ಇಂದು ಹೇಗಿದೆ ಲವ್ ಲೈಫ್ ಜುಲೈ 12; ವೃಶ್ಚಿಕ ರಾಶಿಯವರಿಗೆ ನಮ್ ಬದುಕು ಯಾಕಪ್ಪ ಹೀಗೆ ಅನ್ನೋ ಭಾವ, ಉಳಿದ ರಾಶಿಯವರದ್ದೇನು ರಾಶಿ ಫಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಇಂದು ಹೇಗಿದೆ ಲವ್ ಲೈಫ್ ಜುಲೈ 12; ವೃಶ್ಚಿಕ ರಾಶಿಯವರಿಗೆ ನಮ್ ಬದುಕು ಯಾಕಪ್ಪ ಹೀಗೆ ಅನ್ನೋ ಭಾವ, ಉಳಿದ ರಾಶಿಯವರದ್ದೇನು ರಾಶಿ ಫಲ

ಇಂದು ಹೇಗಿದೆ ಲವ್ ಲೈಫ್ ಜುಲೈ 12; ವೃಶ್ಚಿಕ ರಾಶಿಯವರಿಗೆ ನಮ್ ಬದುಕು ಯಾಕಪ್ಪ ಹೀಗೆ ಅನ್ನೋ ಭಾವ, ಉಳಿದ ರಾಶಿಯವರದ್ದೇನು ರಾಶಿ ಫಲ

Love and Relationship Horoscope July 12 2024: ಲವ್ ಲೈಫ್ ಬಗ್ಗೆ ಸ್ವಲ್ಪ ಕುತೂಹಲ ಹೆಚ್ಚು. ನಿತ್ಯ ದಿನ ಭವಿಷ್ಯ ಓದುವವರ ಪೈಕಿ ಬಹಳಷ್ಟು ಜನ ಇಂದು ಹೇಗಿದೆ ಲವ್ ಲೈಫ್ ಅಂತ ಒಮ್ಮೆ ಕಣ್ಣಾಡಿಸುತ್ತಾರೆ. ಅಂದ ಹಾಗೆ, ಜುಲೈ 12ರಂದು 12 ರಾಶಿಗಳ ಲವ್ ಲೈಫ್ ಹೀಗಿದೆ ನೋಡಿ.

ಇಂದು ಹೇಗಿದೆ ಲವ್ ಲೈಫ್ ಜುಲೈ 12; ವೃಶ್ಚಿಕ ರಾಶಿಯವರಿಗೆ ನಮ್ ಬದುಕು ಯಾಕಪ್ಪ ಹೀಗೆ ಅನ್ನೋ ಭಾವ, ಉಳಿದ ರಾಶಿಯವರದ್ದೇನು ರಾಶಿ ಫಲ
ಇಂದು ಹೇಗಿದೆ ಲವ್ ಲೈಫ್ ಜುಲೈ 12; ವೃಶ್ಚಿಕ ರಾಶಿಯವರಿಗೆ ನಮ್ ಬದುಕು ಯಾಕಪ್ಪ ಹೀಗೆ ಅನ್ನೋ ಭಾವ, ಉಳಿದ ರಾಶಿಯವರದ್ದೇನು ರಾಶಿ ಫಲ

Love and Relationship Horoscope July 12 2024: ನಿತ್ಯ ಬದುಕಿನಲ್ಲಿ ಪ್ರೀತಿ ಪ್ರೇಮ ಪ್ರಣಯ ಸಹಜ. ದಿನ ಭವಿಷ್ಯದಲ್ಲಿ ಪ್ರೀತಿ ಪ್ರೇಮ ಪ್ರಣಯದ ಬಗ್ಗೆ ಗಮನಿಸುತ್ತ, ಲವ್ ಲೈಫ್‌ ಬಗ್ಗೆ ಕೂಡ ಹುಡುಕಾಡಿ ಮನದ ಆತಂಕ ನಿವಾರಿಸುವ ಪ್ರಯತ್ನ ನಡೆಯುತ್ತದೆ. ರಾಶಿಫಲಗಳಿಗೆ ಅನುಗುಣವಾಗಿ ಆಯಾ ರಾಶಿಗಳ ಈ ದಿನದ (ಜುಲೈ 12) ಲವ್‌ ಲೈಫ್‌ ಹೇಗಿದೆ ಎಂದು ಗಮನಿಸೋಣ. ಅಂದ ಹಾಗೆ, ಹಿಂದೂಸ್ತಾನ್ ಟೈಮ್ಸ್ ಕನ್ನಡ ವೆಬ್‌ಸೈಟ್‌ನಲ್ಲಿ ದಿನ ಭವಿಷ್ಯವೂ ಪ್ರಕಟವಾಗುತ್ತಿದ್ದು, ನಿಮ್ಮ ರಾಶಿ ಫಲವನ್ನೂ ಓದಬಹುದು ನೋಡಿ.

ಮೇಷ ರಾಶಿ: ಇಂದು ನಿಮ್ಮೊಳಗಿನ ನಿಷ್ಠಾವಂತ, ವಿಶ್ವಾಸಾರ್ಹ ಮತ್ತು ಇತರೆ ಸದ್ಗುಣಗಳು ಗಮನಸೆಳೆಯುತ್ತವೆ. ಜನರೊಂದಿಗೆ ಒಡನಾಡುವಾಗ ನಿಮ್ಮ ಮಾತುಗಳ ಮೂಲಕ ಈ ಗುಣಗಳು ವ್ಯಕ್ತವಾಗುತ್ತವೆ. ಆ ಮೂಲಕ ನಿಮ್ಮ ವಿರುದ್ಧ ಲಿಂಗಿಗಳ ಪಾಲಿಗೆ ಆಕರ್ಷಕರಾಗಿ ಕಾಣಿಸುತ್ತೀರಿ. ನೈಜ ಮತ್ತು ಪ್ರಾಮಾಣಿಕ ನಡವಳಿಕೆಯು ನಿಮ್ಮ ಶಕ್ತಿಯಾಗಿದ್ದು, ಇತರರ ಮಾತನ್ನು ಆಲಿಸಿ ಸ್ಪಂದಿಸುವ ಗುಣ ಅಯಸ್ಕಾಂತದಂತೆ ಕೆಲಸ ಮಾಡಲಿದೆ.

ವೃಷಭ ರಾಶಿ: ಇಂದು ಪಾರದರ್ಶಕವಾಗಿರುವುದು ಮುಖ್ಯ. ಆದ್ದರಿಂದ ನೀವು ಮಾತು ಸ್ಪಷ್ಟವಾಗಿರಬೇಕು. ನಿಮ್ಮ ಮನಸ್ಸನ್ನು ಓದಲು ಅಥವಾ ನಿಮಗೆ ಬೇಕಾದುದನ್ನು ತಿಳಿದುಕೊಂಡು ಸ್ಪಂದಿಸುವ ಜನರಾಗಿದ್ದರೂ, ಕೆಲವೊಮ್ಮೆ ಎಡವಟ್ಟುಗಳಾಗುತ್ತವೆ. ತಮ್ಮಂತೆ ಆಗಬೇಕು ಎಂದು ಮನಸ್ಸಿನಲ್ಲಷ್ಟೆ ನಿರೀಕ್ಷಿಸುವುದು ಅವಿವೇಕವಾಗುತ್ತದೆ. ನೀವು ಯಾರನ್ನಾದರೂ ಪ್ರೀತಿಸುತ್ತಿದ್ದರೆ, ಡೇಟಿಂಗ್ ಮಾಡಲು ಪ್ರಯತ್ನಿಸುತ್ತಿದ್ದರೆ ಮುಕ್ತವಾಗಿ ಭಾವನೆಗಳನ್ನು ಹಂಚಿಕೊಳ್ಳಿ. ಪ್ರಾಮಾಣಿಕವಾಗಿರಿ. ಇದು ಸಂಬಂಧ ಕುದುರಿಸಲು ನೆರವಾಗುತ್ತದೆ.

ಮಿಥುನ ರಾಶಿ: ಪ್ರೀತಿ ಎಂದರೆ ಗೌರವ ಮತ್ತು ಪರಸ್ಪರ ಸ್ಪಂದಿಸುವುದು ಎಂಬುದನ್ನು ಮರೆಯಬೇಡಿ. ನೀವು ಹೊಸ ಸಂಗಾತಿಯನ್ನು ಹುಡುಕುತ್ತಿದ್ದರೆ, ಧನಾತ್ಮಕ ಚಿಂತನೆಯೊಂದಿಗೆ ಇರುವುದಷ್ಟೇ ಅಲ್ಲ, ಪ್ರಾಮಾಣಿಕವಾಗಿಯೂ ಇರಬೇಕು. ಯಾರನ್ನೂ ಬಲವಂತವಾಗಿ ಪ್ರೀತಿಗೆ ಒಪ್ಪುವಂತೆ ಮಾಡಬೇಡಿ. ಅವರಿಗೂ ನಿಮ್ಮ ಮೇಲೆ ಪ್ರೀತಿ ಹುಟ್ಟಬೇಕು. ಯಾರನ್ನೇ ಆದರೂ ಪ್ರೀತಿಸಿದರೆ ಅವರನ್ನು ಇರುವಂತೆಯೇ ಸ್ವೀಕರಿಸಿ. ಅವರ ವಿಶೇಷ ಗುಣಗಳನ್ನು ಗುರುತಿಸಿ. ಸ್ವಾಭಾವಿಕವಾಗಿ ಒಡನಾಟ ಮುಂದುವರಿಸುವುದು ಒಳಿತು.

ಕಕಟ ರಾಶಿ: ಮೆಚ್ಚುಗೆ ವ್ಯಕ್ತವಾದಾಗ ಮುಕ್ತವಾಗಿ ಸ್ವೀಕರಿಸಿ. ಅದನ್ನು ನಿರಾಕರಿಸಬೇಡಿ. ನಿಮ್ಮ ನಿರ್ದಿಷ್ಟ ಗುಣದಿಂದ ಆಕರ್ಷಣೆಗೆ ಒಳಗಾಗಿ ಒಬ್ಬರು ನಿಮ್ಮನ್ನು ಅನುಸರಿಸಬಹುದು. ಇದು ಪ್ರೀತಿ, ಪ್ರೇಮ ಸಂಬಂಧವಾಗಿ ಬೆಳೆಯಬಹುದು. ಈ ಮನ್ನಣೆಯನ್ನು ಸ್ವೀಕರಿಸಲು ಮತ್ತು ಹೊಸ ಅವಕಾಶಗಳಿಗೆ ತೆರೆದುಕೊಳ್ಳಲು ಇಂದು ಸುದಿನ. ನಿಮ್ಮ ನೈಜ ಸ್ವಭಾವ ಪ್ರಶಂಸೆಗೆ ಒಳಗಾಗುತ್ತದೆ. ನಿಮ್ಮ ಮುಂದಿರುವ ಪ್ರಣಯ ಸಾಹಸಕ್ಕೆ ಒಂದು ಮಾರ್ಗವನ್ನು ಸೃಷ್ಟಿಸಿ ಕೊಡಬಹುದು.

ಸಿಂಹ ರಾಶಿ: ಪ್ರೇಮ ಸಂಬಂಧದಲ್ಲಿ ಬದ್ಧತೆ ತೋರಿದವರು ಈಗ ಅದನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ಸಿದ್ಧರಿರುತ್ತಾರೆ. ಇಂತಹ ಸನ್ನಿವೇಶದಲ್ಲಿ ಎಲ್ಲ ನಿರ್ಧಾರಗಳು ಸುಲಭವಾಗಿ ಆಗಲಿದೆ. ತಾರ್ಕಿಕ ಹೊಂದಾಣಿಕೆಗಳು, ಅತ್ಯುತ್ತಮ ಮಾತುಕತೆ ಎಲ್ಲವನ್ನೂ ಹಗುರಾಗಿಸಲಿದೆ. ನಿಮ್ಮ ಪ್ರೇಮ ಸಂಬಂಧವು ಗೌರವ ಮತ್ತು ತಿಳಿವಳಿಕೆಯಿಂದ ನಿರೂಪಿಸಲ್ಪಟ್ಟಿರುವುದರಿಂದ ಭವಿಷ್ಯಕ್ಕಾಗಿ ಯೋಜಿಸಲು ಅಥವಾ ಒಟ್ಟಿಗೆ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಮಯ ಇದು. ಪ್ರೀತಿಯ ಪದಗಳು ಮತ್ತು ನಡವಳಿಕೆಗಳ ಮೂಲಕ ನಿಮ್ಮ ಸಂಗಾತಿಯೊಂದಿಗೆ ಬಂಧವನ್ನು ಬಲಪಡಿಸಲು ನೋಡಿ. ನೀವು ಬೆಳೆಸಿದ ಪ್ರೀತಿಯನ್ನು ಬೆಳೆಸುವುದಕ್ಕೆ ಇಂದಿನ ಶಕ್ತಿಯು ನಿಮ್ಮನ್ನು ಆವರಿಸಲಿದೆ.

ಕನ್ಯಾ ರಾಶಿ: ನಿಮಗಾಗಿ ಸಮಯ ಮೀಸಲಿಟ್ಟಿರುವ ಈ ದಿನ ನಿಮ್ಮ ಸಂಗಾತಿ ಅಥವಾ ಪ್ರೇಮಿಯೊಂದಿಗೆ ಸಮಯ ಬಳಸುವುದು ಸಮಯೋಚಿತವಾದ ಕ್ರಮವಾಗಲಿದೆ. ಮುಕ್ತ ಮಾತುಕತೆ ಮಾಡುವಾಗ ನಿಮ್ಮ ಆಪ್ತ ಸ್ನೇಹಿತರು, ಕುಟುಂಬ ಸದಸ್ಯರು ಜೊತೆಗಿದ್ದರೆ ನಿಮಗದು ಆನೆ ಬಲ. ನಿಮ್ಮ ಪ್ರತಿನಿತ್ಯದ ಭಾವನೆಗಳನ್ನು ವ್ಯಕ್ತಪಡಿಸಿ. ಆದರೆ, ದೂರುವ ಕೆಲಸ ಮಾಡಬೇಡಿ. ಇದು ಸಂಬಂಧದಲ್ಲಿ ಬಿರುಕು ಮೂಡಿಸಬಹುದು. ಹೀಗಾಗಿ ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯುವ ಅಗತ್ಯಕ್ಕೆ ಒತ್ತು ನೀಡಿ ಮತ್ತು ನಿಮ್ಮಿಬ್ಬರ ಅನುಭವಗಳನ್ನು ಸ್ಮರಣೀಯವಾಗಿಸಿ.

ತುಲಾ ರಾಶಿ: ಇಂದು ನೀವೇ ಆಗಿರಲು ಮತ್ತು ನಿಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಸರಿಯಾದ ದಿನ. ನೀವು ಸ್ವಲ್ಪ ಸಮಯದಿಂದ ಆಸಕ್ತಿ ಹೊಂದಿರುವ ನಿರ್ದಿಷ್ಟ ವ್ಯಕ್ತಿ ಇದ್ದರೆ, ಅದನ್ನು ಅವರ ಬಳಿ ವ್ಯಕ್ತಪಡಿಸಲು ಹಿಂಜರಿಯಬೇಡಿ. ಇದು ಮೆಚ್ಚುಗೆಯ ಬೆಚ್ಚಗಿನ ಪದವಾಗಿರಬಹುದು ಅಥವಾ ಒಂದು ಕಪ್ ಕಾಫಿಯನ್ನು ಒಟ್ಟಿಗೆ ಕುಡಿಯುವ ಮೂಲಕ ಪ್ರಸ್ತಾಪ ಮಾಡಬಹುದು. ಅದು ಬಹಳಷ್ಟು ಪ್ರಯೋಜನಕಾರಿ ಉಂಟುಮಾಡಬಹುದು. ನಿಮ್ಮ ಆತ್ಮವಿಶ್ವಾಸ ಮತ್ತು ಪ್ರಾಮಾಣಿಕತೆಯು ಸಂಭಾವ್ಯ ಪಾಲುದಾರರನ್ನು ಆಕರ್ಷಿಸುವ ಅಂಶಗಳಾಗಿರುತ್ತವೆ.

ವೃಶ್ಚಿಕ ರಾಶಿ: ಇಂದು, ನೀವು ಪ್ರೀತಿ- ಪ್ರೇಮದ ಮನಸ್ಥಿತಿಯಲ್ಲಿರಬಹುದು. ಸಂಬಂಧಗಳು ನೀವು ಯೋಜಿಸಿದಂತೆ ಯಾಕೆ ಸಾಗುವುದಿಲ್ಲ ಎಂದು ಅಚ್ಚರಿಗೊಳಗಾಗುವಿರಿ. ಇದು ಸಹಜ. ಈ ರೀತಿಯ ಆಲೋಚನೆಗಳ ವಿಚಾರದಲ್ಲಿ ನೀವು ಒಬ್ಬಂಟಿಯಾಗಿಲ್ಲ. ಅಂತಹ ಆಲೋಚನೆಗಳಲ್ಲಿ ತೊಳಲಾಡುವ ಬದಲು ಡೇಟಿಂಗ್ ಸನ್ನಿವೇಶಗಳಿಂದ ಹೊರಬರುವುದು ಉಪಯೋಗಕ್ಕೆ ಬರಬಹುದು. ನಿಮ್ಮನ್ನು ಸಂತೋಷಪಡಿಸುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ, ನಿಮ್ಮ ಸ್ನೇಹಿತರು ಮತ್ತು ಕುಟುಂಬಕ್ಕೆ ಕರೆ ಮಾಡಿ ಮಾತನಾಡಿ. ಅಥವಾ ಧ್ಯಾನ ಮಾಡಲು ಸ್ವಲ್ಪ ಸಮಯ ತೆಗೆದುಕೊಳ್ಳಿ.

ಧನು ರಾಶಿ : ಇಂದು ನಿಮ್ಮ ಪ್ರೇಮ ಜೀವನವು ಶಾಂತ ಚಿತ್ರದಂತೆ ಕಾಣುತ್ತದೆ. ನಾಟಕೀಯತೆಯ ಕುರುಹು ಇಲ್ಲ. ಪ್ರೀತಿಯಲ್ಲಿ ಏರಿಳಿತ ಇಲ್ಲದ ದಿನ. ಆದಾಗ್ಯೂ, ಈ ಪ್ರಶಾಂತ ಸನ್ನಿವೇಶವು ನಿಮ್ಮ ದಿನವನ್ನು ಸ್ವಲ್ಪ ನೀರಸ ಅಥವಾ ಪುನರಾವರ್ತಿತವೆನಿಸುವಂತೆ ಮಾಡಬಹುದು. ಜನರು ಸುರಕ್ಷಿತ ಭಾವನೆಯನ್ನುಂಟುಮಾಡುವ ದಿನಚರಿ ಬಯಸಿದರೂ, ಕೆಲವೊಮ್ಮೆ ಏಕತಾನತೆ ಮುರಿಯಬೇಕು. ಅಂತಹ ಅಸಾಮಾನ್ಯವಾದುದನ್ನು ಮಾಡಲು ನೋಡಿ.

ಮಕರ ರಾಶಿ: ಒಂಟಿಯಾಗಿ ತಿರುಗಾಡುವುದು ಬೋರ್ ಹೊಡೆಸಬಹುದು. ಹೀಗಾಗಿ ಜೊತೆಗೊಬ್ಬರು ಬೇಕು ಎಂದು ಹುಡುಕಾಟ ಶುರುಮಾಡುವಿರಿ. ನಿಮ್ಮ ಮಾತು ಕೇಳುವ, ಅರ್ಥಮಾಡಿಕೊಳ್ಳುವ ಸ್ಪಂದಿಸುವ ವ್ಯಕ್ತಿಯನ್ನು ಅರಸಬಹುದು. ಆ ರೀತಿ ಹೊಸಬರು ನಿಮ್ಮ ಜೀವನವನ್ನು ಪ್ರವೇಶಿಸುವುದನ್ನು ನಿರೀಕ್ಷಿಸುವ ಸಮಯ ಇದು. ಇದಕ್ಕೆ ಪೂರಕವಾಗಿ ಗ್ರಹಗತಿಗಳು ಕೂಡ ಇವೆ. ದೀರ್ಘಾವಧಿ ಹಿಂದೆ ಕಳೆದುಹೋದ ಸ್ನೇಹಿತನಂತೆ ಭಾಸವಾಗುವ ಅಪರಿಚಿತರು ದಿಢೀರ್‌ ಎದುರಾಗಬಹುದು. ಆಶ್ಚರ್ಯವೇನಿಲ್ಲ. ನಿಮ್ಮ ಮನಸ್ಸನ್ನು ಮುಕ್ತವಾಗಿಟ್ಟುಕೊಳ್ಳಿ. ಅದು ಸಂಭಾಷಣೆಯಾಗಿರಲಿ ಅಥವಾ ಸಾಮಾಜಿಕ ಕಾರ್ಯದಲ್ಲಿ ಆಕಸ್ಮಿಕ ಭೇಟಿಯಾಗಿದ್ದರೂ ಸರಿ, ಮುಕ್ತ ಮಾತುಕತೆ ಎಲ್ಲವನ್ನೂ ಹಗುರಾಗಿಸುತ್ತದೆ.

ಕುಂಭ ರಾಶಿ: ನಿಮ್ಮ ಸಂಬಂಧವು ಭಾವುಕವಾದುದು ಅಲ್ಲದೇ ಇರಬಹುದು. ಈ ರೀತಿ ಸಂಬಂಧಗಳು ಅಹಿತಕರವಾಗಿರುತ್ತದೆ. ಆದರೆ, ಈ ರೀತಿ ಸಂಬಂಧ ಅನೇಕ ದಂಪತಿಗಳ ನಡುವೆ ಇದೆ. ಈ ಅವಧಿಯಲ್ಲಿ ಬೇಕಾದುದು ಸಹಾನುಭೂತಿ. ಟೀಕೆಯಿಲ್ಲದೆ ನಿಮ್ಮ ಸಂಗಾತಿಯ ಭಾವನೆಗಳು ಮತ್ತು ದೃಷ್ಟಿಕೋನಗಳನ್ನು ಕೇಳಲು ಮತ್ತು ಸ್ವೀಕರಿಸಲು ಪ್ರಯತ್ನಿಸಿ. ಅವರೊಂದಿಗೆ ಗುಣಮಟ್ಟದ ಸಮಯವನ್ನು ಕಳೆಯಿರಿ. ಅವರು ಆಲೋಚನೆಗಳನ್ನು ಆಲಿಸಿ. ಈ ರೀತಿಯಾಗಿ, ಭಯವಿಲ್ಲದೆ ನಿಮ್ಮ ನಿರೀಕ್ಷೆಗಳನ್ನು ಹಂಚಿಕೊಳ್ಳಲು ನೀವು ಮುಕ್ತ ವಾತಾವರಣ ಸೃಷ್ಟಿಸುವಿರಿ.

ಮೀನ ರಾಶಿ: ಇಂದು ನಿಮ್ಮ ಪರೋಪಕಾರ ಗುಣ ಎಲ್ಲರಿಗೂ ಮನವರಿಕೆಯಾಗಲಿದೆ. ಆದಾಗ್ಯೂ, ನಿಮ್ಮ ಸಂಭಾವ್ಯ ಪ್ರಣಯ ಆಸಕ್ತಿಗಳು ನಿಮ್ಮ ಕ್ರಿಯೆಗಳನ್ನು ಸ್ವ-ಕೇಂದ್ರಿತವೆಂಬ ಭಾವನೆ ಮೂಡಿಸಬಹುದು. ಆದರೆ ಅದು ನಿಜವಲ್ಲ. ಒಬ್ಬರ ಅವಶ್ಯಕತೆಗಳನ್ನು ನೋಡಿಕೊಳ್ಳುವುದು ಅವಶ್ಯಕ, ಆದರೆ ಒಬ್ಬರು ಇನ್ನೊಬ್ಬರ ದೃಷ್ಟಿಕೋನಕ್ಕೆ ಸೂಕ್ಷ್ಮವಾಗಿ ಸ್ಪಂದಿಸಲು ಪ್ರಯತ್ನಿಸಬೇಕು. ಜನ ಜೀವನ ಮತ್ತು ಅವರು ವಿಷಯಗಳನ್ನು ಹೇಗೆ ಗ್ರಹಿಸುತ್ತಾರೆ ಎಂಬುದನ್ನು ಪರಿಗಣಿಸಿ. ಗ್ರಹಿಕೆಯು ನಿಮಗೆ ಸರಿಯಾದ ಚಿತ್ರಣ ಕಟ್ಟಿಕೊಳ್ಳಲು ಸಹಾಯ ಮಾಡುತ್ತದೆ.

ಗಮನಿಸಿ: ಇದು ವೈದಿಕ ಜ್ಯೋತಿಷ್ಯದ ಪದ್ಧತಿಯಲ್ಲಿ ಗೋಚಾರ ಆಧರಿಸಿದ ಬರಹ. ನಿಖರ ವಿವರ ಮತ್ತು ಸಮರ್ಪಕ ಪರಿಹಾರಗಳಿಗಾಗಿ ಓದುಗರು ತಮ್ಮ ಜನ್ಮಜಾತಕವನ್ನು ಸಹ ಪರಿಗಣಿಸಬೇಕು. ನಿಮ್ಮ ಕುಲಗುರುಗಳು ಅಥವಾ ಜ್ಯೋತಿಷಿಗಳ ಸಲಹೆ ಪಡೆಯಬೇಕು. ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.

Whats_app_banner