನ್ನು ಎದುರಿಸಬೇಕಾಗಿ ಬರಬಹುದು. ಆದರೆ ಯಾವುದೇ ಕಾರಣಕ್ಕೂ ನೀವು ನಿಮ್ಮ ಸಂಗಾತಿಯ ಮೇಲೆ ರೇಗಾಡುವುದನ್ನು ಮಾಡಬೇಡಿ. ಈ ದಿನ ಶುಭದಾಯಕವಾಗಿರಲಿದೆ.
ಮೀನ ರಾಶಿ
ಪ್ರೀತಿಯ ಸಂಬಂಧದಲ್ಲಿ ಆಹ್ಲಾದಕರ ಕ್ಷಣಗಳನ್ನು ಕಳೆಯಲಿದ್ದೀರಿ. ದಿನಾರಂಭದಲ್ಲಿ ಒಂದು ಸಣ್ಣ ಜಗಳವಾಗುತ್ತದೆ. ಆದರೂ ನಿಮ್ಮ ಪ್ರೀತಿ ಹಾಗೇ ಇರಲಿದೆ. ಪ್ರೀತಿಯ ಸಂಬಂಧವನ್ನು ಗೌರವಿಸಿ ಮತ್ತು ನಿಮ್ಮ ಸಂಗಾತಿಯನ್ನು ಅರ್ಥ ಮಾಡಿಕೊಂಡು ಮುನ್ನಡೆಯಿರಿ. ಕಛೇರಿಯ ಸಮಾರಂಭದಲ್ಲಿ ಅಥವಾ ಕುಟುಂಬದ ಸಮಾರಂಭದಲ್ಲಿ ಆಸಕ್ತಿದಾಯಕ ವ್ಯಕ್ತಿಯನ್ನು ನೀವು ಇಂದು ಭೇಟಿಯಾಗಬಹುದು.
ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮ ಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.